HOME
CINEMA NEWS
GALLERY
TV NEWS
REVIEWS
CONTACT US

ಆಧುನಿಕ ಭರತ ಬಾಹುಬಲಿ
ಇಷ್ಟು ದಿವಸ ಸಂಭಾಷಣೆಗಾರ,ನಿರ್ದೇಶಕ ಮತ್ತು ನಟನಾಗಿ ಗುರುತಿಸಿಕೊಂಡಿದ್ದ ಮಂಜುಮಾಂಡವ್ಯ ಈ ಬಾರಿ ನಾಯಕನಾಗಿ ‘ಶ್ರೀ ಭರತ ಬಾಹುಬಲಿ’ ಚಿತ್ರಕ್ಕೆಕತೆ,ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಬರೆದುಆಕ್ಷನ್‍ಕಟ್ ಹೇಳಿದ್ದಾರೆ. ಶೀರ್ಷಿಕೆ ಕೇಳಿದರೆ ಇದೊಂದುಇತಿಹಾಸ-ಪುರಾಣಕತೆಇರಬಹುದೆಂದು ಒಳ ಹೊಕ್ಕರೆಇಬ್ಬರುತುಂಡ್ ಹೈಕ್ಳ ತುಂಟಾಟಗಳನ್ನು ನೋಡಬಹುದು, ನಗಲೂ ಬಹುದು. ಚಿಕ್ಕವಯಸ್ಸಿನಲ್ಲಿ ಶ್ರವಣಬೆಳಗೊಳ ಮಹಾಮಸ್ಕಕಾಭಿüಷೇಕದಲ್ಲಿ ಕಳೆದುಹೋಗುವ ಪುಟ್ಟ ಹುಡುಗಿಕಥಾ ನಾಯಕಿ ಶ್ರೀ ವಿದೇಶಿ ದಂಪತಿಗಳಿಂದ ರಕ್ಷಿಸಿಕೊಂಡು ಬೆಳೆಯುತ್ತಾಳೆ. ಪದೇ ಪದೇ ಬರುವ ಕನಸುಗಳಿಗೆ, ನಿಜವನ್ನು ಹುಡುಕಲು ಭಾರತಕ್ಕೆ ಬಂದಾಗಇಬ್ಬರ ಸಂಪರ್ಕ ಸಿಗುತ್ತದೆ.ಹುಡುಗರುಈಕೆಯ ಪೋಷಕರನ್ನು ಹುಡುಕಲು, ತನ್ನನ್ನು ಕೊಲೆ ಮಾಡಿದಅಪರಾಧಿಯನ್ನುಕಂಡು ಹಿಡಿಯಲು ಸಹಾಯ ಮಾಡುತ್ತಾರಾಎಂಬುದುಒಂದು ಏಳೆಯ ಕತೆಯಾಗಿದೆ.ಇದರ ಮಧ್ಯ್ಯೆ ಭರತ ಬಾಹುಬಲಿಯ ಮಲ್ಲಯುದ್ದದಇತಿಹಾಸಕಥನದ ಭಾಗವನ್ನು ತೋರಿಸಿರುವುದು ಚಿತ್ರಕ್ಕೆ ಕಳೆ ತಂದಿದೆ.

ಮಂಜು ಮಾಂಡವ್ಯ ನಾಯಕನಾಗಿ ಜಾಸ್ತಿ ಬಿಲ್ಡ್‍ಅಪ್‍ತೋರಿಸದೆಕತೆಗೆ ಪ್ರಾಮುಖ್ಯತೆ ನೀಡಿರುವುದು ಪರದೆ ಮೇಲೆ ಕಾಣಿಸುತ್ತದೆ. ಬಾಹುಬಲಿಯಾಗಿಚಿಕ್ಕಣ್ಣ ಎಂದಿನಂತೆಅಲ್ಲಲ್ಲಿ ನಗಿಸಿದ್ದಾರೆ. ಸಾರಾ.ಹರೀಶ್ ಪಾತ್ರಕ್ಕೆತಕ್ಕಂತೆಕನ್ನಡ, ಇಂಗ್ಲೀಷ್‍ನಲ್ಲಿಚೆನ್ನಾಗಿಧ್ವನಿ ನೀಡಿದ್ದಾರೆ. ಉಳಿದಂತೆ ಶ್ರೀನಿವಾಸಮೂರ್ತಿ, ಕರಿಸುಬ್ಬು, ಹರೀಶ್‍ರೈ ,ಅನಂತು ನೀಡಿದ ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪುರಾಣದಲ್ಲಿ ಬರುವ ಭರತನಾಗಿಜಾನ್‍ಕೊಕೇನ್, ಬಾಹುಬಲಿಯಾಗಿಚರಣ್‍ರಾಜ್ ಪುತ್ರತೇಜ್‍ಚರಣ್‍ರಾಜ್ ಬಂದು ಹೋಗುತ್ತಾರೆ.ನಾಲ್ಕು ಹಾಡಿಗೆ ಸಂಗೀತ ಒದಿಗಿಸಿರುವ ಮಣಿಕಾಂತ್‍ಕದ್ರಿ ಪೋಲೀಸ್‍ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.ಒಂದು ಹಾಡಿಗೆ ಶೃತಿಪ್ರಕಾಶ್‍ನೃತ್ಯವಿದೆ.ಅಲ್ಲಲ್ಲಿಕಂಡುಬರುವ ತಪ್ಪುಗಳನ್ನು ಬದಿಗಿಟ್ಟರೆಒಟ್ಟಾರೆ ನೋಡಿಸಿಕೊಂಡು ಹೋಗುವುದರಿಂದ ಪೈಸಾ ವಸೂಲ್‍ಎನ್ನಬಹುದು.
ನಿರ್ಮಾಣ: ಶಿವಪ್ರಕಾಶ್
ಸಿನಿ ಸರ್ಕಲ್.ಇನ್ ವಿಮರ್ಶೆ
***
17/01/20

ಚಂದನವನಕ್ಕೆಚರಣ್‍ರಾಜ್ ಪುತ್ರ
ಸ್ಯಾಂಡಲ್‍ವುಡ್‍ನ ಸೀನಿಯರ್ ಕಲಾವಿದಚರಣ್‍ರಾಜ್ ಪುತ್ರತೇಜ್‍ಚರಣ್‍ರಾಜ್ ‘ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ನಟಿಸುವುದರ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದಾರೆ. ಹಾಗಂತ ನಾಯಕ ಅಂದುಕೊಳ್ಳುವ ಆಗಿಲ್ಲ. ಇಡೀ ಸಿನಿಮಾದಲ್ಲಿ ಹೈಲೈಟ್‍ಆಗುವಂತ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲು ಪುರಾಣದ ಹಿನ್ನಲೆಯಲ್ಲಿ ಬಾಹುಬಲಿ ಪಾತ್ರವನ್ನುಉಪೇಂದ್ರ ಮಾಡಬೇಕಾಗಿತ್ತು.ಅವರುಚುನಾವಣೆಯಲ್ಲಿ ಬ್ಯುಸಿ ಇದ್ದಕಾರಣ ಆಗಲಿಲ್ಲ. ಕೊನೆಗೆ ಕಟ್ಟು ಮಸ್ತಾಗಿ ಇರುವ ಹುಡುಗನನ್ನುತಲಾಷ್ ಮಾಡುತ್ತಿರುವ ಸಂದರ್ಭದಲ್ಲಿಅಕಸ್ಮಾತ್‍ಚರಣ್‍ರಾಜ್ ಸಿಕ್ಕಿದ್ದಾರೆ. ಹಾಗೆ ನಾಯಕ, ನಿರ್ದೇಶಕ, ಸಂಭಾಷಣೆ,ಸಾಹಿತ್ಯ ಬರೆದಿರುವ ಮಂಜುಮಾಂಡವ್ಯ ಬಳಿ ಉಭಯಕುಶಲೋಪರಿ ನಡೆಸುತ್ತಿರುವಾಗ ಮಗನ ಫೋಟೋ ತೋರಿಸಿದ್ದಾರೆ.

ಇಂತಹ ಹುಡುಗನೇ ಬೇಕೆಂದುಕೊಂಡುಅವರನ್ನು ಒಪ್ಪಿಸಿದ್ದು ಅಲ್ಲದೆಚಿತ್ರೀಕರಣ ಮುಗಿಸಿದ್ದಾರೆ. ಹತ್ತು ನಿಮಿಷಪಾತ್ರವಾದರೂಕತೆಗೆ ಪ್ರಮುಖವಾಗಿ ಬರುತ್ತದೆ. ಅವರು ಬಾಹುಬಲಿಯಾಗಿ ಮಲ್ಲಯುದ್ದ ಮಾಡಿದ್ದಾರೆ.ಸದರಿ ಸನ್ನಿವೇಶಕ್ಕೆ ಸುಮಾರು 90 ಲಕ್ಷಖರ್ಚುಆಗಿರುತ್ತದೆ.ಮೊನ್ನೆತಾನೆ ಪುತ್ರನೊಂದಿಗೆ ಆಗಮಿಸಿದ್ದ ಚರಣ್‍ರಾಜ್‍ತನಗೆ ಸಿಕ್ಕ ಪ್ರೋತ್ಸಾಹ ಅವನಿಗೂ ಸಿಗಲು ಮಾದ್ಯಮದ ಸಹಕಾರಬೇಕೆಂದುಕೋರಿದರು.ಇನ್ನು ಪ್ರಚಾರಕ್ಕೆಂದೇ ನಿರ್ಮಾಪಕ ಶಿವಪ್ರಕಾಶ್ ಒಂದುಕೋಟಿ ಮೀಸಲಿರಿಸಿದ್ದಾರೆ. ಸಿನಿಮಾಟಿಕೆಟ್‍ಖರೀದಿಸುವವರಿಗೆಒಂದುಕೂಪನ್ ನೀಡಲಿದೆ.ಅದನ್ನು ವೀಕ್ಷಕರುಟಿಕೆಟ್‍ಜೊತೆಗೆ ಸುರಕ್ಷಿತವಾಗಿಕೂಪನ್‍ನ್ನುಇಟ್ಟುಕೊಂಡಿರಬೇಕು. ಲಕ್ಕಿ ಡ್ರಾದಲ್ಲಿಆಯ್ಕೆಯಾದವರಿಗೆಕಾರು, ಚಿನ್ನ ನೀಡಲಾಗುವುದು. ಈ ಆಫರ್ ಬಿಡುಗಡೆಯಾದಎರಡು ವಾರದವರೆಗೆ ಸೀಮಿತ.ಇದಕ್ಕಾಗಿ 25 ಲಕ್ಷಖರ್ಚು ಮಾಡಿ 80 ಲಕ್ಷಕೂಪನ್ ಮುದ್ರಣ ಮಾಡಿಸದ್ದುಅಲ್ಲದೆ, ಐದು ಲಕ್ಷ ಬಾಳುವ 10 ಚಿನ್ನದ ಒಡೆವೆಗಳು, 10 ಕಾರುಗಳನ್ನು ಖರೀದಿಸಿದೆ. ಶುಕ್ರವಾರದಿಂದ ಸಿನಿಮಾವು ಬಿಡುಗೆರಯಾಗಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/01/20


ಶ್ರೀ ಭರತ ಬಾಹುಬಲಿಯಿಂದದುಬಾರಿ ಬಹುಮಾನ
‘ಶ್ರೀ ಭರತ ಬಾಹುಬಲಿ’ ಚಿತ್ರದಕುರಿತಂತೆಐಶ್ವರ್ಯಡೆವಲಪರ್ಸ್ ಮಾಲೀಕ ಶಿವಪ್ರಕಾಶ್ ಆರುಕೋಟಿಖರ್ಚು ಮಾಡುವುದರ ಮೂಲಕ ಪ್ರಥಮಅನುಭವಎನ್ನುವಂತೆನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್‍ಆಗಿದ್ದು, ಯಶ್ ತುಣುಕುಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. ಜನವರಿ 17ರಂದು ಬಿಡುಗಡೆಯಾಗುತ್ತಿರುವುದರಿಂದ ನಿರ್ಮಾಪಕರು ಪ್ರೇಕ್ಷಕರಿಗೆಕೋಟಿ ಬಹುಮಾನ ನೀಡಲು ನಿರ್ಣಯತೆಗೆದುಕೊಂಡಿದ್ದಾರೆ. ಚಿತ್ರಮಂದಿರಕ್ಕೆ ಬರುವ ಪ್ರತಿಯೊಬ್ಬರಿಗೂಟಿಕೆಟ್‍ಜೊತೆಗೆಒಂದುಕೂಪನ್‍ಎರಡು ವಾರಗಳವರಗೆ ಕೊಡಲಾಗುತ್ತದೆ. ನಂತರ ಲಕ್ಕಿಡ್ರಾದಲ್ಲಿಆಯ್ಕೆಯಾದವರಿಗೆಕಾರು, ಚಿನ್ನವನ್ನು ನೀಡಲಾಗುವುದು. ಇದಕ್ಕಾಗಿಐದು ಲಕ್ಷದ 10 ಕಾರುಗಳು ಮತ್ತುಇದೇ ಮೌಲ್ಯದಚಿನ್ನ.ಒಟ್ಟು 20 ಮಂದಿಗೆ ಅದೃಷ್ಟದ ಸೌಲಭ್ಯ ಸಿಗುವ ಅವಕಾಶ ಕಲ್ಪಿಸಲಾಗಿದೆ.

ಮಾಸ್ಟರ್ ಪೀಸ್‍ಚಿತ್ರ ನಿರ್ದೇಶನ ಮಾಡಿರುವ ಮಂಜುಮಾಂಡವ್ಯರಚನೆ,ಚಿತ್ರಕತೆ,ಸಂಭಾಷಣೆ, ಐದು ಹಾಡುಗಳಿಗೆ ಸಾಹಿತ್ಯ,ಒಂದುಗೀತೆಗೆಗಾಯನ,ಆಕ್ಷನ್‍ಕಟ್ ಹೇಳುವ ಜೊತೆಗೆ ಮೊದಲಬಾರಿ ನಾಯಕನಾಗಿ ಭರತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಾಹುಬಲಿಯಾಗಿಚಿಕ್ಕಣ್ಣ.ಅನಿವಾಸಿಭಾರತೀಯಳಾಗಿ ಸಾರಾಹರೀಶ್ ಮತ್ತುಶ್ರೇಯಾಶೆಟ್ಟಿನಾಯಕಿಯರು. ಭರತನತಂದೆಯಾಗಿ ಶ್ರೀನಿವಾಸಮೂರ್ತಿ, ಕವಲುದಾರಿಯ ರಿಶಿ, ಅಚ್ಯುತ್‍ರಾವ್, ಶೃತಿಪ್ರಕಾಶ್, ಬಾಹುಬಲಿ ಅಪ್ಪನಾಗಿಕರಿಸುಬ್ಬು, ಉಳಿದಂತೆ ಪುಷ್ಪಸ್ವಾಮಿ, ನಿಖಿತಾದತ್ತೋಡಿ,ಭವ್ಯಾ, ತೇಜ್‍ರಾಜ್, ಜಾನ್‍ಕೋಕೇನ್, ಅನಂತು, ಪ್ರಶಾಂತ್, ಪ್ರಖ್ಯಾತ್, ಪುಟಾಣಿಗಳಾದ ಗೀತಾ, ಆರಾಧ್ಯ ಮುಂತಾದವರು ನಟಿಸಿದ್ದಾರೆ. ಪ್ರಾರಂಭದಕತೆಗೆಉಪೇಂದ್ರ ಮುನ್ನಡಿ ಹೇಳಿರುವುದು ವಿಶೇಷ.ಸಾಹಿತ್ಯಕ್ಕೆ ಸಂಗೀತ ಒದಗಿಸಿರುವುದು ಮಣಿಕಾಂತ್‍ಕದ್ರಿ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/01/20
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore