HOME
CINEMA NEWS
GALLERY
TV NEWS
REVIEWS
CONTACT US
ಹದಿನೈದು ನಿಮಿಷದ ಕಿರು ಚಿತ್ರ
ತಂತ್ರಜ್ಘಾನ ಬೆಳದಂತೆ ನಾವುಗಳು ಇತರರ ಕಷ್ಟಕ್ಕೆ ಸ್ಪಂದಿಸದೇ ಸ್ವಾರ್ಥದಿಂದ ಬದುಕುತ್ತಿದ್ದಾರೆ. ಏನೇ ಕಹಿ ಘಟನೆ ನಡೆದರೂ ಅದರ ಬಗ್ಗೆ ಚರ್ಚೆ ನಡೆಸಿ, ನಂತರ ತಮ್ಮದೆ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಇಂತಹುದೆ ಅಂಶವನ್ನು ಒಳಗೊಂಡ ಹದಿನೈದು ನಿಮಿಷದ ‘ದಿ ವಾರಿಯರ್ಸ್’ ಎನ್ನುವ ಕಿರುಚಿತ್ರವೊಂದು ಸಿದ್ದಗೊಂಡಿದೆ. ಕಳೆದ ತಿಂಗಳು ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಒಂದು ಏಳಯನ್ನು ತೆಗೆದುಕೊಳ್ಳಲಾಗಿದೆ. ಕಟ್ಟಡದಲ್ಲಿ ಸಿಲುಕಿ ಪಾರಾಗಿ ಬಂದವರನ್ನು ಶೀರ್ಷಿಕೆಗೆ ಹೋಲಿಸಲಾಗಿದೆ. ಶುದ್ದಿ ಮತ್ತು ಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿರುವ ಆದರ್ಶ್.ಹೆಚ್. ಈಶ್ವರಪ್ಪ ಕತೆ,ಚಿತ್ರಕತೆ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಇವರಿಗೆ ಸಹಾಯಕರಾಗಿ ಪ್ರಸಾದ್‍ಚಲ್‍ಕಡಿ ಕೆಲಸ ಮಾಡಿದ್ದಾರೆ. ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ಸಿನಿಮಾದಲ್ಲಿ ನಟನೆ ಮಾಡಿರುವುದು ವಿಶೇಷ.

ಅಧ್ಯಕ್ಷರಾದ ಎಸ್.ಎ.ಚಿನ್ನೆಗೌಡ ಮಾತನಾಡಿ ತರಭೇತಿ ಶಾಲೆಯಿಂದ ಅಭಿನಯ, ನಿರ್ದೇಶನ, ಸಂಭಾಷಣೆ, ತಾಂತ್ರಿಕ ವಿಭಾಗಗಳಲ್ಲಿ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಯುವಜನಾಂಗದವರಲ್ಲಿ ವಿದ್ಯೆ ಇರೋಕಡೆ ಯೋಚನೆ ಇರುತ್ತದೆ. ಒಳ್ಳೆಯದಾಗಲಿ ಎಂದರು. ಶರೀರ-ಶಾರೀರವನ್ನು ಹೇಗೆ ಬಳಸಬೇಕು. ಥಿಯರಿ ಅಲ್ಲದೆ, ಪ್ರಾಕ್ಟಿಕಲ್ ಆಗಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಸಂಸ್ಥೆಯಿಂದ ಇಂತಹ ಚಿತ್ರಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಅವರುಗಳು ಪರಿಪೂರ್ಣರಾಗುತ್ತಾರೆಂದು ಸಂಸ್ಥಾಪಕರಾದ ನಾಗತ್ತಿಹಳ್ಳಿ ಚಂದ್ರಶೇಖರ್ ವ್ಯಾಖ್ಯಾನ ನೀಡಿದರು. ತಂಡಕ್ಕೆ ಶುಭ ಹಾರೈಸಲು ವಸಿಷ್ಟಸಿಂಹ, ಸುಮನ್‍ನಗರ್‍ಕರ್, ಗೌರೀಶ್‍ಅಕ್ಕಿ ಮುಂತಾದವರು ಹಾಜರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
11/05/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore