HOME
CINEMA NEWS
GALLERY
TV NEWS
REVIEWS
CONTACT US
`ಶ್ರೀ ವಿಶ್ವಾರಾಧ್ಯ ಸಿದ್ದಿಪುರುಷರು'
ಪ್ರಸಿದ್ದ ಸಿದ್ದಿ ಪುರುಷ ಅಬ್ಬೆ ತುಮಕೂರು ಯಾದಗಿರಿ ಶ್ರೀ ವಿಶ್ವಾರಾಧ್ಯ ಸಿದ್ದಿಪುರುಷರ ಜೀವನ ಚರಿತ್ರೆಯನ್ನು ಸಾರುವ ಚಿತ್ರ `ಸಿದ್ದಿಪುರುಷ ವಿಶ್ವಾರಾಧ್ಯ' ಓಂ ಸಾಯಿ ಪ್ರಕಾಷ್ ಅವರ 99 ನೇ ಸಿನಿಮಾ ಕಳೆದ ಮಾರ್ಚ್ 3 ರಂದು ಅಬ್ಬೆ ತುಮಕೂರು, ಉತ್ತರ ಕನ್ನಡದ ಜಿಲ್ಲೆಯಲ್ಲಿ ನಡೆಯುವ ಯಾದಗಿರಿ ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಚಾಲನೆಗೊಂಡಿದೆ. ಈ ಮೂರು ದಿವಸದ ಜಾತ್ರೆ ವರ್ಷಕ್ಕೊಮ್ಮೆ ನಡೆಯುತ್ತದೆ. ಅನೇಕ ಕೋನಗಳಲ್ಲಿ ಈ ಜಾತ್ರೆಯ ಸನ್ನಿವೇಶ ಸಹ ಓಂ ಸಾಯಿ ಪ್ರಕಾಷ್ ಅವರ ನಿರ್ದೇಶನದಲ್ಲಿ ಹೆಸರಾಂತ ಛಾಯಾಗ್ರಾಹಕ ಜೆ ಜಿ ಕೃಷ್ಣ ಅವರು ಚಿತ್ರೀಕರಿಸಿಕೊಂಡಿದ್ದಾರೆ.

200 ಸಿನಿಮಾಗಳಲ್ಲಿ ನಟಿಸಿರುವ ನಟ, ಡೈಲಾಗ್ ಕಿಂಗ್ ಸಾಯಿಕುಮಾರ್ ಅವರು ಪ್ರಥಮ ದೃಶ್ಯವನ್ನು ಎದುರಿಸಿದ್ದಾರೆ. ಶ್ರೀ ವಿಶ್ವಾರಾಧ್ಯ ಸಿದ್ದಿಪುರುಷರ ಪಾತ್ರದಲ್ಲಿ ಅವರು ಅಭಿನಯಿಸಲಿದ್ದಾರೆ. ಚಿತ್ರದ ಮೊದಲ ದೃಷ್ಯಕ್ಕೆ ಎ, ವಿ ಮಳ್ಪಲ್ ರೆಡ್ಡಿ ಕ್ಲಾಪ್ ಮಾಡಿದರೆ, ಚನ್ನ ರೆಡ್ಡಿ ಗೌಡರ್ ಕ್ಯಾಮರಾ ಚಾಲನೆ ಮಾಡಿದ್ದಾರೆ.

ವಿಶ್ವ ಗಂಗ ಪೆÇ್ರಡಕ್ಷನ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಹೆಸರಾಂತ ನಟಿ ಶ್ರುತಿ, ರವಿ ಚೇತನ್, ಗಣೇಶ್ ರಾವ್, ಬ್ಯಾಂಕ್ ಜನಾರ್ಧನ್, ಚಿತ್ರ ಶೆಣೈ ಅಲ್ಲದೆ . 5ಂಕ್ಕೂ ಹೆಚ್ಚು ರಂಗಭೂಮಿ ಪ್ರತಿಬೆಗಳು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಿದ್ದಿಪುರುಷರ ಅನೇಕ ಪವಾಡಗಳು ಈಗಲೂ ಪ್ರಚಲಿತ. ಶ್ರೀ ವಿಶ್ವಾರಾಧ್ಯ ಸ್ವಾಮಿಗಳ ಬಗ್ಗೆ ಹಲವಾರು ವಿಚಾರಗಳನ್ನು ಪರದೆಯ ಮೇಲೆ ತರಲು ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್.
ಈ ಚಿತ್ರವನ್ನು ಪರಮಪೂಜ್ಯ ಡಾ ಗಂಗಾಧರ ಮಹಾಸ್ವಾಮಿಗಳು, ಶ್ರೀ ವಿಶ್ವರಾಧ್ಯ ಸಿದ್ದ ಸಂಸ್ಥಾನ ಮಠ ನಿರ್ಮಾಣ ಮಾಡಲಿದೆ.
-20/03/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

/