HOME
CINEMA NEWS
GALLERY
TV NEWS
REVIEWS
CONTACT US
ಶ್ರೀಮುರಳಿ ಮದಗಜ ಶೀರ್ಷಿಕೆ ವಿವಾದಕ್ಕೆ ತೆರೆ
ಕಳೆದ ತಿಂಗಳು ಅಯೋಗ್ಯ ಖ್ಯಾತಿ ನಿರ್ದೇಶಕ ಎಸ್.ಮಹೇಶ್‍ಕುಮಾರ್ ಮಾದ್ಯಮದವರನ್ನು ಭೇಟಿ ಮಾಡಿ ‘ಶ್ರೀಮುರಳಿ ಮದಗಜ’ ಶೀರ್ಷಿಕೆಯೊಂದಿಗೆ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದರು. ತಂಡದೊಂದಿಗೆ ಮಾಹಿತಿ ನೀಡುವ ಸಂದರ್ಭದಲ್ಲಿ ‘ಮದಗಜ’ ಶೀರ್ಷಿಕೆಯು ಹಿರಿಯ ನಿರ್ಮಾಪಕ ರಾಮಮೂರ್ತಿ ಅವರ ಬಳಿ ಇದೆಯೆಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದರ ಕುರಿತಂತೆ ಮಹೇಶ್‍ಕುಮಾರ್ ನಿರ್ಮಾಪಕ ರಾಮಮೂರ್ತಿ ಅವರನ್ನು ಕಂಡು ಕ್ಷಮೆ ಯಾಚಿಸಿದ್ದಾರೆ. ಅಷ್ಟೆ ಅಲ್ಲಾ ಶೀರ್ಷಿಕೆಯನ್ನು ಕೈ ಬಿಟ್ಟಿದ್ದು. ಒಂದು ವೇಳೆ ಅವರು ಪ್ರೀತಿಯಿಂದ ಬಿಟ್ಟುಕೊಟ್ಟರೆ, ಅದೇ ಹೆಸರಿನಲ್ಲಿ ಶ್ರೀ ಮುರಳಿ ಅವರಿಗೆ ಚಿತ್ರ ಮಾಡಲಾಗುವುದು. ಇಲ್ಲವಾದಲ್ಲಿ ಬೇರೆ ಟೈಟಲ್‍ನೊಂದಿಗೆ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಪ್ರೊಡಕ್ಷನ್ ಎಂ.21 ಹೆಸರಿನೊಂದಿಗೆ ಶ್ರೀಮುರಳಿ ಫೋಟೋ ಶೂಟ್ ನಡೆಯುತ್ತಿದ್ದು, ಫೆಬ್ರವರಿ ಅಥವಾ ಮಾರ್ಚ್‍ದಲ್ಲಿ ಸೆಟ್ಟೇರುವ ಸಾದ್ಯತೆ ಇದೆ ಎನ್ನುತ್ತಾರೆ.

ನಿರ್ಮಾಪಕ ಉಮಾಪತಿ ನಿರ್ದೇಶಕ ಮಾತಿಗೆ ದಸ್‍ಕತ್ ಹಾಕುತ್ತಾ, ಸದ್ಯ ದರ್ಶನ್ ಅವರಿಗೆ ಸಿನಿಮಾ ಮಾಡಬೇಕಾಗಿದೆ. ಇದಕ್ಕೆ ಸಮಯ ಸಾಕಷ್ಟು ಇರುವುದರಿಂದ ಮುಂದೆ ಏನಾಗುತ್ತದೆ ಎಂಬುದು ಈಗಲೇ ಹೇಳುಲು ಆಗುವುದಿಲ್ಲ ಅಂತಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/11/18

ಶ್ರೀ ಮುರಳಿ ಮದಗಜ
ಶ್ರೀ,ಮುರಳಿ ‘ಭರಾಟೆ’ ಚಿತ್ರದ ನಂತರ ಮದಗಜ ಸಿನಿಮಾಕ್ಕೆ ಸಹಿ ಹಾಕಿದ್ದಾರೆಂದು ಸುದ್ದಿ ಹರಡಿತ್ತು. ಬುದುವಾರ ಶುಭ ದಿನವಾಗಿದ್ದರಿಂದ ನಿರ್ಮಾಪಕರಗಳಾದ ಉಮಾಪತಿ,ದೀಪಕ್ ಬೊಕ್ಕೆ, ಉಗ್ರನರಸಿಂಹ ದೇವರ ಭಾವಚಿತ್ರ ನೀಡುವುದರ ಮೂಲಕ ಚಾಲನೆ ದೊರೆತಿದೆ. ಅಯೋಗ್ಯ ಹಿಟ್ ಆಗಿದ್ದರಿಂದ ನಿರ್ದೇಶಕ ಮಹೇಶ್‍ಕುಮಾರ್ ಜವಬ್ದಾರಿ ಜಾಸ್ತಿಯಾಗಿದೆ. ಮುಂದಿನ ಸಿನಿಮಾ ತೂಕ ಇರಬೇಕೆಂದು ಅದಕ್ಕೆ ತಕ್ಕಂತೆ ಕತೆಯನ್ನು ರೂಪಿಸಿದ್ದಾರೆ. ದೊಡ್ಡ ಮಟ್ಟದ ಕಲಾವಿದರು, ತಂತ್ರಜ್ಘರು ಕೆಲಸ ಮಾಡುತ್ತಿರುವುದು ಖುಷಿ ತಂದಿದೆಯಂತೆ. ಆನೆಗೆ ಮದವೇರಿದಾಗ ಯಾರಿಗೂ ಕೇರ್ ಮಾಡದೆ ತನ್ನಿಷ್ಟ ಬಂದ ಕಡೆ ಹೋಗುತ್ತದೆ. ಅದರಂತೆ ನಾಯಕ ಎದುರಾಳಿಗಳನ್ನು ಗುದ್ದಿಕೊಂಡು ಮುಂದಕ್ಕೆ ಹೋಗುತ್ತಾನೆ. ಒಟ್ಟಾರೆ ಮನರಂಜನೆ, ಆಕ್ಷನ್ ಚಿತ್ರವಾಗಲಿದ್ದು, ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.

ಶ್ರೀಮುರಳಿ ಕೇಳಿದ ಒಂದು ಏಳೆ ಕತೆಯು ಕರೆಂಟ್ ಹೊಡದಂತೆ ಆಗಿದೆ. ಏನು ಹೇಳದೆ ನಿರ್ಮಾಪಕರೊಂದಿಗೆ ನಡೆಸಿದ ಮೊದಲ ಸುತ್ತಿನ ಮಾತುಕತೆಯು ಸಪಲವಾಗಿದೆ. ಕೇವಲ ಆರು ಗಂಟೆಗಳಲ್ಲಿ ಎಲ್ಲವು ಸುಗಮವಾಗಿ ಮುಂದಿನ ಯೋಜನೆಗಳ ಬಗ್ಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೆಬ್ಬುಲಿ, ಒಂದಲ್ಲಾ ಎರಡಲ್ಲಾ ಮತ್ತು ದರ್ಶನ್ ಅಭಿನಯದ ರಾಬರ್ಟ್ ನಿರ್ಮಾಣ ಮಾಡುತ್ತಿರುವ ಉಮಾಪತಿ, ದೀಪಕ್ ಹಣ ಹೂಡುತ್ತಿದ್ದಾರೆ. ಆದರೆ ಟೈಟಲ್‍ನ್ನು ಬೇರೊಬ್ಬರು ನೊಂದಣಿ ಮಾಡಿಸಿರುವ ಕಾರಣ ‘ಶ್ರೀ ಮುರಳಿ ಮದಗಜ’ ಇಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆ. ಇನ್ನೆರಡು ದಿವಸಗಳಲ್ಲಿ ಶೀರ್ಷಿಕೆ ವಾರಸುದಾರರನ್ನು ಭೇಟಿ ಮಾಡಲಿದ್ದಾರೆ. ಅವರಿಂದ ಸಕರಾತ್ಮಕ ಸ್ಪಂದನೆ ಸಿಗಲಿದೆ ಅಂತ ತಂಡವು ಆಶಾಭಾವನೆಯಲ್ಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
29/09/18
For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore