HOME
CINEMA NEWS
GALLERY
TV NEWS
REVIEWS
CONTACT US

ಶ್ರೀ ರಾಘವೇಂದ್ರ ಚಿತ್ರವಾಣ ಸಂಸ್ಥೆಂiÀi40ನೇ ವಾರ್ಷಿಕೋತ್ಸವ, 15ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪ್ರಶಸ್ತಿಗಳ ವಿವರ
ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಾ, ಚಿತ್ರರಂಗದ ಏಳಿಗೆಗೆ ತಮ್ಮದೇ ಕೊಡುಗೆ ನೀಡಿರುವವರು ದಿವಂಗತ ಡಿ.ವಿ ಸುಧೀಂದ್ರ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದ ಸುಧೀಂದ್ರ ಅವರು ತಮ್ಮ ರಾಘವೇಂದ್ರ ಚಿತ್ರವಾಣ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುಧೀರ್ಘ ಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು. ನಮ್ಮ ಸಂಸ್ಥೆಯ ಮೂಲಕ ಮೊದಲಿಗೆ ಈ ಪರಿಪಾಠ ಆರಂಭವಾಗಿದ್ದು ಕೇವಲ ಎರಡು ಪ್ರಶಸ್ತಿಗಳ ಮೂಲಕ. ಈ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಿದ್ದರು. ಹೀಗೆ ಆರಂಭವಾದ ಈ ಪ್ರಶಸ್ತಿ ಪ್ರದಾನ ಸಮಾರಂಭವೀಗ 11 ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ಪತ್ರಕರ್ತರು ಕೂಡಾ ಈ ಸಮಾರಂಭಕ್ಕೆ ಜೊತೆಯಾಗಿ ಅರ್ಥವಂತಿಕೆ ಹೆಚ್ಚಿಸಿದ್ದಾರೆ.
ಕಳೆದ ವರ್ಷ ಅನಿವಾರ್ಯ ಕಾರಣದಿಂದ ಪ್ರಶಸ್ತಿ ಪ್ರದಾನ ಸಮಾgಂಭ ಆಯೋಜಿಸಲಾಗಿರಲಿಲ್ಲ. ಕಳೆದವರ್ಷದ ರಾಘವೇಂದ್ರ ಚಿತ್ರವಾಣ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದೆ. ಇನ್ನು ಮುಂದೆ ಜನವರಿ 25 ಸಂಸ್ಥೆಯ ಸ್ಥಾಪಕರಾದ ಶ್ರೀಡಿ.ವಿ.ಸುಧೀಂದ್ರ ಅವರ ಜನ್ಮದಿನವಾಗಿದ್ದು, ಆ ಸಂದರ್ಭದಲ್ಲಿ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದೆ.
ಈ ಬಾರಿ 2017ರ ಜನವರಿ 28ರ ಶನಿವಾರ ಸಂಜೆ 5ಗಂಟೆಗೆ ಬೆಲ್ ಹೊಟೆಲ್‍ನಲ್ಲಿ ನಮ್ಮ ರಾಘವೇಂದ್ರ ಚಿತ್ರವಾಣ 40ನೇ ವಾರ್ಷಿಕೋತ್ಸವ ಮತ್ತು 15ನೇ ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ ದಿ. ಡಿ.ವಿ ಸುಧೀಂದ್ರ ಅವರ 65ನೇ ಹುಟ್ಟುಹಬ್ಬ ಸಮಾರಂಭ ನಡೆಯಲಿದೆ. ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು ಈ ಸಮಾರಂಭದ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.
ದಯವಿಟ್ಟು ಪ್ರಶಸ್ತಿ ವಿವರಗಳೊಂದಿಗೆ ನೀಡುತ್ತಿರುವ ಈ ಪ್ರಕಟಣೆಯನ್ನು ತಮ್ಮ ಘನ ಮಾಧ್ಯಮದಲ್ಲಿ ಪ್ರಕಟಿಸಿ ಪೆÇ್ರೀತ್ಸಾಹಿಸಬೇಕಾಗಿ ವಿನಂತಿಸುತ್ತೇವೆ.
ಇಂತಿ
ಸುಧೀಂದ್ರ ವೆಂಕಟೇಶ್
ಪತ್ರಿಕಾ ಪ್ರಚಾರಕರ್ತ

ಪ್ರಶಸ್ತಿಗಳ ವಿವರ
2015ರ ರಾಘವೇಂದ್ರ ಚಿತ್ರವಾಣ ಪ್ರಶಸ್ತಿ

ಶ್ರೀ ಹೆಚ್.ಎನ್. ಮಾರುತಿ ಹಿರಿಯ ಚಲನಚಿತ್ರ ನಿರ್ಮಾಪಕರು
(ಶ್ರೀ ರಾಘವೇಂದ್ರ ಚಿತ್ರವಾಣ ಪ್ರಶಸ್ತಿ)

ಶ್ರೀರುಕ್ಕೋಜಿ ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣ ಪ್ರಶಸ್ತಿ)

2016ರ ರಾಘವೇಂದ್ರ ಚಿತ್ರವಾಣ ಪ್ರಶಸ್ತಿ

ಶ್ರೀ ಸಂದೇಶ್ ನಾಗರಾಜ್ ಹಿರಿಯ ಚಲನಚಿತ್ರ ನಿರ್ಮಾಪಕರು
(ಶ್ರೀ ರಾಘವೇಂದ್ರ ಚಿತ್ರವಾಣ ಪ್ರಶಸ್ತಿ)

ಶ್ರೀ ಚಿರಂಜೀವಿ ಹಿರಿಯ ಚಲನಚಿತ್ರ ಪತ್ರಕರ್ತರು
(ಶ್ರೀ ರಾಘವೇಂದ್ರ ಚಿತ್ರವಾಣ ಪ್ರಶಸ್ತಿ)

ಶ್ರೀಮತಿ ಲತಾ ಹಂಸಲೇಖ ಖ್ಯಾತ ಹಿನ್ನಲೆಗಾಯಕರು
(`ಡಾ:ರಾಜ್‍ಕುಮಾರ್ ಪ್ರಶಸ್ತಿ’ ಶ್ರೀಮತಿ ಪಾರ್ವತಮ್ಮ ರಾಜ್‍ಕುಮಾರ್ ಅವರಿಂದ)

ಶ್ರೀನಾಗಣ್ಣ ನಿರ್ದೇಶಕರು
(`ಯಜಮಾನ’ ಚಿತ್ರದ ಖ್ಯಾತಿ `ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ’ ಶ್ರೀಮತಿ ಭಾರತಿ ವಿಷ್ಣುವರ್ಧನ ಅವರಿಂದ)

ಶ್ರೀಮತಿ ಆರ್.ಟಿ.ರಮ ಕಲಾವಿದರು
(ಖ್ಯಾತ ಅಭಿನೇತ್ರಿ ಶ್ರೀಮತಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ)

ಶ್ರೀ ಚರಣರಾಜ್ ಅತ್ಯತ್ತಮ ಸಂಗೀತ ನಿರ್ದೇಶನ `ಗೋದಿಬಣ್ಣ ಸಾಧರಣ ಮೈಕಟ್ಟು’ಚಿತ್ರಕ್ಕಾಗಿ
(ಎಂ.ಎಸ್.ರಾಮಯ್ಯ ಮೀಡಿಯಾ ಅಂಡ್ ಎಂಟರ್‍ಟೈನ್‍ಮೆಂಟ್ ಪ್ರೈ.ಲಿ ಪ್ರಶಸ್ತಿ)

ಶ್ರೀ ಹೇಮಂತ್ ರಾವ್ ಅತ್ಯುತ್ತಮ ಕಥಾಲೇಖಕರು `ಗೋದಿಬಣ್ಣ ಸಾದರಣ ಮೈಕಟ್ಟು’ ಚಿತ್ರ
(`ಖ್ಯಾತ ನಿರ್ದೇಶಕ, ನಿರ್ಮಾಪಕ ಶ್ರೀಕೆ.ವಿ.ಜಯರಾಂ ಪ್ರಶಸ್ತಿ’ ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ)

ಶ್ರೀ ಸಿದ್ದಗಂಗಯ್ಯ ಕಂಬಾಳು ಅತ್ಯುತ್ತಮ ಸಂಭಾಷಣೆ `ರಾಮರಾಮ ರೇ’ ಚಿತ್ರಕ್ಕಾಗಿ
(`ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ’ ಡಾ:ಎಚ್.ಕೆ.ನರಹರಿ ಅವರಿಂದ)

ಶ್ರೀ ರಾಂರೆಡ್ಡಿ `ತಿಥಿ’ ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ
(ರಂಗ ತಜû್ಞ, ಹಿರಿತೆರೆ - ಕಿರುತೆರೆ ನಿರ್ದೇಶಕ ಶ್ರೀಬಿ.ಸುರೇಶ್ ಪ್ರಶಸ್ತಿ)

ಶ್ರೀವಿಜಯಪ್ರಸಾದ್ `ನೀರ್ ದೊಸೆ’ ಚಿತ್ರದ (ಹೋಗಿ ಬಾ ಬೆಳಕೆ) ಗೀತರಚನೆಗಾಗಿ
(`ಹಿರಿಯ ಪತ್ರಕರ್ತರಾದ ಶ್ರೀಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ’ ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ )

ಶ್ರೀ ಡಿಂಗ್ರಿ ನಾಗರಾಜ್ ಹಿರಿಯ ಕಲಾವಿದರು
(`ಕಿಚ್ಚ ಕ್ರಿಯೇಷನ್ಸ್ ಪ್ರಶಸ್ತಿ’ ನಟ ಶ್ರೀ ಸುದೀಪ್ ಅವರಿಂದ)
-13/01/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore