HOME
CINEMA NEWS
GALLERY
TV NEWS
REVIEWS
CONTACT US
ನವೆಂಬರ್ ತಿಂಗಳು ಉದ್ಗರ್ಷ ತಂಡದ ಹುಟ್ಟುಹಬ್ಬ
ಸುನೀಲ್‍ಕುಮಾರ್‍ದೇಸಾಯಿ ನಿರ್ದೇಶನದ ಮೂರು ಭಾಷೆಯ `ಉದ್ಘರ್ಷ’ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದೆ. ಮುಂದಿನ ತಿಂಗಳು ಬಿಡುಗಡೆ ಮಾಡುವ ಬಗ್ಗೆ ತಂಡದ ಆಲೋಚನೆಯಾಗಿತ್ತು. ಕಾರಣಾಂತರದಿಂದ ಸಾದ್ಯವಾಗಿಲ್ಲ. ಇದೇ 19ಕ್ಕೆ ಸಂಗೀತ ನಿರ್ದೇಶಕ ಸಂಜೋಯ್‍ಚೌದರಿ, 20ರಂದು ನಾಯಕಿ ಧನ್ಸಿಕಾ, 22ಕ್ಕೆ ನಿರ್ದೇಶಕ ಮೂವರದು ಒಂದೇ ತಿಂಗಳಲ್ಲಿ ಹುಟ್ಟುಹಬ್ಬವಾಗಿದ್ದರಿಂದ ಸಹಜವಾಗಿ ಸಂತಸ ತಂದಿದೆಯಂತೆ. ಸಿನಿಮಾವು ಸದ್ಯ ಡಿಟಿಎಸ್ ಅಂತಿಮ ಹಂತದಲ್ಲಿದ್ದು, ಮುಂದಿನವಾರ ಸೆನ್ಸಾರ್‍ಗೆ ಹೋಗಲಿದೆ. 75 ದಿನಗಳ ಕಾಲ ಹೈದ್ರಾಬಾದ್, ಕೇರಳ, ಮಡಿಕೇರಿ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾರಾಗಣದ ಜೊತೆಗೆ ತಾಂತ್ರಿಕವಾಗಿಯೂ ಗಟ್ಟಿಯಾಗಿದೆ. ತಾರಗಣದಲ್ಲಿ ಠಾಕೂರ್ ಅನೂಪ್‍ಸಿಂಗ್, ಧನ್ಸಿಕಾ, ತಾನ್ಯಹೋಪ್, ಕಬೀರ್‍ಸಿಂಗ್‍ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರದ್ಧಾ ದಾಸ್, ಹರ್ಷಿಕಾಪೂರ್ಣಚ್ಚ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ಆರ್.ದೇವರಾಜ್ ನಿರ್ಮಾಣ ಮಾಡಿರುವ ಥ್ರಿಲ್ಲರ್ ಚಿತ್ರವು ಮುಂದಿನ ವರ್ಷ ತೆರೆ ಕಾಣುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
4/12/18

ಮಡಕೇರಿಯಲ್ಲಿ ಉದ್ಘರ್ಷದ ಪ್ರಿಕ್ಲೈಮಾಕ್ಸ್
ಸಮಯಕ್ಕೆ ಸರಿಯಾಗಿ ಚಿತ್ರೀಕರಣ ಮುಗಿಸುವ ಗುಣ ಹೊಂದಿರುವ ಹಿರಿಯ ನಿರ್ದೇಶಕ ಸುನಿಲ್‍ಕುಮಾರ್‍ದೇಸಾಯಿ ಅವರ ‘ಉದ್ಘರ್ಷ’ ಚಿತ್ರದ ಪ್ರಿಕ್ಲೈಮಾಕ್ಸ್ ಚಿತ್ರೀಕರಣವು ಮಡಕೇರಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣವನ್ನು ವೀಕ್ಷಿಸಲು ನಿರ್ಮಾಪಕರು ಮಾದ್ಯಮದವರನ್ನು ಸೆಟ್‍ಗೆ ಆಹ್ವಾನಿಸಿದ್ದ್ದರು. ಸುಂಟಿಕೊಪ್ಪದಿಂದ ಎರಡು ಕಿ.ಮೀ ದೂರದ ಬಳಿಕ ಹಾವಿನಂತೆ ಇರುವ ದಾರಿಯಲ್ಲಿ ಹಾಸುಹೊಕ್ಕಾಗ ಕೂರ್ಗಳ್ಳಿ ಎಸ್ಟೇಟ್ ಕಾಣಿಸಿಕೊಂಡಿತು. ಮನೆಯ ಎರಡನೆ ಮಹಡಿಯಿಂದ ರಕ್ತದ ಕಲೆಗಳೊಂದಿಗೆ ನಾಯಕಿ ಸಾಯಿಧನ್ಸಿಕಾ ಚಾವಣಿಯಿಂದ ನೇತಾಡುತ್ತಾ ಪರಾರಿಯಾಗುವ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು.

ಕಟ್ ಮಾಡಿದರೆ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಎಂದಿನಂತೆ ಮಾತು ಶುರುಮಾಡಿದ ನಿರ್ದೇಶಕರು ಮುಕ್ತಾಯದ ಹಂತಕ್ಕೆ ಬಂದಿದೆ. ಇಂದು ಕ್ಲೈಮಾಕ್ಸ್ ಮುಂಚಿನ ಭಾಗವನ್ನು ತೆಗೆಯಲಾಗುತ್ತಿದೆ. 60 ದಿನಗಳ ಕಾಲ ಮಡಕೇರಿ, ಹೈದರಬಾದ್, ಆಲಾಪಿ ಮತ್ತು ಶೇಕಡ 70 ಭಾಗದಷ್ಟು ಮಡಕೇರಿಯಲ್ಲಿ ಶೂಟ್ ಮಾಡಲಾಗಿದೆ. ವರ್ಷದ ಕೊನೆ ದಿನದ ರಾತ್ರಿ ನಾಯಕ-ನಾಯಕಿ ರೆಸಾರ್ಟ್ ಹೋಗುತ್ತಾರೆ. ಹತ್ತು ನಿಮಿಷದಲ್ಲಿ ಮೂರು ಪಾತ್ರಗಳು ಮೂರು ಹಂತಗಳಲ್ಲಿ ಸಾಗುತ್ತದೆ. ಹೀಗಿತ್ತು, ಹೀಗಾಗಿದೆ ಅಂತ ನೋಡುಗನಿಗೆ ದಾರಿ ತಪ್ಪಿಸಿ, ಕ್ಲೈಮಾಕ್ಸ್‍ನಲ್ಲಿ ಸರಿದಾರಿಗೆ ತೆಗೆದುಕೊಂಡು ಹೋಗುತ್ತದೆ. ಅಂದುಕೊಂಡಿದಕ್ಕಿಂತ ವ್ಯತಿರಿಕ್ತವಾಗಿರುತ್ತದೆ. ಪ್ರತಿ ಹತ್ತು ನಿಮಿಷಕ್ಕೆ ಥ್ರಿಲ್ ನೀಡುತ್ತದೆ. ಕತೆಯ ಓಟವು ಆಕ್ಷನ್, ಥ್ರಿಲ್ಲರ್, ಸೆಸ್ಪನ್ಸ್‍ದಲ್ಲಿ ರಂಜನೆ ಕೊಡಲಿದೆ. ಹಾಡು, ಫೈಟ್ ಇರದೆ ಸುಜಯ್‍ಚೌದರಿ ಹಿನ್ನಲೆ ಸಂಗೀತ ಹೈಲೈಟ್ ಆಗಿದೆ ಅಂತ ಹೇಳುತ್ತಾ ಹೋದರು.

ಠಾಕೂರ್‍ಅನೂಪ್‍ಸಿಂಗ್ ಮಾತನಾಡುತ್ತಾ, ನಿರ್ದೇಶಕರು ಕತೆ ಹೇಳಿದಾಗ ಎಂದಿನಂತೆ ವಿಲನ್ ಪಾತ್ರವಿರಬಹುದೆಂದು ಒಪ್ಪಿಕೊಳ್ಳಲಾಯಿತು. ನಂತರ ಹೀರೋ ಎಂದಾಗ ನಂಬಲಿಕ್ಕೆ ಆಗಲಿಲ್ಲ. ಬೇರೆ ಭಾಷೆಯಲ್ಲಿ ಇಂತಹ ಪಾತ್ರದಲ್ಲಿ ನಟಿಸಿರುವುದರಿಂದ, ಏಕ್‍ದಂ ಆ ಪದ ಕೇಳಿ ಶಾಕ್ ಆಯಿತು. ಕೊನೆಗೆ ಮೊದಲ ಬಾರಿ ಹೀರೋ ಆದೆನೆಂಬ ಖುಷಿ ಆಯಿತು ಎಂದರು.

ಖಳನಟ ಕಬೀರ್‍ದುಹಾನಸಿಂಗ್, ಶ್ರವಣ್‍ರಾಘವೇಂದ್ರ, ವಂಶಿ, ನಾಯಕಿ ಸಾಯಿಧನ್ಸಿಕಾ ಪಾತ್ರದ ವಿವರವನ್ನು ಹೇಳದೆ ನಿರ್ದೇಶಕರ ಕೆಲಸವನ್ನು ಕೊಂಡಾಡಿದರು. ಮತ್ತೋಬ್ಬ ನಾಯಕಿ ತಾನ್ಯಹೋಪ್ , ಛಾಯಗ್ರಾಹಕ ಪಿ.ರಾಜನ್ ಹೆಚ್ಚೇನು ಹೇಳಲಿಲ್ಲ. ದೇಸಾಯಿ ಚಿತ್ರಗಳನ್ನು ಇಷ್ಟಪಡುವ ಕಾರಣ ನಿರ್ಮಾಣ ಮಾಡಲಾಯಿತು ಅಂತಾರೆ ಆರ್.ದೇವರಾಜ್. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಸಿದ್ದಗೊಳ್ಳುತ್ತಿರುವ ಕಾರಣ ಮೂರು ಕಡೆ ಹೊಂದುವ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕರು ಕೊನೆಯಲ್ಲಿ ಹೇಳಿಕೊಂಡರು.
ಸಿನಿ ಸರ್ಕಲ್.ಇನ್ ನ್ಯೂಸ್
22/10/18

ಉದ್ಘರ್ಷಕ್ಕೆ ವಿವರಣೆ ನೀಡಿದ ದೇಸಾಯಿ
ತರ್ಕ, ಉತ್ಕರ್ಷ, ನಿಷ್ಕರ್ಷ, ಬೆಳದಿಂಗಲಬಾಲೆ, ನಮ್ಮೂರ ಮಂದಾರ ಹೂ ಚಿತ್ರಗಳನ್ನು ನೆನಪು ಮಾಡಿಕೊಂಡರೆ ನಿರ್ದೇಶಕ ಸುನೀಲ್‍ಕುಮಾರ್‍ದೇಸಾಯಿ ಕಣ್ಣ ಮುಂದೆ ಬರುತ್ತಾರೆ. ಅವರು ಗ್ಯಾಪ್ ನಂತರ ಕತೆ ಬರೆದು ನಿರ್ದೇಶನ ಮಾಡುತ್ತಿರುವ ‘ಉದ್ಘರ್ಷ’ ಚಿತ್ರಕ್ಕೆ ಬಾಲಿವುಡ್ ನಾಯಕ ನಟಿಸುತ್ತಿದ್ದಾರೆ. ಈಗಾಗಲೇ ಒಂದು ಹಂತದ ವರೆಗೆ ಚಿತ್ರೀಕರಣ ಮುಗಿಸಿದ್ದು, ಮುಖ್ಯ ಪಾತ್ರದಲ್ಲಿ ನಟಿಸಿರುವ ಠಾಕೂರ್‍ಅನೂಪ್‍ಸಿಂಗ್ ಅವರನ್ನು ಮಾತ್ರ ಮಾದ್ಯಮದವರಿಗೆ ಪರಿಚಯಿಸುವ ಸಲುವಾಗಿ ಸಣ್ಣದೊಂದು ಸುದ್ದಿಗೋಷ್ಟಿಯನ್ನು ದೊಡ್ಡ ಹೋಟೆಲ್‍ನಲ್ಲಿ ಏರ್ಪಾಟು ಮಾಡಿದ್ದರು.

ಮೈಕ್ ತೆಗೆದುಕೊಂಡ ದೇಸಾಯಿ ಚಿತ್ರದ ಕುರಿತು ಮಾಹಿತಿಗಳನ್ನು ಏಳೆ ಏಳೆಯಾಗಿ ಬಿಚ್ಚಿಟ್ಟರು. ಸಿನಿಮಾ ಕಾರ್ಯಕ್ರಮದಲ್ಲಿ ಠಾಕೂರ್ ಅವರನ್ನು ನೋಡಿ ಕತೆಯನ್ನು ಹೇಳಿದಾಗ ಮೆಚ್ಚಿಕೊಂಡಂತೆ ಇಲ್ಲಿಯವರೆಗೂ ಬಂದಿದೆ. ಅವರಿಗೆ ನೆನಪಿನ ಶಕ್ತಿ ಜಾಸ್ತಿ ಇದೆ. ಹೇಳಿದ್ದನ್ನು ಕೂಲಂಕುಷವಾಗಿ ಅರ್ಥ ಮಾಡಿಕೊಂಡು ಕ್ಯಾಮಾರ ಮುಂದೆ ನಿಲ್ಲುತ್ತಿದ್ದರು. ಸಂಭಾಷಣೆಗಳು ಕಡಿಮೆ ಇರುವುದರಿಂದ ಅವರ ವಯಸ್ಸಿಗೆ ತಕ್ಕಂತೆ ನಂದಾ ಅವರಿಂದ ಡಬ್ಬಿಂಗ್ ಮಾಡಿಸಲಾಗಿದೆ. ತೆಲುಗು,ತಮಿಳುದಲ್ಲಿ ಶೇಖರ್ ನಿರ್ವಹಿಸಿದ್ದಾರೆ. ವರ್ಷದ ಕೊನೆ ದಿನದ ರಾತ್ರಿ ನಾಯಕ-ನಾಯಕಿ ರೆಸಾರ್ಟ್ ಹೋಗುತ್ತಾರೆ. ಹತ್ತು ನಿಮಿಷದಲ್ಲಿ ಮೂರು ಪಾತ್ರಗಳು ಮೂರು ಹಂತಗಳಲ್ಲಿ ಸಾಗುತ್ತದೆ. ಹೀಗಿತ್ತು, ಹೀಗಾಗಿದೆ ಅಂತ ನೋಡುಗನಿಗೆ ದಾರಿ ತಪ್ಪಿಸಿ, ಕ್ಲೈಮಾಕ್ಸ್‍ನಲ್ಲಿ ಸರಿದಾರಿಗೆ ತೆಗೆದುಕೊಂಡು ಹೋಗುತ್ತದೆ. ಅಂದುಕೊಂಡಿದಕ್ಕಿಂತ ವ್ಯತಿರಿಕ್ತವಾಗಿರುತ್ತದೆ. ಪ್ರತಿ ಹತ್ತು ನಿಮಿಷಕ್ಕೆ ಥ್ರಿಲ್ ನೀಡುತ್ತದೆ. ಕತೆಯ ಓಟವು ಆಕ್ಷನ್, ಥ್ರಿಲ್ಲರ್, ಸೆಸ್ಪನ್ಸ್‍ದಲ್ಲಿ ರಂಜನೆ ಕೊಡಲಿದೆ. ಸಂಗೀತ ನಿರ್ದೇಶಕ ಸುಜಯ್‍ಚೌದರಿ ಮುಂದಿನ ಭೇಟಿಯಲ್ಲಿ ಬರುತ್ತಾರೆಂದು ಹೇಳುತ್ತಾ ಹೋದರು.

ಪೈಲೆಟ್, ಮಿಸ್‍ವಲ್ರ್ಡ್ 2015, ಮಹಾಭಾರತ ಶೋ ನಿರ್ವಹಣೆ, ಸಿಂಗಂ-3 ಚಿತ್ರದಲ್ಲಿ ನಟನೆ ಅಂತ ಪರಿಚಯ ಮಾಡಿಕೊಂಡ ಠಾಕೂರ್‍ಅನೂಪ್‍ಸಿಂಗ್ ಮಾತನಾಡುತ್ತಾ, ನಿರ್ದೇಶಕರು ಕತೆ ಹೇಳಿದಾಗ ಎಂದಿನಂತೆ ವಿಲನ್ ಪಾತ್ರವಿರಬಹುದೆಂದು ಒಪ್ಪಿಕೊಳ್ಳಲಾಯಿತು. ನಂತರ ಹೀರೋ ಎಂದಾಗ ನಂಬಲಿಕ್ಕೆ ಆಗಲಿಲ್ಲ. ಬೇರೆ ಭಾಷೆಯಲ್ಲಿ ಇಂತಹ ಪಾತ್ರದಲ್ಲಿ ನಟಿಸಿರುವುದರಿಂದ, ಏಕ್‍ದಂ ಆ ಪದ ಕೇಳಿ ಶಾಕ್ ಆಯಿತು. ಕೊನೆಗೆ ಮೊದಲ ಬಾರಿ ಹೀರೋ ಆದೆನೆಂಬ ಖುಷಿ ಆಯಿತು ಎಂದರು.

ಕಾಲೇಜು ದಿನಗಳಲ್ಲಿ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಇಂತಹ ತಂತ್ರಜ್ಘರು ಮುಂದೆ ಬರಬೇಕೆಂಬ ಒಂದೇ ಉದ್ದೇಶದಿಂದ ನಿರ್ಮಾಣ ಮಾಡುತ್ತಿರುವುದಾಗಿ ಆರ್.ದೇವರಾಜ್ ಹೇಳಿಕೊಂಡರು. ಮಂಜುನಾಥ್.ಡಿ ಮತ್ತು ರಾಜೇಂದ್ರಕುಮಾರ್ ಪಾಲುದಾರರಾಗಿದ್ದಾರೆ.
ಸಿನಿ ಸರ್ಕಲ್.ಇನ್ ನ್ಯೂಸ್
23/09/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore