HOME
CINEMA NEWS
GALLERY
TV NEWS
REVIEWS
CONTACT US
ಟ್ಯೂಬ್ ಲೈಟ್ ಆಟ ಆಡಿ ಬಹುಮಾನ ನಿಮ್ಮದಾಗಿಸಿಕೊಳ್ಳಿ
ನಾಲ್ಕು ವರ್ಷದ ಕೆಳಗೆ ‘ಟ್ಯೂಬ್ ಲೈಟ್’ ಅಡಿ ಬರಹದಲ್ಲಿ ಜಿಂಗ್ ಚಾಕ್ ಜಿಗಿ ಜಿಗಿ ಚಾಕ್ ಎನ್ನುವ ಚಿತ್ರವು ಸೆಟ್ಟೇರಿದಾಗ ಎಲ್ಲರೂ ಹೊಸಬರಾಗಿದ್ದರು. ಇಂದು ಕಲಾವಿದರು, ತಂತ್ರಜ್ಘರು ತಮ್ಮದೇ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ. ಕತೆ ಬರೆದು ನಿರ್ದೇಶನ ಮಾಡಿರುವ ವೇಣುಗೋಪಾಲ್ ಹೇಳುವಂತೆ ಪ್ರಯಾಣದಲ್ಲಿ ಸಿನಿಮಾ ಸಾಗುವುದರಿಂದ ಹವಮಾನಕ್ಕೆ ಅನುಗುಣವಾಗಿ ಲಡಾಕ್, ಹಿಮಾಲಯ, ಶ್ರೀನಗರ, ಶಾರ್ದೂಲ ಸ್ಥಳಗಳಲ್ಲಿ ಎರಡು ಬಾರಿ ಚಿತ್ರೀಕರಣ ನಡೆಸಲಾದ ಕಾರಣ ತಡವಾಗಿದೆ. ನಾಲ್ಕು ಪಾತ್ರಗಳು ಕತೆಯನ್ನು ತೆಗೆದುಕೊಂಡು ಹೋಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ದಾರಿ ಇದ್ದೇ ಇರುತ್ತದೆ. ದಾರಿ ತಪ್ಪಿದರೆ ಏನಾಗುತ್ತದೆ ಎಂಬುದು ಸಿನಿಮಾದ ಸಾರಾಂಶವಾಗಿದೆ ಎಂದಷ್ಟೇ ಹೇಳಿ ಕುತೂಹಲ ಕಾಯ್ದರಿಸಿದರು.
ಪ್ರಚಾರದ ಸಲುವಾಗಿ ಶೀರ್ಷಿಕೆ ಹೆಸರಿನಲ್ಲಿ ಆಟವನ್ನು ಸಿದ್ದಪಡಿಸಲಾಗಿದೆ. ಒಟ್ಟು ಹದಿನೈದು ಲೆವಲ್‍ಗಳು ಇರಲಿದ್ದು, ಐದು ಲೆವಲ್ ಗೆದ್ದವರಿಗೆ ಬಹುಮಾನ ಮತ್ತು ಚಿತ್ರ ನೋಡಲು ಪಾಸ್ ನೀಡಲಾಗುತ್ತದಂತೆ. ವೆಂಕಟಾದ್ರಿ ಸಿದ್ದಪಡಿಸಿರುವ ಆಟವನ್ನು ಸ್ಮಾರ್ಟ್ ಫೋನ್‍ನಲ್ಲಿ ಆಡಬಹುದು.

ಸ್ಥಿರಛಾಯಗ್ರಾಹಕನಾಗಿ ಕೆಲಸದ ನಿಮಿತ್ತ ಲಡಾಕ್‍ಗೆ ಬುಲೆಟ್‍ನಲ್ಲಿ ಹೋಗಬೇಕಾಗುತ್ತದೆ. ಒಬ್ಬರೆ ಹೋಗಲು ಕಷ್ಟವಾಗುವುದರಿಂದ ಮೂವರು ಗೆಳಯರನ್ನು ಸೇರಿಸಿಕೊಳ್ಳುತ್ತೇನೆ. ದಾರಿಯಲ್ಲ್ಲಿ ಏನೇನು ಘಟನೆಗಳು ನಡೆಯುತ್ತವೆ, ಅದರಿಂದ ಗೆಳತನದಲ್ಲಿ ಭಿನ್ನಾಭಿಪ್ರಾಯ ಬಂದು ಕ್ಲೈಮಾಕ್ಸ್ ಏನಾಗುತ್ತದೆ ಎಂಬುದನ್ನು ಚಿತ್ರ ನೋಡಿ ಅಂತಾರೆ ನಾಯಕ ಗುರುನಂದನ್. ಡಿಸ್ಕೋಜಾಕಿಯಾಗಿ ಹೆಣ್ಣಿಗೆ ಬೆಲೆಕೊಡದ ಅಜಯ್‍ರಾಜ್, ಪ್ರಚಲಿತ ಯುವಜನಾಂಗದ ಪ್ರತಿನಿಧಿಯಾಗಿ ಆರ್ಯನ್, ಹುಕ್ಕಾಬಾರ್ ಮಾಲೀಕನಾಗಿ ರಾಜ್ ಪಾತ್ರದ ಪರಿಚಯ ಮಾಡಿಕೊಂಡರು.

ಕಡಿಮೆ ಅವಧಿಯಲ್ಲಿ ಬಂದರೂ ಚಿತ್ರಕ್ಕೆ ಲೈಮ್‍ಲೈಟ್ ಆಗಿ ಕಲ್ಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮಠ ಗುರುಪ್ರಸಾದ್ ಮಾತನಾಡಿ, ಛಾಯಗ್ರಹಣ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ನೋಡುಗರಿಗೆ ಅಂತಹ ಜಾಗಕ್ಕೆ ಹೋದಂತೆ ಭಾಸವಾಗುತ್ತದೆ. ಪ್ರತಿಯೊಂದು ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ಮೀನನ್ನು ಸಮುದ್ರಕ್ಕೆ ಎಸೆದು ಮತ್ತೆ ಅದನ್ನು ತೆಗೆಯುವಂತೆ ನಿರ್ದೇಶಕರು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹೆಣ್ಣು ಒಂಬತ್ತು ತಿಂಗಳ ನಂತರ ಮಗುವನ್ನು ಪ್ರಪಂಚಕ್ಕೆ ಬಿಡುತ್ತಾಳೆ. ಆದರೆ ಇವರು ನಾಲ್ಕು ವರ್ಷ ಗರ್ಭದಲ್ಲಿ ಇರಿಸಿಕೊಂಡು, ಈಗ ಹೂರಗೆ ಬರುತ್ತಿದ್ದಾರೆ. ಅವರ ಹೆರಿಗೆ ಯಶಸ್ವಿಯಾಗಲೆಂದು ಮೈಕನ್ನು ಕೆಳಗೆ ಇಟ್ಟರು.

ಛಾಯಗ್ರಾಹಕ ಮನೋಹರ್‍ಜೋಷಿ, ಚಿತ್ರವನ್ನು ಖರೀದಿ ಮಾಡಿರುವ ವೆಂಕಟ್, ಸಹಾನಾಚಂದ್ರಶೇಖರ್ ಇವರೊಂದಿಗೆ ತಂಡಕ್ಕೆ ಶುಭ ಹಾರೈಸಲು ಪ್ರಶಸ್ತಿ ವಿಜೇತ ನಿರ್ದೇಶಕರುಗಳಾದ ಶುದ್ದಿಯ ಆದರ್ಶ್‍ಈಶ್ವರಪ್ಪ, ಮದಿಪುನ ಚೇತನ್‍ಉಂಡಾಡಿ ಮತ್ತು ನಟಿ ರೂಪಿಕಾ ಉಪಸ್ತಿತರಿದ್ದರು. ಪೂರ್ಣಿಮಾಜಗನ್ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/11/18
FIRST TO SHOOT AT HIGHEST AREA ‘TUBE LIGHT
‘Tube Light’ is the first Kannada film in India to shoot at Kurdangla Paus besides Koksar, Kelong, Spiti Valley, Sarachu etc. It is the first film to shoot at highest level that could be reached by motor bike.

The credit for it goes to KVR movies. The first look and trailer of the film were screened at Renukamba Digital theatre on Saturday night in the presence of Srinagara Kitty, Suni, Rakshit Shetty and other team members of ‘Tube Light’.

Giving explanation of the world highest motor road area shoot director Venugopal disclosed that he had done a short film first that got the facelift of a film. Traveling 4500 kilometers in bike to shoot for the film was not at all an easy task he says. For remaining forty percent of shoot he is going to Goa again on motorbike.

Manohar Joshi ace cameraman today in Kannada filmdom with three films to his credit is the main force behind taking up shoot in such peak spots. I am a motorbike freak and my crazy attitude of four years took me to this place. With minimum equipment we have done shooting in tough condition. With ordinary bulbs I was able to shoot in the night portions for the film.

Kiran Ravindranath is music composer of five songs, three of the five are written by Hrudashiva and two by director Venugopal.

Actors of the film Raghunandan, Nanjunda, Aryan, Rajendra explained in brief the experiences.
-11/01/14

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\