HOME
CINEMA NEWS
GALLERY
TV NEWS
REVIEWS
CONTACT US
ತಾಯಿಗೆ ತಕ್ಕ ಮಗ ಅವತಾರದಲ್ಲಿ ಕೃಷ್ಣಅಜಯ್‍ರಾವ್
70ರ ದಶಕದಲ್ಲಿ ಡಾ.ರಾಜ್‍ಕುಮಾರ್ ಅಭಿನಯದಲ್ಲಿ ‘ತಾಯಿಗೆ ತಕ್ಕ ಮಗ’ ಚಿತ್ರವು ಯಶಸ್ಸನ್ನು ಕಂಡಿತ್ತು. ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೋಮವಾರ ಕಂಠೀರವರದಲ್ಲಿ ಸೆಟ್ಟೇರಿತು. ತಾಯಿ-ಮಗನ ದೃಶ್ಯವನ್ನು ಚಿತ್ರೀಕರಿಸಿದ ನಂತರ ತಂಡವು ಮಾದ್ಯಮದ ಬಳಿ ಕುಳಿತುಕೊಂಡಿತು. ಮೊದಲು ಮಾತನಾಡಿದ ಶಶಾಂಕ್ ನಿರ್ದೇಶಕರಿಂದ ನಿರ್ಮಾಪಕ ಆಗಬೇಕೆಂಬ ಪಸೆ ಮೊದಲಿನಿಂದಲೂ ಇತ್ತು. ಅದು ನನ್ನದೆ ದಾರಿ, ಯೋಚನೆ,ಯೋಜನೆಗಳಿಗೆ ಬರುವವರೆಗೂ ಕಾಯಬೇಕಾಗಿರುವುದರಿಂದ ಇಷ್ಟು ವರ್ಷ ತೆಗೆದುಕೊಂಡಿದೆ. ಕತೆ ಹುಟ್ಟಲು ಅಜಯ್‍ರಾವ್ ಕಾರಣರಾಗಿರುತ್ತಾರೆ. ಅವರು ತಮ್ಮ ತಾಯಿಗೆ ತೋರಿಸುತ್ತಿದ್ದ ಗೌರವ, ಪ್ರೀತಿ ಇವೆಲ್ಲವನ್ನು ನೋಡುತ್ತಿರುವಾಗ ಇದರ ಮೇಲೆ ಯಾಕೆ ಸಿನಿಮಾ ಮಾಡಬಾರದೆಂದು ಅಂತ ಯೋಚಿಸಿದ್ದೆ ಈ ಹಂತಕ್ಕೆ ಬಂದು ನಿಂತಿದೆ. ತಾಯಿ ಪಾತ್ರಕ್ಕೆ ಸುಮಲತಾಅಂಬರೀಷ್ ಮೊದಲ ಆಯ್ಕೆಯಾಗಿದೆ. ಅವರು ರೆಬಲ್ ಮದರ್ ಆಗಿ ಕಾಣ ಸಲಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಕೋಪ ಬಂದಾಗ ಸಮಾಜವು ಯಾವ ಹಂತಕ್ಕೆ ಹೋಗುತ್ತದೆ ಎಂಬುದು ಸಿನಿಮಾದ ತಿರುಳು. ಇದರ ಜೊತೆಗೆ ತಾಯಿ-ಮಗನ ಬಾಂದವ್ಯ, ಮಾರ್ಮಿಕ ಪ್ರೀತಿ ಕತೆ. ಅಕ್ರಮ ದಬ್ಬಾಳಿಕೆ, ಸಮಾಜದಲ್ಲಿ ನಡೆದಾಗ ಇದಕ್ಕೆ ಮಗ ಮಾಡುವ ಪ್ರತಿರೋಧಕ್ಕೆ ತಾಯಿ ಸಾತ್ ಕೊಡುತ್ತಾರೆ. ಕ್ರಿಯೆಟಿವ್ ತಂಡದೊಂದಿಗೆ ಕತೆಯನ್ನು ಸಿದ್ದಪಡಿಸಲಾಗಿದೆ ಎಂದರು.

ಪ್ರತಿಭೆ ತೋರಿಸಲು ಅವಕಾಶ ಸಿಕ್ಕಿದೆ. 37 ವರ್ಷದ ಸಿನಿಪಯಣದಲ್ಲಿ, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಲಾಗಿದೆ. ಮೊದಲಬಾರಿ ಪೂರ್ಣ ಚಿತ್ರಕತೆ ಪುಸ್ತಕವನ್ನು ನೀಡಿದ್ದು ಇದೇ ತಂಡ ಅಂತ ಹೇಳಿಕೊಳ್ಳಲು ಖುಷಿಯಾಗುತ್ತದೆ. ವಕೀಲೆಯಾಗಿ ಅನ್ಯಾಯ ನಡೆದಾಗ ಪ್ರತಿಭಟಿಸುತ್ತೇನೆ. ಸಾಕ್ಷಿಗೆ ಬೆಲೆ, ಮನಸ್ಸಾಕ್ಷಿಗೆ ಬೆಲೆ ಇಲ್ಲ. ಹೀಗೆ ಇವರೆಡರ ಹೋರಾಟ ಇದರಲ್ಲಿ ಬರಲಿದೆ ಅಂತ ಪಾತ್ರದ ಪರಿಚಯ ಮಾಡಿಕೊಂಡರು ಸುಮಲತಾಅಂಬರೀಷ್. ಮೊದಲ ಚಿತ್ರ ಎಕ್ಸ್‍ಕ್ಯೂಸ್ ಮಿದಲ್ಲಿ ಮೇಡಂರವರು ಅಮ್ಮನಾಗಿ ಕಾಣ ಸಿಕೊಂಡಿದ್ದರು. ಅಂದಿನಿಂದ ಅವರನ್ನು ಅದೇ ಸ್ಥಾನದಲ್ಲಿ ಗೌರವಿಸುತ್ತೇನೆ. ಹದಿನಾಲ್ಕು ವರ್ಷದ ನಂತರ ಮತ್ತೆ ಅವರೊಂದಿಗೆ ಇರುವುದು ಸುಕೃತ ಎನ್ನಬಹುದು. ಗಾಂಧಿ ತತ್ವಗಳನ್ನು ಹಿಂಬಾಲಿಸುವ ಮೋಹನದಾಸನಾಗಿ ಕಣ್ಮುಂದೆ ತಪ್ಪು ನಡೆದಾಗ ಅದು ಸರಿಪಡಿಸುವ ತನಕ ಹೋರುಡುತ್ತೇನೆ. ಇದಕ್ಕೆ ಅಮ್ಮನ ಬೆಂಬಲ ಸಿಗುತ್ತದೆ. ರಿಯಲ್‍ನಲ್ಲಿ ಬ್ಲಾಕ್ ಬೆಲ್ಟ್ ಹೊಂದಿರುವ ನನಗೆ ರೀಲ್‍ನಲ್ಲಿ ಕರಾಟೆ ತರಭೇತುದಾರನಾಗಿ ನಟಿಸುತ್ತಿದ್ದೇನೆ ಅಂತಾರೆ ಕೃಷ್ಣಅಜಯ್‍ರಾವ್. 64 ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಅಂತ ಚೂಚ್ಚಲಬಾರಿ ನಿರ್ದೇಶನ ಮಾಡುತ್ತಿರುವ ವೇದಗುರು ಹೇಳಿಕೊಂಡರು. ಸೂಸೈಟ್ ಬಗ್ಗೆ ಕಾಳಜಿ ತೋರಿಸದೆ, ಸ್ವಾರ್ಥಕ್ಕೆ ಬದುಕುವ ಪಾತ್ರವೆಂದು ನಾಯಕಿ ಆಶಿಕಾ ಮಾತಾಗಿತ್ತು. ಎಂದಿನಂತೆ ನಾಯಕಿ ತಂದೆ ಪಾತ್ರ ಅಂತ ನಕ್ಕರು ಅಚ್ಯುತಕುಮಾರ್. ಐದು ಹಾಡುಗಳಿಗೆ ಸಂಗೀತದ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದು ಜ್ಯೂಡೋಸ್ಯಾಂಡಿ. ಶೀರ್ಷಿಕೆಗೆ ತಕ್ಕಂತೆ ಮಹೂರ್ತ ಸಮಾರಂಭದಲ್ಲಿ ನಿರ್ಮಾಪಕ, ನಾಯಕ, ನಾಯಕಿ, ಸಂಗೀತ ನಿರ್ದೇಶಕರ ತಾಯಂದಿರು ಆಗಮಿಸಿದ್ದು ವಿಶೇಷವಾಗಿತ್ತು.
-05/12/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore