HOME
CINEMA NEWS
GALLERY
TV NEWS
REVIEWS
CONTACT US

ಮಾಸ್ ಆಡಿಯನ್ಸ್ ಗೆ ಭರಪೂರ ಮನರಂಜನೆ
ಅಡುಗೆ ಮಾಡುವಾಗ ಯಾರಿಗಾಗಿ ಅಡುಗೆ ಮಾಡುತ್ತೇವೆ ಎನ್ನುವುದು ಮುಖ್ಯ. ಹಾಗಿದ್ದಾಗ ಅವರಿಗೆ ತಕ್ಕಂತೆ ರುಚಿ,ಶುಚಿಯಾದ ಅಡುಗೆ ಮಾಡುವುದಕ್ಕೆ ಸಾಧ್ಯ. ಅದನ್ನು ಅರಿತುಕೊಂಡ ನಿರ್ದೇಶಕ ನಂದ ಕಿಶೋರ್ ಪಕ್ಕಾ ಮಾಸ್ ಆಡಿಯನ್ಸ್ ಗೆ ತಕ್ಕಂತೆ ಹದವರಿತ ಮನರಂಜನೆಯ ಅಡುಗೆ ಬಡಿಸಿದ್ದಾರೆ ಟೈಗರ್ ಮೂಲಕ. ನಟ ಪ್ರದೀಪ್ ದೃಷ್ಟಿಯಿಂದ ಇದು ನಿಜಕ್ಕೂ ರೀ ಲಾಂಚ್ ಸಿನಿಮಾ.
ಇಷ್ಟು ದಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಪೂರ್ಣ ಪ್ರಮಾಣದ ಮಾಸ್ ಹೀರೋ ಆಗಿ ಲಾಂಚ್ ಆಗುವ ಉದ್ದೇಶದಿಂದ ನಟ ಪ್ರದೀಪ್ ತೀರಾ ಮುತುವರ್ಜಿ ವಹಿಸಿ ರೂಪಿಸಿರುವ ಸಿನಿಮಾ. ಜೊತೆಗೆ ಮಾವ ಕೆ. ಶಿವರಾಮ್ ಮತ್ತು ಅಳಿಯ ಪ್ರದೀಪ್ ಒಟ್ಟಿಗೇ ತೆರೆ ಹಂಚಿಕೊಂಡಿರೋದು ವಿಶೇಷ.

ಸ್ಟಾರ್ ಎನಿಸಿಕೊಂಡ ನಟರಿಗೆ ಆ್ಯಕ್ಷನ್ ಕಟ್ ಹೇಳಿ ವಿಕ್ಟರಿ ನಿರ್ದೇಶಕ ಎನಿಸಿಕೊಂಡಿದ್ದ ನಂದ ಕಿಶೋರ್, ಇದೇ ಮೊದಲು ಸ್ಟಾರ್ ಅಲ್ಲದ ನಟನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.ಅಷ್ಟೇ ಅಲ್ಲ,ಬಹುಪಾಲು ರಿಮೇಕ್ ಸಿನಿಮಾಗಳನ್ನೇ ನೆಚ್ಚಿಕೊಂಡಿದ್ದರು.ಅದನ್ನು ಬ್ರೇಕ್ ಮಾಡಿ ನಿರ್ದೇಶಿಸಿದ ಸ್ವಮೇಕ್ ಸಿನಿಮಾವಿದು.ಪ್ರದೀಪ್ ಈಗಾಗಲೇ ಹೀರೋ ಅನಿಸಿಕೊಂಡಿದ್ದರೂ ಸ್ಟಾರ್ ಅಂತಾ ಗುರುತಿಸಿಕೊಳ್ಳೋ ಮಟ್ಟಕ್ಕೆ ಬೆಳೆದಿಲ್ಲ. ಹೀಗಾಗಿ ಪ್ರದೀಪ್‌ಗೆ ಸ್ಟಾರ್ ಪಟ್ಟ ತಂದುಕೊಟ್ಟು ಸ್ಟಾರ್‌ಗಳಿಗೆ ಮಾತ್ರವಲ್ಲ ಸಿನಿಮಾ ಮಾಡೋದು ಮಾತ್ರವಲ್ಲ, ತಾನೊಬ್ಬ ಸ್ಟಾರ್ ಮೇಕರ್ ಅಂತಾ ಪ್ರೂವ್ ಮಾಡಿಕೊಳ್ಳುವ ಜರೂರತ್ತಿನಲ್ಲಿ ನಂದ ಕಿಶೋರ್ `ಟೈಗರ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ತಾನೊಬ್ಬ ಪೊಲೀಸ್ ಅಧಿಕಾರಿಯಾಗಲೇಬೇಕು ಎಂದು ಪಣ ತೊಟ್ಟ ಮಗ, ತನ್ನ ಮಗ ಬ್ಯಾಂಕ್ ಮ್ಯಾನೇಜರ್ ಆಗಬೇಕು ಅಂತಾ ಹಠ ಹಿಡಿದು ಮಗ ಪೊಲೀಸ್ ಆಫೀಸರ್ ಆಗೋದನ್ನು ತಡೆಯಲು ಯತ್ನಿಸುವ ಅಪ್ಪ. ದುಷ್ಟ ಎಂಎಲ್‌ಎ ಕಾಕದೃಷ್ಟಿಗೆ ಸಿಲುಕಿ ಒದ್ದಾಡುವ ನಾಯಕಿ ಮತ್ತಾಕೆಯ ಫ್ಯಾಮಿಲಿ. ಹುಡುಗಿಗಾಗಿ ಶಾಸಕನನ್ನು ಎದುರುಹಾಕಿಕೊಂಡು ಥೇಟು ಟೈಗರ್ ಥರಾ ಘರ್ಜಿಸೋ ಹುಡುಗ.... ಇಷ್ಟೇ ಆದರೆ ಕತೆ ಮಾಮೂಲಿ ಅನ್ನಿಸಿಬಿಡುತ್ತಿತ್ತೇನೋ. ಆದರೆ ಹಾಗನ್ನಿಸೋ ಮುಂಚೇನೇ ಕತೆ ಫ್ಲಾಷ್ ಬ್ಯಾಕ್‌ಗೆ ಹೊರಳಿಕೊಂಡು ಮುಂಬೈಗೆ ಶಿಫ್ಟ್ ಆಗುತ್ತದೆ. ಹೀರೋ ತಂದೆ ಯಾಕೆ ಮಗ ಪೊಲೀಸ್ ಆಫೀಸರ್ ಆಗೋದನ್ನು ವಿರೋಧಿಸುತ್ತಿರುತ್ತಾನೆ? ಅನ್ನೋ ಅಸಲೀಯತ್ತು ಪ್ರೇಕ್ಷಕರ ಮುಂದೆ ಅನಾವರಣವಾಗುತ್ತದೆ. ಮಾತ್ರವಲ್ಲ, ಹೀರೋ ಟೈಗರ್ ಮಾತ್ರವಲ್ಲ, ಟೈಗರ್ ಹೊಟ್ಟೇಲಿ ಹುಟ್ಟಿದ ಮರಿ ಟೈಗರ್ ಅನ್ನೋದು ಕೂಡಾ ಗೊತ್ತಾಗುತ್ತದೆ. ಈ ಎರಡೂ ಟೈಗರ್‌ಗಳ ದುಷ್ಮನ್‌ಗಳು ಒಂದಾಗಿ ಅಪ್ಪ-ಮಗನನ್ನು ಮಟ್ಟ ಹಾಕುವ ಸಂಚು ರೂಪಿಸುತ್ತಾರೆ. ಆ ಎಲ್ಲ ಸಂಚುಗಳನ್ನೂ ಬೇಧಿಸಿಕೊಂಡು ಟೈಗರುಗಳು ಹೇಗೆ ಗೆಲುವು ಸಾಧಿಸುತ್ತವೆ ಅನ್ನೋದು ಸಿನಿಮಾದ ಅಂತಿಮ ತಿರುಳು!

ಈ ನಡುವೆ ಒಂದಿಷ್ಟು ಹಾಸ್ಯ, ಫ್ಯಾಮಿಲಿ ಸೆಂಟಿಮೆಂಟು, ಗನ್ನು ಹಿಡಿದ ಪೊಲೀಸರ ಗತ್ತು, ಸಮಾಜ ಕಂಟಕರ ಮಿಲಾಕತ್ತು ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದೆ. ಚಿತ್ರಕತೆ ಕತೆ ಬಿಗಿಯಾಗಿದ್ದರೂ ಚಿತ್ರಕತೆ ಎಳೆದಾಡಿದಂತಾಗಿದೆ. ಮಾಸ್ ಹೀರೋ ಆಗುಬ ಕನಸು ಹೊತ್ತಿರುವ ಪ್ರದೀಪ್ ಅಬ್ಬರಿಸದೆಯೂ ಒಳ್ಳೇ ನಟನೆ ನೀಡಬಹುದಿತ್ತು. ಇನ್ನು ಚಿತ್ರದ ಅತಿ ದೊಡ್ಡ ಮೈನಸ್ ಪಾಯಿಂಟ್ ಓಲ್ಡ್ ಟೈಗರ್! ಕೈಲಿ ಗನ್ನು ಹಿಡಿದು ಕ್ರಿಮಿಗಳನ್ನು ಕೊಂದು, ಸಮಾಜ ಕಲ್ಯಾಣ ಮಾಡುವ ಅಧಿಕಾರಿಯ ಪಾತ್ರದಲ್ಲಿ ಕೆ. ಶಿವರಾಮ್ ಅವರ ನಟನೆ ಸಪ್ಪೆ ಸಪ್ಪೆ. ಈ ಪಾತ್ರಕ್ಕೆ ಶಿವರಾಮ್ ಅಕ್ಷರಶಃ ಅನ್ ಫಿಟ್. ಈ ಪಾತ್ರವನ್ನು ಬೇರೆ ಯಾವುದೇ ಹಿರಿಯ ನಟ ನಿಭಾಯಿಸಿದ್ದಲ್ಲಿ ಚಿತ್ರದ ತೂಕವೇ ಬೇರೆಯಾಗಿರುತ್ತಿತ್ತು. ನಟ ರವಿಶಂಕರ್ ಅವರದ್ದು ಎದುರು ಯಾರೇ ನಿಂತರೂ ಅವರನ್ನು ನುಂಗಿಹಾಕುವಂತಾ ನಟನೆ. ಅಪರೂಪಕ್ಕೆನ್ನುವಂತೆ ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಕಾಮಿಡಿ ಸಖತ್ ವರ್ಕೌಟ್ ಆದಂತಿದೆ. ಛಾಯಾಗ್ರಹಣ, ಸಂಗೀತ, ಹಿನ್ನೆಲೆ ಸಂಗೀತ ಮತ್ತು ನಿರ್ದೇಶನ ಎಲ್ಲವೂ ಹದವಾಗಿವೆ. ಒಂದು ಸಲ ನೋಡಬಹುದಾದ ಮನರಂಜನಾ ಸಿನಿಮಾ ಟೈಗರ್...
-16/06/17

`ಟೈಗರ್’ 16-6-2017 ತೆರೆಗೆ
ಇಂಚರ ಫಿûಲಂ ¥sóÁ್ಯಕ್ಟರಿ ಲಾಂಛನದಲ್ಲಿ ಶ್ರೀಮತಿ ಚಿಕ್ಕಬೋರಮ್ಮ ಅವರು ನಿರ್ಮಿಸಿರುವ, ನಂದಕಿಶೋರ್ ನಿರ್ದೇಶನದ ಹಾಗೂ ಕೆ.ಶಿವರಾಮ್ ಅವರ ಅಳಿಯ ಪ್ರದೀಪ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಟೈಗರ್ ಈ ವಾರ ರಾಜ್ಯಾಧ್ಯಂತ ತೆರೆ ಕಾಣಲಿದೆ.

ಪ್ರದೀಪ್ ಈ ಚಿತ್ರದಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿ ಕಾಣ ಸಿಕೊಂಡಿದ್ದಾರೆ. ಪಂಚಿಂಗ್ ಡೈಲಾಗುಗಳನ್ನು ಹೊಂದಿದ್ದ ಈ ಚಿತ್ರದ ಟ್ರೈಲರ್ ಈಗಾಗಲೇ ಭಾರೀ ಕುತೂಹಲ ಹುಟ್ಟು ಹಾಕಿದೆ. ಜೊತೆಗೆ ಹಾಡುಗಳೂ ಕೂಡಾ ಹಿಟ್ ಆಗಿರೋದರಿಂದ ನಿರೀಕ್ಷೆ ಸಹಜವಾಗಿಯೆ ಹೆಚ್ಚಾಗಿದೆ.

ಪ್ರದೀಪ್ ಅವರನ್ನು ಮಾಸ್ ಹೀರೋ ಆಗಿ ನೆಲೆ ನಿಲ್ಲಿಸಬೇಕೆಂಬ ಸಂಕಲ್ಪದೊಂದಿಗೇ ನಿರ್ದೆಶಕ ನಂದ ಕಿಶೋರ್ ಈ ಚಿತ್ರದ ಕಥೆ ಹೆಣೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ರವಿವರ್ಮ, ಗಣೇಶ್, ಥ್ರಿಲ್ಲರ್ ಮಂಜು, ಡಿ¥sóÀರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಹರ್ಷ, ಮುರಳಿ, ಧನ್‍ಕುಮಾರ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ಪ್ರದೀಪ್, ಮಧುರಿಮಾ, ಕೆ.ಶಿವರಾಂ, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯಣ ರಘು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
-16/06/17
ಟೈಗರ್ ಸೂಪರ್ ಅಂತಾರೆ ಸುದೀಪ್
ಹೊಸ ಚಿತ್ರ ‘ಟೈಗರ್’ ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್ ಮಾತನಾಡುತ್ತಾ ಪ್ರದೀಪ್‍ರನ್ನು ರೀಇಂಟ್ರ್ರಿಡ್ಯೂಸ್ ಎಂದು ಹೇಳಿರುವುದು ತಪ್ಪು ಶಬ್ದ ಕೊಡುತ್ತೆ. ಅವರಲ್ಲಿ ಪ್ರತಿಭೆ ತುಂಬಿಕೊಂಡಿದೆ. ಅನುಭವಗಳನ್ನು ಚೆನ್ನಾಗಿ ಮಾಡಿಸಿದೆ. ಅವರ ನಟನೆಯಲ್ಲಿ ಕಿರುಚಿತ್ರ ನಿರ್ದೇಶನ ಮಾಡಲಾಗಿ ಐಫೋನ್‍ನಲ್ಲಿ ಸೆರೆಹಿಡಿಯಲಾಗಿತ್ತು. ಸದ್ಯದಲ್ಲೆ ಯುಟ್ಯೂಬ್‍ಗೆ ಬಿಡಲಾಗುವುದು. ಅವರು ನಿರ್ದೇಶಕನ ನಟ. ಈ ಸಿನಿಮಾದಿಂದ ಹೆಸರು ಬರಬಹುದು ಅಂತ ನಂಬಿದ್ದೇನೆ. ಸನ್ನಿವೇಶದಲ್ಲಿ ಮಾವ-ಅಳಿಯ, ಅಳಿಯ-ಮಾವನೆಂದು ತಿಳಿಯುವುದಿಲ್ಲ. ಮಗ ಅಂತ ನೋಡದೆ ಹೆಚ್ಚು ದುಡ್ಡನ್ನು ಖರ್ಚು ಮಾಡಿರುವುದು ತೆರೆ ಮೇಲೆ ಕಾಣ ಸುತ್ತದೆ. ಹಿರಿಯ ಅಧಿಕಾರಿಯಾಗಿ ಚಿತ್ರರಂಗ ಬಲ್ಲವರು ಇಂತಹ ಪಾತ್ರ ಮಾಡಿದ್ದೀರಾ ಎಂಬುದು ನಂತರ ಗೊತ್ತಾಗುತ್ತದೆ. ದೃಶ್ಯ ಅರ್ಥವಾಗುವಂತೆ ಮಾಡುವುದು ಹಿನ್ನಲೆ ಸಂಗೀತ. ಅದನ್ನು ಅದ್ಬುತವಾಗಿ ಮಾಡಿರುವ ಅರ್ಜುನ್‍ಜನ್ಯರಿಗೆ ಹ್ಯಾಟ್ಸ್‍ಆಫ್. ಪ್ರತಿ ಸಿನಿಮಾದಲ್ಲಿ ಆಶ್ಚರ್ಯವನ್ನು ತರುತ್ತಾರೆ. ಚಿತ್ರದ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಕ್ಲೈಮಾಕ್ಸ್‍ನಲ್ಲಿ ಸಿಗಲಿದೆ ಎಂದರು. ನಮಗೆ ಹೇಳದೆ ಒಂದು ಗೀತೆಗೆ ಧ್ವನಿಯಾಗಿರುವ ಸುದೀಪ್‍ಗೆ ಥ್ಯಾಂಕ್ಸ್. 24 ಹಿರಿಯ ಕಲಾವಿದರು, 7 ಹಾಸ್ಯ ನಟರು ನಟಿಸಿದ್ದಾರೆ. ಏನೇ ಕ್ರೆಡಿಟ್ ಬಂದರೂ ಸುದೀಪ್, ನಿರ್ದೇಶಕರಿಗೆ ಸಲ್ಲಬೇಕು ಎಂದು ಹೇಳಿದ್ದು ನಿರ್ಮಾಪಕ ಹಾಗೂ ನಾಯಕನ ತಂದೆಯಾಗಿ ಕಾಣ ಸಿಕೊಂಡಿರುವ ಕೆ.ಶಿವರಾಂ.

ಮಾವ ಗಾಡ್‍ಫಾದರ್, ಸುದೀಪ್ ಜೀವಾಳ. ಇಬ್ಬರೂ ಇಲ್ಲದಿದ್ದರೆ ಸಿನಿಮಾ ಆಗುತ್ತಿರಲಿಲ್ಲ. ಕೊನೆ ಉಸಿರು ಇರುವವರೆಗೂ ಇಬ್ಬರ ಋಣವನ್ನು ತೀರಸಲಿಕ್ಕೆ ಆಗದು. ಬೇರೆ ತರಹದಲ್ಲಿ ತೋರಿಸಿರುವುದರಿಂದ ಇದರಿಂದ ಇಮೇಜ್ ಬದಲಾಗಬಹುದು. ಒಂದೂವರೆ ವರ್ಷದಿಂದ ಪಾತ್ರದ ಮೇಲೆ ತಲ್ಲೀನನಾಗಿದ್ದರಿಂದ ಕುಟುಂಬದ ಕಡೆಗೆ ಗಮನ ಹರಿಸಲಿಲ್ಲ. ತಾಳ್ಮೆ ಕಳೆದುಕೊಳ್ಳದೆ ಪತ್ನಿ ಸಾಥ್ ನೀಡಿದ್ದಾರೆ. ಹಾಡುಗಳು, ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್ ಎಂಬುದಾಗಿ ಪರಿಚಿಯಿಸಿಕೊಂಡರು ಪ್ರದೀಪ್. ನನ್ನ ಪಾತ್ರವು ಬಬ್ಲಿಯಾಗಿದೆ ಅಂತ ಇಂಗ್ಲೀಷಿನಲ್ಲಿ ನುಲಿದರು ನಾಯಕಿ ನಯಿರಾಬ್ಯಾನರ್ಜಿ. ಕತೆ,ಚಿತ್ರಕತೆ ಸೋದರ ತರುಣ್‍ಕಿಶೋರ್ ಅವರದು. ನನ್ನದೇನಿದ್ದರೂ ನಿರ್ದೇಶನ ಅಷ್ಟೆ ಎಂಬ ಮಾತು ನಂದಕಿಶೋರ್ ಅವರದಾಗಿತ್ತು. ಅರ್ಜುನ್‍ಜನ್ಯಾ ಎಂದಿನಂತೆ ಮಾದ್ಯಮದವರ ಸಹಕಾರ ಕೋರಿದರು. ವಿತರಕ ಜಾಕ್‍ಮಂಜು ಮುಖಾಂತರ ಜೂನ್ 16ರಂದು ಸುಮಾರು 200 ಕೇಂದ್ರಗಳಲ್ಲಿ ತೆರೆಕಾಣಲಿದೆ.
-6/05/17
FORMER BUREAUCRAT-TURNED-ACTOR K SHIVARAM TURNS 64
F
ormer IAS officer-turned actor and now film producer K Shivaram turned 64 on Wednesday as he celebrated the occasion at his residence in Bengaluru with his friends, family, well-wishers and admirers.   

The day was hectic for the former bureaucrat as a lot of people called on him to wish him on his birthday. He retired from government service as a public servant from the BMRDA in 2012. Subsequently, he joined the Congresss party and has recently switched over to join the Bharatiya Janata Party (BJP) and is reportedly keen on entering active politics and even try his luck in electoral politics.  

K Shivaram’s latest production starring his son-in-law Pradeep which is titled Tiger is ready for release. The film is produced under the banner of Inchara Film Factory. The film’s audio which was recently released by former chief minister B S Yeddyurappa has been received well in the market. The film Tiger is directed by Nanda Kishora and is likely to release in January or February.  

The former bureaucrat had signed the Kannada film Ee Hrudaya after his retirement. The film is yet to be released. 

K Shivaram made his debut in Nagathihalli Chandrashekar’s film Baa Nalle Madhuchandrake in 1993 and has acted in a few movies including his last outing Game (opposite actress Meena) before the Karnataka High Court passed an order banning government servants from working in film industry.  

K Shivaram is the first bureaucrat in Karnataka to clear the Civil Services Exam in Kannada.    
-16/12/16

YEDDYURAPPA RELEASES AUDIO, TEASER OF ‘TIGER
F
ormer chief minister and state president of BJP, B S Yeddyurappa released the audio CD of upcoming film ‘Tiger’ at a well-attended function in Bengaluru on Saturday night. The film is produced by K Shivaram and his family with his son-in-law Pradeep playing the lead role. Nanda Kishore is the director.

Yeddyurappa said the film’s teaser looks promising. He said Shivaram even as an IAS officer was mad about movies and now he is working with son-in-law which will make the film a hit. He said he is reminded of Rajkumar’s simplicity and ideals when it comes to cinema which should be followed by today’s youngsters.

Pradeep said after Rangana Style he took a break to find a story and wanted Nanda Kishora to do a film for him. He said director Nanda took six months to helm a script and expressed the confidence of the film’s success. He said he wanted to work with his second father K Shivaram in the film and this film provided for the right platform to both of them to work together. He said the film is expected to come up for release in December.

Producer K Shivaram said he was away from cinema for seven years and this combination of working with his son-in-law came good. He thanked and praised B S Yeddyurappa for championing the cause of poor and backward people and hoped that he would become CM soon.

MLA Balakrishna said BSY is a Sakkalakala Vallabha. He said with Sudeep singing a song in the movie and the three tigers coming together will ensure in the film’s success.

Madhurima said she is excited to see the movie and that her role was beautiful.

Director Nanda Kishora said he attributed the success of his films to all the technicians and his younger brother Tarun and dedicated his success to them. Tiger is a film that has three or four of them who joined to helm the script.

Rajesh Nataranga said he is part of the 10 percent shoot that happened in Mumbai but said he cannot reveal his role as it would give away the story.

Yoganand who has penned the dialogues said his lines will be liked by all. Art director Mohan B Kere said sets were erected to picturise the romantic songs.

Music composer Arjun Janya said it is his first film with K Shivaram who is a soft hearted man. He said Tarun and Nanda respect their technicians and treat them like brothers which is reason for their success. Janya said the film has five songs including an item song of a different type. Sunil Raoh has sung a song for the movie.

Kari Subbu also spoke.  

Jack Manju said Pradeep will transform into a first grade artiste with this film as a lot of hard work had gone into the film.

Chikkanna said he had worked in all of Nanda’s films excepting Mukunda Murari. He said if Pradeep is tiger he is black deer in the movie who gets along well with him in the movie.

Ravishankar said Nanda Kishora was responsible for making him a comedian although he was a villain in Nanda’s films. He said he plays a villain in the film.

A few clippings of the songs were shown on the occasion. 
-14/11/16For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore