HOME
CINEMA NEWS
GALLERY
TV NEWS
REVIEWS
CONTACT US
ಯೋಗಾಸನದ ಒಂದು ಭಂಗಿ ಸಿನಿಮಾದ ಶೀರ್ಷಿಕೆ
ಸ್ಯಾಂಡಲ್‍ವುಡ್‍ನಲ್ಲಿ ಜನರ ಗಮನ ಸೆಳೆಯಲು ಸಂಸ್ಕತ, ಇಂಗ್ಲೀಷ್, ಹಳೆಗನ್ನಡ ಪದಗಳನ್ನು ಟೈಟಲ್‍ಗೆ ಬಳಸುತ್ತಾರೆ. ಮೊದಲಬಾರಿ ಎನ್ನುವಂತೆ ಯೋಗಾಸನದ ಒಂದು ಭಂಗಿಯ ಹೆಸರನ್ನು ಚಿತ್ರದ ಶೀರ್ಷಿಕೆಗೆ ಇಡಲಾಗಿದೆ. ಅದುವೇ ‘ತ್ರಾಟಕ’. ಯೋಗದಲ್ಲಿ ಏಕಾಗ್ರತೆಯಿಂದ ಧ್ಯಾನ ಮಾಡಿದಲ್ಲಿ ಮನುಷ್ಯನ ಮನಸ್ಸು, ಬುದ್ದಿಯು ಹತೋಟಿಗೆ ಬರುತ್ತದಂತೆ. ಇದನ್ನು ಮೂರನೇ ಕಣ್ಣು ಎಂದು ಕರೆಯುವುದುಂಟು. ಸಿನಿಮಾದಲ್ಲಿ ಪೋಲೀಸ್ ಆಧಿಕಾರಿಯು ಅಪರಾಧಿಗಳನ್ನು ಹುಡುಕುವ ಸಂದರ್ಭದಲ್ಲಿ ಸಮಸ್ಯೆಗಳು ಬರುತ್ತವೆ, ಮುಂದೆ ತ್ರಾಟಕದಿಂದ ಎಲ್ಲವನ್ನು ಪರಿಹರಿಸಿಕೊಂಡು, ಚಮತ್ಕಾರದಿಂದ ಅಪರಾಧಿಗಳನ್ನು ಹೇಗೆ ಬಂದಿಸುತ್ತಾರೆ ಎಂಬುದನ್ನು ಮರ್ಡರ್ ಮಿಸ್ಟರಿ, ಥ್ರಿಲ್ಲರ್ ರೂಪದಲ್ಲಿ ಹೇಳುವ ಪ್ರಯತ್ನ ಮಾಡಿರುವುದು ನಿರ್ದೇಶಕ ಶಿವಗಣೇಶ್. ಇವರು ಈ ಹಿಂದೆ ಜಿಗರ್‍ಥಂಡಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ನೈಜ ಜೀವನದ ಪೋಲೀಸ್ ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕತೆ ಬರೆಯಲಾಗಿದ್ದು, ನರುನಾರಾಯಣನ್-ಮಹಾಕೀರ್ತಿ ಸಿನಿಮಾಗೆ ಕತೆ ಬರೆದಿದ್ದಾರೆ. ಜಯಂತ್‍ಕಾಯ್ಕಣಿ, ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಚೆನ್ನೈನ ಅರಣ್‍ಸುರಧಾ ಸಂಗೀತ ಸಂಯೋಜನೆ ಇದೆ.

ಬಿಜಾಪುರ ಮೂಲದ ರಾಹುಲ್‍ಐನಾಪುರ ಚೂಚ್ಚಲಬಾರಿ ನಾಯಕನಾಗಿ ಇನ್ಸೆಪೆಕ್ಟರ್ ಪಾತ್ರ ಮಾಡುವ ಜೊತೆಗೆ ಚಿತ್ರಕ್ಕೆ ಹಣ ಹೂಡುವುದರ ಮೂಲಕ ನಿರ್ಮಾಪಕರ ಸ್ಥಾನವನ್ನು ಅಲಂಕರಿಸಿದ್ದಾರೆ. ಉಪನಾಯಕನಾಗಿ ಅಜಿತ್‍ಜಯರಾಜ್ ಕೆಳಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒರಟ ಐ ಲವ್ ಯು ಚಿತ್ರದಲ್ಲಿ ನಟಿಸಿದ್ದ ಹೃದಯ ಧೀರ್ಘ ಗ್ಯಾಪ್ ನಂತರ ನಾಯಕಿಯಾಗಿ ರಾಹುಲ್‍ಗೆ ಜೋಡಿ. ವಿರಾಮದ ನಂತರ ಪೋಲೀಸ್ ಪಾತ್ರ ಮಾಡಿರುವ ದಿಶಾಪೂವಯ್ಯ ಒಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಸಿಡಿ ಬಿಡುಗಡೆ ಮಾಡಿದ ಅಂಬರೀಷ್ ಮಾತನಾಡಿ ಹೊಸ ಕಲಾವಿದರು, ಪ್ರತಿಭೆಗಳು, ನಿರ್ದೇಶಕರು, ತಂತ್ರಜ್ಘರು ಕನ್ನಡ ಚಿತ್ರರಂಗಕ್ಕೆ ನೂತನ ಚಿತ್ರಗಳನ್ನು ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಕಲಾವಿದರ ಸಂಘದಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ತಂದಿದೆ. ನಿರ್ಮಾಪಕರ ತಂದೆ ರಾಜಕೀಯದಲ್ಲಿ ಸಹದ್ಯೋಗಿಗಳಾಗಿದ್ದಾರೆ. ನಮ್ಮ ಕಾಲ ಮುಗೀತು. ಇನ್ನೇನಿದ್ದರೂ ಹೊಸಬರ ಹವಾ ಶುರುವಾಗಲಿ ಎಂದು ತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕೆ.ಮಂಜು, ಸಿನಿಪಂಡಿತರು ಸೇರಿದಂತೆ ಬಿಪಾಪುರದ ನೂತನ ಶಾಸಕ, ವಿಧಾನ ಪರಿಷತ್ ಸದಸ್ಯರು ಉಪಸ್ತಿತರಿದ್ದರು. ನಿರ್ಮಾಪಕರು ಆ ಭಾಗದವರಾಗಿದ್ದರಿಂದ ಗಣ್ಯರಿಗೆ ಗಾಂಧಿಟೋಪಿ ಹಾಕುವ ಮೂಲಕ ಗೌರವಿಸಲಾಯಿತು. ಇದಕ್ಕೂ ಮುನ್ನ ಚಿತ್ರದ ಟ್ರೈಲರ್, ಎರಡು ಹಾಡುಗಳು ಚಿತ್ರಮಂದಿರಕ್ಕೆ ಹೋಗುವಂತೆ ಮಾಡಿತು.
ಸಿನಿ ಸರ್ಕಲ್.ಇನ್ ನ್ಯೂಸ್
9/06/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\