HOME
CINEMA NEWS
GALLERY
TV NEWS
REVIEWS
CONTACT US
ಟೈಗರ್ ಗಲ್ಲಿ ತುಂಬೆಲ್ಲ ರಕ್ತದೋಕುಳಿಯಣ್ಣಾ..
ನೀನಾಸಂ ಸತೀಶ್ ಮೊದಲ ಬಾರಿಗೆ ಆ್ಯಕ್ಷನ್ ಹೀರೋ ಆಗಿ ಅಭಿನಯಿಸಿರುವ `ಟೈಗರ್ ಗಲ್ಲಿ' ಚಿತ್ರ ಈ ವಾರ ತೆರೆಗೆ ಬಂದಿದೆ. ಬೆಂಗಳೂರಿನ ತಿಗಳರಪೇಟೆಯ ಪೀಡೆಸಂದಿ (ಟೈಗರ್ ಗಲ್ಲಿ)ಯನ್ನು ಹಿನ್ನೆಯಾಗಿಟ್ಟುಕೊಂಡು, ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಬೆರೆಸಿ ನಿರ್ದೇಶಕ ರವಿ ಶ್ರೀವತ್ಸ ಮತ್ತೊಂದು ರಕ್ತ ಚರಿತ್ರೆಯನ್ನು ತೆರೆಮೇಲೆ ತಂದಿದ್ದಾರೆ.

ಟೈಗರ್ ಗಲ್ಲಿಯಿಂದಲೇ ಚಿತ್ರದ ಕಥೆ ಆರಂಭವಾಗುತ್ತದೆ. ಇಲ್ಲಿ ಒಂದು ಕಡೆ ತಾಯಿ ದುರ್ಗವ್ವ (ಯಮುನಾ) ಮತ್ತು ಮಗ ವಿಷ್ಣು (ನೀನಾಸಂ ಸತೀಶ್) ತಮ್ಮ ಕೆಲಸಗಳನ್ನು ಮಾಡಿಕೊಂಡು ತಮ್ಮಷ್ಟಕ್ಕೆ ತಾವು ನೆಮ್ಮದಿಯಿಂದ ಬದುಕುತ್ತಿರುತ್ತಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಗಜೇಂದ್ರಗಢ್ (ಬಿ.ಎಂ. ಗಿರಿರಾಜ್) ಮತ್ತು ಅವನ ಮಕ್ಕಳು (ಶಿವಮಣ , ಸಾಯಿಕೃಷ್ಣ) ರೌಡಿ ಜಯರಾಜ್ (ಅಯ್ಯಪ್ಪ) ಜೊತೆಗೆ ಸೇರಿ ಮಾಫಿಯಾ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ನಡೆಯುವ ಸಣ್ಣ ಘಟನೆಯೊಂದು, ದುಷ್ಟರ ಗುಂಪು ಈ ಅಮಾಯಕ ತಾಯಿ-ಮಗನ ಮೇಲೆ ಎಗರಿ ಬೀಳುವಂತೆ ಮಾಡುತ್ತದೆ. ನೋಡುತ್ತಿದ್ದಂತೆಯೇ `ಟೈಗರ್ ಗಲ್ಲಿ' ರಕ್ತಸಿಕ್ತವಾಗುತ್ತದೆ. ಹೀಗೆ ಆರಂಭವಾಗುವ ಲಾಂಗು-ಮಚ್ಚುಗಳ ಅಬ್ಬರ ಹೇಗೆ ಅಮಾಯಕರ ನೆತ್ತರು ಹರಿಸುತ್ತದೆ. ಈ ರಕ್ತಪಾತಕ್ಕೆ ಕೊನೆ ಹೇಗೆ ಎಂಬುದನ್ನು ಹೇಳುವ ಪ್ರಯತ್ನವೇ ಈ ಚಿತ್ರದ ಕಥಾವಸ್ತು.

ಎರಡು ಶೇಡ್‍ನಲ್ಲಿ ಕಾಣ ಸಿಕೊಂಡಿರುವ ನಾಯಕ ಸತೀಶ್, ಆ್ಯಕ್ಷನ್ ದೃಶ್ಯಗಳು, ಡೈಲಾಗ್ ಡೆಲಿವರಿ, ಡ್ಯಾನ್ಸ್, ಮ್ಯಾನರಿಸಂ ಹೀಗೆ ಎಲ್ಲದರಲ್ಲೂ ಉತ್ತಮ ಅಭಿನಯ ನೀಡಿದ್ದಾರೆ. ನಾಯಕಿಯರಾದ ಭಾವನಾ ರಾವ್, ರೋಶಿನಿ ಪ್ರಕಾಶ್ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಉಳಿದಂತೆ ಯಮುನಾ, ಅಯ್ಯಪ್ಪ, ಶಿವಮಣ ಸೇರಿದಂತೆ ಹಲವು ಕಲಾವಿದರ ಬೃಹತ್ ದಂಡೇ ಚಿತ್ರದಲ್ಲಿದೆ. ಇನ್ನು ನಿರ್ಮಾಪಕ ಯೋಗೇಶ್ ಕುಮಾರ್ ಚಿತ್ರಕ್ಕೆ ಸಾಕಷ್ಟು ಖರ್ಚು ಮಾಡಿರುವುದು ಕೂಡ ತೆರೆಮೇಲೆ ಕಾಣುತ್ತದೆ.

ರೌಡಿಸಂಅನ್ನು ತೀವ್ರವಾಗಿ ತೋರಿಸುವ ಭರದಲ್ಲಿ ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಕೆಲವೆಡೆ ಎಡವಿದಂತೆ ಕಾಣುತ್ತದೆ. ಕೆಲ ಪಾತ್ರಗಳು ಹೇಳುವ ಉದ್ದದ ಡೈಲಾಗ್‍ಗಳು ತಕ್ಷಣಕ್ಕೆ ಅರ್ಥವಾಗದೆ, ಕಿರಿಕಿರಿಯನ್ನುಂಟು ಮಾಡಿದರೆ ಕೆಲವೆಡೆ ಅದೇ ಡೈಲಾಗ್‍ಗಳು ಮೊನಚಾಗಿ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳುತ್ತವೆ. ಒಂದರ್ಥದಲ್ಲಿ ನೋಡಿದರೆ, ಚಿತ್ರದಲ್ಲಿ ಡೈಲಾಗ್‍ಗಳೇ ಹೆಚ್ಚು ಕೆಲಸ ಮಾಡಿದಂತಿದೆ.

ಚಿತ್ರದಲ್ಲಿ ಕೇವಲ ಹೀರೋ, ವಿಲನ್‍ಗಳು ಮಾತ್ರವಲ್ಲ, ಹೀರೋಯಿನ್ಸ್, ಸಪೆÇೀರ್ಟಿಂಗ್ ಪಾತ್ರಗಳು ಅಷ್ಟೇ ಖಡಕ್ಕಾಗಿ ಆರ್ಭಟಿಸಿವೆ. ರೌಡಿಸಂ ಕುರಿತ ಸಿನಿಮಾವಾದರೂ, ಕೊನೆಗೊಂದು ಮೆಸೇಜ್ ಹೇಳುವ ಪ್ರಯತ್ನ ಚಿತ್ರದಲ್ಲಿದೆ. ಆ್ಯಕ್ಷನ್ ಸಿನಿಮಾ ಪ್ರಿಯರಿಗೆ, ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡು ಹೋಗದವರಿಗೆ ಟೈಗರ್ ಗಲ್ಲಿ ಸಿನಿಮಾ ಇಷ್ಟವಾಗುತ್ತದೆ.
-27/10/17
ಗಲ್ಲಿಗಳಲ್ಲಿ ಸುದ್ದಿ ಮಾಡುತ್ತಿರುವ ಟೈಗರ್ ಗಲ್ಲಿ
‘ಟೈಗರ್ ಗಲ್ಲಿ’ ಚಿತ್ರವನ್ನು ಹೇಗಾದರೂ ಮಾಡಿ ಜನರಿಗೆ ತಲುಪಿಸಬೇಕು ಎನ್ನುವ ನಿಟ್ಟಿನಲ್ಲಿ ಹಿರಿಯ ನಿರ್ಮಾಪಕ,ವಿತರಕ ಎನ್.ಕುಮಾರ್ ಪುತ್ರ ಯೋಗೀಶ್ ಮೊದಲಬಾರಿ ನಿರ್ಮಾಣದ ಜೊತೆಗೆ ಪೋಲೀಸ್ ಇನ್ಸೆಪೆಕ್ಟರ್ ಪಾತ್ರದಲ್ಲಿ ಕಾಣ ಸಿಕೊಂಡಿದ್ದು, ಚಾನಲ್‍ಗಳು, ಪತ್ರಿಕೆಗಳು, 180 ರೈಲ್ವೆ ನಿಲ್ದಾಣಗಳಲ್ಲಿ ಪ್ರಚಾರವನ್ನು ಶುರುಮಾಡಿದ್ದಾರೆ. ಸಿನಿಮಾದಲ್ಲಿ ಹಲವು ಮೊದಲುಗಳು ಇರುವುದು ವಿಶೇಷ. ನಾಯಕ ನೀನಾಸಂ ಸತೀಶ್ ಆಕ್ಷನ್ ಚಿತ್ರದಲ್ಲಿ ನಟಿಸಿರುವುದು, 13 ವರ್ಷದ ನಂತರ ಪೂಜಾಲೋಕೇಶ್, ಮೂವರು ನಿರ್ಮಾಪಕರ ಪುತ್ರರು ಬಣ್ಣ ಹಚ್ಚಿರುವುದು, ಯೋಗೀಶ್ ನಿರ್ಮಾಣ, ನಾಲ್ಕು ವರ್ಷದ ನಂತರ ರವಿಶ್ರೀವತ್ಸ ಕತೆ ಬರೆದು ನಿರ್ದೇಶನ ಮಾಡಿರುವುದು. ಟ್ರೈಲರ್ ಇಲ್ಲಿಯವರೆಗೂ ಕೋಟಿಗೂ ಮೀರಿ ಜನರು ನೋಡಿದ್ದಾರೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಪೋಸ್ಟರ್‍ಗಳ ಮುದ್ರಣ, ಎಫ್ ಎಂ ಚಾನಲ್‍ಗಳಿಗೆ ಜಾಹಿರಾತುಗಳನ್ನು ನೀಡಿರುವುದರಿಂದ ಒಂದು ಹಂತದಲ್ಲಿ ಗೆಲುವು ಸಾಧಿಸಬಹುದೆಂಬ ಭರವಸೆಯಲ್ಲಿ ತಂಡವು ಆಶಾಭಾವನೆಯಲ್ಲಿದೆ. ಶಿವರಾಜ್‍ಕುಮಾರ್, ಸುದೀಪ್, ವಿಜಯ್, ಯೋಗರಾಜಭಟ್ಟರು ನೀನಾಸಂ ಸತೀಶ್‍ಗೆ ಒಳ್ಳೆಯದಾಗಲೆಂದು ಹೇಳಿರುವುದು ಪ್ಲಸ್‍ಪಾಯಿಂಟ್ ಆಗಿದೆ.

ನಾಯಕಿಯಾಗಿ ಭಾವನರಾವ್ ಬೋಲ್ಡ್ ಪಾತ್ರ. ನ್ಯಾಯಧೀಶೆಯಾಗಿ ಪೂಜಾಲೋಕೇಶ್, ಎಸಿಪಿ ಪಾತ್ರದಲ್ಲಿ ರೋಶಿನಿಪ್ರಕಾಶ್ ಇವರೊಂದಿಗೆ ಖಳನಾಯಕರುಗಳಾಗಿ ನಿರ್ದೇಶಕರುಗಳಾದ ಶಿವಮಣ , ಸಾಯಿಕೃಷ್ಣ, ಅಯ್ಯಪ್ಪ, ಗಿರಿರಾಜ್ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳಿಗೆ ಶ್ರೀಧರ್‍ಸಂಭ್ರಮ್ ಸಂಗೀತ ಸಂಯೋಜನೆ ಇದೆ. ತಾಯಿಮಗನ ಬಾಂದವ್ಯ, ಭ್ರಷ್ಟಚಾರ, ವ್ಯವಸ್ಥೆ ವಿರುದ್ದ ಹೋರಾಡುವ ಕತೆಯಲ್ಲಿ ನಿರ್ಮಾಪಕರು, ನಿರ್ದೇಶಕ,ಕಲಾವಿದರು, ತಂತ್ರಜ್ಘರ ಬದುಕು, ಭವಿಷ್ಯ ಅಡಗಿದೆಯಂತೆ. ಬೆಂಕಿ ಉಗುಳುವಂತೆ, ಚಿತ್ರ ನೋಡಿದವರಿಗೆ ಇದು ನಮ್ಮ ಮುಖದ ಮೇಲೆ ಬೀಳುವಂತೆ ನಿರ್ದೇಶಕರು ಮ್ಯಾಜಿಕ್ ಮಾಡಿದ್ದಾರೆ. ಸೆನ್ಸಾರ್‍ವರು ಖುಷಿಯಾಗಿ ಸಣ್ಣದಾದ ಡೈಲಾಗ್‍ಗಳಿಗೆ ಕತ್ತರಿ ಹಾಕಿ ಎ ಪ್ರಮಾಣ ಪತ್ರದೊಂದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೇ ಶುಕ್ರವಾರದಂದು ರಾಜ್ಯದ 250 ಕೇಂದ್ರಗಳಲ್ಲಿ ಚಿತ್ರವು ತೆರೆಕಾಣಲಿದೆ.
-25/10/17

ಬಿಡುಗಡೆ ಸಂಭ್ರಮದಲ್ಲಿ ಟೈಗರ್ ಗಲ್ಲಿ
ಕಳೆದ ವರ್ಷ ಮಹೂರ್ತ ಆಚರಿಸಿಕೊಂಡ ‘ಟೈಗರ್ ಗಲ್ಲಿ’ ಚಿತ್ರವು ತೆರೆಗೆ ಬರಲು ಸನ್ನಿಹಿತವಾಗಿದ್ದರಿಂದ ಅದರ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಟಿಯಲ್ಲಿ ಚಿತ್ರತಂಡವು ಮಾದ್ಯಮದವರೊಂದಿಗೆ ಸಿನಿಮಾದ ಹಲವು ವಿಶೇಷತೆಗಳ ಬಗ್ಗೆ ಹೇಳಿಕೊಂಡಿತು. ರಾಕೆಟ್ ಸಿನಿಮಾ ಸೋಲಿನಿಂದ ಹತಾಶನಾಗಿದ್ದ ನನಗೆ ಕರೆದು ಅವಕಾಶ ಕೊಟ್ಟಿದ್ದು ಎಂ.ಎನ್.ಕುಮಾರ್‍ರವರು. ಸೋಲು, ಅವಮಾನಗಳನ್ನು ಸಹಿಸಲಾಗದೆ ಮನೆಯಲ್ಲಿ ಯಾರಿಗೂ ಕಾಣ ಸಿದ ಸಮಯದಲ್ಲಿ ನಿರ್ದೇಶಕರು ಕತೆ ಹೇಳಿದಾಗ, ಈ ಪಾತ್ರ ಮಾಡಬಹುದಾ ಅಂತ ಕೇಳಿದ್ದುಂಟು. ಅವರು ಧೈರ್ಯ ನೀಡಿದ್ದರಿಂದಲೇ ನಟಿಸಲು ಸಾದ್ಯವಾಯಿತು. ಮೊದಲ ಬಾರಿ ನನ್ನ ಚಿತ್ರಕೆ ಎ ಪ್ರಮಾಣಪತ್ರ ಬಂದಿರುವುದಿರಿಂದ ಎಲ್ಲರೂ ಈಗ ಕಮರ್ಷಿಯಲ್ ಹೀರೋ ಎಂದು ಕರೆಯುತ್ತಿದ್ದಾರೆ. ತಮಿಳಿನ ದೊಡ್ಡ ಸಂಸ್ಥೆಯ ಚಿತ್ರದಲ್ಲಿ ನಟಿಸುತ್ತೇದ್ದೇನೆ. ಎಲ್ಲೆ ಹೋದರೊ ಕನ್ನಡದ ಬಾವುಟವನ್ನು ಹಾರಿಸುವೆ. ಎಷ್ಟೇ ಕಷ್ಟ ಆದರೂ ಉಳಿಸಿಕೊಂಡು ಗೆದ್ದೇ ಬರುತ್ತಾನೆ ಎನ್ನುತ್ತಾರೆ ನಾಯಕ ನೀನಾಸಂ ಸತೀಶ್. ಖಳನಟರುಗಳಾಗಿ ಕಾಣ ಸಿಕೊಂಡಿದ್ದೇನೆಂದು ನಿರ್ದೇಶಕರುಗಳಾದ ಶಿವಮಣ , ಅಯ್ಯಪ್ಪ ಹೇಳಿಕೊಂಡರೆ, ಗಿರಿರಾಜ್ ನೀಚಾತಿ ನೀಚನಾಗಿ ಮೊದಲಬಾರಿ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸಿದ್ದರಿಂದ ಈ ವರ್ಷದ ಅಕ್ಕಿ,ಬೇಳೆಗೆ ಮೋಸವಾಗಿಲ್ಲ ಅಂತ ನಗಿಸಿದರು. ನಿರ್ದೇಶಕರು ತಂದೆ ಸಮಾನ. ಅವರು ಕರೆ ಮಾಡಿದಾಗ ಇಲ್ಲ ಎನ್ನಲು ಆಗಲಿಲ್ಲ. ಸಣ್ಣ ಪಾತ್ರವಾದರೂ ನಟಿಸಿದ್ದೇನೆ. ಬಿಡುಗಡೆ ನಂತರ ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತದೆ. ಅದು ಏನೆಂದು ಸಿನಿಮಾ ನೋಡಿ ಅಂತಾರೆ ಸಾಯಿಕೃಷ್ಣ. ಮೊದಲಬಾರಿ ಇನ್ಸ್‍ಪೆಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿರುವ ನಿರ್ಮಾಪಕ ಯೋಗೇಶ್ ಮಾನಿಯಾಗಿದ್ದರು.

ಇದಕ್ಕೂ ಮುನ್ನ ಮಾತನಾಡಿದ ನಿರ್ದೇಶಕ ರವಿಶ್ರೀವತ್ಸ ಭಾವುಕರಾಗುತ್ತಾ ಒಂದು ಚಿತ್ರ ಸೋತಾಗ ನಿರ್ದೇಶಕ ಸತ್ತುಹೋದ ಎಂದು ಗಾಂಧಿನಗರವು ಹೇಳುತ್ತದೆ. ನೋವಿನಲ್ಲಿ ಸ್ಪಂದಿಸುವವರು ದೇವರು ಅಂತ ಹೇಳುತ್ತವೆ. ಅದರಂತೆ ಕುಮಾರ್‍ರವರು ಕರೆದು ಸಿನಿಮಾ ಮಾಡು ಅಂತ ಪೂರ್ಣ ಸ್ವಾತಂತ್ರ ನೀಡಿದರು. ಇಬ್ಬರು ನಾಯಕರಿಗೆ ಕತೆ ಹೇಳಿದಾಗ ಬೇರೆ ಪಾತ್ರಗಳು ಪವರ್‍ಫುಲ್ ಆಗಿದೆ. ಅದನ್ನು ತೆಗೀರಿ ಎಂದು ಹೇಳಿ ಜಾರಿಕೊಂಡಿದ್ದಾರೆ. ಸತೀಶ್‍ರವರು ಓಕೆ ಅಂತ ಪೂರ್ಣ ಸಹಕಾರ ನೀಡಿದ್ದಾರೆ. ತೆರೆ ಕಂಡ ಮೊದಲನೆ ದಿವಸ ಇಬ್ಬರು ಸ್ಟಾರ್‍ಗಳು ಅವಕಾಶ ತಪ್ಪಿತ್ತಲ್ಲ ಅಂತ ಕೈಹಿಸುಕಿಕೊಳ್ಳುತ್ತಾರೆ. ಒಂದು ದೃಶ್ಯದಲ್ಲಿ ನ್ಯಾಯಧೀಶೆಯಾದವರು ಎದ್ದು ನಿಂತು ಕೋಪದಿಂದ ಆರ್ಡರ್ ಎಂದು ಕೂಗಿರುವುದಕ್ಕೆ ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗೆ ಸಮಜಾಯಿಷಿ ನೀಡಿ, ಇಂದು ನ್ಯಾಯಧೀಶರುಗಳು ಸುಮ್ಮನೆ ಇರುವುದಕ್ಕೆ ಲಕ್ಷಾಂತರ ಕೇಸ್‍ಗಳು ಬಾಕಿ ಉಳಿದಿವೆ. 70-80ರ ದಶಕದಲ್ಲಿ ತಿಗಳರ ಪೇಟೆಯಲ್ಲಿ ರೌಡಿಗಳು ಕಿರಿದಾದ ಗಲ್ಲಿಯಲ್ಲಿ ಒಡಾಡುತ್ತಿದ್ದರು. ಅದಕ್ಕಾಗಿ ಇದೇ ಹೆಸರನ್ನು ಇಡಲಾಗಿದೆ ಎಂಬುದರ ವ್ಯಾಖ್ಯಾತ ನೀಡಿದರು. ನಾಯಕಿಯಾಗಿ ಭಾವನರಾವ್, ಐಪಿಎಸ್ ಅಧಿಕಾರಿ ಪಾತ್ರದಲ್ಲಿ ರೋಶಿನಿಪ್ರಕಾಶ್, ನ್ಯಾಯಧೀಶೆಯಾಗಿ ಪೂಜಾಲೋಕೇಶ್ ಪಾತ್ರದ ಪರಿಚಯ ಮಾಡಿಕೊಂಡರು. ನಿರ್ದೇಶಕರೊಂದಿಗೆ ತಾನು ಪ್ರಾರಂಭದಲ್ಲಿ ಸೈಕಲ್ ಹೊಡೆದಿದ್ದೇನೆಂದು ನೆನಪು ಮಾಡಿಕೊಂಡ ವಿತರಕ ಜಾಕ್‍ಮಂಜು ಅವರು ಕೋಪ ಕಡಿಮೆ ಮಾಡಿಕೊಂಡರೆ ಉಜ್ವಲ ಭವಿಷ್ಯ ಇದೆ. ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಅಕ್ಟೋಬರ್ 27ರಂದು ತೆರೆಗೆ ತರಲು ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಹೇಳುವಲ್ಲಿಗೆ ಗೋಷ್ಟಿಗೆ ತೆರೆ ಏಳೆಯಲಾಯಿತು.
-10/10/17


"ಗಮ್ಯ" ಅನ್ನೋದು ಅಗೋಚರ "ಟೈಗರ್ ಗಲ್ಲಿ"
ಅದನ್ನು ತಲುಪುವ ಮಾರ್ಗಗಳು ಮಾತ್ರ ಗೋಚರ, ನಮ್ಮ ಆಯ್ಕೆಯ ಮೇಲೆ ಆಧರಿಸಿದೆ ಪರಿಹಾರ, ನನ್ನ ಆಯ್ಕೆಯ ಬಗ್ಗೆ ನನಗೆ ಹೆಮ್ಮೆ ಇದೆ..."ರವಿ ಶ್ರೀವತ್ಸ". ನಾನು ನಿರ್ದೇಶಕ ಆಗಬೇಕೆಂಬ ಆಸೆ ನಿಧಾನವಾಗಿ ಗಮ್ಯ ವಾಗಿ ಪರಿವರ್ತನೆಗೊಳ್ಳುತ್ತಿದ್ದ ಸಮಯದಲ್ಲಿ "ರವಿ ಶ್ರೀವತ್ಸ" ಅವರ ಬಳಿ ಸಹಾಯಕ ನಿರ್ದೇಶಕನಾಗಿ ಸೇರಲು ಮಾಡಿದ ನಿರ್ಣಯ ಅತ್ಯಂತ ಮಹತ್ವಪೂರ್ಣದ್ದು. ಸೇರಿದ ನಂತರ ನನ್ನಲ್ಲಿ ಒಬ್ಬ ಕಲಾವಿದನೂ ಇದ್ದಾನೆ ಎಂದು ಕಂಡುಹಿಡಿದಿದ್ದು "ರವಿ ಶ್ರೀವತ್ಸ". ಆ ನಿಟ್ಟಿನಲ್ಲಿ "ಡೆಡ್ಲಿ2" ಚಿತ್ರದಲ್ಲಿ ಒಂದು ಪಾತ್ರ ಕೊಟ್ಟು ಬಣ್ಣದ ರುಚಿ ತೋರಿಸಿದ್ದರು, ಈಗ "ಟೈಗರ್ ಗಲ್ಲಿ" ಚಿತ್ರದಲ್ಲಿ ಮತ್ತೊಂದು ಪಾತ್ರ ನೀಡಿದ್ದಾರೆ, ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ ಎಂದು ನಂಬಿದ್ದೇನೆ. ಅವರ ಚಿತ್ರಗಳಲ್ಲಿ ಹಿಂಸೆಯ ಅಂಶ ಹೆಚ್ಚು, ನಿಜ ಜೀವನದಲ್ಲಿ ನಮ್ಮ ಎದುರಗಡೆ ಯಾವುದಾದರೂ ಅನ್ಯಾಯ ನಡೆಯುತ್ತಿರುವಾಗ ನಮ್ಮ ಮನಸ್ಸಿನಲ್ಲಿ ಆ ನಿರಪರಾಧಿಗೆ ಕಠಿನ ಶಿಕ್ಷೆ ಆಗಬೇಕೆಂದು ಅನಿಸುತ್ತದೆ, ಆದರೆ ಆ ಮಾತುಗಳು ಬಾಯಿಂದ ಹೊರಗೆ ಬರುವುದಿಲ್ಲ, ನನ್ನ ಅಭಿಪ್ರಾಯದ ಪ್ರಕಾರ "ರವಿ ಶ್ರೀವತ್ಸ" ಅವರು ಕೂಡಾ ನಿಜ ಜೀವನದಲ್ಲಿ ತಮ್ಮ ಕೈಯ್ಯನ್ನು ಕಟ್ಟಿಹಾಕಿಕೊಳ್ಳುವರು, ಆದರೆ ಅವರ ಚಿತ್ರಗಳಲ್ಲಿ ಅನ್ಯಾಯಕ್ಕೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ನಮ್ಮ ಮನದಾಳದ ಮಾತುಗಳನ್ನು ತೆರೆಯ ಮೇಲೆ ಕಠಿನವಾಗಿ ಬಿಂಬಿಸುತ್ತಾರೆ, ಅವರ ಚಿತ್ರಗಳು "ಅಡಿime" geಟಿಡಿe ನ ಶೈಲಿಯ ಚಿತ್ರಗಳಾಗಿವೆ, ಆ ಶೈಲಿಯ ಚಿತ್ರಗಳು ವಾಸ್ತವಿಕತೆಯನ್ನು ಬೇಡುತ್ತವೆ, ಅವರ ಚಿತ್ರಗಳಲ್ಲಿ ಪುಟ್ಟ ಪಾತ್ರ ಮಾಡಲು ಹಿಂಜರಿಯದಿರಿ, ಕಾರಣ ಅವರಿಗೆ ಎಲ್ಲಾ ಪಾತ್ರಗಳು sಛಿoಡಿe ಮಾಡಬೇಕೆಂಬ ಆಸೆ. "ಟೈಗರ್ ಗಲ್ಲಿ" ಯ ಪ್ರತಿಯೊಂದು ಪಾತ್ರ ಕೂಡ ವಿಶೇಷವಾಗಿ ವಿನ್ಯಾಸ ಮಾಡಿದ್ದಾರೆ, ಎಲ್ಲರ ಪಾತ್ರಗಳ ತೀವ್ರತೆ ಉತ್ತುಂಗಕ್ಕೆ ಏರಿರುತ್ತದೆ, ಈ ಚಿತ್ರದಲ್ಲಿ ಅವಕಾಶ ನೀಡಿದ ನನ್ನ ಗುರು ಸಮಾನರಾದ ರವಿ ಶ್ರೀವತ್ಸ ರವರಿಗೆ ಹಾಗೂ ನಿರ್ಮಾಪಕರಾದ ಎಂ.ಎನ್.ಕುಮಾರ್ ಮತ್ತು ಯೋಗೇಶ್ ಕುಮಾರ್ ರವರಿಗೆ ಕೃತಜ್ಞತೆಗಳು. ಹಲವಾರು ಹಿರಿಯ ಕಲಾವಿದರೊಂದಿಗೆ ನಟಿಸಿದ ಅನುಭವ ಈ ಚಿತ್ರದಲ್ಲಿ… ಎಲ್ಲರಿಗೂ ಧನ್ಯವಾದಗಳು...
ಸಾಯಿ ಕೃಷ್ಣ
-21/07/17

HULI HOTTE LI HULI BE HUTTODU .... THIS IS A SAYING WHICH HAS COME TRUE NOW WITH YOGESH KUMAR FILMS
S
on of famous producer , distributor and theatres holder MN Kumar , Yogesh Kumar makes his debut as producer of Tiger Galli.

Ravi srivatsa is back after a gap a four years, last seen directing dashamukha starring crazy star Ravichandran and aadinagalu chethan.
Ravi srivatsa known for his off beat realistic kind of movie making, has carved out Tiger Galli at most care and concern for Yogesh Kumar's first production.
Starring Satish neenasam Tiger Galli will be a out and out commercial masala entertainment package. A first of its kind for the Lucia star who deserves a hit soon.
Two beautiful ladies are romancing Satish neenasam , Bhavna Rao and roshni Prakash of ajaramara fame.
Pooja Lokesh is playing a role of a judge for the first time and small screen star yaamini Srinidhi is playing Satish's mom in Tiger Galli.
Sridhar V sambram has scored the music for this political , local drama set in rugged locations of Bengaluru and outskirts.
Director turned actor shivamani said he has performed in such a role that has forced him to take up acting seriously along with direction.

The highlight of the music launch of tiger Galli was all the mothers coming in to launch the audio
Mrs. MN Kumar (Yogesh Kumar's mom)
Mrs. JJ Krishna (Deepak Krishna's mom)
Mrs. R.S.gowda (Deepu gowda's mom)
Mrs. Rajanna (kanthu rajanna's mom)

All the above mentioned new guys have performed important roles along with producer Yogesh Kumar.
-18/05/17


ಮುತ್ತೈದೆಯರಿಂದ ಹಾಡುಗಳ ಲೋಕಾರ್ಪಣೆ
‘ಟೈಗರ್ ಗಲ್ಲಿ’ ಚಿತ್ರವು ಹಲವು ವಿಶೇಷತೆಗಳಿಂದ ಕೂಡಿದೆ ಎನ್ನಬಹುದು. ಪ್ರಸಿದ್ದ ನಿರ್ಮಾಪಕ, ವಿತರಕ ಎನ್.ಕುಮಾರ್ ಪುತ್ರ ಯೋಗೇಶ್‍ಕುಮಾರ್ ಮೊದಲಬಾರಿ ಇನ್ಸೆಪೆಕ್ಟರ್ ಪಾತ್ರಕ್ಕೆ ಬಣ್ಣಹಚ್ಚುವ ಜೊತೆಗೆ ಅಪ್ಪನ ಸ್ಥಾನವನ್ನು ಅಲಂಕರಿಸಿದ್ದಾರೆ. ನೀನಾಸಂ ಸತೀಶ್ ಆಕ್ಷನ್ ನಟನಾಗಿ ಪ್ರಥಮ ಅನುಭವ. ಹನ್ನೆರಡು ವರ್ಷದ ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಪೂಜಾಲೋಕೇಶ್ ನ್ಯಾಯಧೀಶೆ ಪಾತ್ರ. ದೇಹವನ್ನು ಕೃóಶೆ ಮಾಡಿಕೊಂಡು ಮಾಯವಾಗಿದ್ದ್ದ ರವಿಶ್ರೀವತ್ಸ ರಚಿಸಿ ನಿರ್ದೇಶನ ಮಾಡಿದ್ದಾರೆ. ಡ್ಯಾನ್ಸರ್ ಯಮುನಾಶ್ರೀನಿಧಿ ನಾಯಕನ ಅಮ್ಮನಾಗಿ ಕಾಣ ಸಿಕೊಂಡಿದ್ದಾರೆ. ಮೂವರು ನಿರ್ಮಾಪಕರ ಪುತ್ರರು ತೆರೆ ಹಂಚಿಕೊಂಡಿದ್ದಾರೆ. ಪ್ರಚಾರದ ಸಲುವಾಗಿ ಆಡಿಯೋ ಬಿಡುಗಡೆ ಸಮಾರಂಭವು ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ನಿರೂಪಕರ ಕೋರಿಕೆಯಂತೆ ಪ್ರತಿಯೊಬ್ಬರು ವೇದಿಕೆಗೆ ಆಗಮಿಸಿ ಪರಿಚಯಿಸಿಕೊಂಡರು. ಗ್ಲಾಮರ್ ಆಗಿದ್ದರೂ, ಪ್ರತಿಭೆಯನ್ನು ತೋರಿಸುವ ಅವಕಾಶ ಒದಗಿಬಂದಿದೆ ಎನ್ನುತ್ತಾರೆ ನಾಯಕಿ ಭಾವನರಾವ್. ಇನ್ಸೆಪೆಕ್ಟರ್ ಆಗಿ ನಟನೆ ಮಾಡಿದ್ದು ಖುಷಿ ತಂತು ಎಂಬುದು ರೋಶಿನಿಪ್ರಕಾಶ್ ನುಡಿ.

ಸಿನಿಮಾ ನೋಡಿದಾಗ ನಾನೇನಾ ಅನ್ನಿಸುವಷ್ಟು ಸೋಜಿಗ ಆಯಿತು. ನಟನೆ,ಡಬ್ಬಿಂಗ್ ಮಾಡುವಾಗ ನಿರ್ದೇಶಕರೊಂದಿಗೆ ಸಾಕಷ್ಟು ಬಾರಿ ಜಗಳವಾಡಿದ್ದುಂಟು. ಪ್ರತಿ ಬಾರಿ ಸಾಲದು ಎನ್ನುತ್ತಿದ್ದರಿಂದ ರೋಸಿಹೋಗಿತ್ತು. ಅಂತಿಮವಾಗಿ ಫಲಿತಾಂಶ ಚೆನ್ನಾಗಿ ಬಂದಿರುವುದರಿಂದ ಅವರ ಮೇಲೆ ಗೌರವ ಹೆಚ್ಚಾಯಿತು. ಸಿನಿಮಾರಂಗದಲ್ಲಿ ಮೊದಲಬಾರಿ ಅವಕಾಶ ನೀಡಿದ್ದು, ಇಂದು ಅವರ ಚಿತ್ರದಲ್ಲಿ ನಾಯಕನಾಗಿ ನಟಿಸಿರುವುದು ಸಂತಸ ತಂದಿದೆ. ದುಡಿದ ಹಣವನ್ನು ಸೋದರನ ಆರೋಗ್ಯಕ್ಕೆ ಖರ್ಚು ಮಾಡಿ ಅವನನ್ನು ಉಳಿಸಿಕೊಂಡಿದ್ದೇನೆ. ಹಿಟ್ ಆದಲ್ಲಿ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲಬೇಕು ಎಂದರು ನಾಯಕ ನೀನಾಸಂ ಸತೀಶ್. ಮುಖ್ಯ ಮಂತ್ರಿ ಕೆಟ್ಟ ಮಗನಾಗಿ ಅಭಿನಯಿಸಿರುವ ಶಿವಮಣ ರವರ ಹೆಚ್ಚು ಉತ್ರ್ಪೇಕ್ಷೆ ಮಾತುಗಳು, ಸಮಯವನ್ನು ಕೊಂದು ಹಾಕಿ, ಇತರರಿಗೆ ಮಾತನಾಡಲು ಅವಕಾಶ ಸಿಗಲಿಲ್ಲ. ಸಮಾರಂಭ ಮುನ್ನಾದಿನ ವಿಶ್ವ ತಾಯಂದಿರ ದಿನವಾಗಿದ್ದರಿಂದ, ಐವರು ನಿರ್ಮಾಪಕರ ಪತ್ನಿಯರು ಧ್ವನಿಸಾಂದ್ರಿಕೆಯನ್ನು ಲೋಕಾರ್ಪಣೆ ಮಾಡಿದರು. ವಾಣ ಜ್ಯ ಮಂಡಳಿ ಅಧ್ಯಕ್ಷರು, ಪದಾದಿಕಾರಿಗಳು, ಸಿನಿಪಂಡಿತರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
-17/05/17


TIGER GALLI MUSIC LAUNCH ON MAY 15
K
annada film ‘Tiger Galli’ has completed its shoot and the film’s music is being launched on May 15. The film is produced by M N Kumar and directed by Ravi Srivatsa. The film’s music is composed by Sridhar V Sambram. The film stars Satish Neenasam, Bhavana Rao, Shivamani, B M Giriraj, Ayyappa Sharma and Roshini among others. Mathew Rajan is the cameraman.  

Director Ravi Srivatsa clarified that Satish Neenasam is not playing a dual role as has been reported  in a section of the media. He said the film has been shot in the lanes of Tigalarapete in the heart of Bengaluru business area for 10 days. He said the film lays accent on reality as has been with his earlier films. The film is ready for a release.
-15/05/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore