HOME
CINEMA NEWS
GALLERY
TV NEWS
REVIEWS
CONTACT US
ಕಸ್ತೂರಿ ನಿವಾಸ ಹಾಡು ನೆನಪಿಸುವ ಚಿತ್ರ
‘ಕಸ್ತೂರಿ ನಿವಾಸ’ ಸಿನಿಮಾದ ‘ನೀ ಬಂದು ನಿಂತಾಗ’ ಗೀತೆಯನ್ನು ಕೆಆರ್‍ಎಸ್‍ನಲ್ಲಿ ಚಿತ್ರೀಕರಿಸಲಾಗಿತ್ತು. ಅದರಂತೆ ‘ಸ್ವಾರ್ಥರತ್ನ’ ಚಿತ್ರದಲ್ಲಿ ರೆಟ್ರೋ ಮಾದರಿಯಲ್ಲಿ ಶೂಟ್ ಮಾಡಲಾಗಿದೆ. ಸದರಿ ವಿಡಿಯೋ ಹಾಡನ್ನು ನಿರ್ದೇಶಕ ಭಗವಾನ್ ರೆಟ್ರೋ ಕ್ಯಾಮಾರದಲ್ಲಿ ಸೆರೆ ಹಿಡಿಯುವಂತೆ ಚಾಲನೆ ನೀಡಿದರು. ಅವರು ಮಾತನಾಡಿ 1971 ರಲ್ಲಿ ಡಾ.ರಾಜ್ ಮತ್ತು ಆರತಿ ಅವರ ಮೊದಲ ನಾಯಕಿ ಚಿತ್ರ ಆಗಿತ್ತು. ಬೆಳಿಗ್ಗೆ 7ಕ್ಕೆ ಶುರು ಮಾಡಿ ಸಂಜೆ ಮುಗಿಸಲಾಯಿತು. ಇಂದು ಆ ತರಹದೆ ಗೀತೆಯನ್ನು ನೋಡಿದಾಗ ವಯಸ್ಸು 86 ರಿಂದ 18ಕ್ಕೆ ಇಳಿದೆನೆಂದು ಅನಿಸಿದೆ. ನಾಯಕ, ನಿರ್ದೇಶಕರು ಇಬ್ಬರು ಶಿಷ್ಯಂದಿರು. ಹಿರಿಯನಾಗಿ ಕಿರಿಯರಿಗೆ ಒಳ್ಳೆಯದಾಗಲೆಂದು ಹರಿಸಿದರು.

ನಿರ್ದೇಶಕ ಅಶ್ವಿನ್‍ಕೊಡಂಗೆ ಕೆಆರ್‍ಎಸ್‍ನಲ್ಲಿ ಒಂದು ದಿನದ ಮಟ್ಟಿಗೆ ಅನುಮತಿ ನೀಡಿದ್ದರಿಂದ ಸರ್ ಅವರಿಂದ ಚಿತ್ರೀಕರಣ ನಡೆಸಲು ಸಾಧ್ಯವಾಗದು ಅಂದುಕೊಂಡು, ಒತ್ತಡದಲ್ಲಿ ಕೊರಿಯೋಗ್ರಾಫ್ ಮಾಡಿ ಮುಗಿಸಿದೆವು. ಅವರು ಹೇಳಿದ್ದು ನೋಡಿದರೆ ನಮ್ಮ ಊಹೆ ತಪ್ಪಾಗಿದೆ. ಒಂದು ಪ್ರೇಮಗೀತೆಯನ್ನು ಯಶ್-ರಾಧಿಕಾಪಂಡಿತ್ ಅವರ ಅನುಮತಿಯನ್ನು ಪಡೆದುಕೊಂಡು ಸಾಹಿತ್ಯ ರಚಿಸಲಾಗಿದೆ. ಸೆಲಬ್ರಿಟಿಗಳನ್ನು ಮಾಡುವುದು ಅಭಿಮಾನಿಗಳು . ಇಂದು ಅದೇ ಅಭಿಮಾನಿಗಳನ್ನು ಸೆಲಬ್ರಟಿಗಳನ್ನಾಗಿ ಮಾಡಿ ಅವರಿಂದ ಹಾಡನ್ನು ಬಿಡುಗಡೆ ಮಾಡಿಸಲಾಗಿದೆ. ಕುಡಿತದ ಚಟದಿಂದ ಜೀವನ ಹಾಳು ಮಾಡಿಕೊಳ್ಳಬೇಡಿರೆಂದು ಒಂದು ಗೀತೆಯಲ್ಲಿ ಸಾಧುಕೋಕಿಲ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ಮಾಹಿತಿ ಬಚ್ಚಿಟ್ಟರು.

ಒಂದು ಕಾಲದಲ್ಲಿ ಅವಕಾಶ ಮಾಡಿಕೊಟ್ಟ ಮೋಹನ್‍ಕೃಷ್ಣ ಅವರಿಂದ ರೆಟ್ರೋ ಗೀತೆಯನ್ನು ಹಾಡಿಸಲಾಗಿದೆ. ಐದು ಹಾಡುಗಳ ಪೈಕಿ ಒಂದನ್ನು ಜಯಂತ್‍ಕಾಯ್ಕಣಿ, ಉಳಿದವಕ್ಕೆ ನಿರ್ದೇಶಕರು ಸಾಹಿತ್ಯ ರಚಿಸಿದ್ದಾರೆ ಅಂತ ಸಂಗೀತ ನಿರ್ದೇಶಕ ಬಿ.ಜೆ.ಭರತ್ ಹೇಳಿದರು.
ಹಳೇ ಹಾಡಿಗೆ ಯಾರನ್ನು ಅನುಕರಿಸದೆ ಹೆಜ್ಜೆ ಹಾಕಲಾಗಿದೆ. ಪ್ರಯೋಗಾತ್ಮಕವಾಗಿ ಸಿದ್ದಪಡಿಸಿದ್ದು ನೋಡಿದಾಗ ಖುಷಿ ಕೊಟ್ಟಿತು ಅಂತಾರೆ ನಾಯಕಿ ಇಶಿತಾವರ್ಷ. ಮತ್ತೋಬ್ಬ ನಾಯಕಿ ಸ್ನೇಹಾಸಿಂಗ್ ಇಂಗ್ಲೀಷಿನಲ್ಲಿ ನುಲಿದರು. ಆಗಿನ ಕಾಲದಂತೆ ಕಾಸ್ಟ್ಯೂಮ್ ಧರಿಸಿದ್ದ ನಾಯಕ, ನಿರ್ಮಾಪಕ ಆದರ್ಶಗುಂಡುರಾಜ್ ಶಿಷ್ಟಚಾರದಲ್ಲಿ ಬ್ಯುಸಿ ಇದ್ದ ಕಾರಣ ಹೆಚ್ಚೇನು ಮಾತನಾಡಲಿಲ್ಲ. ಅಂದುಕೊಂಡಂತೆ ಆದರೆ ನವೆಂಬರ್‍ದಲ್ಲಿ ಚಿತ್ರವು ತೆರೆಗೆ ಬರುವ ಸಾದ್ಯತೆ ಇದೆಯಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
11/10/18

ಸ್ವಾರ್ಥರತ್ನ ಹಾಡುಗಳ ಸಮಯ
ಸೋಮವಾರದ ಗಾಲ್ಫ್ ಕ್ಲಬ್ ತಂಪಾದ ವಾತವರಣದಲ್ಲಿ ‘ಸ್ವಾರ್ಥರತ್ನ’ ಚಿತ್ರದ ಹಾಡುಗಳು ಅನಾವರಣಗೊಂಡಿತು. ಸಿನಿಮಾದ ನಾಲ್ಕು ಟೀಸರ್‍ಗಳು ಮತ್ತು ಲಿರಿಕಲ್ ಗೀತೆಯನ್ನು ತೋರಿಸಲಾಯಿತು. ಇದಕ್ಕೂ ಮುನ್ನ ತಂಡವು ಸರದಿಯಂತೆ ಮಾತುಗಳನ್ನು ಹಂಚಿಕೊಂಡಿತು. ಚಾರ್ಟೆಂಡ್ ಅಕೌಂಟೆಂಟ್ ಆಗಿರುವ ಆದರ್ಶ್‍ಗುಣರಾಜ ಮಾತನಾಡಿ ಇವತ್ತಿನ ಕಾಲಮಾನಕ್ಕೆ ತಕ್ಕಂತೆ ಕತೆ ಹೆಣೆಯಲಾಗಿದೆ. ಆದರ್ಶ ಶಾಲೆಯಲ್ಲಿ ತರಭೇತಿ ಪಡೆದುಕೊಂಡು ತಮಿಳು, ಹಿಂದಿ ಚಿತ್ರದಲ್ಲಿ ಅವಕಾಶ ಒದಗಿಬಂತು. ಸಿನಿಮಾದಲ್ಲಿ ನವರಸ ಅಲ್ಲದೆ ಹೊಸ ಸ್ವಾರ್ಥರಸ ಇರಲಿದೆ. ಅದೇ ಛಾಲೆಂಜ್. ಹೇಗೆ ಬೇಕಾದ್ರು ತೋರಿಸಬಹುದು ಅಂತ ಪಾತ್ರದ ಪರಿಚಯ ಮಾಡಿಕೊಂಡರು.

ಪ್ರತಿಯೊಬ್ಬ ಮನುಷ್ಯನಲ್ಲೂ ಸ್ವಾರ್ಥಗುಣ ಇರುತ್ತದೆ. ಅದು ವಿಪರೀತ ಆದರೆ ಏನಾಗುತ್ತೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಕಾಮಿಡಿ ರೋಮಾನ್ಸ್ ಬೇರೆ ಗ್ರಾಫ್‍ನಲ್ಲಿ ಹೋಗುತ್ತಾ ಇರುತ್ತದೆ. ಸಕಲೇಶಪುರ, ಚಿಕ್ಕಮಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಅಂತ ಕತೆ ಬರೆದು ನಿರ್ದೇಶನ ಮಾಡಿರುವ ಅಶ್ವಿನ್‍ಕೊಡಂಗೆ ವ್ಯಾಖ್ಯಾನ ಬಿಚ್ಚಿಟ್ಟರು.

ನಾಲ್ಕು ಹಾಡುಗಳ ಪೈಕಿ ಎರಡಕ್ಕೆ ಸಂಗೀತ ಸಂಯೋಜಿಸಲಾಗಿದೆ. ನಿರ್ದೆಶಕರು 60ರ ದಶಕದ ಶಬ್ದ ಹಾಗೂ ದೃಶ್ಯ ಇರುವಂತೆ ಒಂದು ಹಾಡಿಗೆ ಸಾಹಿತ್ಯ ಒದಗಿಸಿ ರಾಗ ಸಿದ್ದಪಡಿಸಿದ್ದಾರೆ. ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಶೀರ್ಷಿಕೆ ಫೈನಲ್ ಆಗಿರಲಿಲ್ಲ. ನಂತರ ಈ ಹೆಸರನ್ನು ಇಡಲಾಗಿದೆ ಎಂಬುದು ಬಿ.ಜೆ.ಭರತ್ ಉಕ್ತಿ.

ಗಂಡುಭೀರಿಯಾಗಿ ನಂತರ ಹೆಣ್ತತನ ಬಗ್ಗೆ ನಾಯಕ ಅರಿವು ಮೂಡಿಸುತ್ತಾನೆ. ಅಂತಹ ಪಾತ್ರದಲ್ಲಿ ಇಶಿತಾವರ್ಷ, ಬಬ್ಲಿ ಪಾತ್ರದಲ್ಲಿ ಸ್ನೇಹಸಿಂಗ್ ನಾಯಕಿಯರಾಗಿ ಹೆಚ್ಚೇನು ಮಾತನಾಡಲಿಲ್ಲ. ನಿರ್ದೇಶಕರ ಅಭಿರುಚಿಯಲ್ಲಿ ಅಸ್ತಿತ್ವ, ಚಿತ್ತ ಇದೆ. ಬಾಂಬೆಯಲ್ಲಿದ್ದಾಗ ಅವರ ತಂದಯೊಂದಿಗೆ ಒಡನಾಟವಿತ್ತು. ತಮ್ಮನಂತೆ ಇರುವ ಚಿತ್ರಕ್ಕೆ ಒಳ್ಳೆಯದಾಗಲೆಂದು ಒಂದು ಗೀತೆ ರಚಿಸಿರುವ ಜಯಂತ್‍ಕಾಯ್ಖಣಿ ಅವರ ಹಾರೈಕೆ ನುಡಿ. ನಾಯಕನ ಗೆಳಯನಾಗಿ ಹಲವು ಹೆಸರುಗಳಲ್ಲಿ ಒಂದಾದ ಅಂಗಚೀಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆಂದು ಅಮಿತ್, ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು.

ಚಿತ್ರರಂಗಕ್ಕೆ ಬರುವ ಆಸೆ ಇತ್ತು. ಅಂಬರೀಷ್ ಈ ರಂಗಕ್ಕೆ ಬರಬೇಡವಂದು ತಡೆದರು. ರಾಜಕೀಯದಲ್ಲಿ ಬೆಳಯಲು ಪ್ರಯತ್ನ ಮಾಡು ಎಂದು ಹೇಳಿದ್ದರು. ಆದರೂ ಪರಿಚಯ ಇರುವ ನಿರ್ಮಾಪಕರ ಚಿತ್ರದ ಕಾರ್ಯಕ್ರಮಕ್ಕೆ ಹೋಗುತ್ತಿರುತ್ತೇನೆಂದು ಸಚಿವ ಪುಟ್ಟರಾಜು ತಂಡಕ್ಕೆ ಶುಭ ಹಾರೈಸಿದರು.

ಐದು ವರ್ಷಕ್ಕೆ ಒಂದು ಸಿನಿಮಾ ಹಿಟ್ ಆಗುತ್ತಿದೆ. ಈ ರೀತಿ ಆದರೆ ಸ್ಯಾಂಡಲ್‍ವುಡ್ ಬೆಳೆಯುವುದಾದರೂ ಹೇಗೆ. ಒಳ್ಳೆ ಚಿತ್ರಗಳನ್ನು ಮಾಡಿದಾಗ ಮಾತ್ರ ನಿರ್ಮಾಪಕರು ಗೆಲ್ತಾರೆ. ಬೇರೆ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳು ಬರುತ್ತಿವೆ. ಅದರಂತೆ ಇಲ್ಲಿಯೂ ಆಗಬೇಕು. ಲೈಫ್ ಜೊತೆ ಒಂದು ಸೆಲ್ಫಿ ಸದ್ಯದಲ್ಲೆ ಬಿಡುಗಡೆ ಮಾಡಲಿದ್ದು, ತೆಲುಗುದಲ್ಲಿ ಒಂದು ಚಿತ್ರ ನಿರ್ಮಾಣ ಮಾಡುತ್ತಿರುವುದಾಗಿ ಒಳ್ಳೇದು ಆಗಲಿ ಎಂದು ಸಮೃದ್ದಿಮಂಜುನಾಥ್ ಹೇಳಿದರು. ಮೈಸೂರಿನ ರನ್ನಿಂಗ್ ಹಾರ್ಸ್ ಕ್ರಿಯೆಶನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗುವ ಸಾದ್ಯತೆ ಇದೆ.
ಚಿತ್ರಗಳು: ಕೆಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
14/08/18
ಹಿನ್ನಲೆ ಸಂಗೀತದಲ್ಲಿ ಸ್ವಾರ್ಥರತ್ನ
ಹಲವು ವರ್ಷಗಳ ನಂತರ ಕೆಆರ್‍ಎಸ್ ತುಂಬಿದೆ. ಇದರನ್ವಯ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೂ ‘’ಸ್ವಾರ್ಥರತ್ನ’’ ಚಿತ್ರದ ನಿರ್ದೇಶಕ ಅಶ್ವಿನ್‍ಕೊಡಂಗೆ ಅಲ್ಲಿನ ಅಧಿಕಾರಿಗಳನ್ನು ಮನವೊಲಿಸಿ ನಾಯಕ ಆದರ್ಶ್, ನಾಯಕಿ ಇಶಿತಾವರ್ಷ ಅಭಿನಯದ ಹಾಡನ್ನು ಎರಡು ದಿನಗಳ ಕಾಲ ಚಿತ್ರೀಕರಿಸಿದ್ದಾರೆ. ಗುರುಗಳಾದ ಭಗವಾನ್ ಸರ್ ಅವರಲ್ಲಿ ಕೆಲಸ ಕಲಿತಿರುವ ನಿರ್ದೇಶಕರಿಗೆ ಅವರ ಚಿತ್ರದಂತೆ ಮೂಡಿಬರಲು ಪ್ರಯತ್ನ ಮಾಡಿರುವುದು ಸಾರ್ಥಕವಾಗಿದೆ. ಮನುಷ್ಯನು ಸ್ವಾರ್ಥಗೊಂಡರೆ ಆತನಿಗೆ ಉಪಯೋಗವಾಗುತ್ತದೆ. ಅದೇ ಸ್ವಾರ್ಥವು ಬೇರೆಯವರಿಗೆ ಅನುಕೂಲವಾಗುತ್ತದೆಂದು ಸಿನಿಮಾದ ಒಂದು ಏಳೆಯ ಕತೆಯಾಗಿದೆ. ಚಿಕ್ಕಮಗಳೂರು, ಮೈಸೂರು , ಸಕಲೇಶಪುರದ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ.

ಸ್ವಾರ್ಥ ಮನುಷ್ಯನ ಸಹಜ ಗುಣ. ಅತೀ ಹೆಚ್ಚಾದ್ರೆ ಅಮೃತವು ವಿಷ ಆಗುತ್ತದೆ. ನಾಯಕನ ಪ್ರತಿ ಕೆಲಸದಲ್ಲೂ ಸ್ವಾರ್ಥ ಕಾಣಿಸಿಕೊಂಡು ಅದು ಬೇರಯವರಿಗೆ ಸಹಾಯವಾಗುತ್ತದೆ. ಹುಡುಗಿ ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ. ಅವಳು ನಿಸ್ವಾರ್ಥಿ. ಇವನು ಮಾಡ್ರನ್ ಯುಗದಲ್ಲಿ ಇದ್ದರೆ, ಆಕೆ ಹಳೆ ಕಾಲದಂತೆ ಪತ್ರಗಳನ್ನು ಬರೆಯುವ ಹವ್ಯಾಸ ಇರುತ್ತದೆ. ಅವಳ ಸಲುವಾಗಿ ಪ್ರೀತಿಯ ಪತ್ರಗಳನ್ನು ಬರೆಯುತ್ತಾನೆ. ಇಡೀ ಚಿತ್ರದಲ್ಲಿ ಪೊರೆಕೆಯೊಂದು ಪಾತ್ರದಲ್ಲಿ ಬರುವುದು ವಿಶೇಷವಾಗಿದೆ.

ಮೂರು ಹಾಡುಗಳಿಗೆ ಸಂಗೀತ ಬಿ.ಜೆ.ಭರತ್ ಸಂಯೋಜಿಸಿದ್ದು, ಸದ್ಯ ಹಿನ್ನಲೆ ಸಂಗೀತದಲ್ಲಿ ಬ್ಯುಸಿ ಇದೆ. ಮೈಸೂರಿನ ರನ್ನಿಂಗ್ ಹಾರ್ಸ್ ಕ್ರಿಯೆಶನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರವು ಆಗಸ್ಟ್‍ದಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ.
ಸಿನಿ ಸರ್ಕಲ್.ಇನ್ ನ್ಯೂಸ್
22/07/18
ಸ್ವಾರ್ಥದಲ್ಲಿ ನಿಸ್ವಾರ್ಥತೆ, ನಿಸ್ವಾರ್ಥತೆಯಲ್ಲಿ ಸ್ವಾರ್ಥ
ಮನುಷ್ಯನು ಸ್ವಾರ್ಥಗೊಂಡರೆ ಆತನಿಗೆ ಉಪಯೋಗವಾಗುತ್ತದೆ. ಆದರೆ ಅದೇ ಸ್ವಾರ್ಥವು ಬೇರೆಯವರಿಗೆ ಅನುಕೂಲವಾಗುತ್ತದೆಂದು ‘ಸ್ವಾರ್ಥರತ್ನ’ ಎನ್ನುವ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಚಿಕ್ಕಮಗಳೂರು, ಮೈಸೂರು , ಸಕಲೇಶಪುರದ ಸುಂದರ ತಾಣಗಳಲ್ಲಿ ಸದ್ದಿಲ್ಲದೆ ಚಿತ್ರೀಕರಣ ಮಾಡಿ, ಸುದ್ದಿ ಮಾಡಲು ಮೊದಲಬಾರಿ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಫಸ್ಟ್ ರ್ಯಾಂಕ್ ರಾಜು, ರಾಜು ಕನ್ನಡ ಮೀಡಿಯಂ ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ಅಶ್ವಿನ್‍ಕೊಡಂಗೆ ಚಿತ್ರಕತೆ,ನಿರ್ದೇಶನ ಮಾಡಿದ್ದು ಸಿನಿಮಾವನ್ನು ಬಣ ್ಣಸಿದ ರೀತಿ ಹೀಗಿತ್ತು:

ಸ್ವಾರ್ಥ ಮನುಷ್ಯನ ಸಹಜ ಗುಣ. ಅತೀ ಹೆಚ್ಚಾದ್ರೆ ಅಮೃತವು ವಿಷ ಆಗುತ್ತದೆ. ನಾಯಕನ ಪ್ರತಿ ಕೆಲಸದಲ್ಲೂ ಸ್ವಾರ್ಥ ಕಾಣ ಸಿಕೊಂಡು ಅದು ಬೇರಯವರಿಗೆ ಸಹಾಯವಾಗುತ್ತದೆ. ಹುಡುಗಿ ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ. ಅವಳು ನಿಸ್ವಾರ್ಥಿ. ಇವನು ಮಾಡ್ರನ್ ಯುಗದಲ್ಲಿ ಇದ್ದರೆ, ಆಕೆ ಹಳೆ ಕಾಲದಂತೆ ಪತ್ರಗಳನ್ನು ಬರೆಯುವ ಹವ್ಯಾಸ ಇರುತ್ತದೆ. ಅವಳ ಸಲುವಾಗಿ ಪ್ರೀತಿಯ ಪತ್ರಗಳನ್ನು ಬರೆಯುತ್ತಾನೆ. ಇದರ ಸುತ್ತ ಸಾಗಿ ಬರುವ ಕತೆಯನ್ನು ಮನರಂಜನೆ, ಹಾಸ್ಯದ ಮೂಲ ತೋರಿಸಲಾಗಿದೆ. ಪೊರೆಕೆಯೊಂದು ಪಾತ್ರದಲ್ಲಿ ಬರುವುದು ವಿಶೇಷವಾಗಿದೆ.

ಮೂಲತ: ಚಾರ್ಟೆಡ್ ಅಕೌಂಟೆಂಟ್ ಆಗಿರುವ ಆದರ್ಶ್ ಆದರ್ಶ ಶಾಲೆಯ ವಿದ್ಯಾರ್ಥಿಯಾಗಿದ್ದು, ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣ ಸಿಕೊಂಡು ನಾಯಕನಾಗಿ ಮೊದಲ ಚಿತ್ರ ಎಂದರು. ಸುಂದರವಾಗಿದ್ದರಿಂದ ರಕ್ಷಣೆ ಮಾಡಿಕೊಳ್ಳಲು ಗಂಡುಭೀರಿಯಾಗಿ ಹುಡುಗನಂತೆ ವರ್ತಿಸುತ್ತಿರುತ್ತೇನೆ. ಮುಂದೆ ಹುಡುಗನಲ್ಲಿ ಲವ್ ಆದಾಗ ಅವಾಂತರಗಳಿಂದ ಏನೇನು ಮಾಡಿಕೊಳ್ಳತ್ತೇನೆ ಅಂತ ನಾಯಕಿ ಇಶಿತಾವರ್ಷ ಪಾತ್ರದ ಪರಿಚಯ ಮಾಡಿಕೊಂಡರು. ಅನಿವಾಸಿ ಭಾರತೀಯಳಾಗಿ ನಗರಕ್ಕೆ ಬಂದು ಸಮಾಜಸೇವೆಯಲ್ಲಿ ತೊಡಗಿಕೊಂಡು ಆಶ್ರಮದಲ್ಲಿ ಕೆಲಸ ಮಾಡುವ ಜಾರ್ಖಂಡ್ ಮೂಲದ ಸ್ನೇಹಸಿಂಗ್ ಉಪನಾಯಕಿಯಂತೆ. ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿರುವ ಬಿ.ಜೆ.ಭರತ್ ಸ್ವಂತ ಸ್ಡುಡಿಯೋದಲ್ಲಿ ರೆರ್ಕಾಡಿಂಗ್ ಮಾಡಿದ್ದರಿಂದ ಮರೆಯಲಾಗದ ಸಿನಿಮಾವೆಂದು ಬಣ ್ಣಸಿಕೊಂಡರು. ಬೇರೆಯವರ ಸ್ವಾರ್ಥಕ್ಕೆ ತಾನು ಹೇಗೆ ಬಲಿಯಾಗುತ್ತೇನೆ ಎಂದು ವಿವಿರ ಬಿಚ್ಚಿಟ್ಟರು ಅಮಿತ್. ಮೈಸೂರಿನ ರನ್ನಿಂಗ್ ಹಾರ್ಸ್ ಕ್ರಿಯೆಶನ್ಸ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರವು ಏಪ್ರಿಲ್‍ನಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆಯಂತೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್. ಇನ್ ನ್ಯೂಸ್
-11/02/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore