HOME
CINEMA NEWS
GALLERY
TV NEWS
REVIEWS
CONTACT US
ಮೈ ಮನ ಪೋಣಿಸುವ ಪಾತ್ರಗಳು
ನಾಯಕಿ ಹರಿಪ್ರಿಯಾ ‘ಸೂಜಿದಾರ’ ಚಿತ್ರದಲ್ಲಿ ಬೇರೆ ರೀತಿಯ ಎರಡು ಶೇಡ್‍ಗಳಲ್ಲಿ ಅಭಿನಯಿಸಿ ನೋಡುಗರನ್ನು ಎಲ್ಲಿಗೋ ಕರೆದುಕೊಂಡು ಹೋಗುವಲ್ಲಿ ಸಪಲರಾಗಿದ್ದಾರೆ. ಮಧ್ಯಮ ವರ್ಗದ ಹೆಣ್ಣುಮಗಳಾಗಿ ಪಾತ್ರದಲ್ಲಿ ಮುಳುಗಿ ಹೋಗಿದ್ದಾರೆ. ಕತೆಯಲ್ಲಿ ನೆನಪಿನ ಶಕ್ತಿ ಕಳೆದುಕೊಂಡಿರುವ ಪದ್ಮಳಾಗಿ ಚಿತ್ರದುರ್ಗದ ಹಳೆಯ ಬೀದಿ ವಠಾರದ ನಿವಾಸಿ. ಈಕೆಗೆ ಹಿಂಸೆ ಕೊಡುವ ಪತಿ ರಂಗಭೂಮಿ ನಟ. ಈ ಜೋಡಿ ಹೇಗೆ ಸೇರಿಕೊಂಡಿತು ಎಂಬ ಉತ್ತರ ಕೊನೆಯಲ್ಲಿ ತಿಳಿಯುತ್ತದೆ. ಇದೇ ವಠಾರದಲ್ಲಿ ಶಂಕರ ಎನ್ನುವವನ ಗೆಳತನ ಆಗುವುದು. ಅವನು ಮಂಗಳೂರಿನಲ್ಲಿ ತಾನು ಮಾಡದ ತಪ್ಪಿಗೆ ಪೋಲೀಸರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿರುತ್ತಾನೆ. ಇಲ್ಲಿಯೇ ಭಾವಿ ನಟಿ ಮನೆ ಕೂಡ ಇರುತ್ತದೆ. ಇವಳಿಗೊಬ್ಬ ಪ್ರಿಯಕರ ಕಳ್ಳ.

ಮುಂದೆ ಆಕೆಯ ಮನೆಯಲ್ಲಿ ಶಂಕರ್ ಇರುವ ಸಮಯದಲ್ಲಿ ಗಂಡ ಬಂದು ಅವಿತುಕೊಳ್ಳುವ ಹಾಗೆ ಆಗುತದೆ. ಅವನು ಹೊರಡುವಾಗ ಬೀಗ ಹಾಕಿಕೊಂಡು ಹೋದಾಗ ಇಬ್ಬರಿಗೂ ಕಷ್ಟವಾಗುತ್ತದೆ. ಇಂತಹ ದೃಶ್ಯಗಳನ್ನು ನೋಡುವಾಗ ಪ್ರಕಾಶ್‍ರೈ ಅಭಿನಯದ ‘ಇದೊಳ್ಳೆ ರಾಮಾಯಣ’ ನೆನಪಿಗೆ ಬರುವುದುಂಟು. ನಂತರ ಶಂಕರ್ ಅವಳ ನೆನಪಿನ ಶಕ್ತಿಯನ್ನು ವಾಪಸ್ಸು ತರಲು ಪ್ರಯತ್ನ ಮಾಡುವುದು. ಮತ್ತೋಂದು ಕಡೆ ರಾಜಿ ತನ್ನ ಪ್ರಿಯಕರನನ್ನು ಮೊದಲು ಕದ್ದ ಪದ್ಮಶ್ರೀ ಪ್ರಶಸ್ತಿಯನ್ನು ಸಾಹಿತಿಗೆ ವಾಪಸ್ಸು ತಲುಪಿಸಬೇಕೆಂದು ಹಠ ಮಾಡುವುದು. ಗಂಡ ಅನ್ಯಾಯದ ಪರಿಯನ್ನು ಅರ್ಥ ಮಾಡಿಕೊಂಡು ಸರಿಹೋಗುವುದು. ಎಲ್ಲವು ನಾವು ಹೇಳುವುದಕ್ಕಿಂತ ಒಮ್ಮೆ ಚಿತ್ರ ನೋಡಿದರೆ ಏಕೆ, ಏನು ಎಂಬುದು ಅರ್ಥವಾಗುತ್ತದೆ.

ನಾಯಕ ಯಶ್‍ವಂತ್‍ಶೆಟ್ಟಿ ನಟನೆ ಚೆನ್ನಾಗಿದೆ. ಇವರಿಗೆ ಸರಿಸಮನಾಗಿ ಸುಚೇಂದ್ರಪ್ರಸಾದ್, ಅಚ್ಯುತಕುಮಾರ್, ಬಿರಾದಾರ್ ಮುಂತಾದವರು ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ವಿಕ್ರಂಹತ್ವಾರ್ ಸಾಹಿತ್ಯ, ಭಿನ್ನಷದ್ಜ ಸಂಗೀತದಲ್ಲಿ ‘ಜಾರುತಿರುವೆ’ ಹಾಡು ಮೆಲುಕು ಹಾಕುವಂತಿದೆ. ನಿರ್ದೇಶಕ ಮೌನೇಶ್‍ಬಡಿಗೇರ್ ರಂಗಭೂಮಿ ಪ್ರತಿಭೆ ಆಗಿರುವುದರಿಂದ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ಪೋಣಿಸಿರುವುದು ಕಾಣಿಸುತ್ತುದೆ. ಇದಕ್ಕೆ ಪೂರಕವಾಗಿ ಅಶೋಕ್.ವಿ.ರಾಮನ್ ಛಾಯಾಗ್ರಹಣ ಪೂರಕವಾಗಿದೆ.
ನಿರ್ಮಾಪಕರು: ಅಭಿಜಿತ್‍ಕೋಟೆಗಾರ್, ಸಚ್ಚೀಂದ್ರನಾಥ್
ಸಿನಿ ಸರ್ಕಲ್.ಇನ್ ವಿಮರ್ಶೆ
***
10/05/19


ತೆರೆ ಮೇಲೆ ಸೂಜಿದಾರ
ವಿಭಿನ್ನ ಚಿತ್ರವೆಂದು ಸದ್ದು ಮಾಡಿರುವ ‘ಸೂಜಿದಾರ’ ಸಿನಿಮಾತಂಡವು ಕೊನೆಬಾರಿ ಮಾದ್ಯಮದ ಮುಂದೆ ಹಾಜರಾಗಿ ಮತ್ತಷ್ಟು ವಿಷಯಗಳನ್ನು ಹಂಚಿಕೊಂಡಿತು. ಇಂದ್ರಕುಮಾರ್ ಬರೆದ ಕತೆಯನ್ನು ತೆರೆ ಮೇಲೆ ಮೂಡಿಸಲು ಎರಡು ವರ್ಷ ಶ್ರಮವಹಿಸಲಾಗಿದೆ. ರಂಗಭೂಮಿ ತಂಡದವರು ಕೆಲಸ ಮಾಡಿರುವುದು ವಿಶೇಷ. ಕ್ಲೈಮಾಕ್ಸ್ ಹೊಸತರದ ಪ್ರಯತ್ನ ಮಾಡಲಾಗಿದೆ. ಚಿತ್ರದುರ್ಗದವರಾಗಿ ರಗಡ್ ಆಗಿ ಸುಚೇಂದ್ರಪ್ರಸಾದ್ ಅವರ ವ್ಯಕ್ತಿತ್ವಕ್ಕೆ ತದ್ವಿರುದ್ದವಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಮಾಡದೆ ಇರುವ ಪಾತ್ರದಲ್ಲಿ ಹರಿಪ್ರಿಯಾ ಅದ್ಬುತ ನಟನೆ ಇರುವುದು ಪ್ಲಸ್ ಪಾಯಿಂಟ್ ಎಂದು ಕಲಾವಿದರು, ತಂತ್ರಜ್ಘರ ಕೆಲಸವನ್ನು ನಿರ್ದೇಶಕ ಮೌನೇಶ್‍ಬಡಿಗೇರ್ ಕೊಂಡಾಡಿದರು.

ತುಣುಕುಗಳನ್ನು ನೋಡಿರುವ ಜನರು ನನ್ನದು, ಹರಿಪ್ರಿಯಾ ಪಾತ್ರವೇನೆಂದು ಎಲ್ಲೆ ಹೋದರೂ ಕೇಳುತ್ತಾರೆ. ಆದರೆ ಅದರಲ್ಲಿರುವುದು ಕೇವಲ ಒಂದಷ್ಟು ಮಾತ್ರ. ಬಾಕಿ ಕುತೂಹಲ ತಿಳಿಯಲು ಸಿನಿಮಾ ನೋಡಬೇಕು. ನಾವು ಏನೇ ಗುಟ್ಟನ್ನು ಕಾಯ್ದರಿಸಿದರೂ ಶುಕ್ರವಾರ ಎಲ್ಲವು ಹೊರಬರುತ್ತದೆಂದು ನಾಯಕ ಯಶ್‍ವಂತ್‍ಶೆಟ್ಟಿ ಹೇಳಿದರು. ಬೇರೆ ಪಾತ್ರಗಳ ಹುಡುಕಾಟದಲ್ಲಿದ್ದಾಗ, ಪ್ರತಿಭೆ ತೋರಿಸುವ ನಟಿ, ಕನ್ನಡ ಬಲ್ಲವರು ಅವಶ್ಯಕವೆಂದು ಗೊತ್ತಾದಾಗ ಆಸಕ್ತಿಯಿಂದ ಕತೆ ಕೇಳಿ ಖುಷಿ ಆಯಿತು. ಕಮರ್ಷಿಯಲ್-ಆರ್ಟ್ ಎರಡರ ನಡುವಿನ ಚಿತ್ರವಾಗಿದೆ. ಪದ್ಮಳಾಗಿ ತನ್ನ ಗುಣವನ್ನು ಹೇಗೆ ಪ್ರದರ್ಶಿಸಬೇಕು. ಕೆಳ ಮದ್ಯಮ ವರ್ಗದ ಹುಡುಗಿಯಾಗಿ ಅಂತರಾಳದ ನೋವುಗಳನ್ನು ತೋರಿಸಬೇಕಿತ್ತು, ಕಾಕತಾಳಿಯ ಎನ್ನುವಂತೆ ಹನ್ನರೆಡು ದಿವಸ ಚಿತ್ರೀಕರಣದಲ್ಲಿ ಜ್ವರ ಬಂದಿದ್ದರಿಂದ ಪಾತ್ರಕ್ಕೆ ಒಳ್ಳೆಯದೆ ಆಗಿತ್ತು ಎಂದು ಹರಿಪ್ರಿಯಾ ಮಾತಿಗೆ ವಿರಾಮ ಹಾಕಿದರು.

ಹಿನ್ನೆಲೆ ಸಂಗೀತ ಒದಗಿಸುವಾಗ ಕಡಿಮೆ ಎಂದರೂ ಐವತ್ತು ಸಲ ನೋಡಿದ್ದೇನೆ. ಒಂದು ಬಾರಿಯಾದರೂ ಬೋರ್ ಅನಿಸಿಲ್ಲ. ಪ್ರತಿ ದೃಶ್ಯವು ನೋಡುಗನಿಗೆ ಮುಂದೇನು ಅನಿಸುವಂತಿದೆ ಎಂಬುದು ಪ್ರದೀಪ್‍ವರ್ಮ ಬಣ್ಣನೆ.

ನಿರ್ದೇಶಕರು ಈ ನೆಲದ ಪರಂಪರೆ, ಹರಿಬದ್ದತೆ ಪ್ರದರ್ಶನವನ್ನು ಚೆನ್ನಾಗಿ ಬಿಂಬಿಸಿದ್ದಾರೆ. ಸನ್ನಿವೇಶಗಳಲ್ಲಿ ಕಾರಂತರ ಶೈಲಿ ಕಾಣಬಹುದು. ಜಾರುವಿನ ಜಾರುವಿಕೆ ಪ್ರಕ್ರಿಯೆ ಅದ್ಬುತ. ವಿಸ್ಮಯಗೆ ಸೇರದೆ ವಿಸ್ಕ್ರತಿಗೆ ಸೇರುವಂತಿದೆ. ಭಾವಯಾನದಿಂದ ಭಾವಪೂರಣವಾಗಿ ಬೆಂಬಲ ಕೊಡಿ. ಬಳಕೆಯಾದಾಗ ಮಾತ್ರ ಇಂತಹ ಸಿನಿಮಾಗಳು ಉಳಿಯುತ್ತೆ. ಇಷ್ಟೆಲ್ಲಾ ಹೇಳಲು ಸ್ವಾರ್ಥವಿದೆ. ಕಸುವು ಬೇರೆ ಇದೆ. ರಂಜನೆ ವಿಪುಲವಾಗಿದೆ ಎಂಬಂತಹ ಶುದ್ದ ಕನ್ನಡದ ಪದಗಳನ್ನು ಪೋಣಿಸುತ್ತಾ ಮಾದ್ಯಮದವರ ಕಿವಿಗಳಿಗೆ ತಂಪು ನೀಡಿದ್ದು ಸುಚೇಂದ್ರಪ್ರಸಾದ್.

ಉತ್ತಮ ಚಿತ್ರವಾಗಿದ್ದರಿಂದ ಟಾಕೀಸುಗಳಿಂದ ಬೇಡಿಕೆ ಬಂದಿದೆ. ಇಂತಹ ಸಿನಿಮಾಗಳಿಗೆ ಬಾಡಿಗೆ ನೀಡುವ ಅವಶ್ಯಕತೆ ಇಲ್ಲ. ಹರಿಪ್ರಿಯಾ ಹೆಸರು ಹೇಳಿಕೊಂಡು ಸುಮಾರು 100 ಕ್ಕೂ ಹೆಚ್ಚು ಒಳ್ಳೆಯ ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಚಿತ್ ಫಿಲಿಂಸ್‍ನ ವೆಂಕಟ್ ಮಾಹಿತಿ ನೀಡಿದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
7/05/19


ಮೈ ಮನ ಮರೆಸುವ ಸೂಜಿದಾರ ಗೀತೆಗಳು
ಮೈ ಮನ ಪೋಣಿಸೋ ಎಂಬ ಉಪಶೀರ್ಷಿಕೆ ಹೊಂದಿರುವ ‘ಸೂಜಿದಾರ’ ಚಿತ್ರದ ಆಡಿಯೋ ಸಿಡಿಯು ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನೀನಾಸಂ ಸತೀಶ್ ಮಾತನಾಡಿ ಚಿತ್ರ ನೋಡಿದ್ದೇನೆ. ಚೆನ್ನಾಗಿದೆ. ನಿರ್ದೇಶಕರೊಂದಿಗೆ ಹದಿನಾರು ವರ್ಷದ ಸ್ನೇಹವಿದೆ. ನಾನೇ ವಿತರಣೆ ಮಾಡಬೇಕಿತ್ತು. ಚಂಬಲ್, ಬ್ರಹ್ಮಚಾರಿ ಚಿತ್ರದಲ್ಲಿ ಬ್ಯುಸಿ ಇದ್ದ ಕಾರಣ ತೆಗೆದುಕೊಳ್ಳಲಾಗಲಿಲ್ಲ. ಯಶ್‍ವಂತ್‍ಶೆಟ್ಟಿ ಎನ್‍ಎಸ್‍ಟಿಯಿಂದ ಬಂದವರಾಗಿದ್ದಾರೆ. ಇಂತಹ ಕಲಾವಿದರು ಚಿತ್ರರಂಗಕ್ಕೆ ಬರಬೇಕು. ನಾಯಕನಾಗಿ ಅವಕಾಶ ಪಡೆಯುವುದು ಅಷ್ಟು ಸುಲಭವಲ್ಲ. ನನಗೂ ಅನುಭವ ಆಗಿದೆ. 2003ರಲ್ಲಿ ನೀನಾಸಂ ಸೇರಿದಾಗ ಶ್ರೀಧರ್‍ಹೆಗ್ಗೋಡು ಪ್ರಾದ್ಯಾಪಕರಾಗಿ ನನ್ನಂತ ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಇಂದು ಅವರ ಆರೋಗ್ಯ ಕುಂಠಿತವಾಗಿರುವುದು ಬೇಸರ ತರಿಸಿದೆ. ಆದರೂ ಅದ್ಬುತ ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆಂದು ಅವರನ್ನು ನೋಡುತ್ತಾ ಹೇಳುವಾಗ ಕಣ್ಣುಗಳು ಒದ್ದೆಯಾಗುತ್ತಿದ್ದವು.

ಸಮಾಜದ ಸುತ್ತ ಹಲವರು ನಾನಾ ರೀತಿಯ ಬವಣೆಗಳನ್ನು ಅನುಭವಿಸುತ್ತಿದ್ದಾರೆ. ಅಂತಹುದೆ ಕೆಲವು ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ನಾಯಕಿ ಹರಿಪ್ರಿಯಾ ಇಲ್ಲಿಯವರೆಗೂ ನೋಡದ, ನಟಿಸದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೆನಿದ್ದರೂ ಜನರು ಸಹಕಾರ ನೀಡಬೇಕೆಂದು ಮಾದ್ಯಮದ ಮೂಲಕ ವಿನ್ಯಾಸ, ನಿರ್ದೇಶನ ಮಾಡಿರುವ ಮೌನೇಶ್‍ಬಡಿಗೇರ್ ಕೋರಿಕೊಂಡರು. ಖಳನಟನಾಗಿ ಖುಷಿಯಾಗಿದ್ದು, ನಾಯಕನಾಗಿ ಬರುವುದು ಬೇಡವೆಂದು ತೀರ್ಮಾನಿಸಿದ್ದೆ. ಕತೆ ಕೇಳಿ ಇಲ್ಲ ಎನ್ನಲು ಅಗಲಿಲ್ಲ. ನೀನಾಸಂ ಸೇರಿದಾಗ ಎಲ್ಲರೂ ಶ್ರೀಧರ್ ಸರ್ ಬಗ್ಗೆ ಹೇಳುತ್ತಿದ್ದರು. ಅವರೊಂದಿಗೆ ಕಲಿಯುವ ಯೋಗ ಇಲ್ಲವೆಂದು ಸುಮ್ಮನಾಗಿದ್ದೆ. ನಾಯಕನಾಗಿರುವ ಪ್ರಥಮ ಚಿತ್ರಕ್ಕೆ ಅವರದೇ ಸಂಗೀತ ಇರುವುದು ನನ್ನ ಪಾಲಿನ ಅದೃಷ್ಟವೆಂದು ಯಶ್‍ವಂತ್‍ಶೆಟ್ಟಿ ಹೇಳಿದರು. ವಿತರಕ ವೆಂಕಟ್, ಸಂಗೀತ ನಿರ್ದೇಶಕರು, ಹಿನ್ನಲೆ ಶಬ್ದ ಒದಗಿಸಿರುವ ಪ್ರದೀಪ್‍ವರ್ಮ, ಛಾಯಾಗ್ರಾಹಕ ಅಶೋಕ್.ವಿ.ರಾಮನ್, ಸಾಹಿತಿ ವಿಕ್ರಂಹತ್ವಾರ್, ಸಂಭಾಷಣೆ, ನಟನೆ ಮಾಡಿರುವ ಚೈತ್ರಾಕೋಟೂರ್, ನಿರ್ಮಾಪಕರುಗಳಾದ ಅಭಿಜಿತ್‍ಕೋಟೆಗಾರ್- ಸಚ್ಚೀಂದ್ರನಾಥ್ ನಾಯಕ್ ಅನುಭವಗಳನ್ನು ಹಂಚಿಕೊಂಡರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
23/04/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore