HOME
CINEMA NEWS
GALLERY
TV NEWS
REVIEWS
CONTACT US
ಉಪೇಂದ್ರ 50ನೇ ಚಿತ್ರಕ್ಕೆ ನಟನೆ, ನಿರ್ದೇಶನ
‘ಉಪ್ಪಿ-2’ ನಂತರ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಕಡೆಗೆ ಗಮನ ಹರಿಸಿದೆ ನಟನೆಯಲ್ಲಿ ಬ್ಯುಸಿ ಆದರು. ಮುಂದೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಅಲ್ಲಿಯೂ ತಮ್ಮ ಛಾಪನ್ನು ಮೂಡಿಸಿ, ಈಗ ಪುನ: ಚಿತ್ರರಂಗದ ಕಡೆ ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕೆ ಅವರು ಒಪ್ಪಿಕೊಳ್ಳುತ್ತಿರುವ ಸಾಲು ಸಾಲು ಚಿತ್ರಗಳು ಮತ್ತು ‘ ಅಧಿರ’ ಸಿನಿಮಾ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯಾಗಿದೆ. ಚಿತ್ರಕ್ಕೆ ಕತೆ ಬರೆದು ಸಂತು ಆಕ್ಷನ್ ಕಟ್ ಹೇಳುವುದು, ಆರ್.ಎಸ್.ಶ್ರೀನಿವಾಸ್ ನಿರ್ಮಾಣ ಮಾಡುವುದು ಪಕ್ಕಾ ಆಗಿತ್ತು. ಈಗ ಮೇಜರ್ ಸರ್ಜರಿಯಾಗಿದೆ. ಇದೇ ಪಿರಿಯಾಡಿಕ್ ಡ್ರಾಮಾ ಕತೆಗೆ ಉಪ್ಪಿ ತಮ್ಮದೆ ಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ನಟನೆ ಜೊತೆಗೆ ನಿರ್ದೇಶನದ ಟೋಪಿಯನ್ನು ಧರಿಸಲಿದ್ದಾರೆ. ಅಲ್ಲದೆ ಚಿತ್ರಕತೆ, ಸಂಭಾಷಣೆ ಜವಬ್ದಾರಿ ಹೊತ್ತುಕೊಳ್ಳುತ್ತಿರುವುದು ವಿಶೇಷ. ಇಬ್ಬರು ನಾಯಕಿಯರು ತಾರಗಣದ ವಿವರ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಎ.ಟಿ.ರವೀಶ್ ಸಂಗೀತ, ಕನಲ್‍ಕಣ್ಣನ್ ಕೊರಿಯೋಗ್ರಫಿü, ಅರುಣ್‍ಸಾಗರ್ ಕಲೆ ಇದೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ಚಿತ್ರದ ಮಹೂರ್ತವು ಏಪ್ರಿಲ್‍ನಲ್ಲಿ ಸೆಟ್ಟೇರಬಹುದು.
ಸಿನಿ ಸರ್ಕಲ್.ಇನ್ ನ್ಯೂಸ್
3/01/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore