HOME
CINEMA NEWS
GALLERY
TV NEWS
REVIEWS
CONTACT US
ದಬಂಗ್-3ದಲ್ಲಿ ಸುದೀಪ್ ಖಳನಾಯಕ
ಸುದೀಪ್ ಮತ್ತೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಾರೆಂಬುದು ಸುದ್ದಿಯಾಗಿದ್ದು ನಿಜವಾಗಿದೆ. ಅವರು ‘ದಬಂಗ್ 3’ ಭೂ ಮಾಫಿಯಾ ಡಾನ್ ಆಗಿ ನಾಯಕ ಸಲ್ಮಾನ್‍ಖಾನ್ ವಿರುದ್ದ ಸೆಣಸಲಿದ್ದಾರೆ. ಉತ್ತರ ಭಾರತದಲ್ಲಿ ಭೂ ಮಾಫಿಯಾ ಎಲ್ಲಡೆ ಎಗ್ಗಿಲ್ಲದೆ ನಡೆಯುತ್ತಿದೆ. ಖಾಕಿಧಾರಿಗಳನ್ನೆ ಹೆದರಿಸುವ ಮಟ್ಟಿಗೆ ಅಲ್ಲಿನ ಮಾಫಿಯಾ ಜಾಲಗಳು ಹರಡಿಕೊಂಡಿದೆ. ಸತ್ಯ ಕತೆ ಆಧಾರದ ಮೇಲೆ ಕತೆಯನ್ನು ಸಿದ್ದಪಡಿಸಲಾಗಿದೆ. ಸದ್ಯ ಮಧ್ಯಪ್ರದೇಶದ ಮಹೇಶ್ವರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಎರಡು ಶೇಡ್‍ಗಳಲ್ಲಿ ಖಾನ್ ಸಾಹೇಬರು ಪೋಲೀಸ್ ಆಗುವ ಮುನ್ನ ಚುಲ್‍ಬುಲ್ ಪಾಂಡೆ ಹೇಗಿದ್ದ ನಂತರ ಖಡಕ್ ಅಧಿಕಾರಿಯಾಗಿ ಹೇಗಿರುತ್ತಾರೆ ಎಂಬುದನ್ನು ಹೇಳಲಾಗಿದೆಯಂತೆ. ನಾಯಕಿಯಾಗಿ ಸೋನಾಕ್ಷಿಸಿಂಹ ನಟನೆ ಇದೆ. ಕನ್ನಡಿಗೆ ಪ್ರಭುದೇವ ನಿದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪ್ರಸಕ್ತ ಖಳನಟನಾಗಿ ನಟಿಸುತ್ತಿರುವ ಕಿಚ್ಚನ ಪಾತ್ರದ ಕುರಿತಂತೆ ಮಾಹಿತಿ ಲಭ್ಯವಾಗಿದೆ. ಮುಂಬರುವ ದಿನಗಳಳ್ಲಿ ಅವರ ಲುಕ್ ಹೇಗಿರುತ್ತದೆ ಎಂಬ ಬಗ್ಗೆ ಸುಳಿವು ಸಿಗಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
10/04/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore