HOME
CINEMA NEWS
GALLERY
TV NEWS
REVIEWS
CONTACT US

ಕೆ.ಮಂಜು ಬ್ಯಾನರ್‍ನಲ್ಲಿ ವಿಷ್ಣು ಪ್ರಿಯ
ಹಿರಿಯ ನಿರ್ಮಾಪಕ ಕೆ.ಮಂಜು 45ನೇ ನಿರ್ಮಾಣದಚಿತ್ರ ‘ವಿಷ್ಣು ಪ್ರಿಯ’ಗೆ ಮುಂದಿನವಾರದಿಂದ ಚಾಲನೆ ಸಿಗಲಿದೆ.ಕತೆಯಕುರಿತು ಹೇಳುವುದಾದರೆ ಪ್ರೀತಿಎಂದರೆ ಏನು ಎಂಬುದನ್ನು ವಿಭಿನ್ನವಾಗಿತೋರಿಸುವ ಪ್ರಯತ್ನ ಮಾಡಲಾಗುತ್ತಿದೆ.ಪೋಷಕರಿಗೆ ಮಕ್ಕಳು ಯಾವರೀತಿಗೌರವಕೊಡಬೇಕು, ಹಿರಿಯರಾದವರುಯುವ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು.ಕೃತಕವಲ್ಲದ 90ರ ದಶಕದ ಪ್ರೀತಿಕತೆ, ಸಂಬಂದಗಳ ಮೌಲ್ಯಗಳು ಇರಲಿದೆ. ನೈಜಘಟನೆಆಧಾರಿತ, ಧಾರವಾಡದಸಿಂಧೂಶ್ರೀ ಕಾದಂಬರಿಯಾಗಿದೆ. 1200 ಕ್ಕೂ ಹೆಚ್ದು ಆ್ಯಡ್ ಫಿಲಿಂಗಳು, ತೆಲುಗು,ತಮಿಳು, ಹಿಂದಿ ಮತ್ತು ಮಲೆಯಾಳಂ ಸೇರಿದಂತೆ 30 ಚಿತ್ರಗಳ ನಿರ್ದೇಶನ, ರಾಜ್ಯ, ಅಂತರರಾಜ್ಯ ಪ್ರಶಸ್ತಿ ಪಡೆದಿರುವ ವಿ.ಕೆ.ಪ್ರಕಾಶ್ ನಿರ್ದೇಶನವಿದೆ.

ಶ್ರೇಯಸ್‍ಮಂಜು ಹಿಂದಿನ ಚಿತ್ರ ಪಡ್ಡೆಹುಲಿಗಿಂತ ವಿಭಿನ್ನ ಲುಕ್‍ನಲ್ಲಿ ವಿಷ್ಣು ಹೆಸರಿನೊಂದಿಗೆ ಕಾಣಿಸಿಕೊಳ್ಳುತ್ತಿರುವುದು.ತನ್ನಕಣ್‍ಸನ್ನೆಮೂಲಕ ಮೋಡಿ ಮಾಡಿದ್ದ ಪ್ರಿಯಾವಾರಿಯರ್ ಸಂಕೀರ್ಣ ಶೇಡ್‍ಗಳಲ್ಲಿ ಪ್ರಿಯಳಾಗಿ ನಾಯಕಿ. ತೆಲುಗುದಲ್ಲಿ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಗೋಪಿಸುಂದರ್‍ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ. ಸುರೇಶ್‍ಅರಸ್ ಸಂಕಲನ, ರವಿಶ್ರೀವತ್ಸ ಸಂಭಾಷಣೆಇದೆ.

ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಕಡೆಗಳಲ್ಲಿ ಎರಡು ಹಂತದ ಮಟ್ಟಿಗೆಚಿತ್ರೀಕರಣ ನಡೆಸಲಾಗುವುದು.ತಾರಗಣದಲ್ಲಿ ಸುಚೇಂದ್ರಪ್ರಸಾದ್, ಚಿತ್ಕಲಾಬಿರದಾರ್, ಅಚ್ಯುತ್‍ಕುಮಾರ್, ಅಶ್ವಿನಿಗೌಡ, ನವೀನ್‍ಪಟೀಲು, ನಿಹಾಲ್ ಮುಂತಾದವರು ನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ಡಾ.ನಾಗೇಂದ್ರಪ್ರಸಾದ್ ಸಾಹಿತ್ಯ, ಅಷ್ಟೇ ಸಂಖ್ಯೆಯ ಹೊಡೆದಾಟಗಳಿಗೆ ಜಾನಿ-ರವಿವರ್ಮ-ವಿನೋಧ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣ ವಿನೋಧ್‍ಭಾರತಿ, ಕಲೆ ಮೋಹನ್‍ಪಂಡಿತ್‍ಅವರದಾಗಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/09/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore