HOME
CINEMA NEWS
GALLERY
TV NEWS
REVIEWS
CONTACT US
ತಾತನ ತಿಥಿಯಲ್ಲಿ ಮೊಮ್ಮಗನ ಪ್ರಸ್ಥ
ಕೃಷ್ಣಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ತಾತನ್ ತಿಥಿ ಮೊಮ್ಮಗನ ಪ್ರಸ್ಥ ಚಿತ್ರದಲ್ಲಿ ಮಂಡ್ಯ ಭಾಗದ ಗ್ರಾಮೀಣ ಜನರ ಹಾವಭಾವ, ಆ ಭಾಷೆಯ ಸೊಗಡನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ. ಹಳ್ಳಿಯ ಯುವಕನೊಬ್ಬ ಮದುವೆಯಾಗುವ ಸಂದರ್ಭದಲ್ಲಿ ನಡೆಯುವಂಥ ಒಂದಷ್ಟು ಘಟನೆಗಳನ್ನು ಹಾಸ್ಯದ ಲೇಪನದೊಂದಿಗೆ ನಿರ್ದೇಶಕ ಕೃಷ್ಣಚಂದ್ರ ಅವರು ಚಿತ್ರದಲ್ಲಿ ನಿರೂಪಿಸಿದ್ದಾರೆ. ಇಡೀ ಊರಿನಲ್ಲಿ ಸೆಂಚುರಿಗೌಡನ ವಂಶ ಎಂದರೆ ತುಂಬಾ ದೊಡ್ಡ ಹೆಸರು. ಆ ಸೆಂಚುರಿಗೌಡನ ಮರಣದ ನಂತರ ಆತನ ಮೊಮ್ಮಗ ಮದುವೆಯಾಗಲು ಹೊರಟಾಗ ಆತನಿಗೆ ಎದುರಾಗುವ ಸಂದರ್ಭಗಳೇ ಈ ಚಿತ್ರದ ಜೀವಾಳ. ತಾತನ ತಿಥಿಯಿಂದ ಆರಂಭವಾಗುವ ಈ ಚಿತ್ರದ ಕಥೆ, ಮೊಮ್ಮಗನ ಮದುವೆಯಾಗಿ ಆತನ ಮೊದಲರಾತ್ರಿ ನಡೆಯುವುದರೊಂದಿಗೆ ಕೊನೆಗೊಳ್ಳುತ್ತದೆ. ಮೊಮ್ಮಗನ ಪ್ರಸ್ಥವನ್ನು ನೋಡಬೇಕೆಂಬ ತಾತನ ಆಸೆಯೂ ಈಡೇರುತ್ತದೆ. ಇದರ ನಡುವೆ ಕಾಮಿಡಿ ಹಾಗೂ ಡಬಲ್ ಮೀನಿಂಗ್ ಡೈಲಾಗ್‍ಗಳು ಪಡ್ಡೆ ಹುಡುಗರನ್ನು ರಂಜಿಸುತ್ತವೆ. ಇಲ್ಲಿ ಯಾವುದೇ ಮೆಸೇಜನ್ನು ಹೇಳುವ ಪ್ರಯತ್ನ ಮಾಡದೆ ಕೇವಲ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉz್ದÉೀಶವನ್ನಷ್ಟೇ ಇಟ್ಟುಕೊಂಡು ಮಾಡಿರುವ ನಿರ್ದೇಶಕರ ಪ್ರಯತ್ನ ನಿಜಕ್ಕೂ ಮೆಚ್ಚುವಂಥಾz್ದÉೀ. ಪ್ರೇಕ್ಷಕ ಏನು ನಿರೀಕ್ಷಿಸಿ ಚಿತ್ರಮಂದಿರದೊಳಗೆ ಬರುತ್ತಾನೋ ಅದು ಖಂಡಿತ ಸಿಗುತ್ತದೆ. ಸೆಂಚುರಿಗೌಡನ ಮೊಮ್ಮಗ ಲೋಕಿ(ಲೋಕೇಶ್) ಹಾಗೂ ಜೋತಿಕಾ(ಶುಭಾಪುಂಜಾ) ಇವರಿಬ್ಬರನ್ನು ಒಂದುಗೂಡಿಸುವಲ್ಲಿ ನಿರ್ದೇಶಕರು ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಚಿತ್ರದಲ್ಲಿ ನಾಯಕಿ ಶುಭಾ ಪುಂಜಾ ಅಭಿನಯಕ್ಕಿಂತ ಹೆಚ್ಚಾಗಿ ತನ್ನ ಅಂಗಾಂಗಗಳ ಪ್ರದರ್ಶನಕ್ಕೇ ಹೆಚ್ಚು ಪ್ರಾಮುಖ್ಯತೆ ನೀಡಿದಂತಿದೆ. ನಾಯಕ ಲೋಕೇಶ್ ಏನೂ ಅರಿಯದ ಮುಗ್ಧನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಹಿರಿಯನಟ ಶ್ರೀನಿವಾಸ ಮೂರ್ತಿ ಅವರ ಸೀನಿಯಾರಿಟಿಗೆ ತಕ್ಕಂಥ ಪಾತ್ರ ಚಿತ್ರದಲ್ಲಿ ಸಿಕ್ಕಿಲ್ಲ. ಇನ್ನು ನಾಯಕಿಯ ಚಿಕ್ಕಪ್ಪನಾದ ಒಂ ಪ್ರಕಾಶ್‍ರಾವ್(ಓಂಪ್ರಕಾಶ್) ಜೋತಿಕಾ ಹಾಗೂ ಲೋಕಿ ಮದುವೆಯನ್ನು ತಪ್ಪಿಸಲು ಹೂಡಿದ ಉಪಾಯಗಳೆಲ್ಲಾ ತಲೆಕೆಳಗಾಗಿ ಕೊನೆಗೂ ಆ ಜೋಡಿಗಳು ತಮ್ಮ ಪ್ರಸ್ಥ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮದುವೆಯ ಸಂದಭರ್Àದಲ್ಲಿ ಆಹ್ವಾನ ಪತ್ರಿಕೆ ಮಾಡಿಸುತ್ತಾರೆ, ಆದರೆ ಇಲ್ಲಿ ಗಡ್ಡಪ್ಪ ಮೊಮ್ಮಗನ ಪ್ರಸ್ಥ ಸಮಾರಂಭಕ್ಕೂ ಇನ್‍ವಿಟೇಷನ್ ಪ್ರಿಂಟ್ ಮಾಡಿಸಿ ಗ್ರಾಮದ ತುಂಬೆಲ್ಲಾ ಹಂಚುವುದು ಇಲ್ಲಿ ವಿಶೇಷ. ಚಿತ್ರದಲ್ಲಿ ಶ್ರೀಧರ್ ವಿ.ಸಂಭ್ರಮ್ ಅವರ ಸಂಗೀತದಲ್ಲಿ ಮೂಡಿಬಂದಿರುವ 2 ಹಾಡುಗಳು ನೆನಪಲ್ಲುಳಿಯುವಂತಿವೆ. ಮಳವಳ್ಳಿ ಸಾಯಿಕೃಷ್ಣ ಹೆಣೆದಿರುವ ಗ್ರಾಮೀಣ ಸೊಗಡಿನ ಸಂಭಾಷಣೆಗಳು ಉತ್ತಮವಾಗಿ ಮೂಡಿಬಂದಿವೆ.

-Cine Circle News
-5/08/17

ತಾತನ್ ತಿಥಿ ಮೊಮ್ಮಗನ ಪ್ರಸ್ಥ
ಹಳ್ಳಿ ಸೊಗಡು ಸಾರುವ ಸಾಕಷ್ಟು ಚಿತ್ರಗಳು ತೆರೆಗೆ ಬಂದಿವೆ. ಇದರ ಸಾಲಿಗೆ ಸೇರ್ಪಡೆ ‘ತಾತನ್ ತಿಥಿ ಮೊಮ್ಮಗನ್ ಪ್ರಸ್ಥ’. ಶೀರ್ಷಿಕೆ ಕೇಳಿದರೆ ಇದೊಂದು ಹಾಸ್ಯ ಪ್ರಧಾನ ಸಿನಿಮಾ ಅಂದುಕೊಂಡರೆ ನಿಮ್ಮ ಊಹೆ ಸರಿಯಾಗಿದೆ. ತಾತನ ತಿಥಿಯಿಂದ ಮೊಮ್ಮಗನ ಪ್ರಸ್ಥದವರೆಗೆ ಸನ್ನವೇಶಗಳು ಹಾಸ್ಯದ ರೂಪದಲ್ಲಿ ಬರಲಿದೆ. ಅವಶ್ಯಕತೆಗೆ ಅನುಗುಣವಾಗಿ ಡಬ್ಬಲ್ ಮೀನಿಂಗ್ ಡೈಲಾಗ್ ಬರುತ್ತವೆ. ಕಲಾವಿದರನ್ನು ದುರುಪಯೋಗಪಡಿಸಿಕೊಂಡಿಲ್ಲ. ಹಾಗೆಯೇ ತಿಥಿ ಚಿತ್ರದ ಛಾಯೆ ಇರುವುದಿಲ್ಲವೆಂದು ತಂಡವು ಸ್ಪಷ್ಟಪಡಿಸುತ್ತದೆ. ಹಿರಿಯ ನಟಿ ಪದ್ಮವಾಸಂತಿ ಮಗ ಕೃಷ್ಣಚಂದ್ರ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಹಾಗೂ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದ್ದು ಈಗ ಸ್ವತಂತ್ರ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮಂಡ್ಯಾ ಸ್ಟಾರ್‍ದಲ್ಲಿ ನಟಿಸಿದ್ದ ಲೋಕೇಶ್ ಮೊಮ್ಮಗನಾಗಿ ನಾಯಕ. ತಾತನಾಗಿ ಸಂಚೆರಿಗೌಡ, ಇವರ ಮಗನಾಗಿ ಗಡ್ಡಪ್ಪ ಅಭಿನಯಿಸಿದ್ದಾರೆ. ಸಿಟಿಯಿಂದ ಹಳ್ಳಿಗೆ ಬಂದಾಗ ಅಲ್ಲಿ ನಡೆಯುವ ಘಟನೆಗಳಿಗೆ ಸಾಕ್ಷಿಯಾಗಿರುವ ಪಾತ್ರದಲ್ಲಿ ಶುಭಪೂಂಜಾ ನಾಯಕಿ.

ತಾರಬಳಗದಲ್ಲಿ ಶ್ರೀನಿವಾಸಮೂರ್ತಿ, ಪದ್ಮವಾಸಂತಿ, ಆಶಾಲತ, ಓಂಪ್ರಕಾಶ್‍ರಾವ್, ಎನ್.ಟಿ.ರಾಮಸ್ವಾಮಿ,ಮಿತ್ರಾ ಮುಂತಾದವರ ನಟನೆ ಇದೆ. ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದ ಮೂರು ಗೀತೆಗಳಿಗೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ನಾಗೇಶ್‍ಆಚಾರ್ಯ, ಸಂಕಲನ ರವಿ, ಸಂಭಾಷಣೆಗೆ ಮಳವಳ್ಳಿಸಾಯಿಕೃಷ್ಣರವರ ಪೆನ್ನು ಕೆಲಸ ಮಾಡಿದೆ. ಮುಸ್ಸಂಜೆ ಮಹೇಶ್ ತಂಡಕ್ಕೆ ಸಲಹೆ, ಸಹಕಾರ ನೀಡಿರುವುದು ತಂಡಕ್ಕೆ ಶಕ್ತಿ ಬಂದಿದೆಯಂತೆ. ಬಿಲ್ಡರ್ ಆಗಿರುವ ಮಧುಕುಮಾರ್,ಮಂಜುನಾಥ ನಿರ್ಮಾಪಕರುಗಳಾಗಿ ಗಾಂದಿನಗರದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯದಲ್ಲೆ ಸೆನ್ಸಾರ್ ಆಗಲಿದ್ದು, ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ. ಇತ್ತೀಚೆಗಷ್ಟೆ ಚಿತ್ರದ ಮೂರು ಹಾಡುಗಳು, ಟ್ರೈಲರ್‍ನ್ನು ಮಾದ್ಯಮದವರಿಗೆ ತೋರಿಸಲಾಯಿತು.

-29/07/17For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/