HOME
CINEMA NEWS
GALLERY
TV NEWS
REVIEWS
CONTACT US
ಗೋರಿ ಮೇಲೊಂದು ತ್ರಿಕೋನ ಪ್ರೇಮ ಕಥನ
ಇಬ್ಬರು ನಾಯಕ, ಒಬ್ಬಳು ನಾಯಕಿ ಇದ್ದರೆ ಇದೊಂದು ತ್ರಿಕೋನ ಪ್ರೇಮ ಕತೆ ಅಂತ ಸುಲಭವಾಗಿ ಹೇಳಬಹುದು. ಅದರಂತೆ ‘ಯಾರ್ ಯಾರೋ ಗೋರೆ ಮೇಲೆ’’ ಚಿತ್ರದಲ್ಲಿ ಇದೇ ತರಹದ ಸನ್ನಿವೇಶಗಳು ಇರಲಿದೆ. ಕಾಲೇಜ್‍ನಲ್ಲಿ ಸ್ನೇಹಿತರಾದ ಆರು, ಪ್ರಭಾ ಇವರೊಂದಿಗೆ ಒಂದಷ್ಟು ಗೆಳೆಯರು. ಇವರುಗಳ ಮಧ್ಯೆ ದೀಪಾ ಹೆಸರಿನ ಪರಿಚಿತ ಹುಡುಗಿ. ಎಲ್ಲರೂ ಹುಡುಗಾಟ, ತಮಾಷೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಹಾಗಿರುವಾಗಲೇ ದೀಪಾಳಲ್ಲಿ ಪ್ರಭಾ ಮೋಹಕ್ಕೆ ಬೀಳುತ್ತಾನೆ. ಆದರೆ ದೀಪಾಳಿಗೆ ಆರು ಮೇಲೆ ಪ್ರೀತಿ ಹುಟ್ಟುತ್ತದೆ. ಪ್ರೇಮಿಗಳ ದಿನ ಬಂದೇ ಬಿಡ್ತು ಎನ್ನುವಾಗ ಪ್ರಭಾ ವಿಷಯವನ್ನು ತಿಳಿಸಲು ಹೋದಾಗ,ಆಕೆಯು ಆರು ಮೇಲಿನ ಪ್ರೀತಿಯನ್ನು ಹೊರಗಿಟ್ಟಾಗ ಅಲ್ಲಿಂದ ಇಬ್ಬರಲ್ಲೂ ಪ್ರೇಮಯುದ್ದ ಶುರುವಾಗುತ್ತದೆ. ಇಬ್ಬರ ಮಧ್ಯೆ ಪ್ರಭಾ ವಿಲನ್ ಆಗುತ್ತಾನೆ. ಅವಳು ಬಯಸಿದಂತೆ ಆಗುತ್ತದಾ? ಅವನಿಗೆ ದೀಪಾ ದಕ್ಕುತ್ತಾಳಾ? ಎಂಬುದು ಚಿತ್ರ ನೋಡಿದರೆ ತಿಳಿಯಲಿದೆ.

ಚೂಚ್ಚಲಬಾರಿ ನಿರ್ದೇಶನ ಮಾಡಿರುವ ರಾಘುಚಂದ್ ಪ್ರೀತಿಗೊಂದು ಗೋರಿ ಕಟ್ಟುತ್ತಾ, ಮತ್ತೋಂದು ಕಡೆ ತಾಜ್‍ಮಹಲ್ ಕಟ್ಟುವ ಪ್ರಯತ್ನ ಮಾಡುತ್ತಾರೆ. ಗೋರಿ,ಕಟ್ಟಡಕ್ಕೆ ಸಂಬಂದವಿರುವುದಿಲ್ಲ. ಕತೆಗೆ ಕುತೂಹಲದ ಸನ್ನಿವೇಶಗಳನ್ನು ಸೃಷ್ಟಿಸಿ ವಿರಾಮದ ನಂತರ ತಿರುವು ಬರುವಂತೆ ಏಳೆಯನ್ನು ಬಿಚ್ಚಿಡುತ್ತಾರೆ. ರಾಜ್ ಆಗಿ ಪುಟ್ಟರಾಜ್ ನಾಯಕ ನಿರ್ಮಾಪಕರಾಗಿದ್ದು, ಅಭಿನಯದಲ್ಲಿ ಇನ್ನು ಪಳಗಬೇಕಾಗಿದೆ. ಮತ್ತೋಬ್ಬ ನಾಯಕ ಅಭಿ ಈಗಾಗಲೇ ಡಿಸೈನ್, ಸಹ ನಿರ್ದೇಶನ ಮಾಡಿದ ಅನುಭವ ಇರುವ ಕಾರಣ ಸಲೀಸಾಗಿ ಕ್ಯಾಮಾರ ಮುಂದು ನಿಂತಿದ್ದಾರೆ. ನಾಯಕಿ ವರ್ಷಗೆ ನಟನೆ ಹೊಸತು ಆಗಿರುವುದಿಂದ ಕೆಲವು ಕಡೆ ಅಭಿನಯದಲ್ಲಿ ಕೊರತೆ ಎದ್ದು ಕಾಣುತ್ತದೆ. ಲೋಕಿ ಸಂಗೀತ ನೀಡಿರುವ ಹಾಡುಗಳು ಒಮ್ಮೆ ಆಲಿಸಬಹುದು. ಸಂಡೂರಿನ ಧೂಳನ್ನು ಸಮರ್ಥವಾಗಿ ಸೆರೆಹಿಡಿದಿರುವ ಪ್ರದೀಪ್‍ಗಾಂಧಿಗೆ ಭವಿಷ್ಯವಿದೆ. ಹೊಸಬರಿಗೆ ಪ್ರೋತ್ಸಾಹ ಕೊಡುವುದಾದರೆ ಗೋರಿಯನ್ನು ಒಮ್ಮೆ ನೋಡಲು ಅಭ್ಯಂತರವೇನು ಇಲ್ಲ.
ಸಿನಿ ಸರ್ಕಲ್.ಇನ್ ನ್ಯೂಸ್
27/05/18

ಗೋರಿ ಮೇಲಿನ ಸಿನಿಮಾ ನೋಡಲು ಬನ್ನಿ
ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ವಿನೂತನ ಶೀರ್ಷಿಕೆಗಳದ್ದೆ ಹೊಸ ಟ್ರೆಂಡ್ ಆಗುತ್ತಿದೆ. ಈ ಪೈಕಿ ಹೆಚ್ಚು ಗಮನ ಸೆಳೆಯುತ್ತಿರುವ ಹೊಸಬರ ‘ಯಾರ್ ಯಾರೋ ಗೋರಿ ಮೇಲೆ’ ಅಡಿಬರಹದಲ್ಲಿ ಯಾರ್ ಯಾಕ್ ಸತ್ರು ಎಂದು ಹೇಳಿಕೊಂಡಿರುವ ಚಿತ್ರದ ಆಡಿಯೋ ಲೋಕಾರ್ಪಣೆ ಕಳೆದು ತಿಂಗಳು ನಡೆದಿತ್ತು. ಈಗ ಬಿಡುಗಡೆ ಹಂತಕ್ಕೆ ಬಂದಿರುವುದರಿಂದ ಮತ್ತೋಮ್ಮೆ ತಂಡವು ಮಾದ್ಯಮದವರನ್ನು ಭೇಟಿ ಮಾಡಿತು. ಇದೊಂದು ತ್ರಿಕೋನ ಪ್ರೇಮಕತೆಯಾಗಿದೆ. ಕೆಲವೊಮ್ಮೆ ನಾವು ಅಂದುಕೊಂಡಂತೆ ಆಗುವುದಿಲ್ಲ. ಏನು ಆಗೋಲ್ಲ ಎಂದುಕೊಂಡರೆ ಅದು ಆಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ನಿರ್ದೇಶಕ ರಾಘುಚಂದ್ ಆರೋಗ್ಯದಲ್ಲಿ ವ್ಯತ್ಯಯ ಇರುವ ಕಾರಣ ಬಂದಿಲ್ಲವೆಂದು ನಾಯಕ ಹಾಗೂ ನಿರ್ಮಾಣ ಮಾಡಿರುವ ಪುಟ್ಟರಾಜು ಹೇಳಿಕೊಂಡರು.

ಸಂಪ್ರದಾಯಸ್ಥ ಮನೆಯ ಮಗಳಾಗಿ ಬಬ್ಲಿ ಪಾತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಖುಷಿ ತಂದಿದೆ ಎಂದರು ಶಿವಮೊಗ್ಗದ ವರ್ಷ. ಪ್ರಾರಂಭದಲ್ಲಿ ಡಿಸೈನರ್, ನಂತರ ಸಹಾಯಕ ನಿರ್ದೇಶಕನಾಗಿದ್ದವನಿಗೆ ಶುರುವಿನಲ್ಲಿ ಮುಗ್ದ, ವಿರಾಮದ ನಂತರ ಪ್ಲೆಬಾಯ್ ಹೀಗೆ ಎರಡು ಶೇಡ್‍ಗಳಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕೆ ನಿರ್ಮಾಪಕರಿಗೆ ಥ್ಯಾಂಕ್ಸ್. ಸಂಡೂರು ಧೂಳಿನಲ್ಲಿ ಎರಡು ರಾ ಫೈಟ್ ಮಾಡಿದ್ದು ಮರೆಯಲಾಗದ ಅನುಭವ. ಪ್ರೀತಿ, ಸ್ನೇಹ ಇದರ ಕತೆಯಲ್ಲಿ ಯಾರ್ ಯಾಕೆ ಸತ್ರು ಎಂದು ತಿಳಿಯಲು ಚಿತ್ರಮಂದಿರಕ್ಕೆ ಬನ್ನಿ ಎಂದು ಆಹ್ವಾನ ನೀಡಿದರು ಅಭಿ. ನಾಯಕಿ ತಾಯಿಯಾಗಿ ಹೇಮಾ, ಮಂಗಳಮುಖಿ ಪಾತ್ರ ಮಾಡಿರುವ ಮಾರುತಿ, ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಲೋಕಿ, ಸಂಕಲನಕಾರ ವಿನಯ್‍ಕುಮಾರ್ ಉಪಸ್ತಿತರಿದ್ದು ಮಾಹಿತಿ ಹಂಚಿಕೊಂಡರು. ವಿತರಕ ದೀಪಕ್‍ಗಂಗಾಧರ್ ಮುಖಾಂತರ ಸುಮಾರು 70 ಕೇಂದ್ರಗಳಲ್ಲಿ ಇದೇ ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ
್ ಸಿನಿ ಸರ್ಕಲ್.ಇನ್ ನ್ಯೂಸ್
22/05/18

\

ಯಾರ್ ಯಾರೋ ಗೋರಿ ಮೇಲೆ ಹಾಡುಗಳು
ವಿಚಿತ್ರ, ವಿನೂತನ, ವಿಶೇಷ ಎನ್ನುವಂತ ಟೈಟಲ್‍ಗಳು ಬರುವಂತೆ ‘ಯಾರ್ ಯಾರೋ ಗೋರಿ ಮೇಲೆ’ ಅಡಿಬರಹದಲ್ಲಿ ಯಾರ್ ಯಾಕ್ ಸತ್ರು ಎಂದು ಹೇಳಿಕೊಂಡಿರುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಎಲ್.ವಿ.ರಾಘುಚಾಂದ್ ಸಿನಿಮಾವನ್ನು ಬಣ್ಣಿಸಿದ ಪರಿ ಹೀಗಿತ್ತು:

ಸೆಸ್ಪೆನ್ಸ್, ಥ್ರಿಲ್ಲರ್ ಕತೆಯಲ್ಲಿ ಇಬ್ಬರು ಹುಡುಗರಿಗೆ ಒಬ್ಬಳು ನಾಯಕಿ. ಬದುಕು-ಸಾವು ನಡುವೆ ಓಟ, ನಿಗೂಡ ಇರುತ್ತದೆ. ಹೊಸಬರೇ ಸೇರಿಕೊಂಡಿರುವ ಸಿನಿಮಾದಲ್ಲಿ ಕುತೂಹಲಕಾರಿ ತಿರುವುಗಳು ಇರಲಿದೆ. ಬಳ್ಳಾರಿ, ಬೆಂಗಳೂರು, ಸಕಲೇಶಪುರ, ಶ್ರೀರಂಗಪಟ್ಟಣ ತಟಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನಾಯಕ ಪುಟ್ಟರಾಜು ಮಾತನಾಡಿ ನಟ ಆಗಬೇಕಂಬ ಕನಸು ಏಳು ವರ್ಷದಿಂದ ಇತ್ತು. ಬಳ್ಳಾರಿಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದು, ಅಮ್ಮ, ಅಣ್ಣನ ಪ್ರೋತ್ಸಾಹದಿಂದ ನಿರ್ಮಾಣ ಮಾಡಲಾಯಿತು. ಒಂದು ರೀತಿಯ ಸೈಕೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆಂದು ಹೇಳಿಕೊಂಡರು. ನಟನಾಗಲು ಬಂದವನು ಅವಕಾಶ ಸಿಗದೆ ಸಹಾಯಕ ನಿರ್ದೇಶಕ ಮತ್ತು ಸಣ್ಣ ಪಾತ್ರಕ್ಕೆ ಕೆಲಸ ಮಾಡಬೇಕಾಗಿ ಬಂತು. ಸಾಕಷ್ಟು ನಿರ್ದೇಶಕರು ಕರೆಸಿಕೊಂಡು ಎಲ್ಲವನ್ನು ಹೇಳಿ ಕೊನೆಗೆ ನಿರ್ಮಾಪಕರನ್ನು ಹುಡುಕಿ, ಇಲ್ಲವೆ ಪಾಲುದಾರರಾಗಿ ಅಂತ ಬಾಂಬ್ ಸಿಡಿಸುತ್ತಿದ್ದರು. ಆದರೆ ಇವರು ಹಾಗೆ ಮಾಡದೆ ಮೊದಲ ಚಿತ್ರದಲ್ಲೆ ದ್ವಿಪಾತ್ರ ನೀಡಿದ್ದಾರೆ. ಸಂಡೂರು ಮೈದಾನದಲ್ಲಿ ರಾ ಫೈಟ್ ಚೆನ್ನಾಗಿ ಬಂದಿದೆ. ತ್ರಿಕೋನ ಪ್ರೇಮಕತೆಯಲ್ಲಿ ಅಪಾರ್ಥಗಳು ಬಂದಲ್ಲಿ ಜೀವನ ಹೇಗೆ ಬದಲಾಗುತ್ತದೆ ಎಂಬುದು ಕತೆಯ ತಿರುಳು ಅಂತ ಮಾಹಿತಿ ಹಂಚಿಕೊಂಡರು ಅಭಿ.

ಮನಯವರ ಸಹಕಾರ ಇಲ್ಲದೆ ಇದ್ದರೆ ಬಣ್ಣ ಹಚ್ಚಲು ಸಾದ್ಯವಾಗುತ್ತಿರಲಿಲ್ಲ. ಒಟ್ಟಿಗೆ ಇಬ್ಬರೊಂದಿಗೆ ಎರಡು ಕಡೆ ನಟಿಸುವಾಗ ಗೊಂದಲಗಳು ಆಗುತ್ತಿದ್ದವು. ನಿರ್ದೇಶಕರು ಧೈರ್ಯ ತುಂಬಿದ್ದರಿಂದ ಸುಗಮವಾಯಿತು ಎಂದು ಮುಗ್ದತೆಯಿಂದ ನಕ್ಕರು ಶಿವಮೊಗ್ಗದ ನೀರೆ ನಾಯಕಿ ವರ್ಷ. ಶಿಷ್ಯ ನಾಯಕನಾಗುತ್ತಿರುವುದರಿಂದ ಶುಭ ಹಾರೈಸಲು ನಿರ್ದೇಶಕ ಎಂ.ಡಿ.ಶ್ರೀಧರ್ ಆಗಮಿಸಿದ್ದರು. ಸಂಗೀತ ನಿರ್ದೇಶಕ ಲೋಕಿ, ಛಾಯಗ್ರಾಹಕ ಪ್ರದೀಪ್‍ಗಾಂಧಿ, ಸಂಕಲನಕಾರ ವಿನಯ್‍ಕುಮಾರ್ ಉಪಸ್ತಿತರಿದ್ದರು. ತೆಲುಗು ಚಿತ್ರ ನಟ ಷಫಿ ಯಾವುದೇ ಅಪೇಕ್ಷೆಯನ್ನು ಬಯಸದೆ, ಅಭಿ ಗೆಳತನದ ಸಲುವಾಗಿ ಬಂದಿದ್ದೇನೆಂದು ಆಡಿಯೋ ಸಿಡಿ ಬಿಡುಗಡೆ ಮಾಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
12/04/18

|


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore