HOME
CINEMA NEWS
GALLERY
TV NEWS
REVIEWS
CONTACT US

ವಿಕೆಂಡ್‍ಗೆ ಯುಎ ಪ್ರಮಾಣಪತ್ರ
‘ವಿಕೆಂಡ್’ ಚಿತ್ರದಲ್ಲಿ ಕತೆಯು ಸೋಮವಾರದಿಂದ ಶುಕ್ರವಾರದವರೆಗೆ ಟೆಕ್ಕಿಗಳು ಬ್ಯುಸಿ ಇದ್ದು, ಶನಿವಾರ ಹಾಗೂ ಭಾನುವಾರ ವಿಕೆಂಡ್‍ನಲ್ಲಿ ಏನೇನು ಮಾಡುತ್ತಾರೆ. ಇದರಲ್ಲಿ ನಕರಾತ್ಮಕ, ಸಕರಾತ್ಮಕ ಅಂಶಗಳು ಇರಲಿದೆ. ಯಾವುದು ಕೆಟ್ಟದ್ದು-ಒಳ್ಳೇದು, ಬೇಕೋ-ಬೇಡವೋ. ಇವರೆಡರ ನಡುವಿನಲ್ಲಿ ಸಂಸ್ಕಾರ ಇರುವ ತಾತ ಹಾಗೂ ಮೊಮ್ಮಗನ ಸನ್ನಿವೇಶಗಳು ಬರುತ್ತವೆ. ಕೆಲಸ ಇದ್ದರೆ, ಅದನ್ನು ಕಳೆದುಕೊಂಡರೆ ಯವಜನಾಂಗದ ಪರಿಸ್ಥತಿ ಹೇಗಿರುತ್ತದೆ ಎಂಬುದನ್ನು ಸೂಕ್ಷವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಆಧುನಿಕತೆಯ ವೈಚಾರಿಕತೆಯಲ್ಲಿ ಹಿರಿಯರ ಜೊತೆ ಯುವಜನಾಂಗದವರ ಸಮಸ್ಯೆ, ಅವರ ಏಳಿಗೆ ಎಲ್ಲವನ್ನು ಹೇಳಲಾಗಿದೆ. ಟೆಕ್ಕಿಗಳು ಕೆಲಸ ಇದ್ದಾಗ ಹೇಗಿರುತ್ತಾರೆ, ಕೆಲಸ-ದುಡ್ಡು. ಡಿಸ್‍ಮಿಸ್ ಆದಾಗ ಯುವ ಮನಸ್ಥಿತಿ ಯಾವ ಹಂತಕ್ಕೆ ಹೋಗುತ್ತದೆಂದು ತಿಳಿಸಲಾಗಿದೆ. ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಪಾತ್ರದಲ್ಲಿ ಅನಂತ್‍ನಾಗ್ ನಟಿಸಿರುವುದು ಚಿತ್ರಕ್ಕೆ ಹಿರಿಮೆಯಾಗಿದೆ.

ಕತೆ,ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಶೃಂಗೇರಿಸುರೇಶ್ ನಿರ್ವಹಿಸಿದ್ದಾರೆ. ತಾರಗಣದಲ್ಲಿ ಮಿಲಂದ್ ನಾಯಕನಾಗಿ ಹೊಸ ಅನುಭವ. ಉಳಿದಂತೆ ಗೋಪಿನಾಥ್‍ಭಟ್, ನಾಗಭೂಷಣ್, ಮುಂತಾದವರ ನಟನೆ ಇದೆ. ಶಿವಮೊಗ್ಗ ಮಂಜುನಾಥ್ ಇನ್ಸೆಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುವ ಜೊತೆಗೆ ಬಂಡವಾಳ ಹೂಡಿದ್ದಾರೆ. ಮೊನ್ನೆ ಸೆನ್ಸಾರ್‍ನವರು ಚಿತ್ರ ವೀಕ್ಷಿಸಿ ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ, ಸಂಭಾಷಣೆಗೆ ಆಕ್ಷೇಪ ವ್ಯಕ್ತಪಡಿಸದೆ ಕ್ಲೀನ್ ಯುಎ ಸರ್ಟಿಫಿಕೇಟ್ ನೀಡಿದ್ದಾರೆ. ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
16/03/19
ಸೆನ್ಸಾರ್ ಗೇ ರೆಡಿಯಾದ "ವೀಕೆಂಡ್"
ಎಪ್ರಿಲ್ ನಲ್ಲಿ ನಿಮ್ಮ ನೆಚ್ಚಿನ ಚಿತ್ರ ಮಂದಿರಗಳಲ್ಲಿ.... ಇವತ್ತಿನ ಯುವಜನಾಂಗದ ಮತ್ತು ಸಾಪ್ಟ್ ವೇರ್ ಉದ್ಯೋಗಿಗಳ ನಡುವಿನ, ನೈಜ ಘಟನೆಯ, ಉತ್ತಮ ಕಥಾವಸ್ತು ಹೊಂದಿರುವ ಈ ಚಿತ್ರದ ಕೇಂದ್ರ ಬಿಂದು ಆನಂತನಾಗ್...ಮಯೂರ ಫಿಲಂಸ್ ಲಾಂಚನದಡಿ, ಮಂಜುನಾಥ ಡಿ ನಿರ್ಮಾಣದ, ಶ್ರಿಂಗೇರಿ ಸುರೇಶ್ ನಿರ್ದೇಶನದಲ್ಲಿ, ಹೊಸ ಪ್ರತಿಭೆಗಳ ಮಹಾಪುರವೇ ಈ ಚಿತ್ರದ ಇನ್ನೊಂದು ಹೈಲೈಟ್..

ತಾರಾಂಗಣದಲ್ಲಿ..ಗೋಪಿನಾಥ್ ಭಟ್, ಮಿಲಿಂದ್, ನಾಗಭೂಷಣ್, ಶಿವಕುಮಾರ್, ಮಂಜುನಾಥ ಡಿ,ಟೇಕಲ್ ಮಂಜುನಾಥ ಶಾಸ್ತ್ರಿ, ನೀನಾಸಂ ರಘು, ಪ್ರಶಾಂತ್ ನಟನ, ಸಂಜಯ್, ಸಚಿನ್, ಕಾರ್ತಿಕ್, ಮಸ್ಕೇರಿ ರಘು, ನವನಿತ,ವೀಣಾ ಜೈಶಂಕರ್, ನೀತುಬಾಲ,ಪಂಚಮಿ,ಬ್ಯಾಂಕ್ ಸತೀಶ್,..... ಸಂಗೀತ:ಮನೋಜ್ ಎಸ್,ಛಾಯಾಗ್ರಹಣ:ಶಶಿಧರ ಕೆ, ಸಂಕಲನ: ರುದ್ರೇಶ್ ಲಕ್ಯ, ಕಲೆ:ಬಾಬುಖಾನ್, ಸಹ ನಿರ್ದೇಶಕ ರು:ಮಂಜುನಾಥ್ ಜಂಭೆ,ರಾಮ್ ಕುಮಾರ್, ಆದೇಶ್ ಎಸ್,
ಸಾಹಸ: ಚಂದ್ರು ಬಂಡೇ,ಚೇತನ್ ಡಿಸೋಜಾ.

ಗಾಯಕರು:ರಾಜೇಶ್ ಕೃಷ್ಣನ್, ಸಂಜೀತ್ ಹೆಗ್ಡೆ, ಅಭಿನಂದನ್ ಮಹಿಶಾಲ, ಅನನ್ಯ ಭಟ್..
ಸಾಹಿತ್ಯ: ಕವಿರಾಜ್, ಹೃದಯ ಶಿವ,ಧನಂಜಯ್.... ಸಿನಿಸರ್ಕಲ್.ಇನ್ ನ್ಯೂಸ್
14/03/19


ಅನಂತನಾಗ್ ಒಂಟಿ ತಾತ
ತಾತ, ನನ್ನ ಅಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು ಅವನ ಹಣೆಬರಹ ಅಲ್ಲ. ನನ್ನ ಅಪ್ಪ-ಅಮ್ಮ ಬರೆದಿದ್ದು ಅಲ್ಲ. ಅದನ್ನು ಬೇರೆ ಯಾರು ಬರೆದಿದ್ದು ಅಲ್ಲ. ಆ ಮನೆ ಮುರುಕ ಬರೆದಿಟ್ಟ ಎಂದು ಪೋಲೀಸ್ ಠಾಣೆಯಲ್ಲಿ ಬಂದಿಯಾಗಿದ್ದವಳು ಹೇಳುತ್ತಾರೆ. ಅದಕ್ಕಾಗಿ ಯಾರ ಮೇಲೆ ದ್ವೇಷ ಸಾದಿಸುತ್ತಿಯಾ. ಭೂಮಿ, ನೀರು, ಪ್ರಕೃತಿ ಮೇಲಾ. ಮೊನ್ನೆ ಮಳೆ ಹಾನಿಯಿಂದ ನೂರಾರು ಜನರು ಕಷ್ಟಕ್ಕೆ ಸಿಲುಕಿದ್ದಾರೆ. ಅದಕ್ಕೆ ಯಾರ ಮೇಲೆ ದ್ವೇಷ ಸಾಧಿಸುವುದೆಂದು ಆಕೆಯನ್ನು ಕೇಳುತ್ತಾರೆ. ಮುಂದೆ ಕಟ್ ಎಂಬ ಶಬ್ದ ಬರುತ್ತದೆ. ಕಂಠೀರವ ಸ್ಟುಡಿಯೋದಲ್ಲಿ ಪೋಲೀಸ್ ಠಾಣೆ ಸೆಟ್‍ನಲ್ಲಿ ನವನಟಿ ವೀಣಾಜಯಶಂಕರ್ ಮತ್ತು ಅನಂತ್‍ನಾಗ್ ನಟನೆಯ ‘ವೀಕೆಂಡ್’ ಚಿತ್ರದ ಕ್ಲೈಮಾಕ್ಸ್ ಭಾಗದ ದೃಶ್ಯವನ್ನು ಸೆರೆ ಹಿಡಿಯಲಾಗುತ್ತಿತ್ತು.

ಸರದಿಯಂತೆ ಮಾತು ಶುರುಮಾಡಿದ ನಿರ್ದೇಶಕ ಸುರೇಶ್ ಪ್ರಸ್ತುತ ಸಾಫ್ಟ್‍ವೇರ್ ಜಗತ್ತಿನವರು ಯಾವ ರೀತಿಯಲ್ಲಿ ಇದ್ದಾರೆ. ನಿರ್ಮಾಪಕರು ಹೇಳಿದ ಒಂದು ಏಳೆಯನ್ನು ಅನಂತ್‍ಸರ್ ಇರುತ್ತಾರೆಂದು ಕತೆಯನ್ನು ವಿಸ್ತರಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಟೆಕ್ಕಿಗಳು ಬ್ಯುಸಿ ಇದ್ದು, ಶನಿವಾರ ಹಾಗೂ ಭಾನುವಾರ ವಿಕೆಂಡ್‍ನಲ್ಲಿ ಏನೇನು ಮಾಡುತ್ತಾರೆ. ಇದರಲ್ಲಿ ನಕರಾತ್ಮಕ, ಸಕರಾತ್ಮಕ ಅಂಶಗಳು ಇರಲಿದೆ. ಯಾವುದು ಕೆಟ್ಟದ್ದು-ಒಳ್ಳೇದು, ಬೇಕೋ-ಬೇಡವೋ. ಇವರೆಡರ ನಡುವಿನಲ್ಲಿ ಸಂಸ್ಕಾರ ಇರುವ ತಾತ ಹಾಗೂ ಮೊಮ್ಮಗನ ಸನ್ನಿವೇಶಗಳು ಬರುತ್ತವೆ. ಕೆಲಸ ಇದ್ದರೆ, ಅದನ್ನು ಕಳೆದುಕೊಂಡರೆ ಯವಜನಾಂಗದ ಪರಿಸ್ಥತಿ ಹೇಗಿರುತ್ತದೆ ಎಂಬುದನ್ನು ಸೂಕ್ಷವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಹದಿನೈದು ದಿನದ ಚಿತ್ರೀಕರಣ ಮುಗಿಸಿದ್ದು, ಕೊನೆ ಹಂತ ಇದಾಗಿದೆ ಎಂಬುದರ ವ್ಯಾಖ್ಯಾನ ಬಿಚ್ಚಿಟ್ಟರು.

ನಿರ್ದೇಶಕರ 2-3 ಸಿನಿಮಾದಲ್ಲಿ ನಟಿಸಬೇಕಾಗಿತ್ತು. ಕಾರಣಾಂತರದಿಂದ ಆಗಲಿಲ್ಲ. ಏನೇ ಆದರೂ ಇದರಲ್ಲಿ ಇರಬೇಕೆಂದು ಸೇರಿಕೊಂಡಿದ್ದೇನೆ. ಆಧುನಿಕತೆಯ ವೈಚಾರಿಕತೆಯಲ್ಲಿ ಮೊಮ್ಮಗನ ಜೊತೆ ಹೊಸತನ ಯುವಜನಾಂಗದವರ ಸಮಸ್ಯೆ, ಅವರ ಏಳಿಗೆ ಎಲ್ಲವನ್ನು ಹೇಳಲಾಗಿದೆ. ಪಾತ್ರದಲ್ಲಿ ತಾತಿ ಇಲ್ಲದೆ ಇರುವುದರಿಂದ ಒಂಟಿ ತಾತ. ಮೊಮ್ಮಗನೇ ಎಲ್ಲಾ ಆಗಿರುತ್ತಾನೆ. ಕಳೆದ ತಿಂಗಳು ಅಮೇರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತೀಯ ಟೆಕ್ಕಿಗಳು ಕೆಲಸ ಮಾಡುವುದು ನೋಡಿದಾಗ ನಿಜಕ್ಕೂ ಅಚ್ಚರಿ ಆಯಿತು. ಟೆಕ್ಕಿಗಳು ಕೆಲಸ ಇದ್ದಾಗ ಹೇಗಿರುತ್ತಾರೆ, ಕೆಲಸ-ದುಡ್ಡು. ಡಿಸ್‍ಮಿಸ್ ಆದಾಗ ಯುವ ಮನಸ್ಥಿತಿ ಯಾವ ಹಂತಕ್ಕೆ ಹೋಗುತ್ತದೆಂದು ಅವರ ಜೊತೆ ಮಾತನಾಡುವಾಗ ತಿಳಿದುಕೊಂಡೆ. ಚಿತ್ರದಲ್ಲಿ ಇದೆಲ್ಲಾವನ್ನು ಹೇಳಲಾಗಿದೆ. ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವುದಾಗಿ ಅನಂತ್‍ನಾಗ್ ಪಾತ್ರದ ಪರಿಚಯ ಮಾಡಿಕೊಂಡರು.

ಉದ್ಗರ್ಷ ಚಿತ್ರಕ್ಕೆ ಪ್ರಾರಂಭದಲ್ಲಿ ನಿರ್ಮಾಪಕನಾಗಿ ನಂತರ ಹೊರಬರಲಾಗಿತ್ತು. ಸಣ್ಣ ಕಲಾವಿದನಾಗಿ ಅಭಿನಯಿಸಿ, ಕತೆ ಚೆನ್ನಾಗಿ ಬಂದ ಕಾರಣ ನಿರ್ಮಾಣ ಮಾಡುತ್ತಿರುವುದಾಗಿ ಇನ್ಸೆಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಶಿವಮೊಗ್ಗ ಮಂಜುನಾಥ್ ಹೇಳಿದರು.
ಇದೇ ವರ್ಷ ಇಂಜಿನಿಯರಿಂಗ್ ಮುಗಿಸಿರುವ ತೀರ್ಥಹಳ್ಳಿಯ ಮಿಲಂದ್ ನಿರ್ದೇಶಕರ ಆದೇಶದಂತೆ ತರಭೇತಿ ಪಡೆದುಕೊಂಡು ನಾಯಕನಾಗಿ ಕ್ಯಾಮಾರ ಮುಂದೆ ಧೈರ್ಯ ಮಾಡಿ ನಿಂತಿದ್ದೇನೆ. ಅನಂತ್ ಸರ್ ಅವರೊಂದಿಗೆ ನಟಿಸಿದ್ದು ಮರೆಯಲಾಗದು ಎಂದರು.
ಸಹಕಲಾವಿದರಾದ ಗೋಪಿನಾಥ್‍ಭಟ್, ನಾಗಭೂಷಣ್, ಛಾಯಗ್ರಾಹಕ ಶಶಿಧರ್, ನಟಿ ವೀಣಾಜಯಶಂಕರ್ ಉಪಸ್ತಿತರಿದ್ದು ಚುಟುಕು ಮಾತಿಗೆ ವಿರಾಮ ಹಾಕಿದರು. ಹಿರಿಯ ನಟನಾಗಿದ್ದರೂ ಡೈಲಾಗ್‍ನ್ನು ಕರಗತ ಮಾಡಿಕೊಳ್ಳುತ್ತಿದ್ದನ್ನು ಕಂಡಾಗ ಅವರ ಆಸ್ಥೆಯನ್ನು ಮೆಚ್ಚಲೆ ಬೇಕಾಗಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
30/11/18

ಅದ್ದೂರಿ ಸೆಟ್‍ನಲ್ಲಿ `ವೀಕ್‍ಎಂಡ್`
ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸುತ್ತಿರುವ `ವೀಕ್ ಎಂಡ್` ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ನಾಯಕ ಸಾ¥sóï್ಟವೇರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಸಾ¥sóï್ಟವೇರ್ ಕಂಪನಿಯಲ್ಲಿರುವ ಅದ್ದೂರಿ ಕಾಫಿû ಡೇ ಹಾಗೂ ಸ್ಮೋಕಿಂಗ್ ಜೋನ್ ಮುಂತಾದವುಗಳ ಸೆಟ್ ನಿರ್ಮಾಣ ಮಾಡಿ ಅದರಲ್ಲಿ ಚಿತ್ರದ ಕೆಲವು ಭಾಗದ ಚಿತ್ರೀಕರಣ ನಡೆಸಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಶೃಂಗೇರಿ ಸುರೇಶ್ ನಿರ್ದೇಶನವಿದೆ. ಶಶಿಧರ್ ಛಾಯಾಗ್ರಹಣ, ಮನೋಜ್ ಸಂಗೀತ, ರುದ್ರೇಶ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ ಹಾಗೂ ರಾಮು, ಯೋಗಾನಂದ್ ನಿರ್ಮಾಣ ನಿರ್ವಹಣೆಯಿದೆ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮೂರು ಹಾಡುಗಳು, ಒಂದು ಸಾಹಸ ಸನ್ನಿವೇಶ ಹಾಗೂ ಒಂದು ಚೇಸಿಂಗ್ ದೃಶ್ಯವಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಮಿಲಿಂದ್ ನಾಯP, ಸಂಜನಾಬುರ್ಲಿ ನಾಯಕಿ. ಹಿರಿಯ ನಟ ಅನಂತನಾಗ್, ಗೋಪಿನಾಥ್‍ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂರಘು, ನವನೀತ, ನಟನ ಪ್ರಶಾಂತ್, ನೀತುಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ನಟಿಸುತ್ತಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
29/11/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore