HOME
CINEMA NEWS
GALLERY
TV NEWS
REVIEWS
CONTACT US
ಮತ್ತೋಬ್ಬ ಮಹಿಳಾ ನಿರ್ದೇಶಕಿ
ಪುರುಷ ಪ್ರಧಾನಚಿತ್ರರಂಗದಲ್ಲಿ ಮಹಿಳೆಯರು ಇರುವುದು ವಿರಳ.ಈಗ ಅದಿತಿಮಹದೇವಎನ್ನುವವರು ‘ಶ್ರೀ’ ಚಿತ್ರದ ಮುಖಾಂತರ ನಿರ್ದೇಶಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.ಎಂಟು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿಅನುಭವ, ನಂತರ ನಿರೂಪಕಿಯಾಗಿದ್ದಇವರಿಗೆ ಹೊಸ ಅನುಭವವಾಗುತ್ತಿದೆ.ಚಿತ್ರದಲ್ಲಿಅಪ್ಪ ಮಗನ ಬಾಂದವ್ಯವನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ತಂದೆಯಾಗಿರಾಘವೇಂದ್ರರಾಜ್‍ಕುಮಾರ್, ಮಗನಾಗಿ ಚಂದೂಗೌಡ ನಾಯಕ. ರಾಘಣ್ಣ ಹೇಳುವಂತೆ ಅಪ್ಪಾಜಿ ನಡೆದು ಬಂದದಾರಿ, ರೀತಿ, ನೀತಿ. ಅವರ ತಿಳುವಳಿಕೆ, ನಡವಳಿಕೆ ಜನರ ಮೇಲೆ ಹೇಗೆ ಪರಿಣಾಮ ಬೀರಿತು. ಕಿರಿ ಮಗನ ಹೆಸರುಗುರು, ಸೊಸೆ ಶ್ರೀದೇವಿ.ಎರಡು ಹೆಸರುಗಳು ಚಿತ್ರದಲ್ಲಿಇರುವುದರಿಂದ ಮನಸ್ಸಿಗೆ ಹತ್ತಿರವಾದ ಸಿನಿಮಾವೆಂದು ಬಣ್ಣಸಿಕೊಳ್ಳುತ್ತಾರೆ.ಸಿದ್ದಗಂಗೆ ಮಠದಲ್ಲಿಓದಿದ ಹುಡುಗನೊಬ್ಬ ಮುಂದೆ ಸರ್ಕಾರಿಉನ್ನತ ಹುದ್ದೆಯನ್ನು ಅಲಂಕರಿಸಿ ಸಮಾಜಕ್ಕೆ ಹೇಗೆ ಉಪಕಾರಿಯಾಗುತ್ತಾನೆಂದು ಹೇಳಲಾಗಿದೆ. ಶ್ರೀ ಶ್ರೀಶ್ರೀ ಶಿವಕುಮಾರಸ್ವಾಮಿಗಳ ಕೆಲವೊಂದು ತುಣುಕುಗಳನ್ನು ಸನ್ನಿವೇಶದಲ್ಲಿ ಬಳಸುತ್ತಿರುವುದರಿಂದ ಸ್ವಾಮಿಗಳು ನಮ್ಮಕಣ್ಣ ಮುಂದೆಇದ್ದಂತೆಆಗುತ್ತದಂತೆ.

ಹಳ್ಳಿ ಹುಡುಗಿಯಾಗಿಅನುಪಸತೀಶ್ ನಾಯಕಿ. ಉಳಿದಂತೆ ಹೊನ್ನವಳ್ಳಿಕೃಷ್ಣ, ಡಿಂಗ್ರಿನಾಗರಾಜ್, ಶೋಭರಾಜ್, ಬಾಲನಟ ನೀಲ್ ಮುಂತಾದವರುಅಭಿನಯಿಸುತ್ತಿದ್ದಾರೆ. ಮೂರು ಹಾಡುಗಳಿಗೆ ಸಂಗೀತಒದಗಿಸುತ್ತಿರುವುದುಡ್ಯಾನಿಯಲ್, ಕತೆ,ಚಿತ್ರಕತೆ ಮತ್ತುಛಾಯಾಗ್ರಹಣ ಪರಮೇಶ್, ಸಂಕಲನ ಆರ್ಯನ್‍ಮುತ್ತುರಾಜುಅವರದಾಗಿದೆ. ಡಾ.ವಿಷ್ಣುವರ್ಧನ್‍ಅಭಿನಯದ ‘ಸ್ಕೂಲ್‍ಮಾಸ್ಟರ್’ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದುಕೊಂಡು ಸುಮಾರು 25 ಚಿತ್ರಗಳನ್ನು ಬಿಡುಗಡೆ ಮಾಡಿರುವಆರ್.ಸ್ವಾಧೀನ್‍ಕುಮಾರ್ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಶ್ರೀ ವೆಂಕಟೇಶ್ವರಸ್ವಾಮಿದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಮುರಳಿಧರಹಾಲಪ್ಪಕ್ಯಾಮಾರಆನ್ ಮಾಡಿದರೆ, ಎ.ಪಿ.ಅರ್ಜುನ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭಹಾರೈಸಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
1/10/19
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore