HOME
CINEMA NEWS
GALLERY
TV NEWS
REVIEWS
CONTACT US
ಕೆಲವು ಮರಗಳಲ್ಲಿ ಜೈವಿಕ ಇಂದನ ಲಭ್ಯ
ಡೀಸೆಲ್ ವಿದೇಶಿ ವಿನಿಮಯದಿಂದ 7.5 ಲಕ್ಷ ಕೋಟಿ ಪ್ರತಿ ವರ್ಷ ಸರ್ಕಾರಕ್ಕೆ ಹೊರೆ ಬೀಳುತ್ತಿದೆ. ಈಗ ತಿಳಿದಿರುವಂತೆ ಅಮೂರ, ಸುರಹೊನ್ನೆ, ಹಿಪ್ಪು, ಹೊಂಗೆ ಇಂತಹ ಮರಗಳ ಬೀಜಗಳಿಂದ ದೈವಿಕ ಇಂದನವನ್ನು ಉತ್ಪತ್ತಿ ಮಾಡಬಹುದು ಎಂದು ‘ಸೂರ್ಯ ಇವ ವೃಕ್ಷಮಿತ್ರ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕತೆಯಲ್ಲಿ ನಾಯಕ ಅಮೂರ ಮರದ ಬೀಜದಲ್ಲಿ ಸಂಶೋಧನೆ ಮಾಡಿ ಇಂದನವನ್ನು ಉತ್ಪತ್ತಿ ಮಾಡಬಹುದೆಂದು ಹೇಳುತ್ತರಾನೆ. ಕಂಪೆನಿಗಳು ಮಸಲತ್ತು ಮಾಡಿ ಚಕ್ರವ್ಯೂಹದೊಳಗೆ ಈತನನ್ನು ಸಿಲುಕಿಸುತ್ತಾರೆ. ಮುಂದೆ ರೈತರು ಇಂತಹ ಸಸಿಗಳನ್ನು ನೆಟ್ಟರೆ, ಮುಂದಿನ ಮೂವತ್ತು ವರ್ಷಗಳ ಕಾಲ ಬದುಕಿಗೊಂದು ದಾರಿಯಾಗುತ್ತದೆ. ಅಲ್ಲದೆ ಉದ್ಯೋಗ ಸೃಷ್ಟಿಯಾಗುತ್ತದೆಂದು ಅರಿವು ಮೂಡಿಸುತ್ತಾನೆ. ಇಂತಹ ಕಾಯಕಗಳನ್ನು ಮಾಡಲು ಏನೆಲ್ಲಾ ಶ್ರಮ, ತ್ಯಾಗ ಮಾಡಿ ವಿರೋಧಿಗಳ ಬಣವನ್ನು ಭೇದಿಸಿ ಹೇಗೆ ಸಪಲನಾಗುತ್ತೇನೆಂದು ಒಂದು ಏಳೆಯ ಕತೆಯಾಗಿದೆ. ಬೆಂಗಳೂರು, ಹಾಸನ, ಶಿವಮೊಗ್ಗ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಪರಿಸರ ತಜ್ಘ ಡಾ.ಎ.ಎನ್.ಎಲ್ಲಪ್ಪರೆಡ್ಡಿ ವಿರಚಿತ ‘ಲೈಫ್ ಬಿಹೈಂಡ್ ಸೈನ್ಸ್’ ಪುಸ್ತಕವನ್ನು ಸಿನಿಮಾರೂಪಕ್ಕೆ ತರಲು ಜೆ.ಎನ್.ಪ್ರಹ್ಲಾದ್ ಚಿತ್ರಕತೆ ಸಿದ್ದಪಡಿಸಿದ್ದಾರೆ. ಹಿರಿಯ ಅಂಕಣಕಾರರಾಗಿರುವ ಡಾ.ನಾಗೇಶ್‍ಹೆಗ್ಡೆ ಚಿತ್ರಕತೆಗೆ ಸಲಹೆ, ಜೊತೆಗೆ ಸಾಹಿತ್ಯ ಸಂಭಾಷಣೆಗೆ ಕೆಲಸ ಮಾಡಿರುವುದು ವಿಶೇಷವಾಗಿದೆ. ಇವರೆಲ್ಲರ ಸಹಕಾರದಿಂದ ಪಿ.ಅಣ್ಣಯ್ಯ ಆಕ್ಷನ್ ಕಟ್ ಹೇಳಿದರೆ, ಸಂಕಲನ ಅರುಣ್.ಪಿ.ಥಾಮಸ್, ಛಾಯಗ್ರಹಣ ಗೌರಿವೆಂಕಟೇಶ್ ನಿರ್ವಹಿಸಿದ್ದಾರೆ.

ಅಮ್ಮ ಫಾತೀಮಾ ನಿರ್ಮಾಣ ಮಾಡಿರುವ ಸಿನಿಮಾಕ್ಕೆ ಪುತ್ರ ಸಲೀಂ ನಾಯಕನಾಗಿ ಮೊದಲ ಚಿತ್ರ. ನಾಯಕಿಯಾಗಿ ರಾಧ ಇವರಿಗೆ ಹೊಸ ಅನುಭವ. ಈಕೆಯ ಅಣ್ಣ ಮತ್ತು ನಾಯಕನ ಪ್ರಯತ್ನಗಳಿಗೆ ಉನ್ನಾರ ಮಾಡುವ ಪಾತ್ರದಲ್ಲಿ ಯತಿರಾಜ್, ವಕೀಲನಾಗಿ ರಮೇಶ್‍ಪಂಡಿತ್, ನ್ಯಾಯಮೂರ್ತಿಗಳಾಗಿ ಗಿರಿಜಾಲೋಕೇಶ್ ಮುಂತಾದವರ ತಾರಬಳಗವಿದೆ. ಇಡೀ ಜಗತ್ತಿಗೆ ಸಂಭದಿಸಿದ ಸಂದೇಶ ಇರುವ ಚಿತ್ರವನ್ನು ವಿತರಕ ಆಟೋರಾಜು ಇದೇ 22 ರಂದು ಗರಿಷ್ಟ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
8/06/18







For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore