HOME
CINEMA NEWS
GALLERY
TV NEWS
REVIEWS
CONTACT US

ರಕ್ತಪಾತ, ಬಾಂಬ್ ಸ್ಪೋಟ ಇರದ ಟೆರರಿಸ್ಟ್
ಪಿ.ಸಿ.ಶೇಖರ್ ನಿರ್ದೇಶನದ ‘ದಿ ಟೆರರಿಸ್ಟ್’ ಚಿತ್ರದ ಹೆಸರು ಕೇಳಿದಾಗ ಇದರಲ್ಲಿ ಸ್ಪೋಟಕ, ರಕ್ತಪಾತದ ದೃಶ್ಯಗಳು ಇರುತ್ತದೆಂದು ನೋಡುಗನು ಟಾಕೀಸ್ ಒಳಹೊಕ್ಕರೆ ಇದು ಯಾವುದು ಇಲ್ಲ್ಲದೆ ಇರುವುದು ನೆಮ್ಮದಿ ತರುತ್ತದೆ. ಕತೆಯಲ್ಲಿ ಅಮಾಯಕ ಹುಡುಗಿಯೊಬ್ಬಳ ಜೀವನದಲ್ಲಿ ನಡೆದ ತಲ್ಲಣ, ಭಾವುಕತೆ, ಆಕ್ರೋಶ ಹಾಗೂ ಬುದ್ದಿವಂತಿಕೆಯನ್ನು ಮನಸ್ಸಿಗೆ ತಟ್ಟುವಂತೆ ತೋರಿಸುವಲ್ಲಿ ನಿರ್ದೇಶಕರು ಹೆಚ್ಚು ಜಾಣ್ಮೆ ವಹಿಸಿದ್ದಾರೆ. ಜಿಹಾದಿ ಹೆಸರಿನಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳು ಅಮಾಯಕ ವಿದ್ಯಾವಂತ ಯುವಜನಾಂಗವನ್ನು ಬಳಸಿಕೊಳ್ಳುತ್ತವೆ. ಅದರಿಂದ ಅವರ ಮನೆ ಕಡೆಯಿಂದ ನೆಮ್ಮದಿ ಹೇಗೆ ಹಾಳಾಗುತ್ತದೆ. ನಾಯಕಿಯ ಸಹೋದರ ತನಗರಿವಿಲ್ಲದಂತೆ ಭಯೋತ್ಪಾದಕರ ಕೈಗೆ ಸಿಲುಕುತ್ತಾನೆ. ಅಲ್ಲಿಂದೆ ಮುಂದೇನು ಎನ್ನುವುದನ್ನು ಕುತೂಹಲಕಾರಿಯಾಗಿ ತೋರಿಸಲಾಗಿದೆ. ಕತೆಯೇ ಎಲ್ಲವು ಆಗಿರುವುದರಿಂದ ಪ್ರೀತಿ, ಭಾವನೆಗಳು, ಡ್ಯುಯೆಟ್ ಸ್ಪಲ್ಪ ಕಾಮಿಡಿ ಆಂಶಗಳು ಅತಿಯಾಗಿ ಇರುವುದಿಲ್ಲ. ಜಾತಿ, ಧರ್ಮಗಳ ಹೆಸರಲ್ಲೇ ನಾನಾ ಬಗೆಯ ಅರ್ಥ ಕಲ್ಪಿಸಿಕೊಳ್ಳುವ ಮನಸ್ಥಿಯು ಜನರಿಗೆ ಚಿತ್ರವು ತನ್ನೊಳಗಿನ ಆಪ್ತತೆಯನ್ನು ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ.

ಮುಸ್ಲಿಂ ಹುಡುಗಿ ರೇಷ್ಮಾ ಹೆಸರಿನಲ್ಲಿ ರಾಗಿಣಿ ಸಿನಿಮಾ ಪೂರ್ತಿ ಆವರಿಸಿಕೊಂಡು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ರವಿಭಟ್, ಪದ್ಮಶಿವಮೊಗ್ಗ, ಕೃಷ್ಣಹೆಬ್ಬಾಲೆ, ಗಿರೀಶ್‍ಶಿವಣ್ಣ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರದೀಪ್‍ವರ್ಮ ಹಿನ್ನಲೆ ಸಂಗೀತ ಸಿನಿಮಾಕ್ಕೆ ಪೂರಕವಾಗಿದೆ. ಬೆಂಗಳೂರು ಗಲ್ಲಿ ಗಲ್ಲಿಯನ್ನು ಸುಂದರವಾಗಿ ಸೆರೆ ಹಿಡಿದಿರುವ ಮುರಳಿಕ್ರಿಶ್ ಅವರ ಕ್ಯಾಮರಾ ಕೆಲಸಕ್ಕೆ ಒಂದು ಸಲಾಂ. ಸದುಭಿರುಚಿಯ ಚಿತ್ರಗಳನ್ನು ನೀಡುತ್ತಿರುವ ಶೇಖರ್ ಪ್ರಯತ್ನ ಇದರಲ್ಲೂ ಮುಂದುವರೆದಿದೆ. ಇವರಿಗೆ ಸಾಥ್ ಆಗಿ ನಿರ್ಮಾಪಕ ಅಲಂಕಾರ್‍ಸಂತಾನ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.
ಸಿನಿ ಸರ್ಕಲ್.ಇನ್ ವಿಮರ್ಶೆ
****
20/10/18

ಒಂದೇ ದಿನದಂದು ದಿ ವಿಲನ್, ದಿ ಟೆರರಿಸ್ಟ್
‘ದಿ ಟೆರರಿಸ್ಟ್’ ಚಿತ್ರವು ದಿ ವಿಲನ್ ಸಿನಿಮಾಕ್ಕೆ ಸರಿಸಾಟಿಯಾಗಿ ಅದೇ ದಿನದಂದು ಬಿಡುಗಡೆಯಾಗಲಿದೆ. ನಿರ್ದೇಶಕ ಪಿ.ಸಿ.ಶೇಖರ್ ಹೇಳುವಂತೆ ಚಿತ್ರದ ಅಂಶಗಳಲ್ಲಿ ಗಟ್ಟಿತನ ಇರುವುದರಿಂದ ದೊಡ್ಡ ಸಿನಿಮಾದ ಮುಂದೆ ಬರಲು ಸಿದ್ದರಿದ್ದೇವೆ. ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ ಜನರು ಇಷ್ಟಪಡುತ್ತಾರೆಂಬ ನಂಬಿಕೆ ಇದೆ ಅಂತಾರೆ.

ಇಡೀ ವಿಶ್ವದಲ್ಲಿ ಭಯೋತ್ಪಾದನೆ ಎನ್ನುವುದು ದೊಡ್ಡ ಪಿಡುಗು ಆಗುತ್ತಿದೆ. ಒಂದೇ ಸಿನಿಮಾದಿಂದ ಇದಕ್ಕೆ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಒಂದು ವಿಷಯವನ್ನು ಸರ್ವಸಾಧಣಿಕರಿಸಲಾಗಿದೆ. ನೆಮ್ಮದಿಯಿಂದ ಇದ್ದರೆ ಸಂತೋಷ ಸಿಗುತ್ತದೆ. 2009ರಲ್ಲಿ ಬೆಂಗಳೂರಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಕತೆ ಬರೆಯಲು ಪ್ರೇರಣೆಯಾಗಿದೆ. ಕೆ.ಆರ್.ಮಾರ್ಕೆಟ್, ಮೆಟ್ರೋ ನಿಲ್ದಾಣದ ಅಡಗುತಾಣದಲ್ಲಿ ಕ್ಯಾಮಾರಗಳನ್ನು ಇಡಲಾಗಿ ಶೂಟ್ ಮಾಡಲಾಗಿದೆ. ಬೇರೆಯವರಿಗೆ ಕಷ್ಟಕೊಟ್ಟು ಹೋರಾಟ ಮಾಡುವುದು ಸರಿಯಲ್ಲವೆಂದು ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.

ರೇಶ್ಮಾ ಹೆಸರಿನಲ್ಲಿ ಕುಟುಂಬವನ್ನು ಸಂಭಾಳಿಸುತ್ತಾ, ಮತ್ತೋಂದು ಕಡೆ ಪ್ರೀತಿ ಸನ್ನಿವೇಶ ಬರಲಿದೆ. ಭಾವನೆಗಳು ಜಾಸ್ತಿ ಇರಲಿದ್ದು, ಫೈಟ್ ಮಾಡಿದ್ದೇನೆ. ಟೆರರಿಸ್ಟ್ ಯಾರು ಎಂಬುದು ಪ್ರೇಕ್ಷಕರೇ ನಿರ್ಧರಿಸಬೇಕು. ಶಿವಣ್ಣ, ಸುದೀಪ್ ಇಬ್ಬರೊಂದಿಗೆ ಕೆಲಸ ಮಾಡಿದ್ದೇನೆ. ಸ್ಪರ್ಧೆಗೆ ಅಂತ ಚಿತ್ರವು ಬರುತ್ತಿಲ್ಲ. ವೈಯಕ್ತಿಕವಾಗಿ ನೋಡದೆ ಚಿತ್ರವಾಗಿ ನೋಡಿದರೆ ಭಿನ್ನಾಭಿಪ್ರಾಯ ಬರುವುದಿಲ್ಲ ಎಂದು ರಾಗಿಣಿ ಹೇಳಿಕೊಂಡಿದ್ದಾರೆ.

ಅಲಂಕಾರಸಂತಾನ ನಿರ್ಮಾಣ ಮಾಡಿರುವ ಸಿನಿಮಾವು ಅಕ್ಟೋಬರ್ 18ರಂದು ಜಯಣ್ಣ ವಿತರಣೆ ಸಂಸ್ಥೆಯ ಮೂಲಕ ಸುಮಾರು 100 ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
15/10/18
ಮಾತಿನ ಮಂಟಪದಲ್ಲಿ ದಿ ಟೆರರಿಸ್ಟ್
‘ದಿ ಟೆರರಿಸ್ಟ್’ ಚಿತ್ರದ ಕೊನೆಯ ಸುದ್ದಿಗೋಷ್ಟಿಯು ಇತ್ತೀಚೆಗೆ ಹಸಿರು ಮನೆಯಲ್ಲಿ ನಡೆಯಿತು. ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಪಿ.ಸಿ.ಶೇಖರ್ ಮಾತನಾಡಿ, ಇದು 8ನೇ ಚಿತ್ರವಾಗಿದೆ. ಸಂಗೀತ ನಿರ್ದೇಶಕರು 24ಘಿ7 ರೀತಿಯಲ್ಲಿ ಕೆಲಸ ಮಾಡಿದ್ದಾರೆ. ರಾಗಿಣಿಯವರು ಪ್ರಾರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇಡೀ ವಿಶ್ವದಲ್ಲಿ ಭಯೋತ್ಪಾದನೆ ಎನ್ನುವುದು ದೊಡ್ಡ ಪಿಡುಗು ಆಗುತ್ತಿದೆ. ಒಂದೇ ಸಿನಿಮಾದಿಂದ ಇದಕ್ಕೆ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಒಂದು ವಿಷಯವನ್ನು ಸರ್ವಸಾಧಣಿಕರಿಸಲಾಗಿದೆ. ನೆಮ್ಮದಿಯಿಂದ ಇದ್ದರೆ ಸಂತೋಷ ಸಿಗುತ್ತದೆ. 2009ರಲ್ಲಿ ಬೆಂಗಳೂರಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಕತೆ ಬರೆಯಲು ಪ್ರೇರಣೆಯಾಗಿದೆ. ಕೆ.ಆರ್.ಮಾರ್ಕೆಟ್, ಮೆಟ್ರೋ ನಿಲ್ದಾಣದ ಅಡಗುತಾಣದಲ್ಲಿ ಕ್ಯಾಮಾರಗಳನ್ನು ಇಡಲಾಗಿ ಶೂಟ್ ಮಾಡಲಾಗಿದೆ. ಬೇರೆಯವರಿಗೆ ಕಷ್ಟಕೊಟ್ಟು ಹೋರಾಟ ಮಾಡುವುದು ಸರಿಯಲ್ಲವೆಂದು ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಸೆನ್ಸಾರ್‍ನವರು ಕಟ್ ಮಾಡದೆ ಯುಎ ನೀಡಿದ್ದಾರೆ. ಚಿತ್ರದ ಅಂಶಗಳಲ್ಲಿ ಗಟ್ಟಿತನ ಇರುವುದರಿಂದ ದೊಡ್ಡ ಸಿನಿಮಾದ ಮುಂದೆ ಬರಲು ಸಿದ್ದರಿದ್ದೇವೆ. ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ ಮಾಧ್ಯಮದ ಸಹಕಾರ ಬೇಕೆಂದು ಕೋರಿದರು.

ಚಿತ್ರೀಕರಣವಾದ ದೃಶ್ಯಗಳನ್ನು ನೋಡಿಕೊಂಡು ಸಾಹಿತ್ಯ,ಸಂಗೀತ ಒದಗಿಸಿದ್ದು ಛಾಲೆಂಜಿಂಗ್ ಆಗಿತ್ತು ಎನ್ನುತ್ತಾರೆ ಪ್ರದೀಪ್‍ವರ್ಮ. ಚಿತ್ರರಂಗಕ್ಕೆ ಬಂದು 10 ವರ್ಷದಲ್ಲಿ ಇದು ಭಿನ್ನ ಎನ್ನಬಹುದು. ರೇಶ್ಮಾ ಹೆಸರಿನಲ್ಲಿ ಕುಟುಂಬವನ್ನು ಸಂಭಾಳಿಸುತ್ತಾ, ಮತ್ತೋಂದು ಕಡೆ ಪ್ರೀತಿ ಸನ್ನಿವೇಶ ಬರಲಿದೆ. ಭಾವನೆಗಳು ಜಾಸ್ತಿ ಇರಲಿದ್ದು, ಫೈಟ್ ಮಾಡಿದ್ದೇನೆ. ಟೆರರಿಸ್ಟ್ ಯಾರು ಎಂಬುದು ಪ್ರೇಕ್ಷಕರೇ ನಿರ್ಧರಿಸಬೇಕು. ಶಿವಣ್ಣ, ಸುದೀಪ್ ಇಬ್ಬರೊಂದಿಗೆ ಕೆಲಸ ಮಾಡಿದ್ದೇನೆ. ಸ್ಪರ್ಧೆಗೆ ಅಂತ ಚಿತ್ರವು ಬರುತ್ತಿಲ್ಲ. ವೈಯಕ್ತಿಕವಾಗಿ ನೋಡದೆ ಚಿತ್ರವಾಗಿ ನೋಡಿದರೆ ಭಿನ್ನಾಭಿಪ್ರಾಯ ಬರುವುದಿಲ್ಲ ಎಂದು ರಾಗಿಣಿ ಅಭಿಪ್ರಾಯಪಟ್ಟರು.

ನಾಲ್ಕು ತಿಂಗಳಿನಲ್ಲಿ ಮುಗಿಸಬೇಕಾಗಿರುವ ಚಿತ್ರವು ಒಂದು ವರ್ಷ ತೆಗೆದುಕೊಂಡಿತು. ಅಂತಿಮವಾಗಿ ಪರದೆ ಮೇಲೆ ನೋಡಿದಾಗ ಶ್ರಮ ಸಾರ್ಥಕವಾಗಿದೆ. ಇಲ್ಲಿಯವರೆಗೂ ಪ್ರಚಾರ ಸೇರಿಕೊಂಡು ನಾಲ್ಕು ಕೋಟಿವರೆಗೆ ಬರಬಹುದು ಅಂತ ನಿರ್ಮಾಪಕ ಅಲಂಕಾರಸಂತಾನ ಮಾಹಿತಿ ನೀಡಿದರು. ಸಂಭಾಷಣೆಗಾರ ಸಚ್ಚಿನ್.ಬಿ.ಹೂಳಗುಂದಿ ಉಪಸ್ತಿತರಿದ್ದರು. ಇದೇ 18ರಂದು ಜಯಣ್ಣ ವಿತರಣೆ ಸಂಸ್ಥೆಯ ಮೂಲಕ ಸುಮಾರು 100 ಕೇಂದ್ರಗಳಲ್ಲಿ ಚಿತ್ರವು ಬಿಡುಗಡೆಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-6/10/18

ದಿ ವಿಲನ್ ಎದುರು ದಿ ಟೆರರಿಸ್ಟ್
‘ದಿ ಟೆರರಿಸ್ಟ್’ ಹೆಸರೇ ಹೇಳುವಂತೆ ಭಯತ್ಪಾದಕ ಕತೆಯಾಗಿದೆ. ಕಷ್ಟವಾದ, ಸೂಕ್ಷತೆವುಳ್ಳ, ನೈಜ ಘಟನೆ, ಪ್ರತಿ ದಿನ ನಡೆಯುವ ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ವಿಭಾಗಗಳನ್ನು ವಿಶ್ಲೇಷಿಸಿ ವಿಲನ್ ಆಧಾರಿತ ಕತೆಗೆ ಮಹಿಳೆಯ ನೋವು, ಭಾವನೆಗಳನ್ನು ತೋರಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಅದರಲ್ಲೂ ಕೆ.ಆರ್.ಮಾರ್ಕೆಟ್, ಮೆಟ್ರೋ ನಿಲ್ದಾಣ, ಹೊಸ ಜಾಗಗಳಲ್ಲಿ ನಾಲ್ಕು ಕ್ಯಾಮಾರಗಳನ್ನು ಬಳಸಿ ಜನರಿಗೆ ಗೊತ್ತಿಲ್ಲದಂತೆ ಚಿತ್ರೀಕರಣ ನಡೆಸಿರುವುದು ವಿಶೇಷ. ಸಾಮಾನ್ಯ ಮುಸ್ಲಿಂ ಹುಡುಗಿಯಾಗಿ ಮುಖ್ಯ ಪಾತ್ರದಲ್ಲಿ ತುಪ್ಪದರಾಣಿ ರಾಗಿಣಿ ಕಾಣಿಸಿಕೊಂಡಿದ್ದಾರೆ.

ಸದುಭಿರುಚಿಯ ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸಂಗೀತ ಪ್ರದೀಪ್‍ವರ್ಮ, ಛಾಯಗ್ರಹಣ ಮುರಳಿಕ್ರಿಷ್, ಸಂಕಲನ ಡಿ.ಸರವಣನ್, ಸಂಭಾಷಣೆ ಸಚ್ಚಿನ್.ಬಿ.ಹೊಳಗುಂದಿ ತಂಡದಲ್ಲಿ ಇದ್ದಾರೆ. ಅಲಂಕಾರಸಂತಾನ ನಿರ್ಮಾಣ ಮಾಡಿರುವ ಚಿತ್ರವು ಇದೇ 18ರಂದು ಬಿಡುಗಡೆಯಾಗಲಿದೆ. ಅಂದೇ ಅದ್ದೂರಿ ಚಿತ್ರ ದಿ ವಿಲನ್ ಸಹ ತೆರೆಗೆ ಬರಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
4/10/18
ಟೆರರಿಸ್ಟ್ ಚಿತ್ರಕ್ಕೆ ರಕ್ಷಿತ್‍ಶೆಟ್ಟಿ ಪ್ರೋತ್ಸಾಹ
ಪ್ರಯೋಗಾತ್ಮಕ ಮತ್ತು ಹೊಸಬರ ಚಿತ್ರಗಳಿಗೆ ರಕ್ಷಿತ್‍ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನ್ ಪ್ರೋತ್ಸಾಹ ಕೊಡುತ್ತಿರುವುದು ತಿಳಿದಿರುವ ವಿಷಯ. ಅದರಂತೆ ‘ದಿ ಟೆರರಿಸ್ಟ್’ ಸಿನಿಮಾಗೆ ಇವರು ಸಲಹೆ, ಪ್ರೋತ್ಸಾಹ ನೀಡುತ್ತಿರುವುದಾಗಿ ನಿರ್ದೇಶಕ ಪಿ.ಸಿ.ಶೇಖರ್ ಟ್ರೈಲರ್, ಒಂದು ಹಾಡು ಬಿಡುಗಡೆ ಸಂದರ್ಭದಲ್ಲಿ ಹೇಳಿದರು. ಮಾತು ಮುಂದುವರೆಸಿದ ನಿರ್ದೇಶಕರು ನನ್ನ ಕ್ಯಾರಿಯರ್‍ದಲ್ಲಿ ಕಷ್ಟದ ಚಿತ್ರವಾಗಿದೆ. ಸೃಜನಾತ್ಮಕ ಚಿತ್ರ ಮಾಡುವುದು ಅಷ್ಟು ಸುಲಭವಲ್ಲ. ಭಯೋತ್ಪಾದನೆ ಕುರಿತಂತೆ ಅಂತಹ ಜಾಗಗಳು ಅವಶ್ಯಕತೆ ಇತ್ತು. ಅದಕ್ಕೆ ಬೆಂಗಳೂರಿನ ಗಲ್ಲಿ, ಸಂದಿಗಳಲ್ಲಿ ಕ್ಯಾಮಾರಗಳನ್ನು ಇಡಲಾಗಿದೆ. ಕನ್ನಡ ಚಿತ್ರಗಳನ್ನು ಎತ್ರರಕ್ಕೆ ತೆಗೆದುಕೊಂಡು ಹೋಗುತ್ತಿರುವ ರಕ್ಷಿತ್‍ಶೆಟ್ಟಿ ನಮ್ಮ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ. ಅವರ ಪ್ರೋತ್ಸಾಹದಿಂದ ಚಿತ್ರಮಂದಿರಕ್ಕೆ ಹೆಚ್ಚು ಜನರು ಬರುತ್ತಾರೆಂದು ಆಶಾಭಾವನೆ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಿತ್‍ಶೆಟ್ಟಿ ನಿರ್ದೇಶಕ ರಾಗ ಚಿತ್ರವು ತುಂಬಾ ಹಿಡಿಸಿತು. ಅವರು ಪ್ರತಿ ಬಾರಿ ಹೊಸ ವಿಷಯ, ಅಂಶಗಳನ್ನು ಕೊಡಲು ಪ್ರಯತ್ನಿಸುತ್ತಾರೆ. ಇಂತಹ ನಿರ್ದೇಶಕರುಗಳಿಗೆ ನಮ್ಮಂತವರು ಬೆಂಬಲ ನೀಡಬೇಕು. ಆಗಲೇ ಜನರು ಸಂತೋಷದಿಂದ ಟಾಕೀಸ್‍ಗೆ ಬರುತ್ತಾರೆ. ಇವರು ಮದ್ಯೆ ಬ್ರೇಕ್ ಮಾಡದೆ ಮೂರು ತಿಂಗಳಿಗೊಮ್ಮೆ ಸಿನಿಮಾ ಕೊಡುತ್ತಾ ಹೋದಲ್ಲಿ ಕನ್ನಡ ಚಿತ್ರರಂಗ ಮತ್ತೋಂದು ಹಂತಕ್ಕೆ ಹೋಗಲು ಸಹಕಾರಿಯಾಗುತ್ತದೆಂದು ಕಿವಿಮಾತು ಹೇಳಿದರು.

ಚಿತ್ರದ ಟ್ರೈಲರ್ ನೋಡಿದಾಗ ಬಾಲಿವುಡ್ ರೀತಿಯಂತೆ ಇರಲಿದೆ ಎಂದು ಪುಷ್ಕರ್‍ಮಲ್ಲಿಕಾರ್ಜುನ್ ಬಣ್ಣಿಸಿದರು. ಇದಕ್ಕೂ ಮುನ್ನ ಮೈಕ್ ತೆಗೆದುಕೊಂಡ ರಾಗಿಣಿ ಮಾತನಾಡಿ ಪ್ರಯೋಗಾತ್ಮಕವಾಗಿ ಟೆರರಿಸ್ಟ್ ಮಾಡಲಾಗಿದೆ. ಪುಷ್ಕರ್ ಸರ್ ಮೊದಲಬಾರಿ ನಟನೆ ಮಾಡಿರುವುದು ಖುಷಿ ತಂದಿದೆ. ನಿರ್ದೇಶಕರು ಹೇಳಿದ ಒನ್ ಲೈನ್ ಸ್ಟೋರಿ ಆಸಕ್ತಿ ತರಿಸಿತು. ಸ್ಮೋಕ್ ಎಫೆಕ್ಟ್‍ದಲ್ಲಿ ಹೆಚ್ಚು ಚಿತ್ರೀಕರಣ ಮಾಡಿದ್ದು ತ್ರಾಸವಾದರೂ, ತೆರೆ ಮೇಲೆ ಚೆನ್ನಾಗಿ ಬಂದಿದೆ. ಜನರಿಗೆ ಇಷ್ಟವಾಗಬಹುದು. ಸಂಭಾಷಣೆಗಳು ಕಡಿಮೆ ಇದ್ದು, ಭಾವನೆಗಳ ಮೂಲಕ ಎಲ್ಲವನ್ನು ತೋರಿಸಬೇಕಾಗಿದೆ ಎಂದರು. ಚಿತ್ರದ ಹೈಪ್ ಕ್ರಿಯೆಟ್ ಮಾಡಲು ಮಾದ್ಯಮದ ಸಹಕಾರಬೇಕಾಗಿದೆ. ವಿದೇಶದಲ್ಲಿ ಚಿತ್ರವನ್ನು ಕೊಂಡಯ್ಯಲು ಸಿದ್ದತೆಗಳನ್ನು ಮಾಡಲಾಗುವುದೆಂದು ನಿರ್ಮಾಪಕ ಅಲಂಕಾರಸಂತಾನ ಮಾಹಿತಿ ಒದಗಿಸಿದರು. ರಾಗಿಣಿ ತಾಯಿ ಪಾತ್ರ ಮಾಡಿರುವ ಸಿನಿಮಾ ಪತ್ರಕರ್ತೆ ಪದ್ಮಶಿವಮೊಗ್ಗ , ಸಂಗೀತ ನಿರ್ದೇಶಕ ಪ್ರದೀಪ್‍ವರ್ಮಾ, ಛಾಯಗ್ರಾಹಕ ಮುರಳಿಕ್ರಿಷ್, ಕಲಾವಿದರು ಇದೇ ಸಂದರ್ಭದಲ್ಲಿ ಹಾಜರಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
4/09/18


ತುಪ್ಪದ ರಾಣಿ ರೇಷ್ಮ ಆದರು
‘ದಿ ಟೆರರಿಸ್ಟ್’ ಹೆಸರೇ ಹೇಳುವಂತೆ ಭಯತ್ಪಾದಕ ಕತೆಯಾಗಿದೆ. ಚಿತ್ರದ ಮೊದಲ ಪತ್ರಿಕಾಗೋಷ್ಟಿಗೆ ನಾಯಕಿ ರಾಗಿಣಿದ್ವಿವೇದಿ ಗೃಹಲಕ್ಷೀಯಂತೆ ರೇಷ್ಮೆ ಸೀರೆಯಲ್ಲಿ ಹಾಜರಾಗಿದ್ದರು. ಪೋಸ್ಟರ್ ಬಿಡುಗಡೆ ಮಾಡಲು ಆಗಮಿಸಿದ್ದ ಅಂಬರೀಷ್ ಟೂರಿಸ್ಟ್ ಎಂದು ಕೊಂಡಿದ್ದೆ. ಟೆರರಿಸ್ಟ್ ಅಂತ ಗೊತ್ತಾಗಿದ್ದರೆ ಬರುತ್ತಿರಲಿಲ್ಲವೆಂದು ಹಾಸ್ಯ ಮಾಡಿದರು. ನಂತರ ಮಾತನಾಡಿದ ಹಿರಿಯ ನಟರು ಸದ್ಯ ಯುವ ನಿರ್ದೇಶಕರು ಹೊಸ ಕತೆಗಳನ್ನು ತರುತ್ತಿದ್ದಾರೆ. ತಂತ್ರಜ್ಘಾನ ಬೆಳೆದಂತೆ ಒಳ್ಳೆ ಚಿತ್ರಗಳು ಬರುತ್ತಿರುವುದು ಸಂತಸ ತಂದಿದೆ. ಖಳನಾಯಕ,ಪೋಷಕನಟ, ನಾಯಕ, ಜನನಾಯಕನಾಗಿ ಇಲ್ಲಿಯವರೆಗೂ ಬಂದಿದ್ದೇನೆ. ಚಿತ್ರರಂಗ ಬೆಳಿಬೇಕು. ಅದರಲ್ಲೂ ನಿರ್ಮಾಪಕರಿಗೆ ಒಳ್ಳೆದು ಆಗಲಿ, ನಿರ್ದೇಶಕರಿಗೆ ಹೆಸರು ಬರಲಿ ಎಂದರು.

ಇದಕ್ಕೂ ಮುನ್ನ ನಿರ್ದೇಶಕ ಪಿ.ಸಿ.ಶೇಖರ್ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು. ಕಷ್ಟವಾದ, ಸೂಕ್ಷತೆವುಳ್ಳ, ನೈಜ ಘಟನೆ, ಪ್ರತಿ ದಿನ ನಡೆಯುವ ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲಾ ವಿಭಾಗಗಳನ್ನು ವಿಶ್ಲೇಷಿಸಿ ವಿಲನ್ ಆಧಾರಿತ ಕತೆಗೆ ಮಹಿಳೆಯ ನೋವು, ಭಾವನೆಗಳನ್ನು ತೋರಿಸಲಾಗಿದೆ. ಬಿಡುಗಡೆ ಹಂತಕ್ಕೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಮಾತಿಗೆ ವಿರಾಮ ಹಾಕಿದರು.

ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದು ಖುಷಿ ನೀಡಿತು. ಕೆ.ಆರ್.ಮಾರ್ಕೆಟ್, ಮೆಟ್ರೋ ನಿಲ್ದಾಣ, ಹೊಸ ಜಾಗಗಳಲ್ಲಿ ನಾಲ್ಕು ಕ್ಯಾಮಾರಗಳನ್ನು ಬಳಸಿ ಜನರಿಗೆ ಗೊತ್ತಿಲ್ಲದಂತೆ ಶೂಟ್ ಮಾಡಲಾಗಿದೆ. ಸಾಮಾನ್ಯ ಮುಸ್ಲಿಂ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಅಂಕಲ್ ಬಂದು ಶುಭ ಹಾರೈಸಿದ್ದಕ್ಕೆ ಥ್ಯಾಂಕ್ಸ್ ಎಂದು ರಾಗಿಣಿದ್ವಿವೇದಿ ಹೇಳಿದರು.

ಸಮಾಜಕ್ಕೆ ಶಕ್ತಿಶಾಲಿಯಾದ ಸಂದೇಶ ಕೊಡಲಿರುವುದರಿಂದ ನಿರ್ಮಾಣ ಮಾಡಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳನ್ನು ತೆಗೆದುಕೊಂಡು ಹೋಗುವ ಇರಾದೆ ಇದೆ ಎನ್ನುತ್ತಾರೆ ಅಲಂಕಾರಸಂತಾನ. ಸಂಗೀತ ಪ್ರದೀಪ್‍ವರ್ಮ, ಛಾಯಗ್ರಹಣ ಮುರಳಿಕ್ರಿಷ್, ಸಂಕಲನ ಡಿ.ಸರವಣನ್, ಸಂಭಾಷಣೆ ಸಚ್ಚಿನ್.ಬಿ.ಹೊಳಗುಂದಿ ತಂಡದಲ್ಲಿ ಇದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
31/07/18

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore