HOME
CINEMA NEWS
GALLERY
TV NEWS
REVIEWS
CONTACT US
ಟಕ್ಕರ್‍ಗೆದರ್ಶನ್ ಸಾಥ್
ಆಕ್ಷನ್‍ಚಿತ್ರ‘ಟಕ್ಕರ್’ ಚಿತ್ರಕ್ಕೆ ಪ್ರಾರಂಭದಿಂದಲೂದರ್ಶನ್‍ಸಲಹೆ, ಸಹಕಾರ ನೀಡುತ್ತಿರುವುದರಿಂದತಂಡಕ್ಕೆ ಆನೆ ಬಲ ಬಂದಂತೆಆಗಿದೆಅಂತನಿರ್ಮಾಪಕ ಕೆ.ಎನ್.ನಾಗೇಶ್‍ಕೋಗಿಲುಧ್ವನಿಸಾಂದ್ರಿಕೆಅನಾವರಣ ಸಂದರ್ಭದಲ್ಲಿಖುಷಿಯಿಂದ ಹೇಳಿಕೊಂಡರು. ಮೊದಲ ಭೇಟಿಯಲ್ಲೆ ನಿರ್ಮಾಪಕರನ್ನು ಮೊದಲುಉದ್ಯಮದಲ್ಲಿ ಉಳಿಸುವ ಕೆಲಸ ಮಾಡಬೇಕುಅಂತ ಕಿವಿಮಾತನ್ನುತಂಡಕ್ಕೆ ಹೇಳಿದರು. ಚಿತ್ರೀಕರಣದ ಸಮಯದಲ್ಲಿ ಏನೇನು ಆಗುತ್ತಿದೆಎಂದು ವಿಚಾರಿಸುತ್ತಿದ್ದರುಎಂದುಹೇಳಿದರು.

ಮೊಬೈಲ್ ಮತ್ತುಇಂಟರ್‍ನೆಟ್‍ನಿಂದಏನೆಲ್ಲಾ ಅನಾಹುತಗಳು ಸಂಭವಿಸುತ್ತದೆ.ಮಹಿಳೆಯರಿಗೆ ಅದು ಹೇಗೆ ಮಾರಕವಾಗುತ್ತದೆ ಮತ್ತುಜಾಗತಿಕ ಸಮಸ್ಯೆಕುರಿತ ಕೆಲವೊಂದು ಅಂಶಗಳು ಇದರಜೊತೆಗೆಚಿಕ್ಕದಾದ ಪ್ರೀತಿಕತೆಇರಲಿದೆ.ತಾಂತ್ರಿಕವಾಗಿಕತೆಯು ಮುಂದಿನ ಐದು ವರ್ಷಕ್ಕೆ ಪೂರಕವಾಗುವಂತೆ ಸನ್ನಿವೇಶಗಳು ಇರಲಿದೆ. ಸಂಚಾರಿದೂರವಾಣಿಯನ್ನುಆದಷ್ಟುಎಚ್ಚರಿಕೆಯಿಂದ ಬಳಸಬೇಕು, ಹಾಗೂ ಇದನ್ನು ಹೇಗೆ ತಡೆಯಬಹುದೆಂದು ಸಂದೇಶದಲ್ಲಿ ಹೇಳಲಾಗಿದೆ.

ಐದು ಫೈಟುಗಳಲ್ಲಿ ಡ್ಯೂಪ್ ಬಳಸದೆ, ಕಾಲೇಜು ಹುಡುಗನಾಗಿ ಮನೋಜ್‍ಮುಖ್ಯ ಪಾತ್ರ. ಮೆಡಿಕಲ್ ವಿದ್ಯಾರ್ಥಿ ಮುಗ್ದ ಹುಡುಗಿಯಾಗಿ ಪುಟ್ಟಗೌರಿಖ್ಯಾತಿಯರಂಜನಿರಾಘವನ್‍ಅವರಿಗೆ ನಾಯಕಿಯಾಗಿಎರಡನೇ ಅವಕಾಶ. ಖಳನಾಗಿ ಭಜರಂಗಿಲೋಕಿ, ಸುಮಿತ್ರ, ಶ್ರೀಧರ್, ಜೈಜಗದೀಶ್ ಮುಂತಾದವರು ಅಭಿನಯಿಸಿದ್ದಾರೆ. ರನ್‍ಆ್ಯಂಟೋನಿ ನಿರ್ದೇಶಕ ವಿ.ರಘುಶಾಸ್ತ್ರೀ, ರಚನೆ, ಒಂದು ಹಾಡಿಗೆ ಸಾಹಿತ್ಯ ಬರೆದುಆಕ್ಷನ್‍ಕಟ್ ಹೇಳಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಸಾಹಿತ್ಯದಎರಡು ಹಾಡುಗಳಿಗೆ ಕದ್ರಿಮಣಿಕಾಂತ್ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ವಿಲಿಯಂಡೇವಿಡ್, ಸಾಹಸ ಡಿಫರೆಂಟ್‍ಡ್ಯಾನಿ, ಸಂಕಲನ ಕೆ.ಎಂ.ಪ್ರಕಾಶ್, ನೃತ್ಯ ಮೋಹನ್,ಸಂಭಾಷಣೆಗೆಗುರುರಾಜದೇಸಾಯಿ ಪದಗಳನ್ನು ಪೋಣಿಸಿದ್ದಾರೆ. ದೊಡ್ಡಮ್ಮನ ಮೊಮ್ಮಗನಾಗಿರುವ ಮನೋಜ್‍ಗೆ ಒಳ್ಳೆಯದಾಗಬೇಕು.ತುಣುಕುಗಳುಚೆನ್ನಾಗಿ ಬಂದಿದೆ. ನಿರ್ಮಾಪಕರುಆಸಕ್ತಿಯಿಂದ ನಿರ್ಮಾಣ ಮಾಡಿದ್ದಾರೆ.ಇಂಹವವರುಚಿತ್ರರಂಗದಲ್ಲಿ ಉಳಿಯಬೇಕು ಎಂದುದರ್ಶನ್ ಹೇಳುವುದರೊಂದಿಗೆ ಸುಂದರ ಸಮಯಕ್ಕೆ ಪರದೆ ಬಿತ್ತು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/09/19






For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore