HOME
CINEMA NEWS
GALLERY
TV NEWS
REVIEWS
CONTACT US
ಅಧ್ಯಾತ್ಮ ಗೆಲ್ಲಿಸಿದರೆ ಮುಂದಿನ ಸಮಾಜ ಗೆಲ್ಲುತ್ತೆ – ಜಗ್ಗೇಶ್
ಬರುವ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಇದನ್ನು ಹೇಳಲು ಕಾರಣವಿದೆ. ಉತ್ತರ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯಲ್ಲಿ ಸಿದ್ದಿಪುರುಷ ವಿಶ್ವರಾಧ್ಯರು ಪವಾಡಗಳನ್ನು ಮಾಡಿದ್ದರಿಂದ ಮೂರು ಲಕ್ಷಕ್ಕೂ ಹೆಚ್ಚು ಭಕ್ರರು ಇರುವುದು ತಿಳಿದುಬಂದಿದೆ. ಅದರಂತೆ ಈಗ ಸ್ವಾಮಿಯ ಕುರಿತ ‘ಅಬ್ಬೆ ತುಮಕೂರ ಸಿದ್ದಿಪುರುಷ ವಿಶ್ವಾರಾಧ್ಯರು’ ಎನ್ನುವ ಚಿತ್ರವು ಸಿದ್ದಗೊಂಡಿದೆ. ಬುದುವಾರ ಮಠಾಧೀಕ್ಷರಾದ ಶ್ರೀ ಶ್ರೀ ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳು, ಗಣ್ಯರುಗಳು ಹಾಗೂ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ಚಿತ್ರದ ಧ್ವನಿಸಾಂದ್ರಿಕೆಯು ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಮೊದಲಸಾಲಿನ ಮೂರು ರಾಜಕೀಯ ಪಕ್ಷಗಳು, ಸ್ಟಾರ್ ಕಲಾವಿದರು ಆಗಮಿಸಿದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿ ಮೈಕ್ ತೆಗೆದುಕೊಂಡ ಜಗ್ಗೇಶ್ ಜೇನುನೊಣಗಳು ಸೇರಿದಂತೆ ಎಲ್ಲಾ ಪಕ್ಷದವರು ಭೇದಭಾವ ಮರೆತು ಆಗಮಿಸಿರುವುದು ಸಂತಸದ ವಿಷಯ. ಪ್ರಚಲಿತ ಸಮಾಜದಲ್ಲಿ ಶೇಕಡ 50ರಷ್ಟು ಆಧ್ಯಾತ್ಮದ ಕಡೆಗೆ, ಉಳಿದವರು ಆಧುನಿಕ ಜಗತ್ತಿನಲ್ಲಿ ಇದ್ದಾರೆ. ಇವರೆಡು ಬದುಕಿನ ಎರಡು ತಕ್ಕಡಿಗಳು ಇದ್ದಂತೆ ಅಂತ ಹೇಳುತ್ತಾ ನವಗ್ರಹ ದೇವತೆಗಳ ಕತೆಯನ್ನು ಹೇಳಿದರು. ಮಾತು ಮುಂದುವರೆಸುತ್ತಾ ಸರಿಯಾದ ಕತೆಯನ್ನು ಸರಿಯಾದ ವ್ಯಕ್ತಿಗೆ ನೀಡಿರುವುದು ಧನಾತ್ಮಕ ಅಂಶವಾಗಿದೆ. ನಿರ್ದೇಶಕರು ನಾನು ಸೈಕಲ್ ಹೊಡೆಯುತ್ತಿದ್ದ ಕಾಲದಲ್ಲಿ ಕರೆದು ಅವಕಾಶ ನೀಡಿದ್ದರು. ಅದರಿಂದ ಅವರ ಮೇಲೆ ಅಪಾರ ಗೌರವವಿದೆ. ಆಧ್ಯಾತ್ಮ ಗೆಲ್ಲಿಸಿದರೆ ಸಮಾಜ ಗೆಲ್ಲುತ್ತದೆ. ಆಧ್ಯಾತ್ಮ ಇರುವ ಕಡೆ ಭಕ್ತಿ ಇರುತ್ತದೆ. ಭಕ್ತಿ ಇರುವ ಕಡೆ ಏಕಾಗ್ರತೆ ಇರುತ್ತದೆ ಏಕಾಗ್ರತೆ ಇದ್ದವರು ಇತಿಹಾಸದಲ್ಲಿ ಉಳಿಯುತ್ತಾರೆಂದು ಅರ್ಥಪೂರ್ಣ ಮಾತುಗಳನ್ನು ಹೇಳಿ ತುರ್ತು ಕೆಲಸ ಇರುವುದರಿಂದ ನಿರ್ಗಮಿಸಿದರು.

ಸಾಯಿಪ್ರಕಾಶ್ ಅವರ ಚಿತ್ರಗಳನ್ನು ವಿತರಣೆ ಮಾಡುತ್ತಿದ್ದಾಗನಿಂದಲೂ ಅವರ ಪರಿಚಯವಿದೆ. ಸ್ವಾಮಿಗಳು ಕುರಿತ ಚಿತ್ರವು ಯಶಸ್ಸುಗಳಿಸಲಿ ಅಂತ ಚುಟುಕು ಮಾತನಾಡಿದ್ದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಗೃಹ ಸಚಿವ ರಾಮಲಿಂಗರಡ್ಡಿ, ಪುನೀತ್‍ರಾಜ್‍ಕುಮಾರ್ ಹೆಚ್ಚಿಗೆ ಹೇಳದೆ ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು. ಮಹಾಸ್ವಾಮಿಗಳು ಶೀರ್ಷಿಕೆಯನ್ನು ನೊಂದಣ ಮಾಡಿಸಲು ಕಚೇರಿಗೆ ಆಗಮಿಸಿದ್ದರು. ಅವರ ನಯ, ವಿನಯವನ್ನು ಭಕ್ತಾದಿಗಳು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚಿನ ನಿರ್ಮಾಪಕರು ತಮ್ಮ ಚಿತ್ರವು ಹೌಸ್‍ಫುಲ್ ಕಾಣಲಿ ಅಂತ ಉಚಿತವಾಗಿ ಟಿಕೆಟ್‍ನ್ನು ಹೊರಗಡೆ ನಿಂತಿರುವ ಜನರಿಗೆ ಕೊಡುತ್ತಿರುವುದು ನೋಡಿದಾಗ ಕನ್ನಡ ಚಿತ್ರರಂಗವು ಈ ಹಂತಕ್ಕೆ ಇದೆಯಾ ಅಂತ ಬೇಸರವಾಗುತ್ತದೆ. ಚಿತ್ರಮಂದಿರದ ಕೌಂಟರ್‍ನಲ್ಲೆ ಟಿಕೆಟ್ ನೀಡಲು ಸೂಚಿಸಲಾಗಿದೆ. ಪವಾಡಪುರುಷನ ಚಿತ್ರವನ್ನು ಉತ್ತರಕರ್ನಾಟಕ ಭಾಗದವರು ಅಲ್ಲದೆ ಕರ್ನಾಟಕದ ಜನರು ನೋಡಬೇಕು. ಅವರ ಶಕ್ತಿ, ಮಾಯೆ ಎಲ್ಲರಿಗೂ ತಿಳಿಯಬೇಕು ಅಂತ ಅಭಿಪ್ರಾಯಪಟ್ಟರು ವಾಣ ಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು.
ವಿಶ್ವಾರಾಧ್ಯ ಅಪ್ಪನವರು 63ನೇ ವಯಸ್ಸಿನಲ್ಲಿ ಅಂತರ್ಧಾನರಾದರು. ನಾನು ಆ ಭಾಗದವನೇ ಆಗಿದ್ದರಿಂದ ಅವರ ಮೇಲೆ ಗೌರವ ಹೆಚ್ಚಿದೆ ಅಂತ ಶಾಸಕ ಮಾಲಿಕ್‍ರೆಡ್ಡಿ ಹೇಳಿದರು. ಕಲಾವಿದರಿಗೆ ಫೋನ್ ಮಾಡಿದಾಗ ಪಾತ್ರ ಏನೆಂದು ಕೇಳದೆ ಬಂದು ನಟನೆ ಮಾಡಿದ್ದಾರೆ. ಶಹಪುರ, ಯಾದಗಿರ್ ಸ್ಥಳಗಳಲ್ಲಿ ಜನರು ಅಡಚಣೆ ಮಾಡದೆ ಚಿತ್ರೀಕರಣಕ್ಕೆ ಸಹಕರಿಸುತ್ತಿದ್ದರು. ಜವಾರಿ ಭಾಷೆ ಇದೆ ಅಂತ ಚಿತ್ರ ಮಾಡುವಾಗ ತಿಳಿಯಿತು. ಮಹಾಸ್ವಾಮಿಗಳು ಪ್ರತಿ ದಿನ ಕೆಲಸ ಕುರಿತು ವಿಚಾರಣೆ ಮಾಡುತ್ತಿದ್ದು, ಹಲವು ಬಾರಿ ಸೆಟ್‍ಗೆ ಭೇಟಿ ನೀಡಿದ್ದಾರೆ. ಅಪ್ಪರಾವ್ ಅವರ ಬಾಲ್ಯ, ಬದುಕು, ವೃದ್ದಾಪ್ಯ ಎಲ್ಲವನ್ನು ತೋರಿಸಲಿಕ್ಕೆ ಕಷ್ಟವಾಗಿತ್ತು. ಸ್ವಾಮಿಗಳು ಅನುಗ್ರಹಿಸಿದರೆ ಭಾಗ-2ರಲ್ಲಿ ಉಳದಿರುವ ವಿಷಯಗಳನ್ನು ಭಕ್ತರಿಗೆ ಅರಿವಾಗುವಂತೆ ತೋರಿಸಲಾಗುವುದು. 99ನೇ ನಿರ್ದೇಶನದ ಚಿತ್ರ ಭಕ್ತಿ ಕತೆಯಾಗಿರುವುದು ತ್ರಪ್ತಿ ತಂದಿದೆ. ಕಳೆದ ಜಾತ್ತೆಯಂದು ಮಹೂರ್ತ ಆಚರಿಸಿಕೊಂಡು ಮುಂದಿನ ತಿಂಗಳು ನಡೆಯುವ ಜಾತ್ರಗೆ ಚಿತ್ರ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ ಎಂದು ಸಾಯಿಪ್ರಕಾಶ್ ಸಿನಿಮಾದ ಸಂಪೂರ್ಣ ಮಾಹಿತಿಗಳನ್ನು ಹರಿಬಿಟ್ಟರು. ಮುಂದೆ ಮೈಕ್ ರಾಮ್‍ಕುಮಾರ್ ಬಳಿ ಹೋದಾಗ ಅವರು ವಿಶ್ವರಾಧ್ಯನಾಗಿ ಕಾಣ ಸಿಕೊಂಡಿದ್ದೇನೆ. ಸಿನಿಮಾ ಗೆಲ್ಲಿಸಿ ಎಂದಷ್ಟೇ ಹೇಳಿದರು. ಅವಸಾನದಲ್ಲಿ ಗಂಗಾಧರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-11/01/18\


ಸಿದ್ದಿಪುರುಷ ವಿಶ್ವರಾಧ್ಯರ ಪವಾಡಗಳ ಚರಿತೆ
ಭಕ್ತಿ ಪ್ರಧಾನ ‘ಅಬ್ಬೆ ತುಮಕೂರ ಸಿದ್ದಪುರುಷ ವಿಶ್ವಾರಾಧ್ಯರು’ ಚಿತ್ರವು ಸದ್ದಿಲ್ಲದೆ ಶಹಪುರ, ಯಾದಗಿರಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಬ್ಬೆ ತುಮಕೂರ ಎನ್ನುವ ಸ್ಥಳವು ಯಾದಗಿರಿ ಜಿಲ್ಲೆಯಲ್ಲಿದ್ದು, ಎಲ್ಲಿಯೋ ಬೆಳದು ನಿಷ್ಪತ್ತಗೊಂಡ ಮಹಾತ್ಮರು ಅಂತಿಮ ದಿನಗಳನ್ನು ಇದೇ ಜಾಗದಲ್ಲಿ ಕಳೆದರಿಂದ ಅದು ಅವಿಮುಕ್ತ ಕ್ಷೇತ್ರವಾಗಿ ಕರ್ನಾಟಕ, ಮಹರಾಷ್ಟ್ರಗಳಿಂದ ಭಕ್ತಾದಿಗಳು ಬರುತ್ತಾರಂತೆ. ಭಕ್ತಿ ಚಿತ್ರಗಳಿಗೆ ಹೆಸರಾದ ಸಾಯಿಪ್ರಕಾಶ್‍ರವರು ನಿರ್ದೇಶನ ಮಾಡಿದ್ದಾರೆ. ವಿಶ್ವಾರಾಧ್ಯರ ಪಾತ್ರದಲ್ಲಿ ರಾಮ್‍ಕುಮಾರ್ ಗ್ಯಾಪ್ ನಂತರ ನಟಿಸಿದ್ದಾರೆ. ಪತ್ನಿಯಾಗಿ ಶೃತಿ, ತಮ್ಮನಾಗಿ ಹರೀಶ್‍ರಾಜ್‍ಗೆ ಜೋಡಿಯಾಗಿ ದಿಶಾಪೂವಯ್ಯ ಉಳಿದಂತೆ ಸಾಧುಕೋಕಿಲ, ಕೀರ್ತಿರಾಜ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ರಮೇಶ್‍ಭಟ್, ಶ್ರೀನಿವಾಸಮೂರ್ತಿ, ಶಿವಕುಮಾರ್, ಬಾಲ ವಿಶ್ವಾರಾಧ್ಯರಾಗಿ ಮಾಸ್ಟರ್ ವಿಜಯ್‍ಕಿರಣ್, ಬಸವಲಿಂಗನಾಗಿ ಜಯಂತ್ ಸೇರಿದಂತೆ 75 ಕಲಾವಿದರು ಸಿನಿಮಾದಲ್ಲಿ ಕಾಣ ಸಿಕೊಂಡಿದ್ದಾರೆ. ಕತೆಗೆ ತಕ್ಕಂತೆ ಸನ್ನಿವೇಶಕ್ಕೆ ಅನುಗುಣವಾಗಿ ಜವಾರಿ ಬಾಷೆಯನ್ನು ಬಳಸಲಾಗಿದ್ದು, ಅದರ ಜವಬ್ದಾರಿಯನ್ನು ಸುಭಾಷ್‍ಚಂದ್ರಕವಲಗಿ ವಹಿಸಿಕೊಂಡಿದ್ದಾರೆ.

ಪವಾಡಪುರುಷರ ಕುರಿತು ಜಾನಪದಗೀತೆಗಳು, ಮೂವತ್ತು ವರ್ಷ ನಾಟಕ ಪ್ರದರ್ಶನಗೊಂಡಿದ್ದು, ಈಗ ಸಿನಿಮಾ ರೂಪದಲ್ಲಿ ಜನರಿಗೆ ತೋರಿಸಲು ಸಜ್ಜಾಗಿದೆ. ಸ್ವಾಮಿಗಳ ವಿದ್ಯಾಭ್ಯಾಸ, ಯೌವ್ವನ, ಮದುವೆ, ವೃದ್ದಾಪ್ಯ ಇವುಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರೀಕರಣ ಸಂದರ್ಭದಲ್ಲಿ ಸ್ವಾಮಿ ಅನುಗ್ರಹದಿಂದ ಮಳೆಗಾಲದಲ್ಲೂ ಸುಗಮವಾಗಿ ಎಲ್ಲಾ ಕೆಲಸಗಳು ನಡೆಯುತ್ತಿದ್ದವು ಅಂತ ನಿರ್ದೇಶಕರು ಹೇಳಿಕೊಂಡಿದ್ದ್ದಾರೆ. ಶ್ರೀಚಂದ್ರುರವರ ಸಾಹಿತ್ಯ, ಶ್ಲೋಕ ಸೇರಿದಂತೆ ಒಟ್ಟು 16 ಗೀತೆಗಳಿಗೆ ಬಿ.ಬಲರಾಮ್ ಸಂಗೀತ ಸಂಯೋಜಿಸಿದ್ದಾರೆ. ಕಳೆದ ಫಬ್ರವರಿ ಜಾತ್ರೆ ದಿನದಂದು ಮಹೂರ್ತ ಅಚರಿಸಿಕೊಂಡು, ಈ ಸಲದ ಜಾತ್ರೆ ಸಂದರ್ಭದಲ್ಲಿ ದರ್ಶನ ಪಡೆಯುವ ಭಕ್ತಾದಿಗಳಿಗೆ ಸಿನಿಮಾ ತೋರಿಸಲು ತಂಡವು ಯೋಜನೆ ಹಾಕಿಕೊಂಡಿದೆ. ಮಠಾಧೀಕ್ಷರಾದ ಶ್ರೀ ಶ್ರೀ ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳು ಮತ್ತು ವಿಶ್ವಗಂಗಾ ಗೆಳೆಯರ ಬಳಗವು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಸಾಯಿಪ್ರಕಾಶ್ ಅವರ 99ನೇ ನಿರ್ದೇಶನದ ಚಿತ್ರವಾಗಿರುವುದು ಮತ್ತೋಂದು ವಿಶೇಷವಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್ ಡಾಟ್ ಇನ್ ನ್ಯೂಸ್
-11/01/18ಅಬ್ಬೆ ತುಮಕೂರ ಸಿದ್ದಿಪುರುಷ ವಿಶ್ವಾರಾದ್ಯರು ಕುರಿತ ಚಿತ್ರ
ಭಕ್ತಿ ಪಂಥದಲ್ಲಿ ಹಲವು ಮಹನೀಯರ ಪವಾಡಗಳ ಕುರಿತ ಸಾಕಷ್ಟು ಚಿತ್ರಗಳು ತೆರೆಗೆ ಬಂದಿವೆ. ಇದರ ಸಾಲಿಗೆ ‘’ಅಬ್ಬೆ ತುಮಕೂರ ಸಿದ್ದಿಪುರುಷ ವಿಶ್ವಾರಾಧ್ಯರು’ ಸಿನಿಮಾ ಸೇರ್ಪಡೆಯಾಗಿದೆ,. ಶೀರ್ಷಿಕೆ ಹೆಸರಿನಲ್ಲಿ ರಾಮ್‍ಕುಮಾರ್ ನಟಿಸಿರುವುದು ವಿಶೇಷವಾಗಿದೆ. ಉಳಿದಂತೆ ಶೃತಿ, ಶಿವಕುಮಾರ್, ಶ್ರೀನಿವಾಸಮೂರ್ತಿ, ರಮೇಶ್‍ಭಟ್, ಚಿತ್ರಾಶಣೈ, ಹರೀಶ್‍ರಾಜ್, ಪದ್ಮವಾಸಂತಿ, ಜೈಜಗದೀಶ್ ಇನ್ನು ಮುಂತಾದವರು ಸ್ವಾಮಿಗಳ ಭಕ್ತರಾಗಿ ಕಾಣ ಸಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಅವರ 99ನೇ ನಿರ್ದೇಶನದ ಚಿತ್ರವೆಂದು ಹೇಳಲಾಗಿದೆ. ಶ್ರೀಚಂದ್ರು ಸಾಹಿತ್ಯದ ಗೀತೆಗಳಿಗೆ ಬಿ.ಬಲರಾಂ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ಜೆ.ಜಿಕೃಷ್ಣ, ಕಲೆ ಈಶ್ವರ್ ಅವರದಾಗಿದೆ.

ಶ್ರೀ ಶ್ರೀ ಶ್ರೀ ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳು ಹಾಗೂ ವಿಶ್ವ ಗಂಗಾ ಗೆಳೆಯರ ಬಳಗವು ಜಂಟಿಯಾಗಿ ವಿಶ್ವ ಗಂಗಾ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿದ್ದಾರೆ. ಭಕ್ತಿ ಪ್ರದಾನ ಚಿತ್ರದ ಧ್ವನಿಸಾಂದ್ರಿಕೆಯನ್ನು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಗೃಹ ಸಚಿವ ರಾಮಲಿಂಗರೆಡ್ಡಿ, ನವರಸ ನಾಯಕ ಜಗ್ಗೇಶ್ ಮತ್ತು ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮವು ಜನವರಿ 10ರಂದು ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
-6/01/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/