HOME
CINEMA NEWS
GALLERY
TV NEWS
REVIEWS
CONTACT US
ವಿನೋಧ್ ಪ್ರಭಾಕರ್ ಚಿತ್ರಕ್ಕೆ ದರ್ಶನ್ ಕ್ಲಾಪ್
ರಗಡ್ ಚಿತ್ರದಲ್ಲಿ ಬ್ಯುಸಿ ಇದ್ದ ವಿನೋಧ್‍ಪ್ರಭಾಕರ್ ಹೊಸ ಚಿತ್ರದಲ್ಲಿ ನಟಿಸಲು ಸಹಿ ಹಾಕಿದ್ದಾರೆ. ಸದ್ಯ ಪ್ರೊಡಕ್ಷನ್ ನಂ.1ರಲ್ಲಿ ಸೆಟ್ಟೇರುತ್ತಿದ್ದು ಚಿತ್ರದಲ್ಲಿ ಅವರ ಪಾತ್ರ ಸಾಫ್ಟ್‍ವೇರ್ ಇಂಜಿನಿಯರ್. ಆದರೂ ರಗಡ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಆಕ್ಷನ್ ದೃಶ್ಯಗಳಿಗೆ ಕೊರತೆ ಇಲ್ಲ. ರವಿಗೌಡ ರಚನೆ ಮತ್ತು ನಿರ್ದೇಶನ ಮಾಡುತ್ತಿದ್ದು, ಹಾಡುಗಳಿಗೆ ಅಚ್ಚು ಸಂಗೀತ ಸಂಯೋಜನೆ ಇದೆ. ಛಾಯಗ್ರಹಣ ಮನೋಹರ್‍ಜೋಷಿ, ಸಾಹಸ ನಿರ್ದೇಶನ ವಿನೋಧ್ ಅವರದಾಗಿದೆ. ಬೆಂಗಳೂರು, ಹೈದರಬಾದ್, ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ನಾಯಕಿ, ಕಲಾವಿದರು, ಮತ್ತು ತಂತ್ರಜ್ಘರ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವು ಅಂತಿಮಗೊಳ್ಳಲಿದೆ. ಶ್ರೀ ಕನಕದುರ್ಗ ಚಲನಚಿತ್ರ ಸಂಸ್ಥೆಯ ಮೂಲಕ ಚ.ಚಕ್ರವರ್ತಿ ಮತ್ತು ಬಿ.ಕುಮಾರ್ ನಿರ್ಮಾಣ ಮಾಡುತ್ತಿದ್ದು, ರಾಜೇಶ್‍ದಂಡ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಶುಕ್ರವಾರ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಸರಳ ಮಹೂರ್ತ ಸಮಾರಂಭದಲ್ಲಿ ದರ್ಶನ್ ಭಾಗವಹಿಸಿ ಮೊದಲದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
14/05/18
ಪ್ರೊಡಕ್ಷನ್ ನಂ.1 ಚಿತ್ರದಲ್ಲಿ ವಿನೋಧ್ ಪ್ರಭಾಕರ್
ರಗಡ್ ಚಿತ್ರಕ್ಕಾಗಿ ವಿನೋಧ್ ಪ್ರಭಾಕರ್ ಎಂಟ್ ಪ್ಯಾಕ್ಸ್ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಚಿತ್ರವು ಈಗ ಬಹುತೇಕ ಕೊನೆ ಹಂತಕ್ಕೆ ಬಂದಿದೆ. ಇದರ ಮಧ್ಯೆ ಮತ್ತೋಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಹೆಸರಿಡದ ಚಿತ್ರಕ್ಕೆ ಸದ್ಯ ಪ್ರೊಡಕ್ಷನ್ ನಂ.1ರಲ್ಲಿ ಸೆಟ್ಟೇರುತ್ತಿದೆ. ರವಿಗೌಡ ನಿರ್ದೇಶನದ ಸಿನಿಮಾಕ್ಕೆ ಬೆಂಗಳೂರು ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿ, ಕಲಾವಿದರು, ಮತ್ತು ತಂತ್ರಜ್ಘರ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವು ಅಂತಿಮಗೊಳ್ಳಲಿದೆ. ಮೇ 11 ಶುಕ್ರವಾರ ಶುಭದಿನವಾಗಿದ್ದರಿಂದ ತಂಡವು ಅಂದೇ ದಿನದಂದು ಮಹೂರ್ತವನ್ನು ಆಚರಿಸಿಕೊಳ್ಳಲಿದೆ. ಬುಲ್ ಟೆಂಪಲ್ ರಸ್ತೆಯಲ್ಲಿರುವ ದೇವಸ್ಥಾನದಲ್ಲಿ ಮಹೂರ್ತ ಸಮಾರಂಭವು ನಡೆಯಲಿದ್ದು, ಚಿತ್ರದ ಪ್ರಥಮ ದೃಶ್ಯಕ್ಕೆ ಛಾಲೆಜಿಂಗ್ ದರ್ಶನ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಕ್ಲಾಪ್ ಮಾಡಲಿದ್ದಾರೆ. ಮುಂದಿನ ವಿವರಗಳು ಸದ್ಯದಲ್ಲಿ ತಿಳಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
8/05/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore