HOME
CINEMA NEWS
GALLERY
TV NEWS
REVIEWS
CONTACT US
ಟಗರು 125 ನಾಟ್ ಔಟ್
ಚಂದನವನದಲ್ಲಿ ರಾಜಕುಮಾರ ಶತ ದಿನ ಆಚರಿಸಿ ಸಂಭ್ರಮವನ್ನು ಹಂಚಿಕೊಂಡಿತು. ಗ್ಯಾಪ್ ನಂತರ ಈಗ ‘ಟಗರು’ 125 ದಿನಗಳ ಕಾಲ ಸತತವಾಗಿ ಪ್ರದರ್ಶನಗೊಂಡು ಮುಂದುವರೆಯುತ್ತಲೆ ಇದೆ. ಇದರನ್ವಯ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಸಣ್ಣದೊಂದು ಸಮಾರಂಭವನ್ನು ಏರ್ಪಾಟು ಮಾಡಿದ್ದರು. ತಂತ್ರಜ್ಘರಿಗೆ ಫಲಕಗಳನ್ನು ವಿತರಣೆ ಮಾಡಿದ ಉಪೇಂದ್ರ ಈ ದಿನ ಪ್ರತಿಯೊಂದು ಚಿತ್ರಕ್ಕೆ ಬರಬೇಕು. ಕಷ್ಟಪಟ್ಟರೆ ಇಂತಹ ಸಮಾರಂಭವನ್ನು ನೋಡಬಹುದು ಎಂಬುದಕ್ಕೆ ಸಾಕ್ಷಿ ಟಗರು ಆಗಿದೆ. ಎಲ್ಲೆ ಹೋದರೂ ಜನ ಇದರ ಬಗ್ಗೆ ಮಾತಾಡುತ್ತಾರೆ ಎಂದರು.

ಅಂಬರೀಷ್ ತಮ್ಮ ಮಾತಿನಲ್ಲಿ ಒಳ್ಳೆ ಟೈಟಲ್ ಇಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 125 ದಿನಗಳು ಚಿತ್ರಮಂದಿರದಲ್ಲಿ ಇರುವುದು ಕಮ್ಮಿ. ಇಂತಹ ಚಿತ್ರವು ಓಡ್ತಾ ಇರೋದು ಸಂತಸ ತಂದಿದೆ. ಶಿವರಾಜ್‍ಕುಮಾರ್ ಒಳ್ಳೆ ಮನೆತನದಿಂದ ಬಂದವರು. ಅಪ್ಪನಂತಯೇ ಗುಣವಿದ್ದು, ಅವರ ದಾರಿಯಲ್ಲೆ ಹೋಗುತ್ತಿದ್ದಾರೆ ಎಂದು ಧೀರ್ಘ ಕಾಲ ಆಸೀನರಾಗಿ ಸಮಾರಂಭಕ್ಕೆ ಗೌರವ ತಂದರು.

ಕನ್ನಡ ಚಿತ್ರಗಳು 4-5 ವಾರುಗಳು ಹೋಗುವುದು ಅಪರೂಪ. ಇಂತಹ ವಿರಳ ಸಮಯದಲ್ಲಿ 125 ದಿವಸ ಪ್ರದರ್ಶನ ಕಂಡಿರುವುದು ಶುಭಗಳಿಗೆ ಎನ್ನಬಹುದು. ಶಿವಣ್ಣ ಚಿತ್ರಕ್ಕೆ ಹಾಡು ಬರೆಯುವ ಅವಕಾಶ ಸಿಕ್ಕಿದ್ದರೂ, ಟೈಟಲ್ ಸಾಂಗ್ ಬರೆದಿಲ್ಲವೆಂಬ ಕೊರಗು ಕಾಡುತ್ತಿತ್ತು. ಅದು ಈ ಚಿತ್ರದ ಮೂಲಕ ನೆರವೇರಿದೆ ಎಂಬ ಖುಷಿಯ ನುಡಿ ಸಾಹಿತಿ ಡಾ.ನಾಗೇಂದ್ರಪ್ರಸಾದ್ ಅವರದಾಗಿತ್ತು.

ಗೆಳಯನಿಗೆ ಪ್ರಾರಂಭದಿಂದಲೂ ಗೊಂದಲತರುವ ಚಿತ್ರಕತೆ ಮಾಡಬೇಡವೆಂದು ಹೇಳುತಿದ್ದೆ. ಅವರು ಕೇಳದೆ ಅದೇ ರೀತಿಯಲ್ಲಿ ಸಿದ್ದಪಡಿಸಿ ಗೆಲುವನ್ನು ತೋರಿಸಿದ್ದಾರೆ. ತಂತ್ರಜ್ಘರ ಬೆವರಿನ ಶ್ರಮಕ್ಕೆ ಪ್ರೇಕ್ಷಕ ಬೆಲೆ ನೀಡಿದ್ದಾರೆ. ಟಗರು ಎಂದರೆ ಶಿವಣ್ಣ ಅಂತಾರೆ ಯೋಗರಾಜಭಟ್, ಶಿವಣ್ಣ ನಿಮ್ಮ ಬಳಿ ಬಂದರೆ ಉತ್ಸವ, ನೀವುಗಳು ಅವರಲ್ಲಿಗೆ ಹೋದರೆ ಶತದಿನೋತ್ಸವವೆಂದು ಸಂಭಾಷಣೆಗಾರ ಮಾಸ್ತಿ ಅಲ್ಲಿಯೂ ಮಾತಿನ ಖದರ್ ಪ್ರದರ್ಶಿಸಿದರು.

ನಾಯಕಿಯರಾದ ಭಾವನಾ, ಮಾನ್ವಿತಾಹರೀಶ್, ದೇವರಾಜ್, ವಸಿಷ್ಟಸಿಂಹ, ಧನಂಜಯ್, ಸಂಗೀತ ನಿರ್ದೇಶಕ ಚರಣ್‍ರಾಜ್, ಜಯಂತ್‍ಕಾಯ್ಕಣಿ, ತ್ರಿವೇಣಿ, ಛಾಯಗ್ರಾಹಕ ಮಹೇಂದ್ರಸಿಂಹ, ವಿತರಕರು, ಚಿತ್ರಮಂದಿರದ ಮಾಲೀಕರು ಸಂತಸದಲ್ಲಿ ಭಾಗಿಯಾಗಿ ಫಲಕಗಳನ್ನು ಗಣ್ಯರಿಂದ ಸ್ವೀಕರಿಸಿ ಚುಟುಕು ಮಾತನಾಡಿದರು.

ಮೂರು ಗಂಟೆ ನಡೆದ ಸುಂದರ ಸಮಾರಂಭದಲ್ಲಿ ಲೋಕ ಸಭಾ ಸದಸ್ಯ ಡಿ.ಕೆ.ಸುರೇಶ್, ರಾಘವೇಂದ್ರರಾಜಕುಮಾರ್, ಪುನಿತ್‍ರಾಜಕುಮಾರ್, ನಿವೇದಿತಾ, ವಿಜಯರಾಘವೇಂದ್ರ, ಶ್ರೀಮುರಳಿ, ಮುಂತಾದವರು ಉಪಸ್ತಿತರಿದ್ದರು. ಇದೇ ಸಂದರ್ಭದಲ್ಲಿ ಗೀತಾಶಿವರಾಜ್‍ಕುಮಾರ್ ಹುಟ್ಟಹಬ್ಬವನ್ನು ಆಚರಿಸಲಾಯಿತು.
ಸಿನಿ ಸರ್ಕಲ್.ಇನ್ ನ್ಯೂಸ್
25/06/18


ಟಗರು ಟೈಟಲ್ ಹಾಡು ವಿಶ್ವದ 19ನೇ ಸ್ಥಾನದಲ್ಲಿದೆ - ಶಿವರಾಜ್‍ಕುಮಾರ್
ಹಿಟ್ ಚಿತ್ರ ಟಗರು ಟೈಟಲ್ ಹಾಡು ಎಲ್ಲಾ ಕಡೆ ಹಿಟ್ ಆಗಿದೆ, ಅಲ್ಲದೆ ವಿಶ್ವದ 19ನೇ ಸ್ಥಾನದಲ್ಲಿರುವುದು ಕನ್ನಡ ಚಿತ್ರರಂಗಕ್ಕೆ ತಂದ ಗೌರವ ಎಂದು ಶಿವರಾಜ್‍ಕುಮಾರ್ ಮಾಧ್ಯಮದ ಮುಂದೆ ಔಪಚಾರಿಕವಾಗಿ ಮಾತನಾಡುತ್ತಿದ್ದರು. ಕೆಲವು ಸನ್ನಿವೇಶಗಳು ಗೊಂದಲ ಸೃಷ್ಟಿಸಿದ್ದು ತಿಳಿಯುತು. ನಂತರ ನಿರ್ದೇಶಕರು ಹೇಳಿದ, ತೋರಿಸಿದ ರೀತಿ ನೋಡಿದಾಗ ಎಲ್ಲದಕ್ಕೂ ಉತ್ತರ ನೀಡಿದ್ದಾರೆ. ಯುಎಸ್‍ನ 50 ಕೇಂದ್ರಗಳಲ್ಲಿ ಮತ್ತು ಲಂಡನ್‍ನಲ್ಲಿ ರೆಡ್ ಕಾರ್ಪೆಟ್ ಗೌರವದೊಂದಿಗೆ ಪ್ರದರ್ಶನವಾಗುತ್ತಿದೆ. ಬ್ಯುಸಿ ಇರುವ ಕಾರಣ ಹೋಗಲು ಆಗುತ್ತಿಲ್ಲ. ನಾಯಕ-ಖಳನಟ ಇಬ್ಬರಿಗೂ ಹೃದಯ ಎನ್ನುವುದು ಇರುತ್ತದೆಂದು ಚೆನ್ನಾಗಿ ಮೂಡಿಬಂದಿದೆ. ಅಶ್ಲೀಲ ಪದ ಬಳಸಿರುವುದನ್ನು ಮ್ಯೂಟ್ ಮಾಡಿದ್ದಾರೆ. ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ಅಭಿಮಾನಿಗಳು ಹೇಳಿದ ಮಾತುಗಳು ಮರೆಯಲಾಗುದು. ಸುದೀಪ್ ಚಿತ್ರನೋಡಿ ವಿಮರ್ಶೆ ಮಾಡಿದ್ದಾರೆ. ನನ್ನ ಕೆಲಸವನ್ನು ನಿಗದಿತ ಅವಧಿಯಲ್ಲಿ ಮುಗಿಸುತ್ತೇನೆ. ಮುಂದಿನದು ನಿರ್ಮಾಪಕರದು. ಅದಕ್ಕೂ ಮೇಲೆ ಪ್ರೇಕ್ಷಕರ ನಿರ್ಧಾರ ನಮ್ಮ ಹಣೆಬರೆಹ ಬರೆಯುತ್ತದೆ.

ಅಪ್ಪುನಂತೆ ನಟನಾಗಲಿಲ್ಲ. ಎಲ್ಲವು ಸಡನ್ ಆಗಿ ಒಲಿದುಬಂತು. ನಾನಾಗೆ ಬಯಸಲಿಲ್ಲ. ಕಳೆದ ವಾರ ಚೆನ್ನೈಗೆ ಹೋದಾಗ ವಾಸವಾಗಿದ್ದ ಮನೆಗೆ ಭೇಟಿ ನೀಡಿದಾಗ ಎಲ್ಲವು ನೆನಪಿಗೆ ಬಂತು. ಕವಚ ಒಂದು ಹಂತದವರೆಗೂ ಚಿತ್ರೀಕರಣ ಮುಗಿದಿದೆ. ಕುರುಡನಾಗಿ ಅಭಿನಯಿಸುದು ಕಷ್ಟವಾಗಿತ್ತ. ರುಸ್ತುಂ ಅಪ್ಪಾಜಿ ಜನ್ಮ ದಿನದಂದು ಶುರುಮಾಡುವ ಬಗ್ಗೆ ಯೋಜನೆ ಇದೆ. ಇದೇ ವರ್ಷದಲ್ಲಿ ಚಿತ್ರ ನಿರ್ಮಾಣ ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಇದರ ಮಧ್ಯೆ ವೆಬ್‍ಸೀರೀಸ್‍ನಲ್ಲಿ ಸಿನಿಮಾ ಮಾಡಲಾಗುವುದು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/03/18

ಸಂತೋಷಕೂಟದಲ್ಲಿ ತಂತ್ರಜ್ಘರ ಪರಿಚಯ
ಕಳೆದ ವಾರ ಬಿಡುಗಡೆಗೊಂಡು ಹೊರರಾಜ್ಯ ಹಾಗೂ ವಿದೇಶವು ಸೇರಿದಂತೆ ತುಂಬಿದ ಪ್ರದರ್ಶನದಿಂದ ವರ್ಷದ ಹಿಟ್ ಚಿತ್ರ ‘ಟಗರು’ ನಿರ್ದೇಶಕರು ತೆರೆ ಹಿಂದೆ ಕೆಲಸ ಮಾಡಿರುವವರನ್ನು ಪರಿಚಯಿಸುವ ಸಲುವಾಗಿ ಮಾದ್ಯಮಮಿತ್ರರನ್ನು ಆಹ್ವಾನಿಸಿದ್ದರು. ಕಲಾವಿದರು, ತಂತ್ರಜ್ಘರು ಸೇರಿದಂತೆ ಅವರು ಮಾತನಾಡಿದ್ದನ್ನು ಅಕ್ಷರರೂಪದಲ್ಲಿ ತಮಗೆ ಸಾದರ ಪಡಿಸಲಾಗುತ್ತಿದೆ.

ಮಾಸ್ತಿ, ಸಂಭಾಷಣೆ: ಸಕ್ಸಸ್ ಹಿಂದೆ ಯು ಇಲ್ಲದೆ ಇದ್ದರೆ ಈ ಮಟ್ಟಕ್ಕೆ ಬರುತ್ತಿರಲಿಲ್ಲ. ಅದು ನೀವುಗಳು, ನಿರ್ದೇಶಕರು ಚರ್ಚೆ ಮಾಡಿ ಡೈಲಾಗ್‍ನ್ನು ಬರೆಸುತ್ತಿದ್ದರು. ತಂಡದ ಮ್ಯಾನ್ ಆಫ್ ದಿ ಮ್ಯಾಚ್ ಶಿವಣ್ಣ. ದಂಡು ದಂಡು ಕಲಾವಿದರು ಇದ್ದಾರೆ. ಸಕ್ಸಸ್ ಮೀಟ್ ಎನ್ನುವ ಬದಲು ಥ್ಯಾಂಕ್ಸ್ ಮೀಟ್ ಎನ್ನಬಹುದು.

ಸುದೀಂದ್ರ: ಸೂರಿ ಅಣ್ಣ ಕಾಕ್ರೋಚ್ ಅಂತ ಹೆಸರು ಇಟ್ಟಿದ್ದು ಸಾರ್ಥಕವಾಗಿದೆ. ಎಲ್ಲೆ ಹೋದರೂ ಇದೇ ಹೆಸರಿನಲ್ಲಿ ಕರೆಯುತ್ತಾರೆ.
ಸಚ್ಚಿದಾನಂದ: ಶಿವಣ್ಣ ಅವರಿಗಿಂತ ಚಿಕ್ಕವನಾಗಿದ್ದರೂ ಅವರಿಂದ ಅಂಕಲ್ ಅಂತ ಕರೆಸಿಕೊಂಡಿದ್ದೇನೆ. ಅವರು ಎಂದಿಗೂ ಅಂಕಲ್ ಆಗದಿರಲಿ
ಮಹೇಂದ್ರಸಿಂಹ, ಛಾಯಗ್ರಾಹಕ: ನಿರ್ದೇಶಕರ ಜೊತೆ ಸೆಟ್‍ನಲ್ಲಿ ಚರ್ಚೆ ನಡೆಸಿ ಕೆಲಸ ಮಾಡುತ್ತಿದ್ದವು. ಶಿವಣ್ಣನ ಸಹಕಾರ ಮರೆಯಲಾಗದು.

ಮಾನ್ವಿತಾಹರೀಶ್, ನಾಯಕಿ: ಸುಕ್ಕಾ ಎನ್ನುವುದು ಸೂರಿ ಸರ್‍ಗೆ ಹೊಂದಿಕೊಳ್ಳುತ್ತದೆ. ಭಾವನಾ ಅಕ್ಕನಂತೆ ಪ್ರೋತ್ಸಾಹ ನೀಡಿದರು.

ವಸಿಷ್ಟ.ಎನ್.ಸಿಂಹ, ಖಳನಟ: ಚಿಟ್ಟೆ ಪಾತ್ರ ಮೊದಲು ಹೇಳಿದಾಗ ಆಶ್ಚರ್ಯ ಬಂತು. ಶೀರ್ಷಿಕೆಯಲ್ಲಿ ಪೊಗರು ಇರುವಂತೆ ತಂಡಕ್ಕೆ ಪೊಗರು ಬಂದಿದೆ. ಇಂದು ನಾವೆಲ್ಲಾ ಪೊಗರಿನಂತೆ ಬೀಗುತ್ತಿದ್ದೇವೆ. ಚಿತ್ರದಲ್ಲಿ ಬರುವ ಹೆಸರುಗಳು ಮುಖ್ಯವಾಗಿದೆ.
ಧನಂಜಯ್, ಖಳನಟ: ಡಾಲಿ ಪಾತ್ರ ನನ್ನನ್ನು ಎಲ್ಲಗೋ ಕರೆದುಕೊಂಡು ಹೋಗುತ್ತಿದೆ. ಕಲ್ಲಾಗಿದ್ದನ್ನು ಮಣ್ಣು ಮಾಡಿಸಿದ ಕೀರ್ತಿ ಸೂರಿ ಅವರಿಗೆ ಸಲ್ಲುತ್ತದೆ. ಈ ಮಣ್ಣನ್ನು ಬೇರೆಯವರು ಸಾವಿರ ರೂಪ ಮಾಡಿಕೊಳ್ಳುತ್ತಾರೆಂದು ಹೇಳಿದ್ದಾರೆ.
ಕೆ.ಪಿ.ಶ್ರೀಕಾಂತ್, ನಿರ್ಮಾಪಕ: ಗೀತಕ್ಕನ ಪ್ರೋತ್ಸಾಹದಿಂದ ಚಿತ್ರ ನಿರ್ಮಾಣ ಮಾಡಲಾಯಿತು. ಟೈಟಲ್ ಶಿವಣ್ಣ ಅವರಿಗಂತಲೇ ನೊಂದಣ ಮಾಡಿಸಲಾಗಿತ್ತು. ಬಾಹುಬಲಿ ಚಿತ್ರದಂತೆ ಎರಡನೆ ವಾರವು 325+ ಚಿತ್ರಮಂದಿರದಲ್ಲಿ ಮುಂದುವರೆಯುತ್ತಿದೆ. ಯುಎಸ್, ಲಂಡನ್‍ದಲ್ಲಿ ಮುಂದಿನವಾರದಿಂದ ತೆರೆಕಾಣಲಿದೆ. ಮುಂದೆ ವಿಜಯಯಾತ್ರೆ ಹೋಗುವ ಇರಾದೆ ಇದೆ.

ಭಾವನಾ,ನಾಯಕಿ: ಸೂರಿ ಅವರು ಜಾಕಿ ಚಿತ್ರದಲ್ಲಿ ಪರಿಚಯಿಸಿದರು. ಸಣ್ಣ ಪಾತ್ರವಾದರೂ ತಂಡದಲ್ಲಿ ಭಾಗಿಯಾಗಿರುವುದು ಖುಷಿ ತಂದಿದೆ.
ಸೂರಿ, ನಿರ್ದೇಶಕ: ಹೊಸ ರೀತಿಯಲ್ಲಿ ಕೊಡುವ ಪ್ರಯತ್ನ ಮೊದಲನಿಂದಲೂ ಮಾಡುತ್ತಾ ಬಂದಿದ್ದೇನೆ. ಸನ್ನಿವೇಶಗಳು ಸ್ವಲ್ಪ ಮಟ್ಟಿಗೆ ಗೊಂದಲ ಉಂಟಾದರೂ ಮುಂದಿನ ದೃಶ್ಯಗಳು ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಸಿನಿಮಾ ಅಂದರೆ ಬೆಚ್ಚಿ ಬೀಳಿಸಬೇಕು. ಶಿವಣ್ಣ ಅವರಿಗೆ ರೌಡಿಯೊಬ್ಬ ಬೈದ ಡೈಲಾಗ್‍ಗೆ ಮ್ಯೂಟ್ ಮಾಡಲಾಗಿದೆ. ಟಗರು-2 ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು.

ಶಿವರಾಜ್‍ಕುಮಾರ್: ನಿರ್ಮಾಪಕರು 22 ವರ್ಷದಿಂದ ಪರಿಚಯದವರು. ಪ್ರಾರಂಭದಲ್ಲಿ ಕ್ಯಾಮರಾಮನ್‍ಗೆ ರೇಗಿದ್ದು ಉಂಟು. ನಂತರ ಅವರ ಕೆಲಸ ನೋಡಿದಾಗ ಶಾಕ್ ಆಯಿತು. ಬದುಕಿನ ಬಣ್ಣಗಳು ಇಷ್ಟದ ಹಾಡು. ಸೆಟ್‍ನಲ್ಲಿ ಬೈದಿದ್ದರೆ ಅದನ್ನು ಆರ್ಶಿವಾದ ಅಂತ ತೆಗೆದುಕೊಳ್ಳಿ. ಡಾಲಿ ನನ್ನನ್ನು ಹೆಚ್ಚಿಗೆ ಕಾಡಿದೆ. ವಸಿಷ್ಟ ಕಂಠ, ಮಾಸ್ತಿ ಸಂಬಾಷಣೆ, ಕಾನ್ಸಸ್ಟಬಲ್ ಸರೋಜ ಎಲ್ಲರೂ ಅದ್ಬುತ ನಟನೆ ಮಾಡಿದ್ದಾರೆ. ಟಗರು-2 ಮಾಡಲು ಗಿಮಕ್‍ನ್ನು ಶುರು ಮಾಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/03/18


ಅಭಿಮಾನಿಗಳು ಮರೆತರೆ ನಾವು ಗೋವಿಂದ - ಶಿವರಾಜ್‍ಕುಮಾರ್
ಮಂಗಳವಾರ ಪುರಭವನದಲ್ಲಿ ಜೈಕಾರ, ಶಿಳ್ಳೆ, ಕೂಗಾಟ ಕೇಳಿಬರುತ್ತಿದ್ದವು. ಅದಕ್ಕೆ ‘ಟಗರು’ ಚಿತ್ರದ ಟೀಸರ್ ಅನಾವರಣ ಕಾರಣವಾಗಿತ್ತು. ಪ್ರಾರಂಭದಲ್ಲಿ ಚಿತ್ರದ ಮೇಕಿಂಗ್ ತೋರಿಸಿದ ತರುವಾಯ ಕ್ರಿಕೆಟ್ ರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಕ್ರಿಕೆಟ್ ಆಟಗಾರ ಕನ್ನಡಿಗ ಜಿ.ಆರ್.ವಿಶ್ವನಾಥ್ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕಾರ ಮಾಡಿದ ವಿಶ್ವನಾಥ್ ಮಾತನಾಡುತ್ತಾ ಇದೇ ಮೊದಲಬಾರಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದು. ರಾಜ್ ಕುಮಾರ್ ಅವರನ್ನು 40 ವರ್ಷದ ಹಿಂದೆ ಭೇಟಿ ಮಾಡಿದ್ದೆ. ಅವರ ವ್ಯಕ್ತಿತ್ವ ಮಕ್ಕಳಲ್ಲಿ ಬಂದಿದೆ ಎಂದು ಚಿತ್ರಕ್ಕೆ ಶುಭಹಾರೈಸಿದರು. ಮೇಕಿಂಗ್ ನೋಡಿದರೆ ಸಿನಿಮಾ ನೋಡಬೇಕು ಅನಿಸುತ್ತದೆ. ಆದಷ್ಟು ಬೇಗನೆ ಜನರಿಗೆ ತೋರಿಸಿ, ನಾನು ನೋಡುತ್ತೇನೆ ಎಂಬ ನುಡಿ ರಾಘವೇಂದ್ರರಾಜ್‍ಕುಮಾರ್ ಅವರಿಂದ ಕೇಳಿಬಂತು.

ಟೀಸರ್ ನೋಡಿದರೆ ಗೊತ್ತಾಗುತ್ತದೆ. ಎಂಥಾ ಸಿನಿಮಾ ಎಂಬುದು. ಸೂರಿ ಬಗ್ಗೆ ಹೇಳಬೇಕಾಗಿಲ್ಲ. ಶಿವಣ್ಣನ ಅಭಿಮಾನಿಯಾಗಿ ನಾನು ಕಾಯುತ್ತಿರುವುದಾಗಿ ಪುನೀತ್ ಹೇಳಿದಾಗ, ನಿರೂಪಕಿ ಟಗರುಗಳು ಗುದ್ದಾಡುವಂತೆ ಶಿವಣ್ಣ-ಪುನೀತ್‍ರಿಂದ ಡೈಲಾಗ್ ಹೇಳಿಸಿ ರಂಜಿಸಿದರು. ಪ್ರೀತಿಯಿಂದ ಮಾಡಿದ ಚಿತ್ರ. ಎಲ್ಲರೂ ಸೇರಿಕೊಂಡಾಗ ಒಂದು ಹಂತಕ್ಕೆ ಬರುತ್ತದೆ. ಚರಣ್‍ರಾಜ್ ಅದ್ಬುತ ಸಂಗೀತ ಒದಗಿಸಿದ್ದಾರೆ. ಇಲ್ಲಿಯವರೆಗೂ 105 ದಿನ ಚಿತ್ರೀಕರಣ ನಡೆಸಲಾಗಿದೆ. ಬಾಕಿ 20 ದಿವಸ ಇದೆ. ಕಡ್ಡಿಪುಡಿಯಲ್ಲಿ ಸಿಟಿಮಾರ್ಕೆಟ್‍ನಲ್ಲಿ ಶಿವಣ್ಣ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಇದರಲ್ಲಿ ಶಿವಾಜಿನಗರವನ್ನು ಸುತ್ತಾಡಿಸಿದ್ದೇವೆ. ಅವರ ಎನರ್ಜಿ ನಮಗೆ ಶಕ್ತಿ ಬಂದಿದೆ. ಹೊಸಪೇಟೆಯಲ್ಲಿ ಆಡಿಯೋ ಬಿಡುಗಡೆ, ಮೈಸೂರಿನಲ್ಲಿ ಟ್ರೈಲರ್ ಲೋಕಾರ್ಪಣೆ ಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಸೂರಿ ಮಾಹಿತಿ ಹರಿಬಿಟ್ಟರು.

ಮೇಕಿಂಗ್, ಟೀಸರ್ ಎರಡು ವರ್ಷ ಮಾತನಾಡಿಸುತ್ತದೆ ಎಂದು ಒಂದೇ ವ್ಯಾಕ್ಯದಲ್ಲಿ ಹೇಳಿದ್ದು ರಕ್ಷಿತ್‍ಶೆಟ್ಟಿ. ನವಂಬರ್ ತಿಂಗಳು ಕನ್ನಡ ಹಬ್ಬವಾಗಿರುವುದಿಲ್ಲ. ನಾವುಗಳು ಕನ್ನಡ ಪುಸ್ತಕವನ್ನು ಓದಬೇಕು, ಕನ್ನಡ ಮಾತಾಡಬೇಕು. ಟಿಕೆಟ್ ಖರೀದಿಸಿ ಟಗರು ನೋಡಿ ಅಂತ ಮಾತನಾಡಿದ್ದು ಪ್ರಥಮ್. ತೆಲುಗು ನಟ ಅಲ್ಲುಅರ್ಜುನ್ ಸೋದರ ಅಲ್ಲುಶಿರಿಷ್ ಕನ್ನಡ ಅರ್ಥವಾಗುತ್ತದೆ ಎನ್ನುತ್ತಾ ರಾಜ್‍ಕುಮಾರ್ ಜೈ ಎಂದರು.

ಚಿತ್ರಕ್ಕೆ ಹಾರೈಸಲು ಎಲ್ಲರು ಬಂದಿರುವುದಕ್ಕೆ ಥ್ಯಾಂಕ್ಸ್. ಇನ್ನು 20 ದಿನಬೇಕೆಂದು ನಿರ್ದೇಶಕರು ಶಾಕ್ ನೀಡಿದ್ದಾರೆ. ಬೇಕಿದ್ದರೆ 50 ದಿನ ತೆಗೆದುಕೊಳ್ಳಿ. ಜನವರಿಗೆ ಬಂದುಬಿಡಿ. 33 ವರ್ಷ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಎಷ್ಟು ದಿವಸ ಅಂತ ಡ್ಯಾನ್ಸ್ ಮಾಡುವುದು. ಅದನ್ನು ಮಾಡಲು ಯಶ್, ಧ್ರುವಸರ್ಜಾ ಇದ್ದಾರೆ. ಬೇಕಿದ್ದರೆ ಲಾಂಗೆ ಹಿಡಿಯುತ್ತೇನೆ. ಆದರೂ ಅಭಿಮಾನಿಗಳಿಗೋಸ್ಕರ ಇದೆಲ್ಲಾವನ್ನು ಮಾಡಬೇಕಾಗಿದೆ. ಅವರೇನಾದರೂ ಮರೆತರೆ ನಾವುಗಳು ಗೋವಿಂದ. ಅಭಿಮಾನಿಗಳಿಗೆ ಪ್ರಾಮಾಣ ಕತೆ, ಶ್ರದ್ದೆ ಇರಬೇಕೆಂದು ಬಯಸುತ್ತೇನೆ ಅಂತ ಶಿವರಾಜ್‍ಕುಮಾರ್ ಮಾತಿಗೆ ವಿರಾಮ ಹಾಕಿದರು.

ಸಮಾರಂಭದಲ್ಲಿ ಹಿರಿಯ ಪೋಲೀಸ್ ಅಧಿಕಾರಿಗಳು, ಯೋಗರಾಜಭಟ್, ಸಿನಿಪಂಡಿತರು, ಚಿತ್ರದಲ್ಲಿ ನಟಿಸಿರುವ ಮಾನ್ವಿತಾಹರೀಶ್, ಧನಂಜಯ್, ವಸಿಷ್ಟ ಉಪಸ್ತಿತಿ ಇತ್ತು. ನಿರೂಪಕಿ ರ್ಯಾಪಿಡ್ ರಶ್ಮಿ ಉತ್ರೇಕ್ಷೆ ಮಾತುಗಳು ಕೆಲವು ಸಲ ಕಿರಿಕಿರಿ ಉಂಟು ಮಾಡಿತು. ನಿರ್ಮಾಪಕ ಶ್ರೀಕಾಂತ್.ಕೆ.ಪಿ ಶಿಷ್ಟಚಾರದಲ್ಲಿ ಬ್ಯುಸಿ ಇರುವ ಕಾರಣ ಮೈಕ್ ತೆಗೆದುಕೊಳ್ಳಲಿಲ್ಲ. ರಕ್ಷಿತ್‍ಶೆಟ್ಟಿ, ಶಿವರಾಜ್‍ಕುಮಾರ್, ಅಲ್ಲುಶಿರಿಶ್ ಹುಲಿ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ಕಣ ್ಣಗೆ ತಂಪು ನೀಡಿದರೆ, ಬೆಂಗಳೂರಿನ 12 ವರ್ಷದ ಯಶವಂತ್ ಅವರ ಯೋಗ ಪ್ರದರ್ಶನ ಮೈ ನಡುಕ ತರಿಸಿತು. ಶಿವು ಅಡ್ಡ ಮತ್ತು ರಾಜ್ ಡೈನಸ್ಟಿ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.
-10/11/17

TAGARU’ TEASER LAUNCHED
T
he teaser of the Shivarajkumar starrer Tagaru was released at the Kanteerava Studio near Dr Rajkumar’s memorial on Monday. Veteran actor and film-maker Dwarakish was felicitated on the occasion. Speaking on the occasion, Dwarakish recalled the contribution of Dr Rajkumar and how he had made it big by making a film with the late actor. He wished Dr Rajkumar’s children all the best. Tagaru also stars Dhananjaya, Vasishta Simha, Manvitha Harish, Bhavana Menon and Devaraj among others.

Director Suri and producer K P Srikanth were also present.
-24/04/17ANOTHER SHIVARAJKUMAR STARRER ‘TAGARU’ LAUNCHED
Y
et another Shivarajkumar starrer Tagaru mounted the sets on Sunday morning at a temple in Bengaluru three days after Leader was launched at Kanteerava Studio. Tagaru is directed by Duniya Soori and produced by K P Srikanth. The film has Manvitha Harish playing the female lead and Dhananjaya in a key role.

Director Soori told reporters that while filming Doddamane Huduga a rowdyism subject came to his mind which required Shivanna to do it. He said he wanted to get started with the actor immediately as the film required to be made a big scale. He said he has stopped working on Kaage Bangara for now as the shoot for Tagaru has begun. Soori said test shoot is over and the shoot schedule will begin in October. However, the director did not disclose details about the story.

 Shivanna said he is doing a film based on rowdyism after Kaddipudi with the same director. He said it is left to the director on how I should hold the machete. He said audiences will know why the hero is arrogant after watching the movie. Shivarajkumar said the film is not based on any real incident.

Manvitha Harish said she is happy and nervous to be acting with Shivarajkumar and added that the director had told her not to reveal details about her role.

Dhananjaya said his role is good and the opportunity is big without disclosing details about his role. Vasista Simha said he had done a small role in Kaddipudi and is now doing a role in the movie.

Simha is the cameraman.

Producer K P Srikanth said he has turned an independent producer for the first time after making 19 films in partnership. He said he is producing the film with the help of his friends and Shivanna’s encouragement being the actor’s fan himself. He said the film will be shot in Bengaluru, Hyderabad, Mysuru  and Belagavi in a schedule lasting 90 days.
-22/08/16

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore