HOME
CINEMA NEWS
GALLERY
TV NEWS
REVIEWS
CONTACT US
ಉಪೇಂದ್ರ ಕ್ಲಾಸ್,ಮಾಸ್
ಅಭಿಮಾನಿಗಳ ಪಾಲಗೆ ಉಪೇಂದ್ರ ಮಾಸ್, ಉಳಿದವರಿಗೆ ಕ್ಲಾಸ್ ಅಂತ ತೋರಿಸಿರುವುದು ‘ಮತ್ತೆ ಬಾ ಉಪೇಂದ್ರ’ ಸಿನಿಮಾ’. ಅಕ್ಕಿನೇನಿ ನಾಗೇಶ್ವರರಾವ್ ಅವರ ದಸರಾಬುಲ್ಲೋಡು, ನಾಗಾರ್ಜುನ ನಟಿಸಿರುವ ಸೊಗ್ಗಾಡೆ ಚಿನ್ನಿ ನಾಯನ ಚಿತ್ರ. ಇವರೆಡರ ಮಿಶ್ರಣವನ್ನು ಸೇರಿಸಿದರೆ ಕನ್ನಡ ಚಿತ್ರ ಅನ್ನಬಹುದು. ಕತೆಯಲ್ಲಿ ಒಂದು ಮನೆತನ ಊರಿನ ಉದ್ದಾರಕ್ಕೆ ಅಂತಲೇ ಇರುವ ಕುಟುಂಬ, ಮತ್ತೋಂದು ಅದೇ ಊರಿನ ಹಳೆಯ ದೇವಸ್ಥಾನದ ಆಭರಣಗಳನ್ನು ಕದಿಯಲು ಕಾದು ನಿಂತಿರುವುದು. ಅದಕ್ಕಾಗಿ ಮನೆತನದ ಯಜಮಾನನ ಕೊಲೆ. ಸತ್ತವನಿಗೊಬ್ಬ ಮಗ, ಅವರ ಬೆಂಗಾವಲಿಗೆ ನಿಲ್ಲುವ ಅಗೋಚರ ಶಕ್ತಿ. ಇದರ ನಡುವೆ ಊರ ಹಬ್ಬ, ಫ್ಯಾಮಿಲಿ ಸೆಂಟಿಮೆಂಟ್, ಹಾಡು ಅಪ್ಪನ ಆತ್ಮದ ಆಟ ಎಲ್ಲವು ನಗಿಸಲು ಬಂದು ಹೋಗುತ್ತದೆ. ಆಭರಣ ಕದಿಯುವ ಸಂಚಿನಲ್ಲಿ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬಲ್ಲಿಗೆ ಕ್ಲೈಮಾಕ್ಸ್ ಮುಗಿಯುತ್ತದೆ. ಆರಂಭದಲ್ಲಿ ಮಗ-ಸೊಸೆ ವಿದೇಶದಿಂದ ವಿಚ್ಚೇದನ ಕೊಡಲು ಬರುವುದರೊಂದಿಗೆ ಕತೆ ತೆರೆದುಕೊಳ್ಳುತ್ತದೆ. ಅವರಿಬ್ಬರನ್ನು ಸೇರಿಸುವ ಹೊಣೆ ಆತ್ಮವಾಗಿರುವ ಅಪ್ಪನ ಕೆಲಸವಾಗುತ್ತದೆ. ಇದೆಲ್ಲವು ಅಲ್ಲಲ್ಲಿ ಹಾಸ್ಯದ ರೂಪದಲ್ಲಿ ಕಾಣ ಸಿಕೊಂಡು ನೊಡುಗನಿಗೆ ಕೊಂಚ ರಿಲೀಫ್ ಸಿಗುತ್ತದೆ.

ಡಾಕ್ಟರ್ ಮತ್ತು ಆತ್ಮವಾಗಿ ಕಾಣ ಸಿಕೊಂಡಿರುವ ಉಪೇಂದ್ರ ಎರಡು ಪಾತ್ರದಲ್ಲಿ ನಟಿಸಿ ಮರೆಗು ತಂದಿದ್ದಾರೆ. ಅವರು ರಸಿಕನಾಗಿ, ತುಂಟ, ಹೆಣ್ಣು ಮಕ್ಕಳ ಪಾಲಿಗೆ ಬೇಕಾದವನಾಗಿ ಸಿನಿಮಾ ಪೂರ್ತಿ ಆವರಿಸಿಕೊಂಡಿದ್ದಾರೆ. ಗ್ಯಾಪ್ ನಂತರ ಜೋಡಿಯಾಗಿ ಅಭಿನಯಿಸಿರುವ ಪ್ರೇಮಾ ನೋಡಲು ಚೆಂದ ಕಾಣ ಸುತ್ತಾರೆ. ಚೊಚ್ಚಲಬಾರಿ ಉಪ್ಪಿ ಜೊತೆಯಾಗಿರುವ ಶೃತಿಹರಿಹರನ್ ಅಭಿನಯಕ್ಕೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಮಾವನ ಮಗಳಾಗಿ ಹರ್ಷಿಕಾಪೂರ್ಣಚ್ಚಾ, ದೀಪ್ತಿಕಾಪ್ಸೆ ಬಂದು ಹೋಗುತ್ತಾರೆ. ನಗಿಸಲು ಸಾಧುಕೋಕಿಲ, ಕಿರುಚಾಡಲು ಅವಿನಾಶ್, ಶೋಭರಾಜ್ ಇದ್ದಾರೆ. ಶ್ರೀಧರ್ ಸಂಭ್ರಮ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ಶ್ರೀಕಾಂತ್, ಶಶಿಕಾಂತ್ ಅವರ ಮೊದಲ ನಿರ್ಮಾಣದ ಸಿನಿಮಾವು ಎಲ್ಲಾ ವರ್ಗದವರಿಗೂ ಇಷ್ಟವಾಗಲಿದೆ.
-19/11/17

ಜನ ಬದಲಾದರೆ ದೇಶ ಉದ್ದಾರವಾಗುತ್ತದೆ – ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ನಟನೆ ಜೊತೆಗೆ ಮುಂಬರುವ ಚುನಾವಣೆಯಲ್ಲಿ ತೊಡಗಿಕೊಳ್ಳಲು ‘ ಕರ್ನಾಟಕ ಪ್ರಜ್ಘಾವಂತ ಜನತಾ ಪಕ್ಷ’ವನ್ನು ಸ್ಥಾಪಿಸಿದ್ದರು. ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಪಕ್ಷದ ವೆಬ್‍ಸೈಟ್, ಆಯ್ಯಪ್‍ನ್ನು ಬಿಡುಗಡೆ ಮಾಡಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ವೆಬ್‍ಸೈಟ್‍ನಲ್ಲಿರುವ ಮಾಹಿತಿ ಒದಗಿಸಬೇಕೆಂದು ಕೋರಿಕೊಂಡಿದ್ದರು. ಸಂಜೆ ಅವರದೆ ನಟನೆಯ ‘ಉಪೇಂದ್ರ ಮತ್ತೆ ಬಾ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ನಂತರ ಮಾದ್ಯಮದವರೊಂದಿಗೆ ಹಾಗೆ ಸುಮ್ಮನೆ ರಾಜಕೀಯ ಕುರಿತು ಮಾದ್ಯಮದವರು ಕೇಳಲಾದ ಸರಳ ಪ್ರಶ್ನೆಗಳಿಗೆ ಉತ್ತರಗಳನ್ನು ನಾಜೂಕಾಗಿ ನೀಡಿದರು. ಅವರು ಮಾತುಗಳು ಓದುಗರಿಗೆ ಸಮರ್ಪಿಸಲಾಗಿದೆ.

ಚಿತ್ರರಂಗದಲ್ಲೆ ತುಂಬಾ ಸಂತೋಷದಿಂದ ಕಾಲ ಕಳೆದಿದ್ದೇನೆ. ತುಂಬಾ ವರ್ಷಗಳಿಂದ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ತುಡಿತ ಇತ್ತು. ದೇವರೇ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಉಪ್ಪಿ-2 ಸಿನಿಮಾದಂತೆ ಭೋದನೆ ಮಾಡಲು ಬಂದಿಲ್ಲ. ಒಳ್ಳೇದು ಮಾಡಬೇಕೆಂದು ರಾಜಕೀಯಕ್ಕೆ ಧುಮುಕಿದ್ದೇನೆ. ಈ ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದ ಆಕ್ಷೇಪಣೆ ಬರುತ್ತಾ ಇದೆ. ಇದಕ್ಕೆಲ್ಲಾ ಹೆದರಿ ಕೂತರೆ ಕೆಲಸ ಮಾಡಲು ಆಗುವುದಿಲ್ಲ. ರಾಜಕೀಯ ಧುರೀಣರು ಬುದ್ದವಂತರಲ್ಲ. ಕೆಲವರು ಇಲ್ಲಿಗೆ ಬಂದು ಸಿಕ್ಕಿಹಾಕಿ ಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಸಾಮನ್ಯ ಜನರನ್ನು ನಾವು ಕಾಣುತ್ತವೆ. ಅವರು ಶ್ರೀಸಾಮಾನ್ಯರಲ್ಲ, ಅಸಾಮಾನ್ಯರು. ನಮ್ಮಂಥವರಿಗೆ ಪ್ರಜೆಗಳೇ ದೊಡ್ಡವರು. ಇಂದು ಅವರೇ ಧ್ವನಿಯಾಗಿದ್ದಾರೆ. ಜನರ ಕೆಲಸಗಳನ್ನು ಮಾಡುವುದು ದೇವರನ್ನು ನೋಡಿದಂತೆ ಆಗುತ್ತದೆ. ಚುನಾವಣೆಯಲ್ಲಿ ಪಕ್ಷವು ಸೋಲು ಕಂಡಲ್ಲಿ, ಬೇಜಾರು ಮಾಡಿಕೊಳ್ಳುವುದಿಲ್ಲ. ಮುಂದಿನ ಚುನಾವಣೆ ಸಮಯದಲ್ಲೂ ಆರು ತಿಂಗಳು ಸಮಯ ತೆಗೆದುಕೊಂಡು ಇದೇ ಕೆಲಸ ಮಾಡುತ್ತೆನೆ. ಪ್ರಾಣ ಇರುವ ತನಕ ಇದನ್ನು ಬಿಡುವ ಪ್ರಶ್ನೆ ಇಲ್ಲ. ಎಲ್ಲಾ ನಾಯಕರು ಹಣದೊಂದಿಗೆ ಕಣಕ್ಕೆ ಇಳಿಯುತ್ತಾರೆ. ನಮ್ಮ ಪಕ್ಷವು ಬುದ್ದಿವಂತಿಕೆ ಉಪಯೋಗಿಸುತ್ತದೆ. ಎಲ್ಲರಂತೆ ನಾನವನಲ್ಲ. ಜನ ಬದಲಾದರೆ ಸಮಾಜ ಉದ್ದಾರವಾಗುತ್ತದೆ. ಹೋಮ್ ಮಿನಿಸ್ಟರ್ ತೆಲುಗು ಸಿನಿಮಾದ ಕೆಲಸ ಮುಗಿದ ನಂತರ ಸಂಪೂರ್ಣವಾಗಿ ರಾಜಕೀಯದಲ್ಲ ಸಕ್ರೀಯವಾಗಿ ಹೆಜ್ಜೆ ಇಡಲಾಗುವುದು. ಉಪ್ಪಿ-ರುಪ್ಪಿ ಎಲೆಕ್ಷನ್ ಬಳಿಕ ಮಾಡುವುದಾಗಿ ನಿರ್ಮಾಪಕರನ್ನು ಕೇಳಿಕೊಳ್ಳಲಾಗಿದೆ ಎನ್ನುತ್ತಾ ಚಾನಲ್‍ಗೆ ಕಡೆಗೆ ಗಮನ ಹರಿಸಿದರು ಉಪೇಂದ್ರ.
-13/11/17

ಮತ್ತೆ ಬಂದ ಉಪೇಂದ್ರ
ಉಪೇಂದ್ರ ಚಿತ್ರರಂಗ ಬಿಟ್ಟು ಹೋಗಿಲ್ಲ. ಯಾವಾಗ ಮತ್ತೆ ಬಂದರು ಎಂಬ ಪ್ರಶ್ನೆ ಎಲ್ಲರಿಗೂ ಬರಬಹುದು. ಅವರು ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಇದ್ದಾರೆ. ಮೇಲಿನ ವ್ಯಾಕ್ಯ ರೀತಿ ಹೇಳಲು ಕಾರಣವಿದೆ. ಉಪ್ಪಿ ಈಗ ‘ಉಪೇಂದ್ರ ಮತ್ತೆ ಬಾ’ ಎನ್ನುವ ಚಿತ್ರದಲ್ಲಿ ಸದ್ದಿಲ್ಲದೆ ನಟಿಸಿದ್ದು ಅದು ಬಿಡುಗಡೆ ಹಂತಕ್ಕೆ ಬಂದಿದೆ. ಪ್ರಚಾರದ ಮೊದಲ ಹಂತವಾಗಿ ಆಡಿಯೋ ಸಿಡಿ ಅನಾವರಣ ಕಾರ್ಯಕ್ರಮವನ್ನು ನಿರ್ಮಾಪಕರು ಹಮ್ಮಿಕೊಂಡಿದ್ದರು. ಚಿತ್ರದ ಮೇಕಿಂಗ್, ಹಾಡಿನ ತುಣುಕುಗಳನ್ನು ತೋರಿಸಿದ ತರುವಾಯ ತಂಡವು ಮಾತಿಗೆ ಕುಳಿತುಕೊಂಡಿತು.
ಹರ್ಷಿಕಾ ಪೂರ್ಣಚ್ಚಾ ಹೇಳುವಂತೆ: ಅತ್ತೆಯ ಮಗಳ ಪಾತ್ರದಲ್ಲಿ ಕಾಣ ಸಿಕೊಂಡಿದ್ದೇನೆ. ಪ್ರೇಮ ಕೊಡಗಿನವರು, ಅವರ ಪ್ರೇರಪಣೆಯಿಂದ ಅದೇ ಸ್ಥಳದವಳಾಗಿದ್ದೇನೆ ಎಂದಷ್ಟೇ ಹೇಳಿ ಕೊಚ್ಚಿನ್ ಪ್ರಯಾಣ ಬೆಳಸುವ ಕಾರಣ ನಿರ್ಗಮಿಸಿದರು.

ಶ್ರೀಧರ್‍ಸಂಭ್ರಮ ಹೇಳುವಂತೆ: ರವಿ ಸರ್, ಉಪೇಂದ್ರ ಸಿನಿಮಾಗಳನ್ನು ನೋಡುತ್ತಾ ಬೆಳದ ನನಗೆ ಅವರ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಅವಕಾಶ ಒದಗಿಬಂದಿದ್ದು ಸಂತಸ ತಂದಿದೆ. ಇದು ನನ್ನ ಪಾಲಿಗೆ ವಿಜೃಂಭಣೆ ಸಿನಿಮಾ ಎನ್ನಬಹುದು.

ಪ್ರೇಮ ಹೇಳುವಂತೆ: ಉಪೇಂದ್ರ ಅವರ ಜೊತೆ ಮೂರನೆ ಸಿನಿಮಾ. ಇದರಲ್ಲಿ ಯಾರನ್ನು ಬೈದಿಲ್ಲ. ಪ್ರೇಕ್ಷಕರ ಫಲಿತಾಂಶಕ್ಕೆ ಕಾಯುತ್ತಿದ್ದೇನೆ.

ನಿರ್ದೇಶಕ ಅರುಣ್‍ಲೋಕನಾಥ್ ಹೇಳುವಂತೆ: ಎಲ್ಲರ ಸಹಕಾರದಿಂದ ಚಿತ್ರ ಮುಗಿದಿದೆ. ಇದಕ್ಕಾಗಿ ಥ್ಯಾಂಕ್ಸ್ ಉಪೇಂದ್ರ ಹೇಳುವಂತೆ: ಅದ್ಬುತ ಕಮರ್ಷಿಯಲ್, ಕಾಮಿಡಿ ಸಿನಿಮಾ. ಎಲ್ಲಾ ಜಾನರ್ ಮಿಶ್ರಣವಿದೆ. ಪ್ರೇಮರವರು ನಿರ್ದೇಶಕರೊಂದಿಗೆ ಜಗಳವಾಡುತ್ತಾ ಅಭಿನಯಿಸುತ್ತಿದ್ದರು. ಸಿನಿಮಾದಲ್ಲಿ ಇಂತಿ ನಿನ್ನ ಪ್ರೇಮ, ಲೋಕಕ್ಕೆ ಇಂತಿ ನಿನ್ನ ಪ್ರಜೆ. ಎರಡು ಶೇಡ್‍ಗಳಲ್ಲಿ ಅಪ್ಪ-ಮಗನಾಗಿ ನಟನೆ ಮಾಡಲಾಗಿದೆ.

ನಿರ್ಮಾಪಕರುಗಳಾದ ಎಂ.ಎಸ್.ಶ್ರೀಕಾಂತ್, ಎಂ.ಎಸ್.ಶಶಿಕಾಂತ್ ಹಾಗೂ ಕೆ.ಎಲ್.ನರೇಂದ್ರನಾಥ್ ಮೌನಕ್ಕೆ ಶರಣಾದರು. ಛಾಯಗ್ರಹಣ ಸ್ವಾಮಿ, ಸಂಭಾಷಣೆ ಉಪೇಂದ್ರ, ನೃತ್ಯ ತ್ರಿಭುವನ್-ಇಮ್ರಾನ್‍ಸರ್ದಾರಿಯಾ, ಸಾಹಸ ಥ್ರಿಲ್ಲರ್‍ಮಂಜು-ಡಿಫರೆಂಟ್‍ಡ್ಯಾನಿ ಅವರದಾಗಿದೆ. ಶೃತಿಹರಿಹರನ್, ದೀಪ್ತಿಕಾಪ್ಸೆ, ಸಾಧುಕೋಕಿಲ, ಅವಿನಾಶ್, ಶೃತಿನರೇಶ್, ವಸಿಷ್ಟ ಅಭಿನಯಿಸಿರುವ ಚಿತ್ರವು ಇದೇ ಶುಕ್ರವಾರದಂದು ರಾಜ್ಯದ್ಯಂತ ತೆರೆಕಾಣಲಿದೆ.
-13/11/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore