HOME
CINEMA NEWS
GALLERY
TV NEWS
REVIEWS
CONTACT US
ಸರ್ಕಲ್‍ದಲ್ಲಿ ವಿಷ್ಣು ಅಭಿಮಾನಿಯ ಪ್ರೀತಿ ಪ್ರೇಮ
ಮೂವರು ಹುಡುಗಿಯರು ಮತ್ತುಒಬ್ಬ ಹುಡುಗನ ಸುತ್ತಕತೆ ಸಾರುವ ‘ವಿಷ್ಣು ಸರ್ಕಲ್’ ಚಿತ್ರವು ಪೂರ್ಣ ಪ್ರಮಾಣದ ಲವ್ ಸ್ಟೋರಿಆಗಿದೆಎಂದು ಹೇಳಬಹುದು. ಜಗ್ಗೇಶ್ ಹಿನ್ನಲೆಧ್ವನಿಯೊಂದಿಗೆಸಿನಿಮಾ ತೆರೆದುಕೊಳ್ಳುತ್ತದೆ. ಕತೆಯಲ್ಲಿಅವನು ಸುಸ್ತಿದಾರರಿಂದ ಮರುಪಾವತಿ ಮಾಡುವ ಕೆಲಸ. ಇದರ ಮಧ್ಯೆ ಮೂವರು ಹುಡುಗಿಯರು ಇವನ ಜೀವನದಲ್ಲಿ ಬರುತ್ತಾರೆ.ಒಬ್ಬಳನ್ನು ಇಷ್ಟಪಟ್ಟರೆ ಅವಳು ತಿರಸ್ಕರಿಸುತ್ತಾಳೆ. ಮತ್ತೋಬ್ಬಳು ಬಂದು ಪ್ರೀತಿಯಲ್ಲಿ ಬಿದ್ದು, ಇನ್ನೇನುಅಂತಿಮ ಹಂತಕ್ಕೆ ಬರುವಷ್ಟರಲ್ಲಿಉದ್ಯೋಗ ಸಿಕ್ಕಿತೆಂದು ವಿದೇಶಕ್ಕೆ ಹಾರುತ್ತಾಳೆ. ಮೂರನೆಯವಳುಈತನನ್ನುಇಷ್ಟಪಟ್ಟಾಗ ಸನ್ನಿವೇಶವುತಿರುವು ಪಡೆದುಕೊಳ್ಳುತ್ತದೆ.ಮೂರು ಪ್ರೀತಿಗಳ ನಡುವೆ ಹಿರಿಯ ನಾಗರೀಕರೊಬ್ಬ ಭಾವಚಿತ್ರದೊಂದಿಗೆಆಕೆಯನ್ನು ಹುಡುಕಾಡುತ್ತಿರುತ್ತಾನೆ. ಇವೆಲ್ಲಕ್ಕೂಕ್ಲೈಮಾಕ್ಸ್‍ದಲ್ಲಿಏನಾಗುತ್ತದೆಎಂಬುದನ್ನು ನಾವು ಹೇಳುವುದಕ್ಕಿಂಗ ನೀವು ಚಿತ್ರಮಂದಿರಕ್ಕೆ ಹೋಗುವುದು ಒಳಿತು.

ಹೀರೋಯಿಸಂತೋರಿಸದೆ ಸಾಹಸ ಸಿಂಹನ ಅಭಿಮಾನಿ, ವಿಷ್ಣು ಹೆಸರಿನಲ್ಲಿ ಸಾಮಾನ್ಯ ಹುಡುಗನಾಗಿನಾಯಕಗುರುರಾಜ್‍ಜಗ್ಗೇಶ್ ಗಮನ ಸೆಳೆಯುತ್ತಾರೆ. ಆಕೃತಿ, ಪ್ರಕೃತಿ, ಸಂಸ್ಕ್ರತಿ ಹೆಸರಿನಲ್ಲಿ ನಾಯಕಿಯರುಗಳಾದ ಸಂಹಿತಾವಿನ್ಯಾ, ಡಾ.ಜಾಹ್ನವಿಜ್ಯೋತಿ ಮತ್ತು ದಿವ್ಯಾಗೌಡ ಮೂವರಿಗೂ ಸಮನಾದ ಅವಕಾಶ ಸಿಕ್ಕಿರುವುದರಿಂದ ಎಲ್ಲರೂಚೆನ್ನಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜಯಂತಿ ಫೋಟೋಇಟ್ಟುಕೊಂಡು ಆಕೆಗಾಗಿ ಪರಿತಪಿಸುವ ದತ್ತಣ್ಣ ಬಗ್ಗೆ ಹೇಳುವ ಆಗಿಲ್ಲ. ತಾಯಿಯಾಗಿಅರುಣಬಾಲರಾಜ್, ಶಿವಮಂಜು, ಪಟ್ರೆನಾಗರಾಜು ಮುಂತಾದವರು ನೀಡಿದ ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಾಫ್ ಮೆಂಟಲ್‍ದಲ್ಲಿ ಪ್ರೀತಿಯನ್ನು ತೋರಿಸಿದ್ದ ನಿರ್ದೇಶಕ ಲಕ್ಷಿದಿನೇಶ್‍ಇದರಲ್ಲಿಅದಕ್ಕಿಂತಲೂ ಭಿನ್ನವಾಗಿ ತೋರಿಸಿರುವುದು ಕಾಣಿಸುತ್ತದೆ. ಶ್ರೀವತ್ಸ, ಪ್ರದೀಪ್‍ವರ್ಮ ಸಂಗೀತದಲ್ಲಿಎರಡು ಹಾಡುಗಳು ಕೇಳಬಲ್. ಸರ್ಕಲ್‍ದಲ್ಲಿ ವಿಷ್ಣು ಪ್ರತಿಮೆಇರುವುದರಿಂದ ಸಾಕಷ್ಟು ದೃಶ್ಯಗಳು ಇದರ ಮುಂದೆ ಬಂದು ಹೋಗುತ್ತದೆ.ಒಟ್ಟಾರೆ ಪೈಸಾ ವಸೂಲ್‍ಚಿತ್ರಎನ್ನಬಹುದು.
ನಿರ್ಮಾಣ: ಆರ್.ಬಿ
ಸಿನಿ ಸರ್ಕಲ್.ಇನ್ ವಿಮರ್ಶೆ
***
6/09/19ಬಿಡುಗಡೆ ಸನಿಹದಲ್ಲಿ ವಿಷ್ಣು ಸರ್ಕಲ್
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಆದರ್ಶಗಳನ್ನು ಹೇಳುವ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಲಕ್ಷೀದಿನೇಶ್ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಅಂತ ಉಪಶೀರ್ಷಿಕೆಯಲ್ಲಿ ಹೇಳಿರುವಂತೆ ಪ್ರತಿಯೊಬ್ಬರ ಜೀವನಾಂಶ ಸಾರುವ ಸಾರಾಂಶವಾಗಿದೆ. ಒಳ್ಳೆ ಕತೆಯನ್ನು ಬ್ಲೆಂಡ್ ಮಾಡಿ ಅದಕ್ಕೆ ಪ್ರಯೋಗಾತ್ಮಕ ಚಿತ್ರವಾಗುವಂತೆ ಸ್ಪರ್ಶ ನೀಡಲಾಗಿದೆ. ಹಿಂದಿನ ಸಿನಿಮಾದಲ್ಲಿ ಪ್ರೀತಿಯ ಹುಡುಕಾಟ ಏನೆಂಬುದನ್ನು ಹೇಳಲಾಗಿತ್ತು. ಇದರಲ್ಲಿ ಅದನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ. ಮೂವರು ಹುಡುಗಿಯರು, ಒಬ್ಬ ಹುಡುಗ, ಜೊತೆಗೆ ದತ್ತಣ್ಣನ ಪ್ರೀತಿ ಸೇರಿದರೆ ಒಟ್ಟಾರೆ ನಾಲ್ಕು ಲವ್ ಸ್ಟೋರಿಗಳು ಬರಲಿದೆ. ಮುತ್ಸದ್ದಿಗೆ ಹಿರಿಯ ನಟಿ ಜಯಂತಿ ಭಾವಚಿತ್ರದಲ್ಲಿ ಜೋಡಿಯಾಗಿರುತ್ತಾರೆ, ಐದು ಜನ ಹುಡುಗರ ತಂಡವೊಂದು ಸೇರಿಕೊಂಡು ವಿಷ್ಣುಸರ್ಕಲ್‍ನ್ನು ಕಟ್ಟಿರುತ್ತಾರೆ. ಏನೇ ಘಟನೆ ನಡೆದರೂ ಇದೇ ವೃತ್ತ ಅದಕ್ಕೆ ಸಾಕ್ಷಿಯಾಗಿರುತ್ತದೆ.

ಸಾಲ ಮರುಪಾವತಿ ಮಾಡುವ ಹುಡುಗನಾಗಿ ಗುರುರಾಜ್‍ಜಗ್ಗೇಶ್ ನಾಯಕ. ಸಂಹಿತಾವಿನ್ಯಾ, ಡಾ.ಜಾನವಿ, ದಿವ್ಯಾಗೌಡ ನಾಯಕಿಯರು. ಮಡಕೇರಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿದ್ದುಕೋಡಿಪುರ ಸಾಹಿತ್ಯದ ಐದು ಗೀತೆಗಳ ಪೈಕಿ, ನಾಲ್ಕು ಹಾಡುಗಳಿಗೆ ಶ್ರೀವತ್ಸ ರಾಗ ಒದಗಿಸಿದ್ದರೆ, ಪ್ರದೀಪ್‍ವರ್ಮ ಹಿನ್ನಲೆ ಶಬ್ದ ಮತ್ತು ಒಂದು ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ಸಂಕಲನ ಸತೀಶ್‍ಚಂದ್ರಯ್ಯ, ನೃತ್ಯ ಹೈಟ್‍ಮಂಜು, ಛಾಯಾಗ್ರಹಣ ಪಿ.ಎಲ್.ರವಿ, ಸಾಹಸ ಪಳನಿರಾಜ್ ಅವರದಾಗಿದೆ. ಡಾ.ವಿಷ್ಣು ಅಭಿಮಾನಿ, ಆರ್.ಭಾಸ್ಕರ್ ಅವರು ಪುತ್ರ ರುತ್ವಿಕ್.ಬಿ (ಆರ್‍ಬಿ) ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಸಚಿತ್ ಫಿಲಿಂಸ್‍ನ ವೆಂಕಟ್ ಸುಮಾರು 150 ಕೇಂದ್ರಗಳಲ್ಲಿ ಶುಕ್ರವಾರದಂದು ಬಿಡುಗಡೆ ಮಾಡುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/09/19


ವಿಷ್ಣು ಸರ್ಕಲ್ ಗಾನಲಹರಿ
‘ವಿಷ್ಣು ಸರ್ಕಲ್’ ಚಿತ್ರದ ಪ್ರಚಾರದ ಮೊದಲ ಹಂತವಾಗಿಆಡಿಯೋ ಸಿಡಿಯನ್ನು ಜಗ್ಗೇಶ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ವಿಷ್ಣು ಸರ್‍ಅವರನ್ನು ಮೊದಲು ನೋಡಿದ್ದು ವಿಜಯ್‍ವಿಕ್ರಂ ಶೂಟಿಂಗ್‍ದಲ್ಲಿ. ಮುಂದೆಚಾಮುಂಡೇಶ್ವರಿ ಸ್ಟುಡಿಯೋದಲ್ಲಿಕಂಡುಆತ್ಮೀಯವಾಗಿ ಮಾತನಾಡಿಸಿದ್ದರು. ಅವರೊಂದಿಗೆ ಊಟ ಮಾಡುವ ಅವಕಾಶ ಒದಗಿಬಂದಿತು.ಅವರು ಭವಿಷ್ಯವನ್ನುಚೆನ್ನಾಗಿ ಹೇಳುತ್ತಿದ್ದರು.ಅದರಂತೆಒಂದೂಕಾಲುಎಕರೆಜಾಗ ಪಡೆದುಕೊಂಡೆ. ಸುದೀಪ್, ಯಶ್‍ತಮ್ಮ ಚಿತ್ರಗಳಲ್ಲಿ ಅವರನ್ನು ಜೀವಂತವಾಗಿರಿಸಿದ್ದಾರೆ. ಹಸರುಅದೇಇದ್ದರೂಕತೆ ಬೇರೆಯಾಗಿದೆ. ತಂದೆಯಾಗಿ ಹಾರೈಸಲು ಆಗಮಿಸಿದ್ದೆನೆ. ನಮ್ಮಕಾಲದಂತೆ ಈಗ ಚಿತ್ರರಂಗಇಲ್ಲ. ಡಾ.ರಾಜ್‍ಕುಮಾರ್‍ಗೆ ಹತ್ತಿರವಾಗಿದ್ದರೂಅವರಚಿತ್ರದಲ್ಲಿನಟಿಸುವ ಭಾಗ್ಯ ಸಿಗಲಿಲ್ಲ. ಜೀವನಚೈತ್ರದಲ್ಲಿ ಅವಕಾಶ ಸಿಕ್ಕಿದ್ದರೂ ದೊರೆ-ಭಗವಾನ್ ಆರ್ಶಿವಾದರಿಂದ ಅದುಟೆನ್ನಿಸ್‍ಕೃಷ್ಣಪಾಲಾಯಿತು. ಸ್ವಾಭಿಮಾನಿ ಕನ್ನಡಿಗರು ಮೊದಲು ನಮ್ಮಚಿತ್ರಕ್ಕೆರೆಡ್‍ಕಾರ್ಪೆಟ್ ಹಾಕಿ, ನಂತರ ಬೇರೆ ಭಾಷೆಯ ಚಿತ್ರಗಳಿಗೆ ಮನ್ನಣೆಕೊಡಬೇಕೆಂದುಕರೆ ನೀಡಿ ಮಾತಿಗೆ ವಿರಾಮ ಹಾಕಿದರು.

ಮೇಕಪ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಲಾಗಿ, ಇಂದಿಗೆ 25 ವರ್ಷ ಪೂರೈಸಲಾಗಿದೆ.ಯಾರೂ ಮಾಡಿರದಕ್ಲೈಮಾಕ್ಸ್‍ಇದರಲ್ಲಿಅದ್ಬುತವಾಗಿ ಬಂದಿದೆಎನ್ನುತ್ತಾರೆ ನಾಯಕಗುರುರಾಜ್‍ಜಗ್ಗೇಶ್.ಪ್ರದೀಪ್‍ವರ್ಮ ಹಿನ್ನಲೆ ಸಂಗೀತವನ್ನುಒದಗಿಸಲು ಸಾಕಷ್ಟು ಸಮಯತೆಗೆದುಕೊಂಡಿದ್ದಾರೆ.ಸಾಲ ಮರುಪಾವತಿ ಹುಡುಗನಾಗಿಗುರುರಾಜ್ ಕಾಣಿಸಿಕೊಂಡಿದ್ದಾರೆ. ವಿಷ್ಣು ಸರ್‍ಅಭಿಮಾನವನ್ನುತೋರಿಸಲಾಗಿದ್ದು, ಶೀರ್ಷಿಕೆ ಏತಕ್ಕಾಗಿಇಡಲಾಗಿದೆ. ಚಿತ್ರದಲ್ಲಿ ನಾಯಕಿಯರುಗಳಿಗೆ ಆಕೃತಿ, ಪ್ರಕೃತಿ, ಸಂಸ್ಕ್ರತಿ ನಾಮಕರಣ ಮಾಡಲಾಗಿದೆ. ಇದಕ್ಕೆಲ್ಲಾಉತ್ತರವುಸಿನಿಮಾದಲ್ಲಿಸಿಗಲಿದೆ ಎಂದು ನಿರ್ದೇಶಕ ಲಕ್ಷೀದಿನೇಶ್‍ಕುತೂಹಲ ಕಾಯ್ದಿರಿಸಿದರು.

ಸಂಗೀತ ನಿರ್ದೇಶಕ ಶ್ರೀವತ್ಸ, ಪ್ರದೀಪ್‍ವರ್ಮಾ, ನಾಯಕಿಯರುಗಳಾದ ಸಂಹಿತಾವಿನ್ಯಾ, ಡಾ.ಜಾಹ್ನಿಜ್ಯೋತಿ, ದಿವ್ಯಾಗೌಡ, ಪರಿಮಳಜಗ್ಗೇಶ್ ಕಡಿಮೆ ಸಮಯತೆಗೆದುಕೊಂಡರು. ಡಾ.ವಿಷ್ಣುವರ್ಧನ್‍ಅಭಿಮಾನಿ ಆರ್.ಭಾಸ್ಕರ್‍ನಿರ್ಮಾಣ ಮಾಡಿರುವ ಸಿನಿಮಾವು ಸದ್ಯದಲ್ಲೆತೆರೆಗೆ ಬರುವ ಸಾದ್ಯತೆಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
13/07/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore