HOME
CINEMA NEWS
GALLERY
TV NEWS
REVIEWS
CONTACT US
ಶ್ರೀ ವಿಷ್ಣುವಿನ ಸೃಷ್ಟಿಯ ಮೊದಲ ಪ್ರೇಮ ಕಾವ್ಯ
ಭಾರತದಲ್ಲೇ ಮೊಟ್ಟ ಮೊದಲಬಾರಿ ಶ್ರೀಮನ್ನಾರಾಯಣನ ಚರಿತೆ ಕುರಿತಾದ ಧಾರವಾಹಿಯೊಂದು ವೀಕ್ಷಕರಿಗೆ ಉಣಬಡಿಸಲು ಸಿದ್ದವಾಗಿದೆ. ‘ಶ್ರೀ ವಿಷ್ಣು ದಶಾವತಾರ’ ಶೀರ್ಷಿಕೆಯ ಕತೆಯಲ್ಲಿ ಶ್ರೀ ಮಹಾ ವಿಷ್ಣುವು ಲೋಕ ಕಲ್ಯಾಣಕ್ಕಾಗಿ, ಜಗತ್ ರಕ್ಷಣೆಗಾಗಿ ಅವತಾರ ತಾಳುತ್ತಾರೆ. ಅದರಲ್ಲಿ ಮತ್ಸಾವ್ಯತಾರ, ಕೂರ್ಮಾವತಾರ, ವರಾಹಾವತಾರ ಹೀಗೆ ಅವತರಿಸುತ್ತಾ ಜಗತ್ ಕಲ್ಯಾಣ ಮಾಡಿರುವ ಶ್ರೀಹರಿಯ ಮಹತ್ವದ ಪುರಾಣಗಳನ್ನು ಕಾವ್ಯಾತ್ಮಕವಾಗಿ ನಿರೂಪಿಸುವ ಪ್ರಯತ್ನ ಮಾಡಿಲಾಗಿದೆ. ಇದಕ್ಕಿಂತಲೂ ಮಿಗಿಲಾಗಿ ವಿಷ್ಣು ಮತ್ತು ಲಕ್ಷೀಯರ ಪ್ರೇಮಕತೆಯಲ್ಲಿ, ಜಗತ್ ಪಾಲಕ ಶ್ರೀಹರಿಯು ಲಕ್ಷೀದೇವಿಯನ್ನು ವರಿಸಿದ್ದು ಹೇಗೆ, ಇವರ ಅಮರ ಕಥೆಯ ಹಿಂದಿನ ಚರಿತ್ರೆ ಏನು, ಎಲ್ಲವನ್ನು ಕಂತುಗಳ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ. ಒಂದೊಂದು ಅವತಾರಗಳು ಕನಿಷ್ಟ 30 ಕಂತುಗಳು ಬರಲಿದೆ. ಇಲ್ಲಿಯವರೆಗೂ 50 ಕಂತುಗಳಷ್ಟು ಚಿತ್ರೀಕರಣ ನಡೆಸಿದ್ದು, ಒಟ್ಟಾರೆ 350 ರಷ್ಟು ತೋರಿಸಲು ಬಾಂಬೆಯ ಧೀರಜ್‍ಕುಮಾರ್ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಸಂತೋಷ್‍ಬಾದಲ್ ನಿರ್ದೇಶನ, ನಂದಿಶ್‍ಸುರೇಶ್‍ಪಿಂಗಲ್ ಹಿನ್ನಲೆ ಸಂಗೀತ, ವಿಷ್ಣುಪಾಂಡೆ ಸಂಕಲನ ಮತ್ತು ಮುಂಬೈ ಮೂಲದ ಕ್ರಿಯೆಟೀವ್ ಐ ಸಂಸ್ಥೆಯು ಗ್ರಾಫಿಕ್ಸ್ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಟೆಕ್ಕಿಯಾಗಿದ್ದ ಕನ್ನಡಿಗ ಅಮಿತ್‍ಕಶ್ಯಪ್ ವಿಷ್ಣು ದೇವರಾಗಿ, ನಿಶಾ ಅವರು ಲಕ್ಷೀದೇವಿಯಾಗಿ ನಟಿಸಿದ್ದಾರೆ. ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಪ್ರಸಾರವಾಗುತ್ತಿರುವ ಕಾರಣ ಬಾಂಬೆಯಲ್ಲಿ ಅದ್ದೂರಿ ಸೆಟ್ ಹಾಕಲಾಗಿ ಎರಡು ಬಾರಿ ಚಿತ್ರೀಕರಣ ನಡೆಸಲಾಗಿದೆ. ವಾಹಿನಿಯು ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಹರ್ಷಿವಾಣಿ ನಡೆಸಿಕೊಡುವ ಆನಂದ್‍ಗುರೂಜಿ ಸಾರಥ್ಯದಲ್ಲಿ ಸಂಕಲ್ಪ ಪೂಜೆಯು ಇದೇ ಸಂದರ್ಭದಲ್ಲಿ ನಡೆಯಿತು. ಅಕ್ಟೋಬರ್ 15, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟಗೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/10/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore