HOME
CINEMA NEWS
GALLERY
TV NEWS
REVIEWS
CONTACT US
ಮೂವರು ಹುಡುಗರ ಮೋಜು,ಮಸ್ತಿ ಮತ್ತು ಅವಘಡಗಳು
‘ತ್ರಯ’ ಚಿತ್ರವು ಮೂರು ಹುಡುಗರ ಕತೆಯಾಗಿದೆ. ಅವರುಗಳು ಶ್ರೀಮಂತರು. ಗಾಡಿ, ಬಾಡಿಗೆ ಎಣ್ಣೆ ಹಾಕಿಸಲು ಚಿಂತೆ ಇಲ್ಲ. ಇವರೊಂದಿಗೆ ತ್ರಿಮೂರ್ತಿ ನಾಯಕಿಯರು. ಹೀಗೆ ಮೋಜು ಮಾಡುವಾಗ ಹುಡುಗರು ಕಷ್ಟಕ್ಕೆ ಸಿಲುಕುತ್ತಾರೆ. ಇದರಿಂದ ಸಿಕ್ಕಿಹಾಕಿಕೊಂಡು ನಂತರ ಹೇಗೆ ಹೊರಗೆ ಬರುತ್ತಾರೆಂಬುದೇ ಒಂದು ಏಳೆಯ ಸಾರಾಂಶವಾಗಿದೆ. ಬಿಂದಾಸ್ ಜೀವನ ಮಾಡಿಕೊಂಡಿರುವ ಅಮೋಘ್,ರಾಹುಲ್, ಶಂಕರ್‍ಶ್ರೀಹರಿ ಹಾಗೂ ಮದನ್‍ಗೌಡ ಇವರಿಗೆ ಸಾಥ್ ನೀಡಲು ನಿಮಿಷ, ರಜನಿಭಾರದ್ವಾಜ್ ಮತ್ತು ನೀತುಬಾಲ. ಇವರುಗಳು ಶ್ರೀಮಂತರ ಮಕ್ಕಳನ್ನೇ ಗುರುಯಾಗಿಟ್ಟುಕೊಂಡು ಅವರಿಂದ ಹಣ ವಸೂಲು ಮಾಡುವುದಕ್ಕೆ ಪೋಲೀಸರಿಂದ ಸಹಾಯ ಪಡೆದುಕೊಂಡು ಖೆಡ್ಡವೊಂದನ್ನು ತೋಡುತ್ತಾರೆ. ಆ ಖೆಡ್ಡಾದಲ್ಲಿ ತಾವಾಗಿಯೇ ಬಂದು ತಮಗೆ ಗೊತ್ತಿಲ್ಲದ ಹಾಗೆ ಮಿಕಗಳಾಗುತ್ತಾರೆ. ಹೀಗೆ ಮಿಕ ಮಾಡುವುದು ಮತ್ತು ಮಿಕ ಆಗುವುದರ ನಡುವಲ್ಲಿ ಕುತೂಹಲ ಅಂಶಗಳನ್ನು ಸೇರಿಸಿ ನೋಡುಗನಿಗೆ ತಣಿಸುವ ಪ್ರಯತ್ನ ಮಾಡಲಾಗಿದೆ.

ಇವರಿಗೆ ಬಕ್ರಾ ಮಾಡಲು ಮತ್ತೋಬ್ಬ ಕಾದು ಕುಳಿತಿದ್ದಾನೆ. ಅವನು ತನ್ನ ಆಟವನ್ನು ಮುಂದಿನ ಭಾಗದಲ್ಲಿ ತೋರಿಸುವುದರಿಂದ ಭಾಗ-2 ಬರುವ ಸೂಚನೆಯನ್ನು ನಿರ್ದೇಶಕರು ಕೊನೆಯಲ್ಲಿ ಹೇಳಿದ್ದಾರೆ. ಕೃಷ್ಣಸಾಯಿ ತಮಿಳು, ತೆಲುಗು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದು, ಕನ್ನಡದಲ್ಲಿ ಮೊದಲ ಚಿತ್ರವಾಗಿದೆ. ಉಳಿದಂತೆ ತಾರಗಣದಲ್ಲಿ ಸಂಯುಕ್ತಹೂರನಾಡು, ವಿಜಯ್‍ಚಂಡೂರ್, ಕೃಷ್ಣಹೆಬ್ಬಾಳೆ, ಮನ್‍ದೀಪ್‍ರಾಯ್ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಯತೀಶ್‍ಮಹದೇವ್ ಸಂಗೀತವು ಅಲ್ಲಲ್ಲಿ ಕೆಲಸ ಮಾಡಿದೆ. ಇದಕ್ಕೆ ಪೂರಕವಾಗಿ ಆರ್.ಕೆ.ಪ್ರತಾಪ್ ಛಾಯಾಗ್ರಹಣ, ವೆಂಕಟರಮಣನ್ ಸಂಕಲನ ಸೂಕ್ತವಾಗಿದೆ. ಹುಡುಗರ ತುಂಟಾಟವನ್ನು ಇಷ್ಟಪಡುವವರು ತ್ರಯ ಮೋಸ ಮಾಡುವುದಿಲ್ಲ.
ನಿರ್ಮಾಣ: ಕೌಶಲ್‍ಮಹಾಜನ್,ರಾಜೇಂದ್ರನ್
ಸಿನಿ ಸರ್ಕಲ್.ಇನ್ ವಿಮರ್ಶೆ
***
10/05/19

ತ್ರಯ ಬಿಡುಗಡೆಗೆ ಸಿದ್ದ
ಮರ್ಡರ್ ಮಿಸ್ಟರ್ ಕುರಿತಾದ ‘ತ್ರಯ’ ಚಿತ್ರದ ಕತೆಯು ಮೂವರ ಹುಡುಗರದಾಗಿದೆ. ಒಬ್ಬನಿಗೆ ಅಪ್ಪ ಮಾಡಿದ ದುಡ್ಡು ಸಾಕಷ್ಟು ಇರುತ್ತದೆ. ಅದನ್ನು ಹೇಗೆ ಖರ್ಚು ಮಾಡುವುದೆಂದು ತಿಳಿದಿರುವುದಿಲ್ಲ. ಅದಕ್ಕಾಗಿ ಗೆಳಯರೊಂದಿಗೆ ಪುಂಡಾಟಗಳನ್ನು ಮಾಡಿಕೊಂಡಿರುತ್ತಾನೆ. ಎರಡನೆಯವನು ಅದೇ ತರಹ ಗುಣವುಳ್ಳವನು. ಕೊನೆಯವ ಆರ್‍ಡಿ ಕಾರು ಮಾಲೀಕ. ಮೂವರು ಸುತ್ತಾಡುತ್ತಾ, ಮಜಾ ಮಾಡುವುದೇ ಬದುಕು ಅಂದುಕೊಂಡಿರುತ್ತಾರೆ. ಈ ಪೈಕಿ ಒಬ್ಬನಿಗೆ ಹುಡುಗಿ ಸಿಗುತ್ತಾಳೆ. ಇಲ್ಲಿಂದ ದಾರಿ ಎಲ್ಲಿಗೊ ಕರೆದುಕೊಂಡು ಹೋಗುತ್ತದೆ. ಕಾಲಿವುಡ್‍ನ ಕೃಷ್ಣಸಾಯ್ ಮೊದಲಬಾರಿ ಕತೆ,ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಶ್ವಿನ್‍ಕಾರ್ತಿಕ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ಟಾಲಿವುಡ್‍ನ ಯತೀಶ್‍ಮಹದೇವ್ ಸಂಗೀತ ಸಂಯೋಜನೆ ಇದೆ. ಅಮೋಘ್‍ರಾಹುಲ್, ಶಂಕರ್ ಹಾಗೂ ಮದನ್ ನಾಯಕರುಗಳು. ಸಂಯುಕ್ತಹೊರನಾಡು, ರಜನಿಭರದ್ವಾಜ್ ಮತ್ತು ನೀತುಬಾಲ ನಾಯಕಿಯರು. ಉಳಿದಂತೆ ಪೋಲಿಸ್ ಅಧಿಕಾರಿಯಾಗಿ ಕೃಷ್ಣ, ಟೆನಿಸ್‍ಕೃಷ್ಣ, ವಿಜಯ್‍ಚೆಂಡೂರ್ ಮುಂತಾದವರ ತಾರಗಣವಿದೆ.

ದುಬೈ ಮೂಲದ ಕೌಶಲ್‍ಮಹಾಜನ್ ನಿರ್ಮಾಣ ಮಾಡಿರುವ ಚಿತ್ರವು ಇದೇ ಶುಕ್ರವಾರದಂದು ಸುಮಾರು ಮೂವತ್ತೈದು ಕೇಂದ್ರಗಳಲ್ಲಿ ತೆರೆಗೆ ಬರಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
4/05/19

ಏಪ್ರಿಲ್ ಒಂದರಂದು ತ್ರಯ ಟ್ರೈಲರ್ ಬಿಡುಗಡೆ
ಮರ್ಡರ್ ಮಿಸ್ಟರ್ ಕುರಿತಾದ ‘ತ್ರಯ’ ಚಿತ್ರದ ಕತೆಯು ಮೂವರ ಹುಡುಗರದಾಗಿದೆ. ಒಬ್ಬನಿಗೆ ಅಪ್ಪ ಮಾಡಿದ ದುಡ್ಡು ಸಾಕಷ್ಟು ಇರುತ್ತದೆ. ಅದನ್ನು ಹೇಗೆ ಖರ್ಚು ಮಾಡುವುದೆಂದು ತಿಳಿದಿರುವುದಿಲ್ಲ. ಅದಕ್ಕಾಗಿ ಗೆಳಯರೊಂದಿಗೆ ಪುಂಡಾಟಗಳನ್ನು ಮಾಡಿಕೊಂಡಿರುತ್ತಾನೆ. ಎರಡನೆಯವನು ಅದೇ ತರಹ ಗುಣವುಳ್ಳವನು. ಕೊನೆಯವ ಆರ್‍ಡಿ ಕಾರು ಮಾಲೀಕ. ಮೂವರು ಸುತ್ತಾಡುತ್ತಾ, ಮಜಾ ಮಾಡುವುದೇ ಬದುಕು ಅಂದುಕೊಂಡಿರುತ್ತಾರೆ. ಈ ಪೈಕಿ ಒಬ್ಬನಿಗೆ ಹುಡುಗಿ ಸಿಗುತ್ತಾಳೆ. ಇಲ್ಲಿಂದ ದಾರಿ ಎಲ್ಲಿಗೊ ಕರೆದುಕೊಂಡು ಹೋಗುತ್ತದೆ. ಕಾಲಿವುಡ್‍ನ ಕೃಷ್ಣಸಾಯ್ ಮೊದಲಬಾರಿ ಕತೆ,ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಶ್ವಿನ್‍ಕಾರ್ತಿಕ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ಟಾಲಿವುಡ್‍ನ ಯತೀಶ್‍ಮಹದೇವ್ ಸಂಗೀತ ಸಂಯೋಜನೆ ಇದೆ. ಅಮೋಘ್‍ರಾಹುಲ್, ಶಂಕರ್ ಹಾಗೂ ಮದನ್ ನಾಯಕರುಗಳು. ಸಂಯುಕ್ತಹೊರನಾಡು, ರಜನಿಭರದ್ವಾಜ್ ಮತ್ತು ನೀತುಬಾಲ ನಾಯಕಿಯರು. ಉಳಿದಂತೆ ಪೋಲಿಸ್ ಅಧಿಕಾರಿಯಾಗಿ ಕೃಷ್ಣ, ಟೆನಿಸ್‍ಕೃಷ್ಣ, ವಿಜಯ್‍ಚೆಂಡೂರ್ ಮುಂತಾದವರ ತಾರಗಣವಿದೆ.

ದುಬೈ ಮೂಲದ ಕೌಶಲ್‍ಮಹಾಜನ್ ನಿರ್ಮಾಣ ಮಾಡಿರುವ ಚಿತ್ರದ ಮೊದಲ ಟ್ರೈಲರ್ ಮೂರ್ಖರ ದಿನದಂದು ಬಿಡುಗಡೆಯಾಗಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
2/04/19
ಮರ್ಡರ್ ಕುರಿತಾದ ತ್ರಯ
ಮರ್ಡರ್ ಮಿಸ್ಟರ್ ಕುರಿತಾದ ‘ತ್ರಯ’ ಚಿತ್ರದ ಕತೆಯು ಮೂವರ ಹುಡುಗರದಾಗಿದೆ. ಒಬ್ಬನಿಗೆ ಅಪ್ಪ ಮಾಡಿದ ದುಡ್ಡು ಸಾಕಷ್ಟು ಇರುತ್ತದೆ. ಅದನ್ನು ಹೇಗೆ ಖರ್ಚು ಮಾಡುವುದೆಂದು ತಿಳಿದಿರುವುದಿಲ್ಲ. ಅದಕ್ಕಾಗಿ ಗೆಳಯರೊಂದಿಗೆ ಪುಂಡಾಟಗಳನ್ನು ಮಾಡಿಕೊಂಡಿರುತ್ತಾನೆ. ಎರಡನೆಯವನು ಅದೇ ತರಹ ಗುಣವುಳ್ಳವನು. ಕೊನೆಯವ ಆರ್‍ಡಿ ಕಾರು ಮಾಲೀಕ. ಮೂವರು ಸುತ್ತಾಡುತ್ತಾ, ಮಜಾ ಮಾಡುವುದೇ ಬದುಕು ಅಂದುಕೊಂಡಿರುತ್ತಾರೆ. ಈ ಪೈಕಿ ಒಬ್ಬನಿಗೆ ಹುಡುಗಿ ಸಿಗುತ್ತಾಳೆ. ಇಲ್ಲಿಂದ ದಾರಿ ಎಲ್ಲಿಗೊ ಕರೆದುಕೊಂಡು ಹೋಗುತ್ತದೆ. ಕಾಲಿವುಡ್‍ನ ಕೃಷ್ಣಸಾಯ್ ಮೊದಲಬಾರಿ ಕತೆ,ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಶ್ವಿನ್‍ಕಾರ್ತಿಕ್ ಸಾಹಿತ್ಯದ ನಾಲ್ಕು ಗೀತೆಗಳಿಗೆ ಟಾಲಿವುಡ್‍ನ ಯತೀಶ್‍ಮಹದೇವ್ ಸಂಗೀತ ಸಂಯೋಜನೆ ಇದೆ. ಅಮೋಘ್‍ರಾಹುಲ್, ಶಂಕರ್ ಹಾಗೂ ಮದನ್ ನಾಯಕರುಗಳು. ಸಂಯುಕ್ತಹೊರನಾಡು, ರಜನಿಭರದ್ವಾಜ್ ಮತ್ತು ನೀತುಬಾಲ ನಾಯಕಿಯರು. ಉಳಿದಂತೆ ಪೋಲಿಸ್ ಅಧಿಕಾರಿಯಾಗಿ ಕೃಷ್ಣ, ಟೆನಿಸ್‍ಕೃಷ್ಣ, ವಿಜಯ್‍ಚೆಂಡೂರ್ ಮುಂತಾದವರ ತಾರಗಣವಿದೆ.

ಧ್ವನಿಸಾಂದ್ರಿಕೆ ಲೋಕಾರ್ಪಣೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾತನಾಡಿ ಇತ್ತೀಚೆಗೆ ಚಿತ್ರರಂಗಕ್ಕೆ ಆಸಕ್ತಿ ಇರುವ ವಿದ್ಯಾವಂತರು ಬರುತ್ತಿದ್ದಾರೆ. ಅದೇ ರೀತಿಯಲ್ಲಿ ಗುಣಮಟ್ಟದ ಸಿನಿಮಾಗಳು ಬರಬೇಕು. ಉದ್ಯಮ ಉಳಿಬೇಕು, ಅಭಿವೃದ್ದಿಗೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಚಿತ್ರರಂಗಕ್ಕೆ ಬಂದು ನಲವತ್ತು ವರ್ಷ ಆಯ್ತು. ಸಾಕಷ್ಟು ಚಿತ್ರಗಳಲ್ಲಿ ಪೇದೆಯಾಗಿ ಕಾಣಿಸಿಕೊಂಡಿದ್ದೇನೆ. ಇದರಲ್ಲೂ ಹೆಡ್‍ಕಾನ್ಸ್‍ಟೇಬಲ್ ಸೇವೆ. ತನಿಖೆ ನಡೆಸುವಾಗ ಹಾಸ್ಯವನ್ನು ಸೃಷ್ಟಿಸುತ್ತೇನೆಂದು ಮನ್‍ದೀಪ್‍ರಾಯ್ ಚುಟುಕಾಗಿ ಹೇಳಿದರು.
ಆನಂದ್ ಆಡಿಯೋದ ಆನಂದ್, ಅನಿರುದ್ದ್ ತಂಡಕ್ಕೆ ಒಳ್ಳೆಯದಾಗಲೆಂದು ಶುಭಹಾರೈಸಿದರು. ಸಂಗೀತ ನಿರ್ದೇಶಕ ವೀರಸಮರ್ಥ್ ಗಾಯಕಿ ರೇಖಾಪಲ್ಲಟ್ ಹಾಡನ್ನು ಮೆಚ್ಚಿಕೊಂಡು ಗುರುಗಳಾದ ರವೀಂದ್ರಜೈನ್ ಅವರನ್ನು ನೆನಸಿಕೊಂಡರು. ದುಬೈ ಮೂಲದ ಕೌಶಲ್‍ಮಹಾಜನ್ ಕನ್ನಡ ಭಾಷೆಯ ಅಭಿಮಾನದಿಂದ ಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
20/03/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore