HOME
CINEMA NEWS
GALLERY
TV NEWS
REVIEWS
CONTACT US
ಶ್ರೀ ರಾಘವೇಂದ್ರಚಿತ್ರವಾಣಿ ಪ್ರಶಸ್ತಿಗಳು
ಚಂದನವನದ ಮೊದಲ ಪ್ರಚಾರಕರ್ತರೆಂಬ ಬಿರುದಿಗೆ ಪಾತ್ರರಾಗಿದ್ದ ಡಿ.ವಿ.ಸುದೀಂದ್ರ ಹುಟ್ಟುಹಾಕಿದ್ದಶ್ರೀ ರಾಘವೇಂದ್ರಚಿತ್ರವಾಣಿ ಸಂಸ್ಥೆ 25 ವರ್ಷತುಂಬಿದ ಸಂದರ್ಭದಲ್ಲಿ, ತನಗೆಅನ್ನ ನೀಡಿದವರನ್ನು ಮರೆಯದೆ ಹಿರಿಯ ನಿರ್ಮಾಪಕರು ಹಾಗೂ ಅನುಭವಿ ಪತ್ರಕರ್ತರುಗಳಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿಗೌರವಿಸುವ ಪರಿಪಾಠವನ್ನು ಆರಂಭಿಸಿದರು. ಕೇವಲ ಎರಡು ಪ್ರಶಸ್ತಿಗಳಿಂದ ಶುರುವಾಗಿ ಈಗ 11ಕ್ಕೆ ಏರಿದೆ. ಹಲವಾರುಕಲಾವಿದರು, ಪತ್ರಕರ್ತರು ಮತ್ತು ನಿರ್ದೇಶಕರುಗಳು ಈ ಪ್ರಶಸ್ತಿ ಸಮಾರಂಭಕ್ಕೆಜೊತೆಯಾಗಿ ಸಂಸ್ಥೆಯಗೌರವವನ್ನು ಹೆಚ್ಚಿಸಿದ್ದಾರೆ. ಸುದೀಂದ್ರವೆಂಕಟೇಶ್ ಸಾರಥ್ಯದೊಂದಿಗೆ ಸುನಿಲ್ ಹಾಗೂ ವಾಸು ಮುನ್ನೆಡುಸುತ್ತಿದ್ದು, ಸದರಿ ಸಂಸ್ಥೆಯ 43ನೇ ವಾರ್ಷಿಕೋತ್ಸವ ಹಾಗೂ 19ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭಜನವರಿ 25ರ ಶನಿವಾರ ಸಂಜೆ 5.30ಕ್ಕೆ ಕರ್ನಾಟಕ ಚಲನಚಿತ್ರಕಲಾವಿದರ ಸಂಘದಆವರಣದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಂಸ್ಥೆಯು ನಿರ್ಮಿಸಿದ ಡಿ.ವಿ.ಸುಧೀಂದ್ರಅವರ ವೃತ್ತಿಜೀವನದಕುರಿತಂತೆ ಸಾಕ್ಷ್ಯಚಿತ್ರವು ಪ್ರದರ್ಶನಗೊಳ್ಳಲಿದೆ.
ಪ್ರಶಸ್ತಿಗೆ ಭಾಜನರಾದವರು:
ಶ್ರೀ ರಾಘವೇಂದ್ರಚಿತ್ರವಾಣಿ ಪ್ರಶಸ್ತಿಯು ಹಿರಿಯ ನಿರ್ಮಾಪಕ ಕೆ.ಪ್ರಭಾಕರ್ ಮತ್ತು ಹಿರಿಯ ಪತ್ರಕರ್ತೆಎಸ್.ಜಿ.ತುಂಗರೇಣುಕಅವರಿಗೆ ಲಭಿಸಿದೆ.
ಖ್ಯಾತ ಹಿನ್ನಲೆಗಾಯಕಿ ಪಿ.ಸುಶೀಲ (ಡಾ.ರಾಜಕುಮಾರ್ ಪ್ರಶಸ್ತಿ, ಶ್ರೀಮತಿ ಪಾರ್ವತಮ್ಮರಾಜ್‍ಕುಮಾರ್‍ಕುಟುಂಬದಿಂದ), ಎಸ್.ಉಮೇಶ್, ನಿರ್ದೇಶಕರು (ಆರ್.ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ, ಶ್ರೀಮತಿ ಭಾರತಿವಿಷ್ಣುವರ್ಧನ್‍ಅವರಿಂದ), ಹಿರಿಯ ನಟಿ ಪ್ರಮೀಳಾಜೋಷಾಯ್ (ಶ್ರೀಮತಿ ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ), ಸಾಗರ್‍ಗುರುರಾಜ್, ಅತ್ಯುತ್ತಮ ಸಂಗೀತ ನಿರ್ದೇಶನಗರಚಿತ್ರಕ್ಕಾಗಿ (ಎಂ.ಎಸ್.ರಾಮಯ್ಯ ಮೀಡಿಯಾಅಂಡ್‍ಎಂಟರ್‍ಟೈನ್‍ಮೆಂಟ್ ಪ್ರೈ.ಲಿ). ಜ್ಘಾನ ಪೀಠ ಪ್ರಶಸ್ತಿ ವಿಜೇತ ಡಾ.ಶಿವರಾಮಕಾರಂತ ಅತ್ಯುತ್ತಮಕಥಾಲೇಖಕರು ಮೂಕಜ್ಜಿಯ ಕನಸುಗಳು (ನಿರ್ದೇಶಕ,ನಿರ್ಮಾಪಕ ಕೆ.ವಿ.ಜಯರಾಂ ಪ್ರಶಸ್ತಿ, ಶ್ರೀಮತಿ ಮೀನಾಕ್ಷಿಜಯರಾಂಅವರಿಂದ). ಮೂಕಜ್ಜಿಯ ಕನಸುಗಳು ಕಾದಂಬರಿಗೆಚಿತ್ರಕತೆ ಬರೆದು ನಿರ್ದೇಶನ ಮಾಡಿದ ಪಿ.ಶೇಷಾದ್ರಿಅವರಿಗೆ ಈ ಬಾರಿಯ ವಿಶೇಷ ಪ್ರಶಸ್ತಿ. ಶ್ರೀನಿವಾಸಪ್ರಭು, ಅತ್ಯುತ್ತಮ ಸಂಭಾಷಣೆ ಬಿಂಬ, ಆ ತೊಂಬತ್ತು ನಿಮಿಷಗಳು ಚಿತ್ರಕ್ಕಾಗಿ (ಚಿತ್ರ ಸಾಹಿತಿ ಹುಣಸೂರುಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಡಾ.ಎಚ್.ಕೆ.ನರಹರಿಅವರಿಂದ) ರಮೇಶ್‍ಇಂದಿರ (ಪ್ರೀಮಿಯರ್ ಪದ್ಮಿನಿ) ಹಾಗೂಕುಮಾರಿರೂಪರಾವ್ (ಗಂಟುಮೂಟೆ) ಚೂಚ್ಚಲ ಚಿತ್ರದ ನಿರ್ದೇಶನಕ್ಕಾಗಿ. (ರಂಗತಜ್ಘ ಹಿರಿತೆರೆ-ಕಿರುತೆರೆ ಬಿ.ಸುರೇಶ್ ಪ್ರಶಸ್ತಿ).
ಕಿನಾಲ್‍ರಾಜ್‍ಗಿರ್ಮಿಟ್‍ಚಿತ್ರದಆರಂಭವೆಆರಂಭವೆಗೀತರಚನೆಗಾಗಿ (ಹಿರಿಯ ಪ್ರತಕರ್ತರಾದ ಪಿ.ಜಿ.ಶ್ರೀನಿವಾಸಮೂರ್ತಿಅವರ ಸ್ಮರಣಾರ್ಥ) ಪತ್ರಕರ್ತ ವಿನಾಯಕರಾಮ್‍ಕಲಗಾರುಅವರಿಂದ. ರಮೇಶ್‍ಭಟ್, ಹಿರಿಯ ಪೋಷಕ ಕಲಾವಿದರು (ಹಿರಿಯ ಪತ್ರಕರ್ತ ಸಿ.ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ).
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/01/20

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore