HOME
CINEMA NEWS
GALLERY
TV NEWS
REVIEWS
CONTACT US
ವಿರಾಟ ಪರ್ವ ಹಲವು ವಿಶೇಷಗಳ ಸಂಗಮ
ಮಹಾಭಾರತÀÀದ ಹದಿನೆಂಟನೇಅಧ್ಯಾಯ, ನಾಲ್ಕನೇ ಕಾಲದಲ್ಲಿ ಬರುವ ‘ವಿರಾಟ ಪರ್ವ’ ಅದೇ ಹೆಸರಿನಲ್ಲಿಚಿತ್ರವೊಂದು ಬರುತ್ತಿದೆ.ಕತೆಯುನಾಲ್ಕು ಬಗೆ, ಮೂರು ಕಾಲ ಘಟ್ಟ ಮತ್ತುಮನಸ್ಥಿತಿಗಳ ಬಗ್ಗೆ ಇರಲಿದೆ.ಮಂಸೋರೆ, ಯಶ್Àಶೆಟ್ಟಿ ಹಾಗೂ ಹೇಮಂತ್‍ಸುಶೀಲ್ ಸದರಿ ಪಾತ್ರಗಳನ್ನು ನಿಭಾಯಿಸಿದ್ದಾರೆ.ಅಜ್ಞಾತವಾಸ, ಹುಡುಕಾಟ ಹಾಗೂ ಥ್ರಿಲ್ಲಿಂಗ್ ಅಂಶಗಳಲ್ಲಿ, ಮನುಷ್ಯ ಸಂಬಂದಕ್ಕೆ ಪೆಟ್ಟು ಬಿದ್ದಾಗಅದರ ಉಳಿವಿಗಾಗಿ ಏನೆಲ್ಲಾ ಪ್ರಯತ್ನ ಮಾಡುತ್ತಾನೆಎಂಬುದುಚಿತ್ರದ ಹೂರಣ.ತಾರಗಣದಲ್ಲಿಆರುಗೌಡ, ಅನಿಲ್‍ಸಿದ್ದು,ಅನ್ವಿತಾಸಾಗರ್, ಹರಿಣಿ, ಪ್ರಕಾಶ್‍ಹೆಗ್ಗೋಡು ಸೇರಿದಂತೆ 80 ಕಲಾವಿದರು ನಟಿಸಿದ್ದಾರೆ. ಮತ್ತೋಂದು ವಿಶೇಷ ಪಾತ್ರದಲ್ಲಿ ‘ಹುಡುಗರು’ ಸಿನಿಮಾದಲ್ಲಿ ನಟಿಸಿದ್ದ ಮೂಕಿ ಪ್ರತಿಭೆಅಭಿನಯಇನ್ಸ್‍ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.

ಅನಂತ್‍ಶೈನ್‍ರಚನೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಭಟ್ಕಳ, ಮೈಸೂರು, ಕೋಲಾರ ಹಾಗೂ ಬೆಂಗಳೂರಿನಲ್ಲಿ 55 ದಿನಗಳ ಕಾಲ ಚಿತ್ರೀಕರಣನಡೆದಿದೆ.ವಿನಿಟ್‍ರಾಜ್ ಮೆನನ್ ಸಂಗೀತದಲ್ಲಿರಾಷ್ಟ್ರಕವಿ ಕುವೆಂಪು ವಿರಚಿತ ಸಾಲುಗಳನ್ನು ಬಳಸಲಾಗಿದ್ದು, ಉಳಿದಂತೆ ಯೋಗರಾಜ್‍ಭಟ್, ಕವಿರಾಜ್ ಸಾಹಿತ್ಯವಿದೆ.ಕುಂಚಕಲಾವಿದರವಿ.ಎಲ್.ಪೂಝಾರಿ ರಚಿಸಿದ ಮೊದಲ ಪೋಸ್ಟರ್‍ನ್ನುಪುನೀತ್‍ರಾಜ್‍ಕುಮಾರ್, ಎರಡನೆಯದನ್ನುಕಾರ್ಗಿಲ್‍ಯುದ್ದದಲ್ಲಿ ಹುತಾತ್ಮನಾದಹೇಮಚಂದ್‍ಹೆತ್ತವರಿಂದ ಬಿಡುಗಡೆ ಮಾಡಿಸಿಕೊಂಡಿದೆ.ಸುನಿಲ್‍ರಾಜ್ ನಿರ್ಮಾಣ ಮಾಡಿರುವಚಿತ್ರವು ಸದ್ಯದಲ್ಲೆಜನರಿಗೆತೋರಿಸಲು ಸಿದ್ದತೆಗಳು ನಡೆಯುತ್ತಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
22/03/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore