HOME
CINEMA NEWS
GALLERY
TV NEWS
REVIEWS
CONTACT US
ಸಂತೋಷಕೂಟದಲ್ಲಿ ಬೇಸರದ ಮಾತು
ಹಾರರ್, ಥ್ರಿಲ್ಲರ್ ‘ವೈರ’ ಸಿನಿಮಾವನ್ನು ಜನರು ಇಷ್ಟಪಟ್ಟಿದ್ದಾರೆ. ಪತ್ರಿಕೆಗಳಲ್ಲಿ ಬಂದ ವಿಮರ್ಶೆಗಳಿಂದ ಗಳಿಕೆಯಲ್ಲಿ ಮುಂದೆ ಇದೆ. ಇದಕ್ಕಾಗಿ ಮಾಧ್ಯಮದವರಿಗೆ ಧನ್ಯವಾದ ಹೇಳಿರುವ ನಟ,ನಿರ್ದೇಶಕ ನವರಸನ್ ಸಂತೋಷಕೂಟದಲ್ಲಿ ಬೇಸರದ ಸಂಗತಿಯನ್ನು ಹೂರಹಾಕಿದರು. ಅವರು ಹೇಳುವಂತೆ ಬುಕ್‍ಮೈ ಷೋದಿಂದ ಕನ್ನಡ ಚಿತ್ರಗಳು ಕೊಲ್ಲುತ್ತಿವೆ. ಇಲ್ಲಿಯವರೆಗಿನ ಕಲೆಕ್ಷನ್ 7 ಲಕ್ಷ ಬಂದಿದೆ. ಬುಕ್‍ಮೈ ಷೋಗೆ ಹಣ ನೀಡಲಿಲ್ಲವೆಂದು ಉದ್ದೇಶಪೂರ್ವಕವಾಗಿ ನಮ್ಮ ಚಿತ್ರದ ಮೇಲೆ ಹುಳುಕನ್ನು ಹುಡುಕಿ ಅದನ್ನು ಜಾಲತಾಣದಲ್ಲಿ ಅಪ್‍ಲೋಡ್ ಮಾಡುತ್ತಿದ್ದಾರೆ. ಬೇರೆ ಭಾಷೆ ಚಿತ್ರಗಳಿಗೆ ಈ ರೀತಿ ಆಗುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಅವರು ತೋರುವ ವರ್ತನೆ ಖಂಡನೀಯವಾಗಿದೆ. ವಿಚಾರಣೆ ಮಾಡಲು ಹೋದರೆ ಬಾಂಬೆ ಕಚೇರಿಯನ್ನು ಸಂಪರ್ಕಿಸಲು ಹೇಳುತ್ತಾರೆ. ಈ ವಿಷಯವನ್ನು ವಾಣ ಜ್ಯ ಮಂಡಳಿ ಮತ್ತು ಬಾಂಬೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸರಿಹೋಗಬಹುದು. ಇದನ್ನು ಅರಿತ ನಿರ್ಮಾಪಕ ಸಂಘ ಮತ್ತು ವಾಣ ಜ್ಯ ಮಂಡಳಿಯು ಹೊಸದೊಂದು ಆ್ಯಪ್ ಶುರು ಮಾಡಲು ಚಿಂತನೆ ನಡೆಸಿದೆ. ಅವರು ಕಾರ್ಯರೂಪಕ್ಕೆ ತರದಿದ್ದಲ್ಲಿ ನಾನೇ ಆ್ಯಪ್ ಪ್ರಾರಂಭ ಮಾಡುತ್ತೇನೆ. ನಮ್ಮ ಸಿನಿಮಾಗೆ ಎ ಪ್ರಮಾಣ ಪತ್ರ ನೀಡಿದಾಗ ಹೋರಾಟ ಮಾಡಲಾಗಿತ್ತು. ಇದರಿಂದ ಕಂಗಲಾದ ಅಧಿಕಾರಿಗಳು ಗೆಳಯನ ಚಿತ್ರ ಕಟಕಗೆ ಯುಎ ನೀಡಿದ್ದಾರೆ. ಇಲ್ಲಿಗೆ ನಿಲ್ಲುವುದಿಲ್ಲ. ಇದನ್ನು ಮುಂದುವರೆಸಲಾಗುವುದು. ತಮಿಳುನಾಡಿನಲ್ಲಿ ಇರುವ ಪದ್ದತಿಯನ್ನು ಅನುಸರಿಸಲು ಸಂಬಂದಪಟ್ಟವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.

ತಂಡದೊಂದಿಗೆ ಭೇಟಿ ನೀಡಿದ ನವರಸನ್‍ಗೆ ವಿರಾಮದ ಮೊದಲು ಪ್ರೇಕ್ಷಕರು ಇವರ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಕ್ಲೈಮಾಕ್ಸ್ ನಂತರ ರಾಘವ ಪಾತ್ರ ಮಾಡಿರುವ ಶರಣ್‍ಉಲ್‍ತಿ ಅವರ ಹತ್ತಿರ ಹೋಗುತ್ತಾರಂತೆ. ಮನೆಯವರನ್ನು ಹೂರತುಪಡಿಸಿ ಉಳಿದವರು ಖುಷಿಯಾಗಿದ್ದಾರೆ ಎನ್ನುವುದು ಖಳನಟ ಅಜಯ್ ಮಾತು. ಕುಡುಕನ ಪಾತ್ರದಲ್ಲಿ ಅಭಿನಯಿಸಿರುವ ಹ್ಯಾರಿವಿಕ್ಟರ್ ಮೊದಲ ಅಭಿನಯ ಖುಷಿ ತಂತು ಎಂಬುದು ಅವರ ಸಂತಸದ ನುಡಿ. ತೆಲುಗು, ತಮಿಳು ಸಿನಿಪಂಡಿತರಿಗೆ ಸಿನಿಮಾ ತೋರಿಸಲು ನಿರ್ಮಾಪಕ ಧರ್ಮಶ್ರೀಮಂಜುನಾಥ್ ತೆರೆಳಿದ್ದರು. ನಾಯಕಿ ಪ್ರಿಯಾಂಕಾಮಲ್ನಾಡ್ ಗೈರುಹಾಜರಿಗೆ ಕಾರಣ ತಿಳಿಯಲಿಲ್ಲ.
-12/10/17
ಪ್ರೀತಿಯಲ್ಲಿ ಸ್ವಾರ್ಥ ಅಡಗಿರುತ್ತದೆ
ಒಂದು ಪಡೆಯಬೇಕಾದರೆ ಮತ್ತೋಂದನ್ನು ಕಳೆದುಕೊಳ್ಳಬೇಕು ಎಂದು ಪ್ರೇಮಿಗೆ ಹೇಳುವಾಗ ‘ವೈರ’ ಚಿತ್ರ ಮುಕ್ಕಾಲು ಭಾಗಕ್ಕೆ ಬಂದಿರುತ್ತದೆ. ಪ್ರತಿ ದೃಶ್ಯವು ಕುತೂಹಲದಿಂದ ಇರಲಿದ್ದು, ಅದಕ್ಕೆ ವಿವರ ನೀಡಲು ಉಪಕತೆಗಳು ಹುಟ್ಟಿಕೊಳ್ಳುತ್ತವೆ.ಎಲ್ಲವನ್ನು ಹಂತ ಹಂತವಾಗಿ ತೋರಿಸುತ್ತಾ ಕ್ಲೈಮಾಕ್ಸ್‍ನಲ್ಲಿ ಸಮಜಾಯಷಿ ಕೊಡುತ್ತಾರೆ. ನಾಯಕಿ ಕಾಣೆಯಾಗುವುದರೊಂದಿಗೆ ಸಿನಿಮಾ ಕತೆ ತೆರೆದುಕೊಳ್ಳುತ್ತದೆ. ಪೋಷಕರು ದೂರು ಕೂಡುವುದು. ಅಲ್ಲಿಂದ ತನಿಖೆ ಆರಂಭಿಸಿದಾಗ ನಾಯಕ ಕೊಲೆ ಮಾಡಿದ್ದಾನೆಂದು ಅನುಮಾನದಿಂದ ಆತನನ್ನು ಶ್ರೀನಿಧಿ ಎಸ್ಟೇಟ್‍ಗೆ ಕರೆದುಕೊಂಡು ಹೋದಾಗ ತಿರುವುಗಳು ಪಡೆದುಕೊಂಡು ರಹಸ್ಯ ಬಯಲಾಗುತ್ತದೆ. ತಾನು ನಟಿಯಾಗಬೇಕಂಬ ಉದ್ದೇಶದಿಂದ ಪ್ರೀತಿಸಿದವನನ್ನು ದೂರ ಇಡುತ್ತಾಳೆ. ಆದರೂ ಅವನು ಅವಳನ್ನು ಬಿಡದೆ ಹೋದಾಗ ಗೆಳಯನ ಉಪಾಯದಂತೆ ಹತ್ಯೆ ಮಾಡಲು ಸಂಚುರೂಪಿಸಿ ತಾನಿರುವಲ್ಲಿಗೆ ಕರೆಸಿಕೊಂಡು ಕಾರ್ಯದಲ್ಲಿ ಯಶಸ್ವಿಯಾದಾಗ, ಮತ್ತೋಂದು ಅಪಾಯ ಒದಗಿಬರುತ್ತದೆ. ಅದು ಏನು? ನಾಯಕನಿಗೂ ಈಕೆಗೂ ಏನು ಸಂಬಂದ ಎಲ್ಲವನ್ನು ಸನ್ನಿವೇಶಗಳ ಮೂಲಕ ಚೆನ್ನಾಗಿ ತೋರಿಸಿರುವುದು ಕಂಡುಬರುತ್ತದೆ. ಹಾರರ್, ಥ್ರಿಲ್ಲರ್ ಮಾದರಿಯಲ್ಲಿ ಪ್ರೇಕ್ಷಕನಿಗೆ ಕೊನೆವರೆಗೂ ಬೇರೆ ಕಡೆಗೆ ಗಮನ ಹರಿಸದಂತೆ ಚಿತ್ರವನ್ನು ತೆಗೆದುಕೊಂಡು ಹೋಗಿರುವುದು ಪ್ಲಸ್ ಪಾಯಿಂಟ್ ಅಂತ ಹೇಳಬಹುದು. ಚಿತ್ರಕತೆಯಲ್ಲಿ ಸನ್ನಿವೇಶಗಳಿಗೆ ಹೊಂದಿಕೆಯಾಗುವಂತೆ ಬರೆದಿರುವುದು ಕಾಣ ಸುತ್ತದೆ. ಮಡಕೇರಿಯಲ್ಲಿ ನಡೆಯುವ ಕತೆ ಆಗಿದ್ದರಿಂದ ಅಲ್ಲಿನ ಸುಂದರ ತಾಣಗಳನ್ನು ಚೆನ್ನಾಗಿ ತೋರಿಸಿದ್ದಾರೆ. ನಟ ಮೋನಿಕಾ ಘಟನೆಯನ್ನು ಕತೆಯಲ್ಲಿ ಬಳಸಿಕೊಂಡಿರುವುದು ಕಾಣಬರುತ್ತದೆ.

ನಾಯಕನಟ ನವರಸನ್ ಕತೆ ಬರೆದು ಮೊದಲ ನಿರ್ದೇಶನದಲ್ಲಿ ತಾನೊಬ್ಬ ಒಳ್ಳೆಯ ತಂತ್ರಜ್ಘನೆಂದು ಸಾಬೀತು ಮಾಡಿದ್ದಾರೆ. ಹೊಸಬಳಾದ ಪ್ರಿಯಾಂಕಮಲ್ನಾಡ್ ಒಂದು ದೃಶ್ಯದಲ್ಲಿ ಬೆನ್ನು ತೋರಿಸಿದರೂ, ನಟನೆಯಲ್ಲಿ ಹಿಂದೆ ಉಳಿದಿಲ್ಲ. ಡಬ್ಬಲ್ ಮೀನಿಂಗ್ ಸಂಭಾಷಣೆಗಳನ್ನು ಅಲ್ಲಲ್ಲಿ ಹೇಳಿ ನಗಿಸುವ ತಬಲನಾಣ ಕೊನೆವರೆಗೂ ನೆನಪಿನಲ್ಲಿ ಉಳಿಯತ್ತಾರೆ. ಇನ್ಸೆಪೆಕ್ಟರ್ ಪಾತ್ರದಲ್ಲಿ ಭರತ್, ಪ್ರೇಮಿಯಾಗಿ ಶರಣ್ ಇಬ್ಬರಿಗೂ ಹೊಸ ಅನುಭವ ಎಂಬುದು ಗೊತ್ತಾಗುವುದಿಲ್ಲ. ಲವ್ ಎನ್ನುವುದು ಚೈನಾ ಸೆಟ್ ಇದ್ದಂತೆ. ಇದಕ್ಕೆ ವಾರಂಟಿ,ಗ್ಯಾರಂಟಿ ಇರೋಲ್ಲ ಎಂದು ಪ್ರೇಮಿಗಳಿಗೆ ಹೇಳಿದ್ದಾರೆ. ಕೃಷ್ಣಮೂರ್ತಿಕವಿತಾಳ್ ತಂದೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆಂಜನೇಯ ದೇವರನ್ನು ವೈರ ಅಂತಲೂ ಕರೆಯಬಹುದು ಅಂತ ಇದರಲ್ಲಿ ತಿಳಿಯಲಿದೆ. ಕಲಾವಿದೆಯಾಗಲು ಬರುವ ಹುಡುಗಿಯರನ್ನು ಚಿತ್ರರಂಗ ಯಾವ ರೀತಿ ಬಳಸಿಕೊಳ್ಳುತ್ತದೆ ಎಂಬುದನ್ನು ಸೂಚ್ಯವಾಗಿ ತೋರಿಸಿದ್ದಾರೆ. ದೃಶ್ಯಗಳಿಗೆ ಸರಿಯಾಗಿ ಹಿನ್ನಲೆ ಸಂಗೀತ ಒದಗಿಸಿರುವ ರವಿಬಸ್ರೂರು, ಸನ್ನಿವೇಶಕ್ಕೆ ಪೂರಕವಾಗಿ ಚೆಂದದ ಸ್ಥಳಗಳನ್ನು ಸೆರೆಹಿಡಿದಿರುವ ಛಾಯಗ್ರಾಹಕ ನಿತಿನ್ ಕೆಲಸ ಇಡೀ ಸಿನಿಮಾಗೆ ಮೆರುಗು ತಂದಿದೆ. ಮೊದಲರ್ಧದಲ್ಲಿ ಕತೆ ಕುದುರೆ ವೇಗದಲ್ಲಿ ಸಾಗಿ ನಂತರ ಅಲ್ಲೆ ಡ್ರಾ ಅಲ್ಲೆ ಬಹುಮಾನ ಎನ್ನುವಂತೆ ಕುತೂಹಲಕ್ಕೆ ಪಟಾಪಟ್ ಅಂತ ಉತ್ತರಗಳು ಸಿಗುತ್ತವೆ. ರಥಾವರ ನಿರ್ಮಾಣ ಮಾಡಿದ್ದ ಧರ್ಮಶ್ರೀ ಮಂಜುನಾಥ್ ಎರಡನೆ ಪ್ರಯತ್ನದಲ್ಲಿ ಜನರಿಗೆ ಒಳ್ಳೆ ಸಿನಿಮಾ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಥ್ರಿಲ್ಲರ್ ಕತೆಗಳಿಂತ ಭಿನ್ನವಾಗಿರುವುದರಿಂದ ವೈರ ನೋಡಲೇ ಬೇಕಾದ ಸಿನಿಮಾವಾಗಿದೆ.
-6/10/17ಸೆನ್ಸಾರ್ ಕಿರಿಕಿರಿ ನಾಯಕಿ ಪ್ರಿಯಾಂಕ ತೊಂದರೆ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅಳಲು
ಪ್ರಾದೇಶಿಕ ಸೆನ್ಸಾರ್ ಮಂಡಳಿ ಅನಗತ್ಯವಾಗಿ ನಿರ್ಮಾಪಕರಿಗೆ ತೊಂದರೆ ನೀಡುತ್ತಿದ್ದು, ಚಿತ್ರವನ್ನು ಸೆನ್ಸಾರ್ ಮಂಡಳಿಯವರಿಗಾಗಿ ಮಾಡಬೇಕೋ ಅಥವಾ ಪ್ರೇಕ್ಷಕರನ್ನು ದೃಷ್ಟಿಯಲ್ಲಿರಿಸಿ ನಿರ್ಮಿಸಬೇಕೋ ಎನ್ನುವ ದ್ವಂದ್ವದಲ್ಲಿ ಸಿಲುಕುವಂತಾಗಿದೆ ಎಂದು ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅತೃಪ್ತಿ ಹೊರಹಾಕಿದರ

`ವೈರ' ಚಿತ್ರದಲ್ಲಿ ನಾಯಕಿ ಬೆನ್ನು ತೋರಿಸುವ ದೃಶ್ಯವಿದೆ. ಇದಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಇದು ತೀವ್ರ ಬೇಸರ ತರಿಸಿದೆ.ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೆ ಈ ಸಂಬಂಧ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯುದ್ದಕ್ಕೂ ಸೆನ್ಸಾರ್ ಮಂಡಳಿ ಹಾಗು ನಾಯಕಿ ಪ್ರಿಯಾಂಕ ಮಲ್ನಾಡ್ ವಿರುದ್ದ ವಾಗ್ದಾಳಿ ನಡೆಸಿದರು ಮಂಜುನಾಥ್. ಚಿತ್ರದಲ್ಲಿ ನಾಯಕಿ ಬೆನ್ನು ತೋರಿಸುವುದನ್ನು ಹೊರತುಪಡಿಸಿ, ಉಳಿದೆಲ್ಲಾ ಸಾಮಾಜಿಕ ಕಳಕಳಿ ವ್ಯಕ್ತಪಡಿಸುವಂತದ್ದು. ಹೀಗಿದ್ದರೂ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರ ನೀಡಿದೆ. ಇದರಿಂದ ತೀವ್ರ ಬೇಸರವಾಗಿದ್ದು, ಚಿತ್ರ ನಿರ್ಮಾಣ ಏಕೆ ಮಾಡಬೇಕೆ ಎನ್ನುವ ಪ್ರಶ್ನೆ ಮೂಡುವಂತಾಗಿದೆ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ, ನಿರ್ಮಾಪಕರ ಹಿತ ಕಾಪಾಡುತ್ತಿಲ್ಲ. ನಿರ್ಮಾಪಕರ ಕಷ್ಟಕಾಲದಲ್ಲಿ ಅವರನ್ನು ಕೈಹಿಡಿಯುವ ಕೆಲಸ ಮಾಡುತ್ತಿಲ್ಲ. ಇವೆಲ್ಲಾ ನೋವು ತರಿಸಿದೆ ಎಂದು ಹೇಳಿದರು.

ಸೆನ್ಸಾರ್ ಮಂಡಳಿಯಲ್ಲಿ ಚಿತ್ರಗಳ ಬಗ್ಗೆ ತಿಳುವಳಿಕೆ ಇಲ್ಲದವರೇ ಹೆಚ್ಚಾಗಿ ಸದಸ್ಯರಾಗಿದ್ದಾರೆ. ಇದರಿಂದ ನಿರ್ಮಾಪಕರಿಗೆ ತೊಂದರೆಯಾಗುತ್ತಿದೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿರುವ ಹಿನ್ನೆಲೆಯಲ್ಲಿ ಚಿತ್ರ ಮುಂದಿನ ತಿಂಗಳ 4 ರಂದು ತೆರೆ ಕಾಣಲಿದೆ. ಅದರಲ್ಲಿ ಸಾರ್ವಜನಿಕರು ಸೆನ್ಸಾರ್ ಮಂಡಳಿ ನೀಡಿರುವ ಸರ್ಟಿಫಿಕೇಟ್ ಸರಿ ಇದೆ ಎಂದರೆ, ತಲೆ ಬಾಗುತ್ತೇವೆ. ಇಲ್ಲದಿದ್ದರೆ, ಸೆನ್ಸಾರ್ ಮಂಡಳಿಯ ವಿರುದ್ಧ ಹೋರಾಟ ಅನಿವಾರ್ಯ ಎಂದು ಹೇಳಿಕೊಂಡರು
ಚಿತ್ರದ ನಾಯಕಿ ಪ್ರಿಯಾಂಕ ಮಲ್ನಾಡ್ ವೈರದಲ್ಲಿ ಬೆತ್ತಲೆ ಬೆನ್ನುತೋರಿಸುವ ಸನ್ನಿವೇಶ ಚಿತ್ರಕ್ಕೆ ಪೂರಕವಾಗಿದ್ದರಿಂದ ಒಪ್ಪಿಕೊಂಡು ಆ ಸನ್ನಿವೇಶದಲ್ಲಿ ನಟಿಸಿದ್ದಾರೆ. ಆ ಚಿತ್ರ ಬಿಡುಗಡೆಯಾದ ನಂತರ ನಾಯಕಿಗೆ ಅವಮಾನ ಮಾಡುತ್ತಿದ್ದೀರಿ ಎನ್ನುವ ನೆಪವೊಡ್ಡಿ ಚಿತ್ರ ಪ್ರಚಾರಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ನಿರ್ಮಾಪಕರಿಗೆ ಅವಮಾನ ಮಾಡಿದ್ದಾರೆ.ಪ್ರಿಯಾಂಕ ಅವರಿಗೆ ಹೇಳದೆ ಬೆತ್ತಲೆ ಬೆನ್ನನ್ನು ಚಿತ್ರೀಕರಿಸಿದ್ದರೆ ಅದು ನಮ್ಮ ತಪ್ಪಾಗುತ್ತಿತ್ತು. ಎಲ್ಲವನ್ನೂ ಆಕೆಗೆ ಹೇಳಿ ಚಿತ್ರೀಕರಣವಾದ ಬಳಿಕ ಯೂ ಟರ್ನ್ ಹೊಡೆದಿರುವುದು ಬೇಸರತರಿಸಿದೆ.

ನಿರ್ಮಾಪಕನಿಗೆ ಚಿತ್ರರಂಗದಲ್ಲಿ ಬೆಲೆ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು. ನಮ್ಮ ಚಿತ್ರಕ್ಕೂ ಹಿಂದೆ ಪ್ರಿಯಾಂಕ ನಟಿಸಿರುವ ಹಾಡು ಮತ್ತು ಸನ್ನಿವೇಶಗಳಲ್ಲಿ ತುಂಬಾ ಕೆಟ್ಟದ್ದಾಗಿ ಕಾಣಿಸಿಕೊಂಡಿದ್ದಾರೆ. ವೈರದಲ್ಲಿ ಕೆಟ್ಟರೀತಿ ಆಕೆಯನ್ನು ಬಿಂಬಿಸಿಲ್ಲ. ಆದರೂ ಚಿತ್ರದ ಪ್ರಚಾರಕ್ಕೆ ಗೈರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರ್ದೇಶಕ ನವರಸನ್. ಚಿತ್ರ ನಿರ್ಮಾಣ ಮಾಡಿ ಸೆನ್ಸಾರ್ ಮಂಡಳಿಗೆ ಕೊಟ್ಟು ಬಿಡುತ್ತೇನೆ ಅವರೇ ಬಿಡುಗಡೆ ಮಾಡಲಿ ಎಂದು ಸೆನ್ಸಾರ್ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
-28/09/17


ಬಿಡುಗಡೆಯ ಬಾಗಿಲಿಗೆ ವೈರ
ಸ್ಯಾಂಡಲ್‍ವುಡ್‍ನಲ್ಲಿ ದೊಡ್ಡ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಸಣ್ಣ ಚಿತ್ರಗಳು ಸ್ಪರ್ಧೆಗೆ ಬರುವುದಿಲ್ಲ. ಅದರಂತೆ ತಾರಕ್ ನಂತರ ಐದು ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಇದರಲ್ಲಿ ನವರಸನ್ ಮೊದಲಬಾರಿ ನಿರ್ದೇಶಿಸಿ, ನಾಯಕನಾಗಿ ಅಭಿನಯಿಸಿರುವ ‘ವೈರ’ ಚಿತ್ರವು ಸೇರಿಕೊಂಡಿದೆ. ಇದೇ ಚಿತ್ರವು ತಮಿಳಿನಲ್ಲಿ ನಿರ್ಮಾಣವಾಗಲಿದ್ದು, ನವರಸನ್ ಆಕ್ಷನ್ ಕಟ್ ಹೇಳುವುದರ ಮೂಲಕ ಕಾಲಿವುಡ್‍ಗೆ ಪಾದಾರ್ಪಣೆ ಮಾಡಲಿದ್ದಾರೆ. ಅಲ್ಲಿನ ಸ್ಟಾರ್ ನಟರೊಬ್ಬರು ಅಭಿನಯಿಸಲಿದ್ದು, ಅದು ಯಾರು ಎಂಬುದು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ‘’ವೈರ’ ಹಾರರ್, ಥ್ರಿಲ್ಲರ್ ಕತೆಯಲ್ಲಿ ನಾಯಕ ಫ್ಯಾಶನ್ ಫೋಟೋಗ್ರಾಫರ್ ಆಗಿದ್ದು ಕೆಲಸದ ನಿಮಿತ್ತ ಮಡಕೇರಿಗೆ ಪ್ರಯಾಣ ಬೆಳೆಸಿದಾಗ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಮುಂದೇನು ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದಂತೆ.

ನಾಯಕಿಯಾಗಿ ಪ್ರಿಯಾಂಕಮಲ್ನಾಡ್ ಇವರೊಂದಿಗೆ ತಬಲನಾಣ , ಕಂಪೇಗೌಡ ನಟಿಸಿದ್ದಾರೆ. ಮಡಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎರಡು ಹಾಡುಗಳಿಗೆ ಉಗ್ರಂ ಖ್ಯಾತಿ ರವಿಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ರಥಾವರಂ ನಿರ್ಮಾಣ ಮಾಡಿದ್ದ ಧರ್ಮಶ್ರೀ ಮಂಜುನಾಥ್ ಕತೆಯ ಮೇಲೆ ಫಿದಾ ಆಗಿ ಹೊಸಬರಿಗೆ ಅವಕಾಶ ಮಾಡಕೊಟ್ಟಿದ್ದಾರೆ. ಅಕ್ಟೋಬರ್ ಆರನೇ ತಾರೀಖಿನಂದು ಸುಮಾರು 120ಕ್ಕೂ ಹೆಚ್ಚು ಕೇಂದ್ರಗಳಲ್ಲಿ ರಾಜ್ಯಾದ್ಯಂತ ಚಿತ್ರವು ಬಿಡುಗಡೆಯಾಗಲಿದೆ.

-28/09/17ಕನ್ನಡ ಚಿತ್ರ ತಮಿಳಿಗೆ ರಿಮೇಕ್
ಚಂದನವನದಲ್ಲಿ ಬಾಲಿವುಡ್ ಟಾಲಿವುಡ್,ಕಾಲಿವುಡ್ ಚಿತ್ರಗಳನ್ನು ಕನ್ನಡದಲ್ಲಿ ನಿರ್ಮಾಣ ಮಾಡುವ ಪರಿಪಾಠ ಬೆಳದಿದೆ. ಅದರಲ್ಲೂ ಕಾಲಿವುಡ್ ಸಿನಿಮಾಗಳು ಹೆಚ್ಚು ಇಲ್ಲಿನ ಭಾಷೆಗೆ ಬರುತ್ತದೆ, ಆದರೆ ಸೋಜಿಗ ಎನ್ನವಂತೆ ಕನ್ನಡ ಚಿತ್ರವೊಂದು ಬಿಡುಗಡೆ ಮುಂಚೆ ತಮಿಳಿನ ಸಿನಿಪಂಡಿತರು ವೀಕ್ಷಿಸಿ ಅಲ್ಲಿನ ಸ್ಟಾರ್ ನಟರನ್ನು ಹಾಕಿಕೊಂಡು ನಿರ್ಮಿಸಲು ಮನಸ್ಸು ಮಾಡಿರುವುದು ಸಂತಸದ ವಿಷಯವಾಗಿದೆ. ನಾವು ಹೇಳ ಹೊರಟಿರುವುದು ಹಾರರ್,ಥ್ರಿಲ್ಲರ್ ಮಾದರಿಯ ‘’ವೈರ’ ಚಿತ್ರದ ಕುರಿತು, ವಿತರಕರಾಗಿ ಅನುಭವ ಪಡೆದುಕೊಂಡು ರಾಕ್ಷಸಿ ಸಿನಿಮಾಕ್ಕೆ ನಾಯಕ,ನಿರ್ಮಾಪಕರಾಗಿದ್ದ ನವರಸನ್ ಕತೆ ಬರೆದು ನಾಯಕನ ಪಾತ್ರದಲ್ಲಿ ಮೊದಲಬಾರಿ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಶನ್ ಫೋಟೋಗ್ರಾಫರ್ ಆಗಿದ್ದು ಕೆಲಸದ ನಿಮಿತ್ತ ಮಡಕೇರಿಗೆ ಪ್ರಯಾಣ ಬೆಳೆಸಿದಾಗ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಮುಂದೇನು ಎಂಬುದನ್ನು ಸಿನಿಮಾ ನೋಡಿದರೆ ತಿಳಿಯುತ್ತದಂತೆ.

ನಾಯಕಿಯಾಗಿ ಪ್ರಿಯಾಂಕಮಲ್ನಾಡ್ ಇವರೊಂದಿಗೆ ತಬಲನಾಣ , ಕಂಪೇಗೌಡ ನಟಿಸಿದ್ದಾರೆ. ಮಡಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎರಡು ಹಾಡುಗಳಿಗೆ ಉಗ್ರಂ ಖ್ಯಾತಿ ರವಿಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ರಥಾವರಂ ನಿರ್ಮಾಣ ಮಾಡಿದ್ದ ಧರ್ಮಶ್ರೀ ಮಂಜುನಾಥ್ ಕತೆಯ ಮೇಲೆ ಫಿದಾ ಆಗಿ ಹೊಸಬರಿಗೆ ಅವಕಾಶ ಮಾಡಕೊಟ್ಟಿದ್ದಾರೆ. ಮುಂದಿನ ತಿಂಗಳು ಆರನೇ ತಾರೀಖು ರಾಜ್ಯಾದ್ಯಂತ ಚಿತ್ರವು ಬಿಡುಗಡೆಯಾಗಲಿದೆ.
-16/09/17
ಸಿನಿಮಾ ನೋಡಿ ಬೈಕ್ ನಿಮ್ಮದಾಗಿಸಿಕೊಳ್ಳಿ
ಸ್ಯಾಂಡಲ್‍ವುಡ್‍ನಲ್ಲಿ ಹಲವು ರೀತಿಯ ಪ್ರಚಾರಗಳನ್ನು ತಂಡವು ಮಾಡುತ್ತಲೆ ಬಂದಿದೆ. ಈ ಸಾಲಿಗೆ ಹಾರರ್,ಥ್ರಿಲ್ಲರ್ ಆಧಾರಿತ ‘ವೈರ’ ಚಿತ್ರ ಸೇರಿಕೊಂಡಿದೆ. ರಥಾವರ ಖ್ಯಾತಿಯ ನಿರ್ಮಾಪಕ ಧರ್ಮಶ್ರೀ ಮಂಜುನಾಥ ಹಿಂದಿನಿಂದಲೂ ಸಮಾಜಸೇವೆಯಲ್ಲಿ ಹೆಚ್ಚು ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ. ಅದಕ್ಕೆಂದೆ ಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಏನಾದರೂ ಕೊಡುಗೆ ನೀಡಬೇಕೆನ್ನುವ ಉದ್ದೇಶದಿಂದ ಒಂದು ಟಾಕೀಸ್‍ನಂತೆ 30 ಜಿಲ್ಲೆಗಳು, ಬೆಂಗಳೂರಿನ 20 ಚಿತ್ರಮಂದಿರಗಳು ಸೇರಿದಂತೆ ಒಟ್ಟಾರೆ 50 ಬೈಕ್‍ಗಳನ್ನು ನೀಡಲು ಯೋಜನೆ ಹಾಕಿಕೊಂಡಿದ್ದಾರೆ. ಇದನ್ನು ಪಡೆಯಲು ಕೆಲವು ಸುಲುಭದ ಷರತ್ತುಗಳನ್ನು ವಿಧಿಸಿದೆ. ವೀಕ್ಸಣೆ ಮಾಡಲಾದ ಅರ್ಧ ಟಿಕೆಟ್‍ನ್ನು ಟಾಕೀಸ್‍ನಲ್ಲಿರುವ ಹುಂಡಿಗೆ ಹಾಕಬೇಕು. ಆಯ್ಕೆಯಾದವರು ಸಿನಿಮಾ ಕುರಿತಂತೆ ಸರಳ ಪ್ರಶ್ನೆಗಳನ್ನು ಕೇಳಲಾಗುವುದು. ಸರಿ ಉತ್ತರ ನೀಡಿದವರು ಅದೃಷ್ಟಶಾಲಿಗಳಾಗುತ್ತಾರೆ. ಇದಕ್ಕಾಗಿ ಹೆಚ್ಚಿನ ಮೊತ್ತ 35 ಲಕ್ಷಗಳನ್ನು ಮೀಸಲಿರಿಸಿದ್ದಾರಂತೆ.

ಸಿನಿಮಾ ಕುರಿತು ಹೇಳುವುದಾದರೆ ಕತೆಯು ಬೆಂಗಳೂರಿನಿಂದ ಪ್ರಯಾಣ ಕೈಗೊಂಡು ಮಡಕೇರಿಗೆ ಹೋದಾಗ ಅಲ್ಲಿ ಒಂದು ಘಟನೆ ನಡೆಯುತ್ತದೆ. ಅದರಿಂದ ಹಲವು ಅನೂಹ್ಯ ತಿರುವುಗಳು ಬಂದು ಅದರಿಂದ ಹೇಗೆ ಹೊರಬರುತ್ತಾರೆ ಎಂಬುದು ಒಂದು ಏಳೆಯ ಕಥನ. ವಿತರಕ,ನಾಯಕನಾಗಿ ಅನುಭವ ಪಡೆದುಕೊಂಡಿರುವ ನವರಸನ್ ಮೊದಲಬಾರಿ ನಿರ್ದೇಶನದ ಕ್ಯಾಪ್ ಧರಿಸಿಕೊಂಡು ಫ್ಯಾಶನ್ ಫೋಟೋಗ್ರಾಫರ್ ಆಗಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮಧ್ಯಮ ವರ್ಗದ ಹುಡುಗಿ ಸಿನಿಮಾ ಪಸೆಯಿಂದ ಮುಂದೇನು ಆಗುತ್ತದೆ ಎಂಬ ಪಾತ್ರದಲ್ಲಿ ಪ್ರಿಯಾಂಕಮಲ್ನಾಡ್ ನಾಯಕಿ. ಬೆಂಗಳೂರು, ಮಡಕೇರಿ, ಮಂಗಳೂರು ತಟಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಗಿಸಲು ತಬಲನಾಣ , ಆಟೋಚಾಲಕನಾಗಿ ಕೆಂಪೆಗೌಡ ನಟನೆ ಇದೆ. ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿರುವುದು ರವಿಬಸ್ರೂರು. ವೈರ ಸೆಪ್ಟಂಬರ್ ಎರಡನೆ ವಾರ ತೆರೆಕಾಣುವ ಸಾದ್ಯತೆ ಇದೆ.
-Cine Circle News
-30/08/17`ವೈರ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ
ಶ್ರೀಮುರುಳಿ ಅಭಿನಯದ ರಥಾವರ ಚಿತ್ರ ನಿರ್ಮಾಣ ಮಾಡಿದ್ದ ಧರ್ಮಶ್ರೀ ಮಂಜುನಾಥ್ ನಿರ್ಮಾಪಕರಾಗಿರುವ ಚಿತ್ರ `ವೈರ’À. ಶೀರ್ಷಿಕೆಯ ಮೂಲಕವೇ ಕುತೂಹಲ ಹುಟ್ಟು ಹಾಕಿರುವ ಈ ಚಿತ್ರ ಸೆಪ್ಟಂಬರ್‍ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲ್ಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಯೂ ಟ್ಯೂಬ್‍ನಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಧರ್ಮಶ್ರೀ ಮಂಜುನಾಥ್ ತಿಳಿಸಿದ್ದಾರೆ.

ಈ ಚಿತ್ರಕ್ಕೆ ನವರಸನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ನಿತಿನ್ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಸಂಗಿತ ಈ ಚಿತ್ರಕ್ಕಿದೆ.
ಧರ್ಮಶ್ರೀ ಎಂಟರ್ ಪ್ರೈಸಸ್ ಮತ್ತು ಗೀತಾ ಎಂಟರ್ ಟೈನರ್ಸ್ ಅಡಿಯಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ಮಹೇಶ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ರವಿ ಪೂಜಾರ್ ಕಲೆ ಹಾಗೂ ಕಿನಾಲ್ ರಾಜ್ ಗೀತ ರಚನೆ ಇದೆ.

ನವರಸನ್, ಪ್ರಿಯಾಂಕಾ ಮಲ್ನಾಡ್, ಕೆಂಪೇಗೌಡ, ತಬಲಾ ನಾಣ , ಕೌತಾರ್, ಮಂಜುಳಾ, ಹ್ಯಾರಿ ಮುಂತಾದವರ ತಾರಾಗಣವಿರುವ ಈ ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅಣ ಯಾಗುತ್ತಿದ್ದಾರೆ.
-Cine Circle News
-24/08/17

VAIRA’ TRAILER LAUNCHED
T
he trailer of the Kannada film ‘Vaira’, a revenge saga with elements of suspense, horror, thrill and crime was launched in Bengaluru. The film is produced by Rathawara Manjunath while it is written and directed by Navarasan who has also played the lead role. The film stars Priyanka Malnad and Priyanka Thimmesh among others.

Director Navarasan said all films show revenge is taken but this film he said is an untold story which happens along a journey that starts from Bengaluru up to Madikeri. He said an incident happens in Madikeri and the film moves on revenge mode up to the interval. He said the second half is full of emotions. The film has a story that has all the elements.

Navarasan said when he went to the producer with the story, he said the producer told him to direct it as well.

Ravi Basrur has scored music for two songs besides the background score which has enough scope in the movie, Navarasan said.

Priyanka Malnad said she makes an appearance in the movie when the movie takes a turning point. Kempe Gowda said he plays an auto driver and is seen in combination with Tabala Nani. Kavathar plays the heroine’s father.

Maasti has written the dialogues and Nithin is the cameraman. Producer Manjunath is eyeing a July release for the movie.

G K Reddy came to wish the team good luck. The film has been shot in Bengaluru, Madikeri and Mangaluru.  
-20/06/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/