HOME
CINEMA NEWS
GALLERY
TV NEWS
REVIEWS
CONTACT US

"BANGALORE 560023" RELEASE THIS FRIDAY
B
angalore 560023, a remake of the Tamil hit Chennai 600028 which has gully cricket as a theme with a love story is releasing on November 20 in more than 100 theatres across Karnataka through distributor Lokesh.

According to director Pradeep Raj the film is a Tamil remake with some elements added to suit Kannada nativity. The running time of the movie is 125 minutes. While the Tamil film was a hit, the Kannada film title is the pincode for Cholarapalya in Bengaluru.

Rajeev, who is known for his explosive batting in the CCL matches plays the heroine’s elder brother in the movie. Sanjana plays a western girl who becomes the romantic interest of all the cricketers in the movie. Shivani’s character in the movie gives the twist to the narration that is required. She is Rajeev’s sister who is an innocent village girl in the movie.

Producer Manu is also playing a role in the movie. Vijay who has worked as a television anchor in a channel is also acting in the movie. Kumar plays a fan of Darshan in the movie who is an auto driver. Naveen who has been assistant director to Pradeep Raj is acting in the movie for the first time.

Jayaram Karthik alias JK is playing the lead role. Chandan plays another lead and is now under house arrest in the Bigg Boss reality show. Dhruva Sharma has also acted in the movie.
-20/11/15

BANGALORE 560023 RELEASING ON NOV 20
B
angalore 560023, a remake of the Tamil hit Chennai 600028 which has gully cricket as a theme with a love story is releasing onNovember 20 in more than 100 theatres across Karnataka through distributor Lokesh.

Director Pradeep Raj told reporters that the film is a Tamil remake with some elements added to suit Kannada nativity. The running time of the movie is 125 minutes. While the Tamil film was a hit, the Kannada film title is the pincode for Cholarapalya in Bengaluru.

Rajeev, who is known for his explosive batting in the CCL matches plays the heroine’s elder brother in the movie. Sanjana said she plays a western girl who becomes the romantic interest of all the cricketers in the movie. Shivani said her character in the movie gives the twist to the narration that is required. She said she is Rajeev’s sister who is an innocent village girl in the movie.

Producer Manu is also playing a role in the movie. Vijay who has worked as a television anchor in a channel is also acting in the movie. Kumar plays a fan of Darshan in the movie who is an auto driver. Naveen who has been assistant director to Pradeep Raj is acting in the movie for the first time. Ramu and Raghu are also acting in the movie.

Jayaram Karthik alias JK is playing the lead role. He was absent as he away in Mumbai. Chandan plays the lead and is now under house arrest in the Bigg Boss reality show. Dhruva Sharma has also acted in the movie.
-3/11/15


ಬೆಂಗಳೂರು 560023: ಆಡಿಯೋ ಧಮಾಕಾ!
ಗಲ್ಲಿ ಕ್ರಿಕೆಟ್ ನ ಸುತ್ತ ಚಿತ್ರಣಗೊಂಡಿರುವ `ಬೆಂಗಳೂರು-560023' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಜ್ಞಾನಜ್ಯೋತಿ ಸಭಾಂಗಣದಲ್ಲಿ ಅದ್ದೂರಿಯಾಗಿ ನೆರವೇರಿತು. ವರ್ಣರಂಜಿತ ಸಮಾರಂಭದಲ್ಲಿ ಕಿಚ್ಚ ಸುದೀಪ್ ಚಿತ್ರದ ಆಡಿಯೋವನ್ನು ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರದೀಪ್ ರಾಜ್, `ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಮಾಗಡಿ ರಸ್ತೆಯ ಗಲ್ಲಿ ಕ್ರಿಕೆಟ್ ನ ಸುತ್ತ ಚಿತ್ರಕತೆಯನ್ನು ಹೆಣೆಯಲಾಗಿದೆ. ಚಿತ್ರವು ಗೆಳೆತನ, ಪ್ರೀತಿ, ದ್ವೇಷದ ಸುತ್ತ ತಿರುಗಲಿದ್ದು, 5 ಹಾಡುಗಳನ್ನು ಒಳಗೊಂಡಿದೆ. ಈ ಚಿತ್ರ ಲೋಕಲ್ ಹುಡುಗರಿಗೆ ಇಷ್ಟವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾಯಕ ಜೆ.ಕಾರ್ತಿಕ್ ಮಾತನಾಡಿ, ಕ್ರಿಕೆಟ್ ಗೆ ಸಂಬಂಧಿಸಿದ `ಬೆಂಗಳೂರು-560023' ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ವಿಜಯ್ ಪ್ರಕಾಶ್ ಅವರ ಗಾಯನದ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ. ಸಂಗೀತವೇ ಚಿತ್ರದ ಜೀವಾಳವಾಗಿದ್ದು, ಚಿತ್ರ ನೈಜವಾಗಿ ಮೂಡಿ ಬಂದಿದೆ ಎಂದರು.

ಮತ್ತೊಬ್ಬ ನಾಯಕ ನಟ ರಾಜೀವ್ ಅವರು, ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು.
ಸಂಗೀತ ನಿರ್ದೇಶಕ ಅರುಣ್ ಮ್ಯಾಥ್ಯೂ ಮಾತನಾಡಿ, ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲವೂ ಮಧುರವಾಗಿ ಮೂಡಿ ಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಶಿವಾನಿ, ನಿರ್ಮಾಪಕರಾದ ಪುನೀತ್ ಹಾಗೂ ಮನು ಉಪಸ್ಥಿತರಿದ್ದರು.

ನಂತರ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಂಗೀತ ಸಂಜೆ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಗಾಯಕರಾದ ಟಿಪ್ಪು ಹಾಗೂ ವಿಜಯ್ ಪ್ರಕಾಶ್ ಗಾಯನ ನೆರೆದಿದ್ದವರ ಮನ ಸೂರೆಗೊಂಡಿತು.
ಕ್ರಿಕೆಟ್ ಪಟುಗಳಾದ ಸೈಯದ್ ಕಿರ್ಮಾನಿ, ವಿಜಯ್ ಭಾರದ್ವಾಜ್, ನಟಿ ಸಂಜನಾ, ದೀಪಿಕಾ ದಾಸ್ ನರ್ಸ್ ಜಯಲಕ್ಷ್ಮಿ ಅವರು ಒಟ್ಟಾಗಿ ನಡೆಸಿಕೊಟ್ಟ ಕ್ವಿಜ್ ಕಾರ್ಯಕ್ರಮ ವಿನೋದಪೂರ್ಣವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಕ್ರಿಕೆಟಿಗ ವಿಜಯ್ ಭಾರದ್ವಾಜ್, `ಮೂಲತಃ ಕ್ರಿಕೆಟ್ ಮಹಿಳೆಯರದ್ದು. 16ನೇ ಶತಮಾನದಲ್ಲಿ ಇಂಗ್ಲೆಂಡ್ ನಲ್ಲಿ ಹುಡುಗಿಯರು ಮೊದಲು ಕ್ರಿಕೆಟ್ ಶುರು ಮಾಡಿದ್ದರು. ಆಗೆಲ್ಲ ಅಂಡರ್ ಬೌಲಿಂಗ್ ಮಾಡುತ್ತಿದ್ದರು. ಆದರೆ, ಯಾವಾಗ ಅಂಡರ್ ಬೌಲಿಂಗ್ ಸಂದರ್ಭದಲ್ಲಿ ಅವರ ಲಂಗ ಅಡ್ಡಿ ಬರುತ್ತಿತ್ತೋ ಆಗ ಅವರು ಈಗಿನ ಶೈಲಿಯ ಬೌಲಿಂಗ್ ಅನ್ನು ರೂಢಿಸಿಕೊಂಡರು. ಕಾಲಾಂತರದಲ್ಲಿ ಅದು ಪುರುಷರ ಕ್ರೀಡೆಯಾಗಿ ಬದಲಾಯಿತು' ಎಂದರು.
ಇಡೀ ಆಡಿಯೋ ಬಿಡುಗಡೆ ಸಮಾರಂಭದ ಹೈಲೈಟ್ ಆಗಿದ್ದದ್ದು `ಅಧ್ಯಕ್ಷ' ಖ್ಯಾತಿಯ ಚಿಕ್ಕಣ್ಣ ಅವರ ನೃತ್ಯ ಹಾಗೂ ಚಿನಕುರಳಿಯಂತಹ ಮಾತುಗಳು. ಅವರ ನೃತ್ಯ ಹಾಗೂ ಮಾತುಗಳಿಗೆ ಸಭಿಕರು ಹುಚ್ಚೆದ್ದು ಕುಣಿದರು.

ಕೊಂಚ ತಡವಾಗಿ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ಕಿಚ್ಚ ಸುದೀಪ್ ಅವರು, `ಚೆನ್ನೈನಲ್ಲಿ ನಡೆಯುತ್ತಿದ್ದ ಶೂಟಿಂಗ್ 4.45ಕ್ಕೆ ಮುಗಿದ ನಂತರ ನೇರವಾಗಿ ಇಲ್ಲಿಗೇ ಬರುತ್ತಿದ್ದೇನೆ. ಆ ಚಿತ್ರೀಕರಣದಲ್ಲಿ ನಾನು ಭಾರತದ ಲೆಜೆಂಡ್ ನಟಿ ಶ್ರೀದೇವಿಯವರೊಂದಿಗೆ ನಟಿಸಬೇಕಿತ್ತು. ಆದರೆ, ಆ ಕ್ಷಣ ಕೈಗೂಡಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀದೇವಿಯವರನ್ನು ನೋಡಿದರೆ ನಿಮಗೇನನ್ನಿಸುತ್ತದೆ ಎಂಬ ನಿರೂಪಕಿಯ ಪ್ರಶ್ನೆಗೆ ತುಂಟತನದ ಉತ್ತರ ನೀಡಿದ ಅವರು, `ಒಂದೋ ಶ್ರೀದೇವಿ ತಡವಾಗಿ ಹುಟ್ಟಬೇಕಿತ್ತು ಇಲ್ಲವೇ ನಾನು ಮೊದಲು ಹುಟ್ಟಬೇಕಿತ್ತು' ಎಂದು ಹೇಳಿ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿದರು. ನಂತರ ಮಾತು ಮುಂದುವರೆಸಿದ ಅವರು, ಕೆಲವರು ತೀರಾ ದೊಡ್ಡ ವ್ಯಕ್ತಿಗಳಾಗಿರುತ್ತಾರೆ. ಅಂಥವರ ಬಗ್ಗೆ ನಮಗೆ ಮಾತನಾಡಲೂ ಯೋಗ್ಯತೆ ಇರುವುದಿಲ್ಲ. ಆ ಸಾಲಿನ ನಟಿ ಶ್ರೀದೇವಿ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

`ನಾಯಕ ನಟ ಜೆ.ಕಾರ್ತಿಕ್, ಚಂದನ್, ರಾಜೀವ್, ಧ್ರುವ ಶರ್ಮಾ ಎಲ್ಲರೂ ನನಗೆ ಸಿಸಿಎಲ್ ಪಂದ್ಯಾವಳಿಯಲ್ಲೇ ಪರಿಚಿತರಾದವರು. ಅವರು ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ನಟನೆಯಲ್ಲೂ ಪ್ರತಿಭಾವಂತರು. ನಾನು ಚಿಕ್ಕವನಿದ್ದಾಗ ಆಗಿನ ಕಾಲದ ದಿಗ್ಗಜ ನಟರು ನನಗೆ ಶುಭ ಹಾರೈಸುತ್ತಿದ್ದರು. ಈಗ ನಾನು ಆ ಜಾಗದಲ್ಲಿ ನಿಂತಿದ್ದೇನೆ' ಎಂದು ಸ್ಮರಿಸಿದರು.

ಚಿತ್ರದ ಆಡಿಯೋ ಬಿಡುಗಡೆಯನ್ನು ಕಿಚ್ಚ ಸುದೀಪ್ ಅವರೊಂದಿಗೆ ಚಿತ್ರ ತಂಡ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಚ್.ಡಿ.ಗಂಗರಾಜು, ಕರಿಸುಬ್ಬು ಮುಂತಾದ ಚಲನಚಿತ್ರ ಗಣ್ಯರು ಮಾಡಿದರು. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಹ್ವಾನಿತರಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಸತಿ ಸಚಿವ ಅಂಬರೀಶ್ ಗೈರಾಗಿದ್ದರು.
-ಕೆ.ಎನ್.ಎನ್. ಸಿನಿಸರ್ಕಲ್ ನ್ಯೂಸ್
ಚಿತ್ರಗಳು: ಕೆ.ಎನ್.ನಾಗೇಶ್ ಕುಮಾರFor advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\