HOME
CINEMA NEWS
GALLERY
TV NEWS
REVIEWS
CONTACT US
ಕಮರ್ಷಿಯಲ್ ವಾಸು ಲವ್ ಸ್ಟೋರಿ
ಚಿತ್ರ ಶುರುವಾದ ಮೊದಲ ದೃಶ್ಯದಲ್ಲಿ ಆತನು ಠಾಣೆಗೆ ಬಂದು ಇನ್ಸ್‍ಪೆಕ್ಟರ್‍ಗೆ ಒಂದು ಫೋಟೋ ಕೊಟ್ಟು ಇವಳನ್ನು ಎತ್ತಿಬಿಡುತ್ತೇನೆ. ಬೇಕಿದ್ರೆ ಈಗಲೇ ಎಫ್‍ಐಆರ್ ಹಾಕಿ ಎಂದು ಕೋರಿಕೊಳ್ಳುತ್ತಾನೆ. ನಿನ್ನದೇನು ಕತೆ ಎಂದು ಅಧಿಕಾರಿ ಕೇಳಿದಾಗ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಕತೆಯು ಒಂದೊಂದಾಗಿ ತೆರೆದುಕೊಳ್ಳುತ್ತದೆ. ವಾಸು ಜೀವನದಲ್ಲಿ ಪ್ರೀತಿಸುವ ಅಪ್ಪ,ಅಮ್ಮ, ಅಕ್ಕ, ಕರೆದರೆ ಓಡಿ ಬರುವ ಗೆಳಯರು, ಇದರಿಂದ ಲೈಫ್ ಕಲರ್ ಫುಲ್ ಆಗಿರುತ್ತದೆ. ಇದರ ಮಧ್ಯೆ ಲವ್ ಮಾಡಿದ್ದೆ ತೊಂದರೆಯನ್ನು ಮಡಿಲಿಗೆ ಹಾಕಿಕೊಂಡಂತೆ ಆಗುತ್ತದೆ. ಪ್ರೀತಿಸಿದ ಹುಡುಗ ಐ ಲವ್ ಯು ಅಂತ ಹೇಳಿಲ್ಲವೆಂದು ಆಕೆಯ ಆಕ್ಷೇಪ. ಅವನು ಅದನ್ನು ಯಾತಕ್ಕೆ ಹೇಳಿಲ್ಲವೆಂದು ಎರಡು ಗಂಟೆಯ ಸಿನಿಮಾದಲ್ಲಿ ವಿವರವಾಗಿ ಹೇಳಲಾಗಿದೆ. ಟೈಟಲ್ ಹೇಳುವಂತೆ ಪಕ್ಕಾ ಮಾಸ್ ಅಂಶಗಳು ಇರಲಿದೆ. ಸಿನಿಮಾದಲ್ಲಿ ಗಟ್ಟಿತನ ಇಲ್ಲದಿದ್ದರೂ ಸರಳ ಚಿತ್ರಕತೆ ನೋಡುಗನಿಗೆ ಮಜಾ ಕೊಡುತ್ತದೆ. ಪ್ರೀತಿ, ಪ್ರೇಮದ ಓಟ, ಫ್ಯಾಮಿಲಿ ಸೆಂಟಿಮೆಂಟು, ಜೊತೆಗೆ ಮದುರ ಹಾಡುಗಳು ಇರುವುದರಿಂದ ಮೊದಲ ಭಾಗ ಹೋಗುವುದೇ ಗೊತ್ತಾಗುವುದಿಲ್ಲ. ವಿರಾಮದ ನಂತರ ಸನ್ನಿವೇಶಗಳು ರೋಚಕವಾಗಿ ಪ್ರೇಕ್ಷಕರನ್ನು ರಂಜಿಸುತ್ತದೆ.

ಅನೀಶ್‍ತೇಜಶ್ವರ್ ಹಿಂದಿನ ಚಿತ್ರಗಳಲ್ಲಿ ನಟಿಸಿದ್ದರೂ ಇದರಲ್ಲಿ ಅವೆಲ್ಲಾಕ್ಕಿಂತ ಭಿನ್ನವಾಗಿ ಅಭಿನಯ, ಡ್ಯಾನ್ಸ್, ಫೈಟ್‍ದಲ್ಲಿ ಒಂದು ತರಹ ಇಷ್ಟವಾಗುತ್ತಾರೆ. ಮುಗ್ದತೆಯಿಂದ ಕಾಣಿಸಿಕೊಂಡಿರುವ ನಿಶ್ವಿಕಾನಾಯ್ಡು ಚಿತ್ರರಂಗಕ್ಕೆ ಕೊಡುಗೆಯಾಗಿದೆ. ಅನೀಶ್ ಅಪ್ಪನಾಗಿ ಮಂಜುನಾಥಹೆಗ್ಗಡೆ, ತಾಯಿ ಪಾತ್ರದಲ್ಲಿ ಅರುಣಬಾಲರಾಜ್, ನಾಯಕಿ ತಂದೆಯಾಗಿ ದೀಪಕ್‍ಶೆಟ್ಟಿ, ಇನ್ಸ್‍ಪೆಕ್ಟರ್ ಆಗಿ ಅವಿನಾಶ್ ಎಲ್ಲರೂ ಪಾತ್ರಕ್ಕೆ ಸಹಜತೆ ತುಂಬಿದ್ದಾರೆ. ಅಜಿತ್‍ವಾಸನ್‍ಉಗ್ಗಿನ ನಿರ್ದೇಶನವು ಹೆಸರಿಗೆ ತಕ್ಕಂತೆ ಪರದೆ ಮೇಲೆ ಚೆನ್ನಾಗಿ ಮೂಡಿಬಂದಿದೆ. ಅಜನೀಶ್‍ಲೋಕನಾಥ್ ಮೆಲೋಡಿ ಹಾಡುಗಳಿಗೆ, ದಿಲೀಪ್‍ಚಕ್ರವರ್ತಿ ಸುಂದರ ತಾಣಗಳನ್ನು ಸೆರೆಹಿಡಿದಿರುವುದು ಪ್ಲಸ್ ಪಾಯಿಂಟ್ ಆಗಿದೆ. ನಾಯಕ ಮತ್ತು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡು ಉತ್ತಮ ಪಕ್ಕಾ ಕಮರ್ಷಿಯಲ್ ಸಿನಿಮಾ ನೀಡಿರುವುದಕ್ಕೆ ನಮ್ಮ ಕಡೆಯಿಂದ ಒಂದು ಸಲಾಂ.
ಸಿನಿ ಸರ್ಕಲ್.ಇನ್ ವಿಮರ್ಶೆ
4/08/18
ಆಗಸ್ಟ್ ಮೂರಕ್ಕೆ ವಾಸು ಪಕ್ಕಾ
‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರಕ್ಕೆ ಉಗ್ರಂ ಶ್ರೀಮುರಳಿ, ರಕ್ಷಿತ್‍ಶೆಟ್ಟಿ ಹಾಗೂ ರಿಲೀಸ್ ಪೋಸ್ಟರ್‍ನ್ನು ದರ್ಶನ್ ಅನಾವರಣಗೊಳಿಸಿ ಗೆಳಯನಿಗೆ ಶುಭ ಹಾರೈಸಿದ್ದರು. ಅನೀಶ್‍ತೇಜಶ್ವರ್ ನಾಯಕ ಜೊತಗೆ ಮೊದಲಬಾರಿ ಹಣ ಹೂಡಿರುವುದು ವಿಶೇಷ. ಟ್ರೈಲರ್ ಚಿತ್ರ ನೋಡುವಂತೆ ಮತ್ತು ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇಲ್ಲಿಯವರೆವಿಗೂ ಒಂದು ಏಳೆಯನ್ನು ಬಿಟ್ಟುಕೊಡದ ತಂಡವು ಎಲ್ಲವನ್ನು ಚಿತ್ರಮಂದಿರಲ್ಲಿ ನೋಡಬೇಕೆಂದು ಹೇಳಿಕೊಂಡಿದೆ. ಅಮ್ಮಾ ಐ ಲವ್‍ಯು ಖ್ಯಾತಿಯ ನಿಶ್ವಿಕಾನಾಯ್ಡು ಅವರಿಗೆ ಮೊದಲ ಚಿತ್ರವಾಗಿದೆ. ತಾರಗಣದಲ್ಲಿ ದೀಪಕ್‍ಶೆಟ್ಟಿ, ಅವಿನಾಶ್, ಮಂಜುನಾಥ್‍ಹೆಗ್ಗಡೆ, ಅರುಣಬಾಲರಾಜ್ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮೈಸೂರು, ನಾರ್ವೆ, ಇಂಗ್ಲೇಡ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ರಚನೆ,ನಿರ್ದೇಶಕ ಅಜಿತ್‍ವಾಸನ್‍ಉಗ್ಗೀನ, ಸಂಗೀತ ಅಜನೀಶ್‍ಲೋಕನಾಥ್, ನೃತ್ಯ ನಿರ್ದೇಶಕ ಬಾಬುಭಾಸ್ಕರ್, ಛಾಯಗ್ರಾಹಕ ದಿಲೀಪ್‍ಚಕ್ರವರ್ತಿ ನಿರ್ವಹಿಸಿದ್ದಾರೆ. ಸುಮಾರು 125 ಹೆಚ್ಚು ಕೇಂದ್ರಗಳಲ್ಲಿ ಜಯಣ್ಣ ಕಂಬೈನ್ಸ್ ಮುಖಾಂತರ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
29/07/18ಬಿಡುಗಡೆಗಾಗಿ ಅದ್ದೂರಿ ಪ್ರಚಾರ
ಪತ್ರಿಕಾಗೋಷ್ಟಿ, ಧ್ವನಿಸಾಂದ್ರಿಕೆ ಅನಾವರಣ, ಟ್ರೈಲರ್ ಬಿಡುಗಡೆ ಮೂಲಕ ಚಿತ್ರವನ್ನು ಪ್ರಚಾರ ಮಾಡುವ ಪದ್ದತಿ ಸನಾತನದಿಂದಲೂ ಬಂದಿದೆ. ಆದರೆ ಅಜಿತ್‍ವಾಸನ್‍ಉಗ್ಗೀನ ನಿರ್ದೇಶನದ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರವು ಮುಂದಿನ ತಿಂಗಳು ತೆರೆಗೆ ಬರಲು ಅಣಿಯಾಗುತ್ತಿರುವ ಕಾರಣ ನಟ,ನಿರ್ಮಾಪಕ ಅನೀಶ್‍ತೇಜಶ್ವರ್ ಗ್ರಾಂಡ್ ಪ್ರಿ ರಿಲೀಸ್ ಈವೆಂಟ್‍ನ್ನು ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದರು. ಹಾಡಿಗೆ ಹೆಜ್ಜೆ ಹಾಕಿದ ಕೃಷಿತಾಪಂಡ ಮಾತನಾಡಿ ಗೆಳಯನ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡೆ. ದಯವಿಟ್ಟು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಎಂದು ಕೋರಿಕೊಂಡರು.

ನಿಗದಿತ ಸಮಯಕ್ಕೆ ಆಗಮಿಸಿದ ದರ್ಶನ್ ಟ್ರೈಲರ್‍ನ್ನು ನೋಡಿದ ನಂತರ ಅನೀಶ್‍ರಿಂದ ಪ್ರಚಾರ ಮಾಡುವುದನ್ನು ನಾವುಗಳು ಕಾಪಿ ಮಾಡಬೇಕು. ಏಳು ಚಿತ್ರಗಳಲ್ಲಿ ನಟಿಸಿ ಮೊದಲಬಾರಿ ಅಭಿನಯ ಜೊತೆಗೆ ನಿರ್ಮಾಪಕರಾಗಿದ್ದಾರೆ. ನಿರ್ಮಾಪಕರ ಕಷ್ಟ ಏನೆಂದು ತಿಳಿದಿದೆ. ಚಿತ್ರರಂಗಕ್ಕೆ ಏನಾದರೂ ಮಾಡಬೇಕೆಂದು ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇದರಿಂದ ರೈತನಿಗೂ ಅನುಕೂಲವಾಗುತ್ತದೆ. ಒಂದು ಸಿನಿಮಾ ಬಂದರೆ ನೂರಾರು ಜನರಿಗೆ ಕೆಲಸ ಸಿಗುತ್ತದೆ. ಅದರಿಂದ ನಾವುಗಳು ಕನ್ನಡ ಚಿತ್ರಕ್ಕೆ ಪ್ರೋತ್ಸಾಹ, ಬೆಂಬಲ ಕೊಡಬೇಕು. ಇದರ ಲಾಭದಲ್ಲಿ ಪ್ರತಿಯೊಬ್ಬರಿಗೂ ಶೇರು ಹೋಗುತ್ತದೆ. ವಾಸು ತುಣುಕುಗಳು ಪಕ್ಕಾ ಔಟ್ ಅಂಡ್ ಔಟ್ ಕಮರ್ಷಿಯಲ್ ಆಗಿದೆ. ಇಲ್ಲಿ ಯಾರು ಸ್ಟಾರ್‍ಗಳು ಇಲ್ಲ. ಸ್ಟಾರ್‍ಗಳನ್ನು ಹುಟ್ಟು ಹಾಕುವವರು ಅಲ್ಲಿದ್ದಾರೆಂದು ಜನರತ್ತ ಮೈಕ್ ತೋರಿಸಿ ಮಾತಿಗೆ ವಿರಾಮ ಹಾಕಿದರು ಚಕ್ರವರ್ತಿ.

ಅನುಮತಿ ಇಲ್ಲದೆ ಸೆಟ್‍ಗೆ ಹೋದಾಗ ಆತ್ಮೀಯವಾಗಿ ಬರಮಾಡಿಕೊಂಡ ದರ್ಶನ್ ಸರ್ ವಿಷಯ ಕೇಳಿ ಬರುತ್ತನೆಂದು ಹೇಳಿದಂತೆ ಇಂದು ಶುಭ ಹಾರೈಸಲು ಬಂದಿದ್ದಾರೆ. ಜೀವ ಇರುವ ತನಕ ಇವರ ಸಹಕಾರವನ್ನು ಮರೆಯುವುದಿಲ್ಲ. ಪ್ರಚಾರಕ್ಕಾಗಿ ಇಂತಹ ನಟರು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು ಅನೀಶ್‍ತೇಜಶ್ವರ್.

ಅನೀಶ್ ಹಿಂದಿನ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದೆ. ರಕ್ಷಿತ್‍ಶಟ್ಟಿ ಉಪನಾಯಕನಾಗಿ ಕಾಣಿಸಿಕೊಂಡಿದ್ದರು. ಬಾಕ್ಸ್ ಆಫೀಸ್ ಸುಲ್ತಾನ್ ಬಂದು ಆಶಿರ್ವಾದ ಮಾಡಿದ್ದಾರೆಂದರೆ ಅದು ಹಿಟ್ ಆದಂತೆ ಅಂತ ಭವಿಷ್ಯ ನುಡಿದರು ರಿಶಬ್ ಶೆಟ್ಟಿ.

ಎರಡನೆ ಚಿತ್ರ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ. ದರ್ಶನ್ ಸರ್ ನಮ್ಮ ಸಿನಿಮಾಕ್ಕೆ ಹರಸಲು ಬಂದಿದ್ದು ನಮಗೆ ಶಕ್ತಿ ಬಂದಂತೆ ಆಗಿದೆ ಎಂಬುದು ನಾಯಕಿ ನಿಶ್ವಿಕಾನಾಯ್ಡು ಸಂತಸದ ನುಡಿಯಾಗಿತ್ತು. ಅವಸಾನದಲ್ಲಿ ಆಗಸ್ಟ್ ಮೂರರಂದು ಬಿಡುಗಡೆ ಇರುವ ಪೋಸ್ಟರ್‍ನ್ನು ದರ್ಶನ್ ತಂಡದೊಂದಿಗೆ ನಿಂತುಕೊಂಡು ಫೋಸ್ ಕೊಡುವುದರೊಂದಿಗೆ ಅದ್ದೂರಿ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು. ಯುವ ಪ್ರತಿಭೆ ಯಶವಂತ್ ಅವರ ಯೋಗಾಸನದ ವಿವಿಧ ಭಂಗಿಗಳು, ಅನುಷಾರಂಗನಾಥ್, ಅನಿತಾಭಟ್ ಹಾಗೂ ಮೌಂಟ್ ಕಾರ್ಮಲ್ ಕಾಲೇಜು ವಿದ್ಯಾರ್ಥಿನಿಯರ ಹಿಪ್‍ಹಾಪ್ ನೃತ್ಯಗಳು ಸಭಿಕರ ಮನಸೆಳೆದವು.
ಸಿನಿ ಸರ್ಕಲ್.ಇನ್ ನ್ಯೂಸ್
22/07/18

ವಾಸುಗೆ ದರ್ಶನ್ ಬೆಂಬಲ
ಭರವಸೆಯ ನಾಯಕ ನಟ ಅನೀಶ್‍ತೇಜಶ್ವರ್ ಮೊದಲ ಬಾರಿ ನಿರ್ಮಾಣದ ಜವಬ್ದಾರಿಯನ್ನು ಹೂತ್ತುಕೊಂಡಿರುವ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರವು ದಿನದಿಂದ ದಿನಕ್ಕೆ ಪ್ರಚಾರದಲ್ಲಿ ತಾರಕಕ್ಕೆ ಹೋಗುತ್ತಿದೆ. ಕೆಲವು ದಿನಗಳ ಕೆಳಗೆ ಉಗ್ರಂ ಮುರಳಿ ಟ್ರೈಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು. ಹೆಸರೇ ಹೇಳುವಂತೆ ಕಮರ್ಷಿಯಲ್ ಅಂಶಗಳು ಇದ್ದರೂ ಅಪ್ಪ-ಮಗನ ಬಾಂದವ್ಯ ಸನ್ನಿವೇಶಗಳು ಇರುವುದು ವಿಶೇಷವಾಗಿದೆ. ಅನೀಶ್‍ತೇಜಶ್ವರ್ ರಗಡ್ ಲುಕ್‍ನಲ್ಲಿ ಎದುರಾಳಿಗಳನ್ನು ಸದೆಬಡಿಯುವುದು, ಮತ್ತೋಂದು ಕಡೆ ಕುಟುಂಬದೊಂದಿಗೆ ಮುಗ್ದತೆಯಿಂದ ಇರುವುದು, ವಿದೇಶಿ ಸುಂದರ ತಾಣದಲ್ಲಿ ನಾಯಕಿಯೊಡನೆ ಗೀತೆ, ಟಪ್ಪಾಂಗುಚ್ಚಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿರುವ ತುಣುಕುಗಳು ಟ್ರೈಲರ್‍ದಲ್ಲಿ ಚೆಂದ ಕಾಣಿಸುತ್ತದೆ. ಅಖಿರ ಚಿತ್ರದ ಮೂಲಕ ಮತ್ತಷ್ಟು ಹೆಸರು ಮಾಡಿದ್ದ ಅನೀಶ್‍ಗೆ ಈ ಚಿತ್ರವು ಬ್ರೇಕ್ ನೀಡುತ್ತದೆಂದು ಸಿನಿಪಂಡಿತರು ಭವಿಷ್ಯ ನುಡಿದಿದ್ದಾರೆ. ಗೆಳಯನಿಗೆ ಶುಭವಾಗಲೆಂದು ಚಿತ್ರದ ಇವೆಂಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದರ್ಶನ್ ಬರಲಿದ್ದಾರೆ. ಶನಿವಾರ 21ರಂದು ಅಂಬೇಡ್ಕರ್ ಭವನದಲ್ಲಿ ಸಂಜೆ 6ಕ್ಕೆ ನಡೆಯಲಿದ್ದು, ಅಂದು ತಂಡದೊಂದಿಗೆ ಇನ್ನಿತರ ಕಲಾವಿದರು ಭಾಗವಹಿಸುವರಿದ್ದಾರೆ. ನಾಯಕಿಯಾಗಿ ನಿಶ್ವಿಕಾನಾಯ್ಡು, ಉಳಿದಂತೆ ಮಂಜುನಾಥಹೆಗ್ಗಡೆ, ಅರುಣ್‍ಬಾಲರಾಜ್, ಅವಿನಾಶ್, ದೀಪಕ್‍ಶೆಟ್ಟಿ ಅಭಿನಯಿಸಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
21/07/18
ತಂತ್ರಜ್ಘರಿಂದ ಹಾಡಿನ ಗುಣಮಟ್ಟ ಹೆಚ್ಚುತ್ತದೆ - ಶ್ರೀಮುರಳಿ
‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಟ್ರೈಲರ್,ಹಾಡನ್ನು ರಕ್ಷಿತ್‍ಶೆಟ್ಟಿ ಓರಾಯನ್ ಮಾಲ್‍ನಲ್ಲಿ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು. ಈಗ ಅದೇ ಜಾಗದಲ್ಲಿ ಶ್ರೀಮುರಳಿ ಪೋಲೀಸ್ ಠಾಣೆಯಲ್ಲಿ ಅಜನೀಶ್.ಬಿ.ಲೋಕನಾಥ್ ಸಂಗೀತದ ಗೀತೆಯನ್ನು ಅನಾವರಣಗೊಳಿಸಿದರು. ಅವರು ಮಾತನಾಡುತ್ತಾ ಹಾಡು ತುಂಬಾ ಇಷ್ಟವಾಯಿತು. ಕಡಿಮೆ ಜನರನ್ನು ಸೇರಿಸಿಕೊಂಡು ನೃತ್ಯ ಮಾಡಿಸುವುದು ಕಷ್ಟದ ಕೆಲಸ. ಅನೀಶ್ ಹುಟ್ಟಿನಿಂದಲೇ ಡ್ಯಾನ್ಸ್ ಮಾಡುತ್ತಾ ಬಂದಿದ್ದಾರೆ. ತಂತ್ರಜ್ಘರಿಂದ ಉತ್ತಮ ಹಾಡು ಬರಲು ಸಾಧ್ಯವಾಗುತ್ತದೆ. ಮಾಮೂಲಿ ನಿರ್ಮಾಪಕರು ಒಂಥರ ಆದರೆ, ಇವರು ನಿರ್ಮಾಣದ ಜೊತೆಗೆ ನಟನೆ ಮಾಡುವುದು ತ್ರಾಸವಾಗುವುದುಂಟು. ಮಾದ್ಯಮದ ಮೂಲಕ ನಮ್ಮಂತವರು ಜನರಿಗೆ ತಲುಪುತ್ತಾರೆ. ಚಿತ್ರವು ಯಶಸ್ಸು ಗಳಿಸಲಿ ಎಂದರು.

ಕೆಲವು ಸಲ ಖಿನ್ನತೆಗೆ ಹೋದಾಗ ಶ್ರೀಮುರಳಿ ಧೈರ್ಯ ತುಂಬುತ್ತಾರೆ. ಅವರು ಕೊಡುವ ಸ್ಪೂರ್ತಿ ನನಗೆ ಮೇಲಕ್ಕೆ ಬರುವಂತೆ ಆಗುತ್ತದೆ. ಈ ಹಾಡು ಚೆನ್ನಾಗಿ ಬಂದಿದೆ ಎಂದರೆ ಅದು ತಂತ್ರಜ್ಘರಿಗೆ ಸಲ್ಲಬೇಕು. ಬೆಂಗಳೂರು, ಮೈಸೂರು, ನಾರ್ವೆ, ಇಂಗ್ಲೇಡ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಅಂತ ಪಕ್ಕದ್ಮನೆ ಹುಡುಗನಾಗಿ ಕಾಣಿಸಿಕೊಂಡಿರುವ ನಾಯಕ ಅನೀಶ್‍ತೇಜಶ್ವರ್ ಸಂತಸದ ನುಡಿ.

ಮೊದಲು ಸಹಿ ಮಾಡಿದ ಚಿತ್ರ ಇದಾಗಿದ್ದು, ತೆರೆ ಕಂಡಿದ್ದು ಅಮ್ಮ ಐ ಲವ್ ಯು. ವೈದ್ಯಕೀಯ ವಿದ್ಯಾರ್ಥಿಯಾಗಿ ಏನು ಅನ್ನಿಸುತ್ತದೆಯೋ ಅದನ್ನೆ ಮಾಡುತ್ತೇನೆ. ಚಿತ್ರದಲ್ಲಿ ನಾನೇ ಕಮರ್ಷಿಯಲ್ ಆಗಿದ್ದು, ಅನೀಶ್‍ರನ್ನು ಕಮರ್ಷಿಯಲ್ ಹೀರೋ ಅಂತ ಕರೆಯುತ್ತಿರುತ್ತೇನೆ ಎಂದು ನಾಯಕಿ ನಿಶ್ವಿಕಾನಾಯ್ಡು ಪಾತ್ರದ ಪರಿಚಯ ಮಾಡಿಕೊಂಡರು.

ರಚನೆ,ನಿರ್ದೇಶಕ ಅಜಿತ್‍ವಾಸನ್‍ಉಗ್ಗೀನ, ನೃತ್ಯ ನಿರ್ದೇಶಕ ಬಾಬುಭಾಸ್ಕರ್, ಛಾಯಗ್ರಾಹಕ ದಿಲೀಪ್‍ಚಕ್ರವರ್ತಿ ಈ ಸುಸಂದರ್ಭದಲ್ಲಿ ಹಾಜರಿದ್ದು ಚುಟುಕು ಮಾತನಾಡಿದರು.
-ಸಿನಿಸರ್ಕಲ್.ಇನ್ ನ್ಯೂಸ್
-19/06/18

ಅನೀಶ್ ಪಕ್ಕಾ ಕಮರ್ಷಿಯಲ್
ಎಲ್ಲರೂ ಕೊಲೆ ಮಾಡಿ ಶರಣಾಗಲು ಸ್ಟೇಷನ್‍ಗೆ ಬರುತ್ತಾರೆ. ನೀನು ನೋಡಿದರೆ ಕೊಲೆ ಮಾಡಲು ಹೋಗುತ್ತಿರುವುದಾಗಿ ಹೇಳುತ್ತಿದ್ದಯಾ ಎಂದು ಪೋಲಿಸ್ ಇನ್ಸೆಪೆಕ್ಟರ್ ಹೇಳುತ್ತಾರೆ. ಅವನು ಇವತ್ತು ಅವಳನ್ನು ಎತ್ತಿ ಬಿಡುತ್ತೇನೆಂದು ಫೋಟೋ ತೋರಿಸುತ್ತಾನೆ. ಮುಂದೆ ಕುಟುಂಬದ ಸಂತಸದ ಕ್ಷಣಗಳು. ನಾಯಕ ನಾಯಕಿ ತುಂಟಾಟ, ವಿದೇಶಿ ತಾಣದಲ್ಲಿ ಹಾಡು, ಅಪ್ಪ-ಮಗನ ಸೆಂಟ್‍ಮೆಂಟ್. ಭರ್ಜರಿ ಸಾಹಸಗಳು ಇವೆಲ್ಲವು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂರುವರೆ ನಿಮಿಷದ ಟ್ರೈಲರ್ ನೋಡಿದ್ದು ಚಿತ್ರಮಂದಿರಕ್ಕೆ ಹೋಗುವಂತೆ ಮಾಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಕ್ಷಿತ್‍ಶೆಟ್ಟಿ ಮಾತನಾಡಿ ತುಘಲಕ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಸಂದರ್ಭದಲ್ಲಿ ಬೇಸರವಾಗಿದ್ದಾಗ, ಅನೀಶ್ ಎಲ್ಲರ ಜೀವನದಲ್ಲ ಫ್ಲಾಪ್ ಇದ್ದರೆ ಮುಂದೆ ಒಳ್ಳೆ ಕತೆಗಳು ಹುಟ್ಟಿಕೊಳ್ಳುತ್ತವೆ. ಇದು ಅವನ ಜೀವನಕ್ಕೆ ಅನ್ವಯಿಸುತ್ತದೆ. ಸಿನಿಮಾವು ಪ್ರಪಂಚದಾದ್ಯಂತ ಪಸರಿಸಲಿ ಎಂದು ಶುಭ ಹಾರೈಸಿದರು.

ಅನೀಶ್ ಜೊತೆ ನಟಿಸಿಸ ಮೊದಲ ಚಿತ್ರ ನಮ್ ಏರಿಯಾದಲ್ಲಿ ಒಂದಿನ ಚಿತ್ರದ ಟ್ರೈಲರ್ ಶುರು ಮಾಡಿದಾಗ ಬಿಗ್ ಡೀಲ್ ಆಗಿತ್ತು. ಅದರಂತೆ ವಾಸುಗೂ ಆಗಲಿ ಎಂದು ಮೇಘನಾಗಾಂವ್ಕರ್ ಹೇಳಿದರು. ಅನೀಶ್ ಅವರ ಏಳು,ಬೀಳು, ಬೇಸರ, ಖಿನ್ನತೆ ಎಲ್ಲವನ್ನು 8-9 ವರ್ಷದಿಂದ ನೋಡುತ್ತಾ ಬಂದಿದ್ದೇನೆ. ಈ ಸಿನಿಮಾದಲ್ಲಿ ಪಕ್ಕಾ ಕಮರ್ಷಿಯಲ್ ಹೀರೋ ಆಗಿದ್ದಾನೆ ಎಂಬ ಹಾರೈಕೆಯ ಮಾತು ಸಿಂಧೂಲೋಕನಾಥ್ ಅವರದಾಗಿತ್ತು. ಐಪಿಎಲ್ ಮ್ಯಾಚ್ ಗೆಲ್ಲುತ್ತೋ ಗೊತ್ತಿಲ್ಲ. ಆದರೆ ವಾಸು ಗೆದ್ದೆ ಗೆಲ್ತಾನೆ ಅಂತ ಭವಿಷ್ಯ ನುಡಿದರು ಸಿಪಾಯಿ ನಾಯಕ ಮಹೇಶ್‍ಸಿದ್ದಾರ್ಥ. ಟ್ರೈಲರ್ ನೋಡಿದಾಗ ಸಕರಾತ್ಮಕ ಅಂಶಗಳು ಹೆಚ್ದಿಗೆ ಕಾಣಿಸುತ್ತದೆ. ಕಮರ್ಷಿಯಲ್ ನಾಯಕನಾಗಿ ಅವರಿಗೊಂದು ಬ್ರೇಕ್ ಸಿಗಲಿ ಅಂತಾರೆ ಭರ್ಜರಿ ಖ್ಯಾತಿಯ ಚೇತನ್‍ಕುಮಾರ್. ಈ ತಂಡದಲ್ಲಿ ನಾನು ಭಾಗಿಯಾಗಿದ್ದೇನೆ. ಎರಡು ಹಾಡುಗಳನ್ನು ಬರೆಯಲಾಗಿದೆ. ಅನೀಶ್ ಲೋಕಲ್‍ನಿಂದ ಕಮರ್ಷಿಯಲ್ ಆಗಿದ್ದಾರೆ ಎನ್ನುವುದು ಹರಿಸಂತು ಹೇಳಿಕೆಯಾಗಿತ್ತು.

ನಾಯಕಿ ಅಶ್ವಿನಿನಾಯ್ಡು ಸಂತಸದಿಂದ ಅವಕಾಶ ನೀಡಿದ್ದಕ್ಕೆ ಥಾಂಕ್ಸ್ ಎಂದರು. ರಚನೆ, ನಿರ್ದೇಶನ ಮಾಡಿರುವ ಅಜಿತ್‍ವಾಸನ್‍ಉಗ್ಗೀನ ಕಾಲಿಗೆ ಪೆಟ್ಟಾಗಿದ್ದರಿಂದ ವೇದಿಕೆಗೆ ಬರದೆ ಕೊನೆಯಲ್ಲಿ ತಂಡದೊಂದಿಗೆ ಫೋಸ್ ಕೊಟ್ಟರು. ಅಂತಿಮವಾಗಿ ಮೈಕ್ ನಾಯಕ, ನಿರ್ಮಾಪಕ ಅನೀಶ್‍ತೇಜಶ್ವರ್ ಕೈಗೆ ಹೋಯಿತು. ಎಲ್ಲರೂ ಕಷ್ಟಪಟ್ಟು ಮಾಡಿರುವ ಚಿತ್ರ. ಅಖಿರಾ ಮಾಡುವ ಸಂದರ್ಭದಲ್ಲಿ ನಿರ್ದೇಶಕರು ಕತೆಯ ಒಂದು ಏಳೆಯನ್ನು ವಿವರಿಸಿದ್ದರು. ಅಂದೇ ಮಾಡೋಣವೆಂದು ಹೇಳಲಾಗಿ, ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ನಿಶ್ವಿಕಾ ಅಚ್ಚ ಕನ್ನಡತಿ. ಸ್ಯಾಂಡಲ್‍ವುಡ್‍ಗೆ ಕನ್ನಡ ನಟಿಯನ್ನು ಪರಿಚಯಿಸಿದ ಖುಷಿ ಇದೆ ಅಂತ ಹೇಳುವಾಗ ಶಿಳ್ಳೆ ಸದ್ದು ಕೇಳಿಬಂತು. ಗೆಳಯನಿಗೆ ಶುಭಹಾರೈಸಲು ಕರ್ವ, ಅಖಿರಾ ನಿರ್ಮಾಪಕರು, ನಟಿ ಕೃಷಿತಾಪಂಡ, ನಿರ್ದೇಶಕರುಗಳಾದ ಡಾ.ಸೂರಿ, ಅನಿಲ್‍ಕುಮಾರ್, ನವೀನ್‍ರೆಡ್ಡಿ, ಅಜಿತ್ ಮುಂತಾದವರು ಆಗಮಿಸಿದ್ದರು. ಸಂಗೀತ ಅಜನೀಶ್‍ಲೋಕನಾಥ್, ಛಾಯಗ್ರಹಣ ದಿಲೀಪ್‍ಚಕ್ರವರ್ತಿ, ಸಂಕಲನ ಶ್ರೀಕಾಂತ್, ಸಾಹಸ ವಿಕ್ರಂಮೋರ್ ಕೆಲಸ ನಿರ್ವಹಿಸಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
-ಸಿನಿಸರ್ಕಲ್.ಇನ್ ನ್ಯೂಸ್
-20/04/18


|


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore