HOME
CINEMA NEWS
GALLERY
TV NEWS
REVIEWS
CONTACT US
ಕಿರುಚಿತ್ರ ದಿ ಗಿಲ್ಟ್
ಮುಂದೆ ಸಿನಿಮಾ ನಿರ್ದೇಶನ ಮಾಡುವವರಿಗೆ ಈಗ ಮೊದಲು ವೇದಿಕೆ ಮತ್ತು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗೋದು ಕಿರುಚಿತ್ರಗಳಲ್ಲಿ ಅಂತ ಹೊಸಬರು ತಿಳಿದುಕೊಂಡಿದ್ದಾರೆ. ಅದೇ ಕಾರಣದಿಂದ ಇಂದು ಅನೇಕ ಪ್ರತಿಭೆಗಳು ಇಂತಹ ಚಿತ್ರಗಳನ್ನು ಮಾಡುತ್ತಿದ್ದಾರೆ. ಅಂತಹವರ ಸಾಲಿಗೆ ಧೀರಜ್ ಎಂಬುವರು ‘ದಿ ಗಿಲ್ಟ್’ ಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ಬೆಂದಕಾಳೂರು ಪಿಕ್ಚರ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ. ಪ್ರತಿಯೊಂದು ತೊಂದರೆಗೂ ಪರಿಹಾರ ಇರುತ್ತದೆ. ಆತ್ಮಹತ್ಯೆ ಒಂದೇ ಉತ್ತರವಾಗಿರುವುದಿಲ್ಲ. ಇದರದೆ ಕುರಿತ ಹತ್ತು ನಿಮಿಷದ ಕಿರುಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿರುವುದು ಉಗ್ರಂ ಶ್ರೀಮುರುಳಿ. ಹುಟ್ಟು ಎನ್ನುವುದಕ್ಕೆ ಅರ್ಥ ಇದೆ. ಅದರಂತೆ ಸಾವು ಕೂಡ ಕೆಲವು ಸಲ ಪ್ರತಿಷ್ಠೆಯಿಂದ ಆಕಸ್ಮಿಕವಾಗಿ ಸಂಭವಿಸುತ್ತದೆ.

ಒಂದು ಮೊಟ್ಟೆಯ ಖ್ಯಾತಿ ಅಮೃತನಾಯಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ಮತ್ತು ಅಶ್ವಿನ್ ಇವರುಗಳಿಗೆ ಅಭಿನಯ ಹೊಸ ಅನುಭವ. ಸಾಮಾಜಿಕ ಸಂದೇಶ ಇರುವ ಚಿತ್ರವನ್ನು ಯುಟ್ಯೂಬ್‍ದಲ್ಲಿ ಅಳವಡಿಸಲಾಗಿ, ಇಲ್ಲಿಯವರೆವಿಗೂ 60000 ವೀಕ್ಷಕರು ನೋಡಿರುವುದು ತಂಡಕ್ಕೆ ಉತ್ಸಾಹ ತಂದಿದೆಯಂತೆ. ಮೊನ್ನೆ ತಾನೆ ಮಾದ್ಯಮದವರಿಗೆಂದು ವಿಶೇಷ ಪ್ರದರ್ಶನ ಏರ್ಪಾಟು ಮಾಡಲಾಗಿತ್ತು.
ಸಿನಿ ಸರ್ಕಲ್.ಇನ್ ನ್ಯೂಸ್
5/11/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore