HOME
CINEMA NEWS
GALLERY
TV NEWS
REVIEWS
CONTACT US
ಧರ್ಮ ಕರ್ಮದ ಸಿದ್ದಾಂತ ಹೇಳುವ ಸಿನಿಮಾ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ವಿಜಯರಥ’ ಚಿತ್ರದ ಕತೆಯು ಪ್ರಪಂಚದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕು ಅಂದರೆ ಬೆಕ್ಕಿಗಿಂತ ಜನರು ಅಡ್ಡ ಬರ್ತಾರೆ. ನಾವು ಎರಡು ಸಿದ್ದಾಂತದಲ್ಲಿ ಬದುಕುತ್ತಿದ್ದೇವೆ. ಅದು ಧರ್ಮ ಮತ್ತು ಕರ್ಮ. ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ. ಅದು ಕರ್ಮ. ಇನ್ನೋಬ್ಬ ಗುರಿಯನ್ನು ತಲುಪುತ್ತಾನೆ. ಅದುವೇ ಧರ್ಮ. ಕೆಳಗಡೆ ಬಿದ್ದವನನ್ನು ಕೂಡ ತನ್ನ ಜೊತೆ ಗುರಿಯನ್ನು ಮುಟ್ಟಿಸಲು ಪ್ರಯತ್ನ ಮಾಡುವ ಹೀರೋಗೆ ಮೂರನೇ ರೂಪ ಕಾಣಿಸುತ್ತದೆ. ಯಾರಿಗೂ ಕಾಣಲಾರದ ತೃತೀಯ ಶಕ್ತಿ ಏನು ಎನ್ನುವುದು ಸೆಸ್ಪೆನ್ಸ್ ಅಂತೆ. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅಜಯ್‍ಸೂರ್ಯ.ಕೆ ಮೊದಲಬಾರಿ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮಧುಗಿರಿಯಲ್ಲಿ ಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ.

ಹಳ್ಳಿ ಹುಡುಗನಾಗಿ ಯಾವುದೇ ತೊಂದರೆ ಬಂದರೂ ಮುಂದೆ ನಿಲ್ಲುವ, ಒಂದು ಹಂತದಲ್ಲಿ ತನಗೆ ಸಮಸ್ಯೆ ಎದುರಾದಾಗ ಅವನ ಬದುಕಿನಲ್ಲಿ ಏನಾಗುತ್ತದೆ ಎನ್ನುವ ಪಾತ್ರದಲ್ಲಿ ವಸಂತ್‍ಕಲ್ಯಾಣ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅರ್ಪಿತಾಗೌಡ ನಾಯಕಿ. ಕೆ.ಜಿ.ಎಫ್ ಖ್ಯಾತಿಯ ಅರ್ಚನಾ ಉಪನಾಯಕಿ. ಎಸಿಪಿಯಾಗಿ ರಾಜೇಶ್‍ನಟರಂಗ, ನಾಯಕಿಯ ತಂದೆಯಾಗಿ ಹನುಮಂತೆಗೌಡ, ಕಾಕೋಳುರಾಮಯ್ಯ ತಾತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸಂಗೀತ ಪ್ರೇಮ್‍ಕುಮಾರ್, ಸಾಹಿತ್ಯ ಚಂದ್ರು, ಸಂಭಾಷಣೆ ಗೋಪಿ, ಸಂಕಲನ ರವಿಚಂದ್ರನ್, ಛಾಯಾಗ್ರಹಣ ಯೋಗಿ ಅವರದಾಗಿದೆ. ತಮ್ಮ ನಾಯಕನಾಗುವ ಸಿನಿಮಾಕ್ಕೆ ರಮೇಶ್.ಆರ್.ಮಧುಗಿರಿ ಸುಮಾರು ಒಂದು ಕೋಟಿಗೂ ಹೆಚ್ಚು ಹಣವನ್ನು ಸಿನಿಮಾ ಕೃಷಿಗೆ ಹೂಡಿದ್ದಾರೆ. ಇದೇ ಭಾನುವಾರದಂದು ಕೈಲಾಶ್‍ಖೇರ್ ಹಾಡಿರುವ ‘ಜೈ ಆಂಜನೇಯ’ ಗೀತೆಯು ಲೋಕಾರ್ಪಣೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/03/19

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore