HOME
CINEMA NEWS
GALLERY
TV NEWS
REVIEWS
CONTACT US
ಭ್ರಮೆ, ವಾಸ್ತವದ ನಡುವೆ ಅಪ್ಪ, ಮಗಳ ಆಪ್ತತೆ
ಶಿವರುದ್ರಯ್ಯನಿಗೆ ಯಾವಾಗಲೂ ಮಗಳ ಚಿಂತೆ, ಎಚ್ಚರವಾಗಿದ್ದಾಗಲೂ, ಮಲಗಿದ್ದಾಗಲೂ ಅವಳಿಗೆ ತೊಂದರೆ, ಅಪಘಾತಕ್ಕೆ ತುತ್ತಾಗುವ ಕನಸು, ಭ್ರಮೆ ಬರುತ್ತಲೆ ಇರುತ್ತದೆ. ನಾನು ನೋಡಿದ್ದು ವಾಸ್ತವ, ಕನಸೋ ಎಂದು ಗೊಂದಲ್ಲಿದಲ್ಲಿ ಇರುತ್ತಾರೆ. ಇದನ್ನು ಅರಿತ ಮಗಳು ಡಾಕ್ಟರ್ ಬಳಿ ಕರೆದುಕೊಂಡು ಹೋಗುವ ಹೊತ್ತಿಗೆ ‘ತ್ರಯಂಭಕಂ’ ಚಿತ್ರದ ಕತೆಯು ವಿರಾಮದ ಹಂತಕ್ಕೆ ಬಂದಿರುತ್ತದೆ. ಒಂದು ಸನ್ನಿವೇಶದಲ್ಲಿ ಮಗಳೊಂದಿಗೆ ಸುಖವಾಗಿದ್ದರೆ, ಮತ್ತೋಂದು ಕಡೆ ಜೀಪ್ ಮೇಲೆ ಆತನ ಎದುರು ಅಪಘಾತದಿಂದ ಬೀಳುವುದು, ಶವದ ಮುಂದೆ ಕೂರುವುದು, ಆಸ್ಪತ್ರೆಯಲ್ಲಿ ಅಪ್ಪನಿಗೆ ಏನೋ ಹೇಳುವುದು. ಇವೆಲ್ಲವು ಒಂದರ ನಂತರ ಬರುತ್ತಾ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ. ಇದೆಲ್ಲಾ ಯಾತಕ್ಕೆ ಆಗುತ್ತಿದೆ, ಯಾವ ಕಾರಣಕ್ಕೆ, ಇದರ ಹಿಂದಿನ ಮರ್ಮವಾದರೂ ಏನು? ಎಂಬಂತಹ ಪ್ರಶ್ನೆಗಳಿಗೆ ನಿರ್ದೇಶಕರು ಕ್ಲೈಮಾಕ್ಸ್‍ದಲ್ಲಿ ಅರ್ಥವಾಗುವಂತೆ ದೃಶ್ಯಗಳನ್ನು ಅದ್ಬುತವಾಗಿ ಪೋಣಿಸಿರುವುದು ಕಂಡು ಬರುತ್ತದೆ. ಜೊತೆಗೊಂದು 5000 ವರ್ಷಗಳ ಹಿಂದೆ ಸಿದ್ದಪುರುಷಬೋಗರ್ ಕಂಡು ಹಿಡಿದಿರುವ ನವಪಾಷಣ ಉಪಕತೆಯು ಚಿತ್ರಕ್ಕೆ ಹೈಲೈಟ್ ಆಗಿದೆ. ಇದರಿಂದಲೇ ಎಲ್ಲಾ ಪಾತ್ರಗಳು ಲಿಂಕ್ ಕೊಡುತ್ತಾ ಹೋಗುತ್ತದೆ. ಇದನ್ನು ತಿಳಿದುಕೊಳ್ಳಬೇಕಾದರೆ ಚಿತ್ರಮಂದಿರಕ್ಕೆ ಭೇಟಿ ನೀಡಬೇಕು.

ಹದಿನಾಲ್ಕು ವರ್ಷದ ನಂತರ ಎರಡನೆ ಬಾರಿ ಬಣ್ಣ ಹಚ್ಚಿರುವ ನಾಯಕ ರಾಘವೇಂದ್ರರಾಜ್‍ಕುಮಾರ್ ಕಡಿಮೆ ಡೈಲಾಗ್‍ಗಳನ್ನು ಹೇಳುತ್ತಾ, ಕಣ್ಣಿನಲ್ಲೇ ಭಾವನೆಗಳನ್ನು ತೋರಿಸುತ್ತಾ ಜವಬ್ದಾರಿಯುತ ತಂದೆಯಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಗಮನ,ನಮನ ಅವಳಿ ಸಹೋದರಿಯಾಗಿ ಅನುಪಮಾಗೌಡ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡಂತೆ ಅದ್ಬುತವಾಗಿ ಅಭಿನಯಿಸಿರುವುದು ಪ್ಲಸ್‍ಪಾಯಿಂಟ್ ಆಗಿದೆ. ಆರ್.ಜೆ.ರೋಹಿತ್‍ಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಫಾರೋಮಿಸ್ಟಿಕ್ ಕಂಪೆನಿ ಮಾಲೀಕರಾಗಿ ಶಿವಮಣಿ, ಪುರಾತನ ಪ್ರಾಚ್ಯ ಇಲಾಖೆಯ ನಿರ್ದೇಶಕರಾಗಿ ಸುಂದರ್ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕತೆ,ಚಿತ್ರಕತೆ, ನಿರ್ದೇಶನ ಮಾಡಿರುವ ದಯಾಳ್‍ಪದ್ಮನಾಭನ್ ಅನಾವಶ್ಯಕವಾಗಿ ಮಾಸ್ ಚಿತ್ರದಂತೆ ಫೈಟ್ ತೋರಿಸದೆ, ಚಂದವಾಗಿ ಶುಭಂ ಕಾಣಿಸುವಲ್ಲಿ ಅವರ ಜಾಣ್ಮೆ, ಶ್ರಮವನ್ನು ನಿಜಕ್ಕೂ ಮಚ್ಚತಕ್ಕದ್ದು. ಇದಕ್ಕೆತಕ್ಕಂತೆ ತೂಕದ ಪದಗಳನ್ನು ಬರೆದಿರುವ ನವೀನ್‍ಕೃಷ್ಣ ಸಂಭಾಷಣೆಗೆ ಗಣೇಶ್‍ನಾರಾಯಣ್ ಸಂಗೀತ ಪೂರಕವಾಗಿದೆ. ಶೀರ್ಷಿಕೆ ಆಕರ್ಷಕವಾಗಿರುವಂತೆ ಸಿನಿಮಾವು ಒಮ್ಮೆ ನೋಡಬಹುದು.
ನಿರ್ಮಾಣ: ಫ್ಯೂಚನ್ ಎಂಟರ್‍ಟೈನ್‍ಮೆಂಟ್ ಫಿಲಿಂಸ್
ಸಿನಿ ಸರ್ಕಲ್.ಇನ್ ವಿಮರ್ಶೆ
****
21/04/19

ದೇವರು ಇದ್ದಾನೆ, ಆದರೆ ದೇವರ ಸಿನಿಮಾ ಆಗಿರುವುದಿಲ್ಲ
ನಿರ್ದೇಶಕ ದಯಾಳ್‍ಪದ್ಮನಾಬನ್ ಹೊಸ ಪ್ರಯತ್ನದ ‘ತ್ರಯಂಬಕಂ’ ಚಿತ್ರದ ಅಂತಿಮ ಸುದ್ದಿಗೋಷ್ಟಿಯಲ್ಲಿ ಮತ್ತಷ್ಟು ವಿಷಯಗಳು ಲಭ್ಯವಾದವು. ಆ ಕರಾಳ ರಾತ್ರಿ ಚಿತ್ರ ನೋಡಿ ಸಿನಿಮಾಮೋಹಿಗಳು ನಮಗೊಂದು ಚಿತ್ರ ಮಾಡಿಕೊಡಿ ಎಂದು ಕತೆ ನೀಡಿ ಕೋರಿಕೊಂಡರು. ಅದು ಹಲವು ಚಿತ್ರಗಳ ಪ್ರೇರಣೆ ಇದೆ ಎಂಬುದು ತಿಳಿಯುತು. ಕೊನೆಗೆ ನಿರ್ಮಾಪಕರ ಒಂದು ಲೈನ್ ತೆಗೆದುಕೊಂಡು ಅದಕ್ಕೆ ನನ್ನದೆ ಸ್ಟೈಲ್‍ದಲ್ಲಿ ಕತೆಯನ್ನು ಸಿದ್ದಪಡಿಸಲಾಯಿತು. ಇಪ್ಪತ್ತಮೂರು ದಿವಸದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ತಂತ್ರಜ್ಘರು ಉತ್ತಮವಾಗಿದ್ದರೆ ಸಿನಿಮಾದಲ್ಲಿ ಸಾಧಿಸಬಹುದೆಂದು ನಂಬಿದವನು. ಚಿತ್ರದಲ್ಲಿ ನವಪಾಷಣ ಎನ್ನುವ ಸನ್ನಿವೇಶವು ಬರುತ್ತದೆ. ಒಂಬತ್ತು ಪಾಷಣ ಸೇರಿ ಮಾಡಿದರೆ ಔಷದಿಯಾಗುತ್ತದೆ. ಇದನ್ನು ಐದು ಸಾವಿರ ವರ್ಷಗಳ ಹಿಂದೆ ಕಂಡುಹಿಡಿಯಲಾಗಿದೆ. ಎಲ್ಲಾ ರೋಗಕ್ಕೂ ಇದೊಂದೇ ಮದ್ದು ಆಗಿರುತ್ತದೆ. ಇದು ಈಗಿನ ಲೋಕಕ್ಕೆ ಬಂದಾಗ ಏನಾಗುತ್ತೆ ಎಂಬುದನ್ನು ಹೇಳಲಾಗಿದೆ. ಎರಡು ದಿವಸ ಮುಂಚಿತವಾಗಿ ಪತ್ರಕರ್ತರಿಗೆ ಸಿನಿಮಾ ತೋರಿಸುವುದಾಗಿ ನಿರ್ದೇಶಕರು ಹೇಳಿದರು.

ಇದಕ್ಕೂ ಮುನ್ನ ನಾಯಕಿ ಅನುಪಮಗೌಡ ಮಾತನಾಡುತ್ತಾ ರಾಘಣ್ಣನ ಮಗಳಾಗಿ ಕಾಣಸಿಕೊಂಡಿದ್ದೇನೆ. ಜಾಸ್ತಿ ಸಂಭಾಷಣೆ ಇರುವುದರಿಂದ ನಟಿಸಲು ಕಷ್ಟವಾಯಿತು. ಅಪ್ಪ-ಮಗಳ ಬಾಂದವ್ಯ, ಅದಕ್ಕೂ ಮೀರಿದ ಸಾಕಷ್ಟು ವಿಷಯಗಳು ಇದೆ ಎಂದರು. ದೇವರು ಇದ್ದಾನೆ. ಆದರೆ ದೇವರ ಸಿನಿಮಾ ಆಗಿರುವುದಿಲ್ಲವೆಂದು ಶಿವಮಣಿ ಬಣ್ಣನೆ ಮಾಡಿದ್ದರು. ಶೇಕಡ ಎಂಬತ್ತರಷ್ಟು ಸಿತಾರ್ ವಾದ್ಯದಲ್ಲಿ ಹಿನ್ನಲೆ ಸಂಗೀತ ಮಾಡಲಾಗಿದೆ. ಎರಡನೆ ಪ್ರಯತ್ನ ಎನ್ನುವಂತೆ ಯಶ್‍ವಂತ್ ಸಿನಿಮಾದಲ್ಲಿ ಇರುವ ‘ಮೊದ ಮೊದಲು ಭೂಮಿಗಿಳಿದ’ ಹಾಡಿಗೆ ಬಾಯಿ ಮೂಲಕ ಬರುವ ಸಂಗೀತವನ್ನು ಬಳಸಲಾಗಿದೆ ಎಂದು ಆರ್.ಎಸ್.ಗಣೇಶ್‍ನಾರಾಯಣ್ ತಿಳಿಸಿದರು.

ರಾಘಣ್ಣನ ಕಣ್ಣುಗಳು, ರೋಹಿತ್ ಧ್ವನಿ, ಅನುಪಮಾಗೌಡ ರಾಕ್ಷಸ ರೀತಿಯ ನಟನೆಯಿಂದ ಚಿತ್ರಕ್ಕೆ ಮೆರುಗು ತಂದಿದೆ ಎನ್ನುವುದು ಸಂಭಾಷಣೆಗೆ ಮಾತುಗಳನ್ನು ಪೋಣಿಸಿರುವ ನವೀನ್‍ಕೃಷ್ಣ ಅವರದಾಗಿತ್ತು. ನಾನು ನಟಿಸಿದ್ದೇನೆ ಎನ್ನುವುದರ ಬದಲಾಗಿ ದಯಾಳ್ ಸಿನಿಮಾದಲ್ಲಿ ರಾಘಣ್ಣ ಇದ್ದಾರೆ ಅಂತ ಹೇಳಬಹುದೆಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ರಾಘವೇಂದ್ರರಾಜ್‍ಕುಮಾರ್ ಪೂರ್ಣ ಕ್ರೆಡಿಟ್‍ನ್ನು ನಿರ್ದೇಶಕರಿಗೆ ವರ್ಗಾವಣೆ ಮಾಡಿದರು. ತನಿಖಾದಿಕಾರಿ ಪಾತ್ರ ಎಂಬುದು ನಾಯಕ ಆರ್.ಜೆ.ರೋಹಿತ್ ಉಕ್ತಿ. ರಾಘಣ್ಣನ ತಂಗಿಯಾಗಿ ನಟಿಸಿರುವ ಶೃತಿ, ನಿರ್ಮಾಪಕರಲ್ಲಿ ಒಬ್ಬರಾದ ಸಂದೀಪ್, ಸಹ ನಿರ್ಮಾಪಕ ಅವಿನಾಶ್, ಸಂಕಲನಕಾರ ಸುನಿಲ್‍ಕಶ್ಯಪ್ ಉಪಸ್ತಿತರಿದ್ದರು. ಏಪ್ರಿಲ್ ಮೂರನೆ ವಾರದಂದು ಸಿನಿಮಾವು ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/04/19
ಏಪ್ರಿಲ್ 19ರಂದು `ತ್ರಯಂಬಕಂ' ಚಿತ್ರ ತೆರೆಗೆ
¥sóÀÇ್ಯಚರ್ ಎಂಟರ್‍ಟೈನ್‍ಮೆಂಟ್ ನಿರ್ಮಾಣದ `ತ್ರಯಂಬಕಂ` ಚಿತ್ರ ಏಪ್ರಿಲ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಾಘವೇಂದ್ರ ರಾಜಕುಮಾರ್, ರೋಹಿತ್, ಅನುಪಮ ಗೌಡ ಇದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಬಿ.ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನ ಹಾಗೂ ವೆಂಕಟ್ ದೇವ್ ಅವರ ಸಹ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಫಣೀಶ್ ರಾಜ, ಸಂತೋಷ್ ನಾಯಕ್, ಅಭಿ ಕನಸಿನ ಕವನ ರಚಿಸಿದ್ದಾರೆ. ಸಂಭಾಷಣೆಯನ್ನು ನವೀನ್‍ಕೃಷ್ಣ ಬರೆದಿದ್ದಾರೆ.
14/03/19

ಮಾರ್ಚ್ 29ರಂದು `ತ್ರಯಂಬಕಂ' ಚಿತ್ರ ತೆರೆಗೆ
¥sóÀÇ್ಯಚರ್ ಎಂಟರ್‍ಟೈನ್‍ಮೆಂಟ್ ನಿರ್ಮಾಣದ `ತ್ರಯಂಬಕಂ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಮಾರ್ಚ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ದಯಾಳ್ ಪದ್ಮನಾಭನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರಾಘವೇಂದ್ರ ರಾಜಕುಮಾರ್, ರೋಹಿತ್, ಅನುಪಮ ಗೌಡ ಇದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಗಣೇಶ್ ನಾರಾಯಣನ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಬಿ.ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನ ಹಾಗೂ ವೆಂಕಟ್ ದೇವ್ ಅವರ ಸಹ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಫಣೀಶ್ ರಾಜ, ಸಂತೋಷ್ ನಾಯಕ್, ಅಭಿ ಕನಸಿನ ಕವನ ರಚಿಸಿದ್ದಾರೆ. ಸಂಭಾಷಣೆಯನ್ನು ನವೀನ್‍ಕೃಷ್ಣ ಬರೆದಿದ್ದಾರೆ.
7/03/19

ಪುನೀತ್ ಬಿಡುಗಡೆ ಮಾಡಿದ ತ್ರಯಂಬಕಂ ಟ್ರೈಲರ್
ಐತಿಹಾಸಿಕ, ಪೌರಾಣಿಕ ಮಿಶ್ರಣದ ಕತೆ ಹೊಂದಿರುವ ‘ತ್ರಯಂಬಕಂ’ ಚಿತ್ರದ ಟ್ರೈಲರ್‍ನ್ನು ಡಮರುಗ ಬಡಿಯುವುದರೊಂದಿಗೆ ಪುನೀತ್ ರಾಜ್‍ಕುಮಾರ್ ಬಿಡುಗಡೆ ಮಾಡಿದರು. ನಂತರ ಮಾತನಾಡಿ ತುಣುಕುಗಳನ್ನು ನೋಡಿದ್ದೇನೆ. ಚೆನ್ನಾಗಿ ಬಂದಿದೆ. ಎಲ್ಲಾಕ್ಕಿಂತ ಹೆಚ್ಚಾಗಿ ರಾಘಣ್ಣ ಎರಡನೆ ಚಿತ್ರ ಬಿಡುಗಡೆ ಆಗುತ್ತಿರುವುದು ಸಂತಸ ತಂದಿದೆ. ಶಿವಣ್ಣ,ರಾಘಣ್ಣ ಇಬ್ಬರು ನನಗೆ ಪಿಲ್ಲರ್‍ಗಳು ಇದ್ದಂತೆ. ರಾಘಣ್ಣ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ಹೆದರಿದ್ದವು. ಅದೆಲ್ಲವನ್ನು ಎದುರಿಸಿ ಮತ್ತೆ ಬಣ್ಣ ಹಚ್ಚಿದ್ದಾರೆ. ಹೀಗೆ ಚಿತ್ರರಂಗದಲ್ಲಿ ಬ್ಯುಸಿ ಇರಲಿ ಎಂದರು.

ನಾಯಕ, ನಾಯಕಿ ಇರದೆ, ಚಿತ್ರವೇ ಮುಖ್ಯವಾಗಿದೆ. ಅನುಪಮಾಗೌಡ ಮಗಳಾಗಿ, ಇದರೊಂದಿಗೆ ರೋಹಿತ್ ಇದ್ದಾರೆ. ಡಬ್ಬಿಂಗ್ ಮಾಡುವಾಗ ಅನುಪಮಾ ನಟನೆ ನೋಡಿ ಅವರ ಅಭಿಮಾನಿಯಾಗಿದ್ದೇನೆ. ತಂಡದಲ್ಲಿ ನಾನು ಇದ್ದೇನೆಂದು ಖುಷಿಯಾಗಿದೆ. ನಿರ್ಮಾಪಕರಿಗೆ ಸಿನಿಮಾವಾದರೆ, ನನಗೆ ಪ್ರಸಾದ ಎಂದು ರಾಘವೇಂದ್ರರಾಜ್‍ಕುಮಾರ್ ಹೇಳಿದರು. ನವೆಂಬರ್‍ದಲ್ಲಿ ಶುರುಮಾಡಿದ ಸಿನಿಮಾವನ್ನು 24 ದಿನಗಳ ಕಾಲ ಚಿತ್ರೀಕರಣ ಮಾಡಿದ್ದು ನನ್ನ ಇಮೇಜ್‍ಗೆ ಜಾಸ್ತಿಯಾಗಿದೆ. ನಿರ್ಮಾಪಕರು ಒಂದು ಕತೆ ಬರೆದುಕೊಂಡು ಕೊಟ್ಟಾಗ ಅದರಲ್ಲಿ ಇಂಗ್ಲೀಷ್ ಚಿತ್ರವೊಂದರ ಪ್ರೇರಣೆ ಇದೆ ಎಂಬುದು ತಿಳಿದುಬಂತು. ಅದಕ್ಕೆ ಮಾಡಲು ಸಿದ್ದನಿಲ್ಲ. ಬೇಕಿದ್ದರೆ ಸ್ವಲ್ಪ ಬದಲಾವಣೆ ಮಾಡಲು ಅನುಮತಿ ನೀಡದರೆ ನಿರ್ದೇಶನ ಮಾಡುವುದಾಗಿ ಹೇಳಲಾಯಿತು. ಅದರಂತೆ ಒಪ್ಪಿಕೊಂಡಿದ್ದು ಇಲ್ಲಿವರೆಗೂ ಬಂದಿದೆ. ಐತಿಹಾಸಿಕ, ಪೌರಾಣಿಕ ಕತೆಯನ್ನು ಎರಡು ಮಿಶ್ರಣ ಮಾಡಲಾಗಿದೆ. ಹೊಸದು ಎನ್ನುವಂತೆ ಶಿವಲಿಂಗ, ನವಪಾಶಣದ ಬಗ್ಗೆ ಹೇಳಲಾಗಿದೆ. ಯಾವುದೇ ಚಿತ್ರ ಮಾಡಬೇಕಾದರೂ ನಿರ್ಮಾಪಕ ಹಿತದೃಷ್ಟಿಯಿಂದ ಮೊದಲು ಅವರು ಸೇಫ್ ಆಗಬೇಕೆಂದು ನೋಡಿಕೊಳ್ಳುವುದು ಬಹು ಮುಖ್ಯವಾಗಿದೆ ಎಂಬುದು ನಿರ್ದೇಶಕ ದಯಾಳ್‍ಪದ್ಮನಾಭನ್ ಮಾತಾಗಿತ್ತು. ಸಂಗೀತ ನಿರ್ದೇಶಕ ಗಣೇಶ್‍ನಾರಾಯಣ್, ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಬಾ.ಮಾ.ಹರೀಶ್, ಶಿವಮಣಿ, ರೋಹಿತ್, ಸಂಭಾಷನೆ ಬರೆದಿರುವ ನವೀನ್‍ಕೃಷ್ಣ ಉಪಸ್ತಿತರಿದ್ದು ಚುಟುಕು ಮಾತನಾಡಿದರು.
ಸಿನಿ ಸರ್ಕಲ್.ಇನ್ ನ್ಯೂಸ್
25/02/19
ಶಿವನ ಮೂರನೇ ಕಣ್ಣು ತ್ರಯಂಬಕಂ
‘ಆ ಕರಾಳ ರಾತ್ರಿ’ ಹಿಟ್ ಚಿತ್ರ ನಿರ್ದೇಶನ ಮಾಡಿರುವ ದಯಾಳ್‍ಪದ್ಮನಾಭನ್ ಅವರ ‘ಪುಟ 109’ ಮುಂದಿನ ದಿನಗಳಲ್ಲಿ ತೆರೆಕಾಣಲಿದೆ. ಎರಡು ರೀತಿಯ ವಿಭಿನ್ನ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕರು ಈ ಬಾರಿ ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೂಲತ: ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು ನೋಡುತ್ತಿರುತ್ತಾರೆ. ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು ತೆಗೆದುಕೊಂಡು ಹೋಗುತ್ತದೆ. ನೋಡುಗನಿಗೆ ಪ್ರತಿ ಸೆಕೆಂಡ್ ಕುತೂಹಲ ಮೂಡಿಸುವಂತೆ ದೃಶ್ಯಗಳು ಮೂಡಿಬರಲಿದೆ. ಬೆಂಗಳೂರು, ಕೊಯಮತ್ತೂರು, ಮಂಗಳೂರು, ಅಂತರಗಂಗೆ, ಕೋಲಾರ, ನಂದಿಬೆಟ್ಟ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಪಣೀಶ್‍ರಾಜ್ ಸಾಹಿತ್ಯದ ಹಾಡುಗಳಿಗೆ ಗಣೇಶ್‍ನಾರಾಯಣ್ ಸಂಗೀತವಿದೆ. ಕತೆಗೆ ಪೂರಕವಾಗಿ ಸತ್ಯ ಇರುವಂತೆ ಡೈಲಾಗ್‍ಗಳು ಬರಲೆಂದು ನಿರ್ದೇಶಕರೊಂದಿಗೆ ಇದರ ಕುರಿತಂತೆ ಆರೋಗ್ಯಕರ ಹೋರಾಟ ನಡೆಸಿ ಸಂಭಾಷಣೆ ಬರೆದಿರುವುದು ನವೀನ್‍ಕೃಷ್ಣ. ಇಬ್ಬರ ಕಾಂಬಿನೇಷನ್‍ನಲ್ಲಿ 6ನೇ ಚಿತ್ರವಾಗಿದೆ.

ಹದಿನೈದು ವರ್ಷಗಳ ನಂತರ ಅಮ್ಮನ ಮನೆಯಲ್ಲಿ ನಟಿಸಿದ್ದ ರಾಘವೇಂದ್ರರಾಜ್‍ಕುಮಾರ್ ಜವಬ್ದಾರಿಯುತ ತಂದೆಯಾಗಿ ಮಗಳನ್ನು ರಕ್ಷಣೆ ಮಾಡುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುದ್ದಿನ ಮಗಳಾಗಿ ಅಪ್ಪನನ್ನು ನೋಡಿಕೊಳ್ಳುವ ಅನುಪಮಾಗೌಡ ಅವರಿಗೆ ಎರಡನೆ ಚಿತ್ರವಾಗಿದೆ. ಬಕಾಸುರ ನಂತರ ಬಣ್ಣ ಹಚ್ಚುತ್ತಿರುವ ಆರ್.ಜೆ.ರೋಹಿತ್ ಮೂರನೆ ವ್ಯಕ್ತಿಯಾಗಿ ಕಾಣಸಿಕೊಳ್ಳುತ್ತಿದ್ದಾರೆ. ಪ್ಯಾರಮೆಡಿಕಲ್ ಕಂಪೆನಿ ಮಾಲೀಕನಾಗಿ ಶಿವಮಣಿ, ಸಾಹಸ ನಿರ್ದೇಶಕ ಜಾಲಿಬಾಸ್ಟಿನ್ ಪುತ್ರ ಅಮಿತ್ ಚಾಲಕನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಸನ್ನಿವೇಶದಲ್ಲಿ ಈಜು, ಆಕ್ಷ್ಯನ್ ಇರುವ ಕಾರಣ ಪಾತ್ರಕ್ಕೆ ಇವರು ಆಯ್ಕೆಯಾಗಿದ್ದಾರೆ. ನಿರ್ದೇಶಕರ ಹಿಂದಿನ ಚಿತ್ರವನ್ನು ನೋಡಿರುವ ಐದು ಸಮಾನ ಮನಸ್ಕರ ಸಿನಿಮಾ ಮೋಹಿಗಳು ಫ್ಯೂಚರ್ ಎಂಟರ್‍ಟೈನ್‍ಮೆಂಟ್ ಸಂಸ್ಥೆಯ ಮೂಲಕ ಹಣ ಹೂಡುತ್ತಿದ್ದಾರೆ. ಇದರಲ್ಲಿ ಮೂವರು ವಿದೇಶದಲ್ಲಿ ನೆಲಸಿದ್ದು, ಇಬ್ಬರು ಭಾರತದವರಾಗಿದ್ದಾರೆ. ಇದರ ಉಸಾಬರಿಯನ್ನು ಹೊತ್ತು ಕೊಂಡಿರುವುದು ಸಂದೀಪ್. ಮೂವರು ದೇವರಿಗೆ ನಮಸ್ಕರಿಸುವ ಮೊದಲ ದೃಶ್ಯಕ್ಕೆ ಪುನೀತ್‍ರಾಜ್‍ಕುಮಾರ್ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ವಾಣಿಜ್ಯ ಮಂಡಳಿಯ ಪದಾದಿಕಾರಿಗಳು, ಸಿನಿಪಂಡಿತರು ಹಾಜರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/11/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore