HOME
CINEMA NEWS
GALLERY
TV NEWS
REVIEWS
CONTACT US

ಯಶಸ್ಸಿನ ಪಯಣದಲ್ಲಿಯಾನ
ಕಳೆದ ವಾರ ಬಿಡುಗಡೆಗೊಂಡ ಬಹು ನಿರೀಕ್ಷಿತ ‘ಯಾನ’ ಚಿತ್ರವನ್ನು ಕೊನೆಗೂ ಪ್ರೇಕ್ಷಕರು ಕೈ ಹಿಡಿದಿದ್ದರೆ. ನಿರ್ದೇಶಕಿ ವಿಜಯಲಕ್ಷಿಸಿಂಗ್ ಹೇಳುವಂತೆ ಮಾದ್ಯಮದ ಸಹಕಾರದಿಂದಮೊದಲ ದಿನ ಶೇಕಡ 40, ಎರಡನೆ ದಿನಕ್ಕೆ 60,ಭಾನುವಾರದಂದು 70ರಷ್ಟು ಗಳಿಕೆ ಬಂದಿದೆ. ಜನರುಚಿತ್ರ ವೀಕ್ಷಿಸಿ ಬೇರೆಯವರನ್ನುಚಿತ್ರಮಂದಿರಕ್ಕೆ ಕಳುಹಿಸುತ್ತಿದ್ದಾರೆ. ಯುವಜನಾಂಗದಕತೆಯಾಗಿರುವುದರಿಂದ ಹುಡುಗರು,ಹುಡುಗಿಯರು ಬರುತ್ತಾರೆಂದು ತಿಳಿಯಲಾಗಿತ್ತು. ವಿಸ್ಮಯಎನ್ನುವಂತೆ ವಯಸ್ಸಾದವರು ಮೊಮ್ಮಕ್ಕಳೊಂದಿಗೆ ಚಿತ್ರ ನೋಡುತ್ತಿದ್ದಾರೆ.ಮೈಸೂರಿನಲ್ಲಿ 25 ಜೋಡಿಗಳು ಪ್ರದರ್ಶನ ಸಮಯ ಬದಲಾಯಿಸಬೇಕೆಂದುಕೋರಿಕೊಂಡಿದ್ದಾರೆ. ವಿತರಕರುಧೈರ್ಯ ನೀಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಪ್ರಚಾರಕ್ಕಾಗಿಒಂದು ಸಿನಿಮಾ ಬಜೆಟ್‍ನ್ನು ಮೀಸಲಿಡಬೇಕಾಗಿದೆ.ರಂಗಾಯಣರಘು ಸನ್ನಿವೇಶಗಳನ್ನು ಇಷ್ಟಪಟ್ಟಿರುವುದು ಸಂತಸತಂದಿದೆ. ಇದೇ26ರಂದು ಕೇರಳದಲ್ಲಿ 90 ಕೇಂದ್ರಗಳು, ದುಬೈದಲ್ಲಿ ಬಿಡುಗಡೆಯಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಯುಎಸ್, ಲಂಡನ್, ಯುರೋಪ್‍ಕಡೆಗಳಲ್ಲಿ ತೆರೆಗೆ ಬರಲಿದೆಅಂತಾರೆ.

ದುಬೈಕನ್ನಡಿಗಹರೀಶ್‍ಶೇರಿಗಾರ್ ನಿರ್ಮಾಣದಲ್ಲಿ ಸಾಥ್ ನೀಡಿದ್ದರಿಂದಇಲ್ಲಯವರೆಗೂ ಬಂದಿದೆ. 25ನೇ ನಿರ್ಮಾಣದಚಿತ್ರದಲ್ಲಿ ಮಕ್ಕಳು ಅಭಿನಯಿಸಿದ್ದಾರೆ. ಈ ಹಿಂದೆ ಮೂವರು ನಾಯಕರು,ನಾಯಕಿಯರ ಸಿನಿಮಾವನ್ನು ಮಾಡಲಾಗಿತ್ತು. ಅದೇ ಪ್ರಯತ್ನಇಲ್ಲಿಯೂ ಮುಂದುವರೆದಿದೆ.ಮಕ್ಕಳು ಕಲಾವಿದರಾಗುವುದು ಬೇಡಅಂದುಕೊಂಡಿದ್ದವು.ನಾವು ಬಯಸಿದಂತೆ ವಿದ್ಯಾಭ್ಯಾಸ ಮುಗಿಸಿ ಬಣ್ಣ ಹಚ್ಚಿದ್ದಾರೆ. ನಮ್ಮನ್ನು ಬೆಳೆಸಿದಂತೆ ಇವರನ್ನುಚಿತ್ರರಂಗದಲ್ಲಿ ಉಳಿಯಲು ಪ್ರೋತ್ಸಾಹ ನೀಡಬೇಕಂಬುದುಜೈಜಗದೀಶ್‍ಕೋರಿಕೆಯಾಗಿತ್ತು.

ಸಿನಿಮಾಎನ್ನುವುದುಜೂಜುಇದ್ದಂತೆ.ಸಿಂಗ್ ಕುಟುಂಬವು ಯಾವಾಗಲೂ ಸಿಂಗಲ್ ಆಗಿ ಹೋರಾಟ ನಡೆಸುತ್ತಾರೆ.ಅದು ಶಂಕರ್‍ಸಿಂಗ್ ಕಾಲದಿಂದಲೂ ಬಂದಿದೆ. ಪರ ಭಾಷೆಯಲ್ಲಿ ಚಿತ್ರಗಳು ಸುರಕ್ಷಿತವಾಗಿ ನಿರ್ಮಾಪಕರಿಗೆ ಹಣ ಮಾಡಿಕೊಡುತ್ತದೆ. ನಮ್ಮಲ್ಲಿಎಲ್ಲಾ ಭಾಷೆಯವರುಇರುವಕಾರಣಕನ್ನಡ ಸಿನಿಮಾಗಳು ಇತರೆಯವರೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ.ಇದನ್ನೆ ನಾವುಗಳು ಪಾಪಗ್ರಸ್ತರೆಂದು ವಿಷ್ಣುವರ್ಧನ್ ಹೇಳಿದ್ದರು.ಎಲ್ಲರಿಗೂಗಾಡ್‍ಫಾದರ್‍ಇದ್ದರೆ, ಇಲ್ಲಿಇವರ ಸಲುವಾಗಿ ಗಾಡ್‍ಮದರ್‍ಇದ್ದಾರೆ. ಚಂದನವನಕ್ಕೆ ಮೂರು ಕಣ್ಮಣಿಗಳನ್ನು ದಂಪತಿಗಳು ಕೊಟ್ಟಿದ್ದಾರೆ. ಇವರುಗಳನ್ನು ಉಳಿಸುವುದು, ಬೆಳಸುವುದು ನಿರ್ದೇಶಕ, ನಿರ್ಮಾಪಕರದುಆಗಿದ್ದರೆ, ಸೇತುವೆಯಾಗಿ ಮಾದ್ಯಮದವರ ಪಾತ್ರದೊಡ್ಡದುಅಂತ ಸುಂದರ್‍ರಾಜ್‍ಅಭಿಪ್ರಾಯಪಟ್ಟರು.

ಸಂತೋಷಕೂಟದಲ್ಲಿನಿರ್ದೇಶಕಿಯ ಮೂವರು ಪುತ್ರಿಯರಾದವೈಭವಿ, ವೈಸಿರಿ, ವೈನಿಧಿ, ನಾಯಕರುಗಳಾದ ಸುಮುಖ್, ಚಕ್ರವರ್ತಿ, ಅಭಿಷೇಕ್, ಹಿರಿಯ ಕಲಾವಿದರುಗಳಾದ ರಂಗಿತರಂಗಅರವಿಂದ್, ವೀಣಾಸುಂದರ್, ಸುಂದರ್, ಸಂಗೀತ ನಿರ್ದೇಶಕ ಅನೂಪ್‍ಸೀಳನ್, ಸಂಕಲನಕಾರಕೆಂಪರಾಜಅರಸ್‍ಹಾಜರಿದ್ದುಚುಟುಕು ಮಾತನಾಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
16/07/19ಮೂರು ವೈಗಳ ಸುಂದರ ಪಯಣ
ಮೂವರು ಹುಡುಗಿಯರು. ಒಬ್ಬೋಬ್ಬರದು ಒಂದೊಂದು ದಾರಿ,ದಿಕ್ಕು ಹಿನ್ನಲೆಯಿಂದ ಬಂದವರು. ಒಬ್ಬಳದು ದೇವರ ಆರಾದಕಳಾಗಿ ಶಾಂತಿ ಸ್ವಭಾವದವಳು, ಎರಡನೆಯವಳು ಲೈಫ್‍ನ್ನು ಎಂಜಾಯ್ ಮಾಡುವುದು, ಕೊನೆಯವಳು ಸ್ವತಂತ್ರವಾಗಿ ಬದುಕಬೇಕೆನ್ನುವ ಬಯಕೆ. ಇವರುಗಳಿಗೆ ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ಒಂದಾಗಲು ವೇದಿಕೆಯಾಗುತ್ತದೆ. ಇವರೆಲ್ಲರಿಗೂ ಸಮಸ್ಯೆಗಳು ಜೀವನದಲ್ಲಿ ಎದುರಾಗುತ್ತದೆ. ಇದರಿಂದ ಹೂರಹೋಗಿ ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರಯಾಣ ಮಾಡುವಂತೆ ಆಗುತ್ತದೆ. ಧೀರ್ಘ ಪಯಣದಲ್ಲಿ ಹುಡುಗಿಯರು ಅವರುಗಳ ತವಕ, ತಲ್ಲಣ, ಪ್ರೀತಿ, ನೋವು ಎಲ್ಲವನ್ನು ಹೇಳಿಕೊಳ್ಳುವ ಕತೆಯನ್ನು ‘ಯಾನ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ತಮಗೆ ಬರುವ ಸವಾಲುಗಳನ್ನು ಎದುರಿಸಿ ಹೇಗೆ ಸ್ವೀಕರಿಸುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇಂದಿನ ತಲೆಮಾರಿನ ಹುಡುಗ-ಹುಡುಗಿಯರ ಮನಸ್ಥಿತಿ, ಪೋಷಕರಾದವರ ತಲ್ಲಣಗಳು ಇರಲಿದೆ. ಸರಳವಾದ ಕತೆಯು ಕಲರ್‍ಫುಲ್ ಇರುವ ಕಾರಣ ಗ್ಲಾಮರ್‍ಗೇನೂ ಕೊರತೆ ಇಲ್ಲ.

ಇಡೀ ಸಿನಿಮಾ ಮೂವರು ಹುಡುಗಿಯರ ಸುತ್ತ ನಡೆಯುವುದರಿಂದ ಹಿರಿಯ ನಟ ಜೈಜಗದೀಶ್-ವಿಜಯಲಕ್ಷೀಸಿಂಗ್ ಪುತ್ರಿಯರಾದ ವೈಭವಿ, ವೈನಿಧಿ, ವೈಸಿರಿ ನಟನೆ ಹಾಗೂ ಗ್ಲಾಮರ್ ಲುಕ್‍ನಲ್ಲಿ ಚೆಂದ ಕಾಣಿಸುತ್ತಾರೆ. ನಿರ್ದೇಶಕಿ ವಿಜಯಲಕ್ಷೀಸಿಂಗ್ ತಮ್ಮ ಮಕ್ಕಳನ್ನು ಅಭಿನಯವೊಂದಕ್ಕೆ ಸೀಮಿತವಾಗಿಸದೆ ನೋಟದಲ್ಲಿ ಚೆನ್ನಾಗಿ ಕಾಣಲೆಂದು ಚೆಂದ ಚೆಂದದ ಕಾಸ್ಟ್ಯೂಮ್‍ಗಳನ್ನು ಹಾಕಿಸಿದ್ದಾರೆ. ಅನಂತನಾಗ್, ಸುಹಾಸಿನಿ,ರಂಗಾಯಣರಘು ಅವರಿಗೆ ತೂಕದಪಾತ್ರವಾಗಿದೆ. ನಗಿಸಲು ಸಾಧುಕೋಕಿಲ ಚಿಕ್ಕಣ್ಣ, ಶಿವರಾಜ್.ಕೆ.ಆರ್.ಪೇಟೆ, ಸಂಜುಬಸಯ್ಯ ಇದ್ದಾರೆಂದು ಹೇಳಬಹುದು. ಜೋಶ್ವಾಶ್ರೀಧರ್ ಸಂಗೀತದಲ್ಲಿ ಎರಡು ಹಾಡುಗಳನ್ನು ಆಲಿಸಬಹುದು. ತೀರಾ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಚಿತ್ರಮಂದಿರಕ್ಕೆ ಹೋದರೆ ಖಂಡಿತಾ ಯಾನ ಬೇಸರ ತರಿಸುವುದಿಲ್ಲ.
ನಿರ್ಮಾಣ: ಹರೀಶ್‍ಶೇರಿಗಾರ್,ವೈನಿಧಿ,ವೈಸಿರಿ, ವೈಭವಿ
ಸಿನಿ ಸರ್ಕಲ್.ಇನ್ ವಿಮರ್ಶೆ
***
13/07/19


ಶಿವಣ್ಣನ ಹುಟ್ಟುಹಬ್ಬದಂದುಯಾನ ಬಿಡುಗಡೆ
ಜೈಜಗದೀಶ್ ಮಕ್ಕಳಾದ ವೈನಿಧಿ, ವೈಭವಿ ಮತ್ತು ವೈಸಿರಿ ನಟಿಸಿರುವ ‘ಯಾನ’ ಚಿತ್ರದ ಕೊನೆ ಹಂತದ ಪ್ರಚಾರಕಾರ್ಯಕ್ರಮವುಕಲಾವಿದರ ಸಂಘದಲ್ಲಿ ನಡೆಯಿತು. ಟ್ರೈಲರ್ ಬಿಡುಗಡೆ ಮಾಡಿದಯಶ್, ಮಾತನಾಡಿ ಮೇಡಂ ಮೂವರುಕುಡಿಗಳು ಚಿತ್ರರಂಗಕ್ಕೆಎಂಟ್ರಿಕೊಡುತ್ತಿದ್ದಾರೆ. ತುಣುಕುಗಳನ್ನು ನೋಡಿದಾಗ ಮೊಗ್ಗಿನ ಮನಸು ಚಿತ್ರವು ನೆನಪಿಗೆ ಬರುತ್ತದೆ.ಆಗತಾನೇ ಹದಿಹರೆಯಕ್ಕೆಕಾಲಿಟ್ಟ ಹುಡುಗಿಯರ ಮನಸಿನ ಭಾವನೆಗಳನ್ನು ಆಧರಿಸಿದ ಕತೆಯಾಗಿತ್ತು.ನವಿರಾದ ಪ್ರೀತಿಕತೆ, ಹುಡುಗ-ಹುಡುಗಿಯರ ಕನಸುಗಳು, ಕಾಲೇಜು ದಿನಗಳು ಕುರಿತಂತೆ ಹೇಳಲಾಗಿತ್ತು.ಅಂತಹುದೇ ಸನ್ನಿವೇಶಗಳು ಇದರಲ್ಲೂಕಂಡು ಬಂದಿದೆ. ಇಲ್ಲಿಗೆ ಬರಲುಒಂದು ಬಲವಾದಕಾರಣವಿದೆ. ವಿಜಯಲಕ್ಷೀಸಿಂಗ್ ಸಹೋದರ ರಾಜೇಂದ್ರಸಿಂಗ್‍ಬಾಬು ಆ ಕಾಲದಲ್ಲೇಇಡೀದೇಶತಿರುಗಿನೋಡುವಂತಹ ಸಿನಿಮಾ ಮಾಡಿದ್ದರು. ಮಹಾತ್ಮ ಪಿಕ್ಚರ್ಸ್ ಮೂಲಕ ಅವರಕುಟುಂಬದವರುಕನ್ನಡಚಿತ್ರರಂಗಕ್ಕೆ ನೀಡಿರುವಕೊಡುಗೆಅಪಾರವಾದುದು.ಚಂದನವನವನ್ನುಕಟ್ಟಿ ಬೆಳಸಿದವರಲ್ಲಿ ಪ್ರಮುಖರಾಗಿರುತ್ತಾರೆ. ಅವರುಗಳು ಹಾಕಿದ ಮರದಲ್ಲಿ ನಮ್ಮಂತವರು ಫಲ ತಿನ್ನುತ್ತಾಇದ್ದೇವೆ. ಇಂತಹಕುಟುಂಬದವರುಕರೆದರೆ ನಾನು ಇಲ್ಲಎನ್ನಲು ಆಗಲಿಲ್ಲ. ಅದಕ್ಕಾಗಿ ಬರಬೇಕಾಯಿತು.ಎಂಬುದುಅವರ ಮಾತು.

ಮೂರು ನಾಯಕಿಯರಿಗೆಜೋಡಿಗಳಾಗಿ ಚಕ್ರವರ್ತಿ, ಅಭಿಷೇಕ್‍ರೈ, ಹಾಗೂ ಸುಮುಖ್ ನಟಿಸಿದ್ದಾರೆ. ಉಳಿದಂತೆ ಅನಂತನಾಗ್, ಸುಹಾಸಿನಿ, ರಂಗಾಯಣರಘು, ಸಾಧುಕೋಕಿಲ, ಚಿಕ್ಕಣ್ಣ, ಶಿವರಾಜ್.ಕೆ.ಆರ್.ಪೇಟೆ ನಟನೆಇದೆ. ವಿಜಯಲಕ್ಷೀಸಿಂಗ್ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಜೋಶ್ವಾಶ್ರೀಧರ್ ಸಂಗೀತದಲ್ಲಿಆರು ಹಾಡುಗಳು ಇರಲಿದೆ. ಹರೀಶ್‍ಶೇರಿಗಾರ್,ಶರ್ಮಿಳಾಶೇರಿಗಾರ್ ಮತ್ತುನಿರ್ದೇಶಕಿಯ ಮೂವರು ಮಕ್ಕಳು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರವುಜುಲೈ 12ರಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
27/06/19
ವಿಶೇಷ ಹಾಡನ್ನು ಅನಾವರಣಗೊಳಿಸಿದ ಸುದೀಪ್
ಜೈಜಗದೀಶ್-ವಿಜಯಲಕ್ಷೀಸಿಂಗ್ ಮಕ್ಕಳಾದ ವೈಭವಿ,ವೈಸಿರಿ, ವೈನಿಧಿ ಚೊಚ್ಚಲಬಾರಿ ಅಭಿನಯಿಸಿರುವ ‘ಯಾನ’ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಬಾಕಿ ಇವೆ. ಪ್ರಚಾರದ ಸಲುವಾಗಿ ಮಕ್ಕಳನ್ನು ಡಿಗ್ಲಾಮರಸ್ ಆಗಿ ಮಾಯಾ,ಅಂಜಲಿ, ನಂದಿನಿ ಹೆಸರಿನಲ್ಲಿ ಇರುವಂತೆ ವಿಶೇಷ ಹಾಡೊಂದನ್ನು ಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಅವರು ಮಾತನಾಡುತ್ತಾ ಜೈಜಗದೀಶ್‍ರನ್ನು ಮಾಮ ಅಂತ ಮೊದಲನಿಂದಲೂ ಕರೆಯುತ್ತೇನೆ. ಅಪ್ಪ ಮಾಮಾ ನಾಯಕನಾಗಿರುವ ಪವಿತ್ರಪಾಪಿ ಸಿನಿಮಾ ನಿರ್ಮಾಣ ಮಾಡಿದ್ದರು. ಸಿಂಗ್ ಮನೆತನದವರು ನಾಲ್ಕನೆ ತಲೆಮಾರಿನವರು ಆಗಿದ್ದರೆ, ನಾನು ಎರಡನೆ ತಲೆಮಾರಿಗೆ ಸೇರುತ್ತೇನೆ. ಪ್ರಾರಂಭದಲ್ಲಿ ಅವರು ನನ್ನ ಚಿತ್ರದ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಇಂದು ಅವರ ಸಿನಿಮಾಗೆ ಬಂದಿರುವೆ. ಇಂತಹ ವಾತವರಣಗಳು ಮುಂದುವರೆಯಬೇಕು. ಪ್ರಯಾಣ ಎಲ್ಲರ ಜೀವನದಲ್ಲಿ ಬಂದು ಹೋಗುತ್ತದೆ. ವರ್ಷಗಳ ಕೆಳಗೆ ಹುಡುಗಿಯರಾಗಿದ್ದವರು ಇಂದು ಲೇಡೀಸ್ ಆಗಿದ್ದಾರೆ. ವಿಶೇಷ ಗೀತೆಯ ರಚನೆ, ಸಂಗೀತ ಒದಗಿಸಿ ಹಾಡಿರುವ ಹೊಸ ಪ್ರತಿಭೆ ಸಿದ್ದಾರ್ಥ್‍ರನ್ನು ನೋಡುತ್ತಾ ನಿಮ್ಮ ದೇಹಸೌಂದರ್ಯಕ್ಕಿಂತ ಕಂಠ ಚೆನ್ನಾಗಿದೆ. ಭವಿಷ್ಯ ಚೆನ್ನಾಗಿದೆ ಅದನ್ನು ರೂಪಿಸಿಕೊಳ್ಳಿ ಅಂತ ಕಿವಿಮಾತು ಹೇಳಿದರು ಸುದೀಪ್.

ಸುದೀಪ್ ಸರ್ ಸಿನಿಮಾಗಳನ್ನು ನೋಡುತ್ತಾ ಬೆಳದವರು. ಸಿನಿಮಾ ಕುಟುಂಬದಿಂದ ಬಂದವರಾದರೂ ಇದರ ಬಗ್ಗೆ ಅಷ್ಟೇನು ಮಾಹಿತಿ ತಿಳಿದಿರಲಿಲ್ಲ. ನಟನೆ ಮಾಡುವಾಗ ಇದೆಲ್ಲಾ ಕಷ್ಟಗಳು ಗೊತ್ತಾಯಿತು ಎಂಬುದು ಮೂವರು ನೀರೆಯರ ಒಕ್ಕರೂಲ ಮಾತಾಗಿತ್ತು. ಕತೆ ಚೆನ್ನಾಗಿರುವುದಕ್ಕೆ ಪಾಲುದಾರರಾಗಿ ಒಪ್ಪಿಕೊಂಡಿದ್ದೇನೆ ಎಂದರು ಹರೀಶ್‍ಶೇರಿಗಾರ್. ಯಾನ ಪ್ರಯಾಣ ನಮ್ಮ ಕುಟುಂಬಕ್ಕೆ 75 ವರ್ಷದಲ್ಲಿ 100 ಚಿತ್ರ ಮಾಡಿದಂತೆ ಆಗುತ್ತದೆ. ನಾಲ್ಕನೆ ತಲೆಮಾರು ಚಿತ್ರರಂಗಕ್ಕೆ ಬಂದಿದ್ದಾರೆ. ಒಳ್ಳೆಯದಾಗಲಿ ಎಂದರು ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್‍ಬಾಬು. ಮೊಮ್ಮಕ್ಕಳು ತಾರಕಕ್ಕೆ ಬರಲಿ ಅಂತ ಆಶಿರ್ವಧಿಸಿದರು ಪ್ರತಿಮಾದೇವಿ. ಹಿರಿಯ ವಿತರಕ ಪಾಲ್‍ಚಂದಾನಿ ಸಹಕಾರದಿಂದ 24 ಸಿನಿಮಾಗಳನ್ನು ನಿರ್ಮಾಣ ಮಾಡಲಾಯಿತು ಎಂದರು ಜೈಜಗದೀಶ್. ತಾಂತ್ರಿಕ ವರ್ಗದಲ್ಲಿ ಸಂಕಲನ ಕೆಂಪರಾಜಅರಸು, ಸಂಗೀತ ಜೋಶ್ವಾಶ್ರೀಧರ್, ಛಾಯಗ್ರಹಣ ಕರಂಚಾವ್ಲ ಇದ್ದಾರೆ.
-26/10/17


JAIJAGADISH, VIJAYALAKSHMI SELECT 3 HEROES FOR THEIR GIRLS IN YAANA
Y
aana, a film produced by Jaijagadish and directed by his actress wife Vijayalakshmi has found three heroes for their girls. Sumukh, Chakravarthy and Abhishek are the three heroes of the movie. The couple’s daughters Vaibhavi, Vainidhi and Vaisiri are making their debut on the celluloid in Yaana.

Director Vijayalakshmi Singh told reporters on Thursday evening that 300 people were auditioned to play the three heroes. She said they were happy to have found Kannada guys to play the lead roles to their daughters. She said the three guys were passionate about cinema. She said the film has completed its first schedule of shoot in Bengaluru adding that the second and third schedule will be held in Mysuru and Ooty respectively.

The film has six songs and the movie tries to portray urban culture to a large extent, the director said.

Sumukh, who is one of the heroes selected to play the lead is also the son of television actor Shashi Kumar. He said he had undergone training in theatre histrionics for four years in Mumbai. Abhishek, who hails from Davangere, is a model and is also an engineering graduate. Chakravarthy, son of a farmer said he had grown up in Bengaluru.

Vainidhi said the movie is shaping up well. Her elder sister Vaibhavi said she has seen cinema right from her childhood but she was acting as a heroine for the first time. Vaisiri said she is finishing her BE from M S Ramaiah college and added her that her mother offered her this opportunity to appear before the camera as a heroine.

Jaijagadish said 50 percent of the shoot has been completed. He said Yaana is a journey of love. He said although the movie is a small budget film it will look rich on the big screen. The film shows how the digital age where youngsters are hooked to whatsapp, facebook, twitter on their mobiles is helpful and harmful.

Suhas has penned the screenplay. Joshua Sridhar has scored the music. B A Madhu and Suni have penned the dialogues. Karam Chawla is the cameraman.
-8/10/16

JAIJAGADISH, VIJAYALAKSHMI GIVE THEIR 3 DAUGHTERS ‘YANAA
J
aijagadish and his actress wife Vijayalakshmi Singh (now a director) launched their three daughters Vaibhavi, Vaisiri and Vainidhi into cinema with Yanaa for which the muhurta was held at the Kanteerava Studio in Bengaluru on Monday.

Vijayalakshmi Singh who is directing the film said one portion of the film Yanaa is a journey from Bengaluru to Goa with three new heroes and of course there is a love interest in the movie, she said. She said the film will be a rollercoaster ride and that her daughters did not prepare for their launch. She said it just happened. She said her daughters’ entry marks the entry of third generation of their family into films.

Jaijagadish said their daughters are being introduced as three different characters and are not sisters in the movie.

Suni who has written the dialogues with Abhi and Venky said the film is a take on current generation and what the youths are losing out in their lives. He said the director is updated on today’s generation and added that the film will have scope for performances and comedy.

Vainidhi who is studying business management said she was waiting for an opportunity to become an actor. She said she is lucky that the acting offer has come to her from her mother. She said she plays a bubbly and a happy-go-lucky girl in the movie.

Vainidhi’s twin sister Vaisiri said she was lucky to be taking up the offer and is currently pursuing her engineering course.

Vaibhavi said she plays a confident and a responsible girl in the movie. She said all of the three of them did not know that they were doing this film together. She said they had been the worst critics of her mother but added that it is the best launch for all of them. She said she was scared to act in front of her father.

Joshua Sridhar is scoring the music. Bhuvan Gowda has done the photoshoot. The film will take off by the end of the month.

Earlier, Ambarish, Puneeth and Ravichandran were the guests for the film’s muhurta.
-11/04/16For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore