HOME
CINEMA NEWS
GALLERY
TV NEWS
REVIEWS
CONTACT US
ಆಕ್ಷನ್ ಜೊತೆಗೆ ಸೆಂಟಿಮೆಂಟ್ ಬೆಸದಿದ
ಜಂಬದಹುಡುಗಿ, ಬಿಂದಾಸ್ ಹುಡುಗಿಯಲ್ಲಿ ಆಕ್ಷನ್ ತೋರಿಸಿದ್ದ ಪ್ರಿಯಾಹಾಸನ್ ‘ಸ್ಮಗ್ಲರ್’ ಚಿತ್ರದಲ್ಲೂ ಅದಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾರೆ. ಡೇರಿಂಗ್ ಸ್ಟಾರ್ ಎಂದು ಅಭಿಮಾನಿಗಳು ಬಿರುದು ನೀಡಿರುವುದರಿಂದ ಅವರಿಗೆ ಬೇಜಾರು ಮಾಡಬಾರದೆಂದು ಭರ್ಜರಿ ಫೈಟ್‍ಗಳು ಇದೆ. ಆದರೆ ಫೈಟ್ ಮಾಡುವ ದೃಶಗಳು ಕೆಲವೊಮ್ಮೆ ನಗು ತರಿಸುತ್ತದೆ. ಉದಾಹರಣೆಗೆ ಹೇಳುವುದಾದರೆ ವಿರೋಧಿ ಹೊಡೆದ ಗುಂಡು ತಲೆಗೆ ಹೊಕ್ಕುವ ಮುನ್ನ ನಾಯಕಿ ಬಾದಾಮಿಯನ್ನು ಹಿಡಿದಂತೆ ಗುಂಡನ್ನು ಹಿಡಿದು ಬಿಸಾಕುತ್ತಾಳೆ. ಇದೆಲ್ಲಾ ಸಾಧ್ಯವಾ ಅಂತ ಪ್ರೇಕ್ಷಕನಿಗೆ ನಗು ಭರಿಸುತ್ತೆ. ಕತೆ ಸಿಂಪಲ್. ಅಕ್ಕ ಮೃಣಾಲಿನಿ, ತಂಗಿ ಕಾತ್ಯಾಯಿನಿ. ಸಂಪ್ರದಾಯಸ್ಥ ಕುಟುಂಬದಿಂದ ಬಂದವರಾಗಿದ್ದು, ಚಿಕ್ಕಂದಿನಿಂದಲೇ ಸಾಧನೆ ಮಾಡುವ ಬಯಕೆ. ಶಾಲೆಯಲ್ಲಿ ಶಿಕ್ಷಕಿಯು ಇಬ್ಬರನ್ನು ಮುಂದೇನು ಆಗುತ್ತಿಯಾ ಅಂತ ಕೇಳಿದಾಗ, ದೊಡ್ಡಾಕೆ ವೈದ್ಯೆನಾಗುತ್ತೇನೆಂದು ಹೇಳುತ್ತಾಳೆ. ಚಿಕ್ಕವಳು ಡಾನ್ ಎಂದಾಗ ಎಲ್ಲರಿಗೂ ಅಚ್ಚರಿ. ಅದರಂತೆ ಮುಂದೆ ಡಾನ್ ಆಗಿ ಐರಿಸ್ ಹೆಸರಿನೊಂದಿಗೆ ಎಂಟ್ರ ಕೊಡುತ್ತಾರೆ. ಅಲ್ಲಿಂದ ಮುಂದೇನು ಆಗುತ್ತದೆ ಎನ್ನುವುದೇ ಸಿನಿಮಾದ ತಿರುಳು.

ಬ್ಯಾಂಕಾಕ್‍ನ ಮಾಫಿಯಾ ಅಡ್ಡದಿಂದ ಪರಿಚಯವಾಗುವ ಆಕೆ, ಅದರಾಚೆಯೂ ಅಕ್ಕ-ತಂಗಿ ಸೆಂಟಿಮೆಂಟ್ ನೋಡುಗನ ಮನಸ್ಸು ಹಗುರವಾಗುತ್ತದೆ. ಯಾವುದೋ ದ್ವೇಷಕ್ಕೆ ಪುಟ್ಟ ಹುಡುಗಿಯನ್ನು ದೇವಸ್ಥಾನದ ಕಿರೀಟ ಕದ್ದ ಆರೋಪಕ್ಕೆ ಸಿಲುಕಿಸಿದ ವ್ಯಕ್ತಿ ವಿರುದ್ದ ಸೇಡು ತೀರಿಸಿಕೊಳ್ಳುವುದಕ್ಕೆ ಡಾನ್‍ಗೆ ತಂಗಿ ಬದುಕು ಮುಖ್ಯವಾಗುತ್ತೆ. ಇಂತಹ ಹಲವು ಮಾರ್ಮಿಕ ಸನ್ನಿವೇಶಗಳು ಸ್ವಲ್ಪಮಟ್ಟಿಗೆ ಕಣ್ಣುಗಳನ್ನು ಒದ್ದ್ದೆ ಮಾಡಿಸುತ್ತದೆ. ರವಿಕಾಳೆ, ಸಯ್ಯಾಜಿರಾವ್‍ಶಿಂದೆ ಡಾನ್‍ಗಳಾಗಿ ತಮ್ಮದೆ ಸ್ಟೈಲ್‍ನಲ್ಲಿ ಮಿಂಚಿದ್ದಾರೆ. ಹಿರಿಯ ನಟ ಸುಮನ್ ಸಿಬಿಐ ಆಗಿದ್ದರೂ, ಹೆಚ್ಚು ಅವಕಾಶ ಸಿಕ್ಕಿಲ್ಲ. ನಾಯಕಿ ಡಾನ್ ಆಗುವುದಕ್ಕೆ ಕಾರಣವೇನು? ಬ್ಯಾಂಕಾಕ್‍ಗೆ ಹೇಗೆ ಹೋಗುತ್ತಾಳೆ. ಅಲ್ಲಿಂದ ವಾಪಸ್ಸು ಯಾವ ಉದ್ದೇಶಕ್ಕಾಗಿ ಬರುತ್ತಾಳೆ ಎಲ್ಲವು ಗೊಂದಲದಲ್ಲಿ ಇದ್ದರೆ, ಅಕ್ಕ ತಂಗಿ ಅನ್ನೋದನ್ನು ತೋರಿಸಿ ಎಲ್ಲಾ ಗೊಂದಲಕ್ಕೆ ನಿವಾರಣ ಮಾಡಿರುವುದು ನಿರ್ದೇಶಕರ ಶ್ರಮ ಎದ್ದು ಕಾಣ ಸುತ್ತದೆ. ಚಿತ್ರದಲ್ಲಿ ಹೆಚ್ಚು ಗ್ರಾಫಿಕ್ಸ್ ಇರುವುದರ ಕಾರಣ ಸಂಜೀವ್‍ರೆಡ್ಡಿ ಕ್ಯಾಮಾರ ಹಚ್ಚು ಕೆಲಸ ಮಾಡಿಲ್ಲ. ಪ್ರಿಯಾ ಹಾಸನ್‍ರನ್ನು ಆಕ್ಷನ್ ಕ್ವೀನ್ ಮಾಡಲು ಸಾಹಸ ನಿರ್ದೇಶಕ ಕೌರವವೆಂಕಟೇಶ್ ಶಕ್ತಿಮೀರಿ ಅವರಿಂದ ಕೆಲಸ ತೆಗೆಸಿರುವುದು ಕಾಣ ಸುತ್ತದೆ. ಎಲ್ಲವನ್ನು ಜವಬ್ದಾರಿಯುತವಾಗಿ ತೆಗೆದುಕೊಂಡು ಸುಂದರ ಸಿನಿಮಾ ನೀಡಿರುವ ಈಕೆಯ ಸಾಹಸವನ್ನು ಮೆಚ್ಚಿಕೊಳ್ಳಬೇಕಾದರೆ ಒಮ್ಮೆ ಸಿನಿಮಾ ನೋಡ ಬೇಕು.
-9/12/17
ಡಿಸೆಂಬರ್ ಎಂಟಕ್ಕೆ ಸ್ಮಗ್ಲರ್
ಬಿಂದಾಸ್ ಹುಡುಗಿ, ಜಂಬದ ಹುಡುಗಿ ನಂತರ ಪ್ರಿಯಾಹಾಸನ್ ‘ಸ್ಮಗ್ಲರ್’ ಚಿತ್ರದಲ್ಲಿ ತೊಡಗಿಕೊಂಡಿದ್ದರು. ನಾಲ್ಕು ವರ್ಷಗಳ ಹಿಂದೆ ಶುರುಗೊಂಡಿದ್ದ ಚಿತ್ರವು ತಾಯಿಯ ಅಕಾಲಿಕ ಮರಣ, ಮದುವೆ ಇತ್ಯಾದಿಗಳಿಂದ ಚಿತ್ರವು ಸ್ಥಗಿತಗೊಂಡಿತ್ತು. ಈಗ ಎಲ್ಲವು ಅಂದುಕೊಂಡಂತೆ ಸಂಪೂರ್ಣ ಕೆಲಸಗಳು ಮುಗಿದಿದೆ. ಶೀರ್ಷಿಕೆ ಕೇಳಿದರೆ ಇದೊಂದು ಭೂಗತ ಲೋಕದ ಕತೆ ಇರಬಹುದು. ಇದರ ಬಗ್ಗೆ ಎಲ್ಲಿಯೂ ಸುಳಿವು ನೀಡದ ನಿರ್ದೇಶಕಿ ಎಲ್ಲವನ್ನು ಚಿತ್ರಮಂದಿರದಲ್ಲಿ ನೋಡಿ ಅಂತ ಜಾರಿಕೊಳ್ಳುತ್ತಾರೆ. ತಾರಬಳಗದಲ್ಲಿ ಸುಮನ್, ಶಾಹುರಾಜ್‍ಶಿಂದೆ, ರವಿಕಾಳೆ, ವಿಜಯಸಾರಥಿ ಮುಂತಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ಚಕ್ರಿ ಸಂಗೀತ ಸಂಯೋಜನೆ ಇದೆ. ಸಂಕಲನ ಕಾರ್ತಿಕ್, ಸಾಹಸ ಕೌರವವೆಂಕಟೇಶ್ ಅವರದಾಗಿದೆ. ಅಮ್ಮನ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿದ್ದು, ಕಮಲ್‍ಸಿಪಾನಿ ಸಹ ನಿರ್ಮಾಪಕರಾಗಿದ್ದಾರೆ.

ವೀರು.ಕೆ ಜೋಡಿಯೊಂದಿಗೆ ನಿರ್ದೇಶನ, ನಾಯಕಿಯಾಗಿ ನಟಿಸಿರುವ ಪ್ರಿಯಾಹಾಸನ್ ಸಿನಿಮಾವು ರೈನ್‍ಬೋ ಗ್ರೂಪ್ಸ್ ಮುಖಾಂತರ ಸಿದ್ದಗೊಂಡಿದೆ. ತಂಡವು ಕೊನೆ ಬಾರಿ ಮಾದ್ಯಮದವರನ್ನು ಭೇಟಿ ಮಾಡಿತ್ತು. ಇದೇ ಸಂದರ್ಭದಲ್ಲಿ ನಿರ್ದೇಶಕಿಯ ದೊಡ್ಡಮ್ಮ ಟ್ರೈಲರ್‍ಗೆ ಚಾಲನೆ ನೀಡಿ ತಂಡಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪತಿ ರಾಮ್, ಸಹೋದರ, ಹಿತೈಷಿಗಳು ಉಪಸ್ತಿತರಿದ್ದರು. ಮುಂದೆ ‘ಗಂಡುಭೀರಿ’ ಚಿತ್ರವು 2018ರಲ್ಲಿ ಸೆಟ್ಟೇರಲಿದ್ದು ಎಂದಿನಂತೆ ಪ್ರಿಯಾಹಾಸನ್ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ರಾಜ್ ಸಿನಿಮಾಸ್ ಮುಖಾಂತರ ಸುಮಾರು 150 ಕೇಂದ್ರಗಳಲ್ಲಿ ಸಿನಿಮಾವು ತೆರೆಕಾಣಲಿದೆ.
-05/12/17

ಡಿಸೆಂಬರ್ ಎರಡನೆ ವಾರ ಸ್ಮಗ್ಲರ್ ಆರ್ಭಟ
ಬಿಂದಾಸ್ ಹುಡುಗಿ, ಜಂಬದ ಹುಡುಗಿ ನಂತರ ಪ್ರಿಯಾಹಾಸನ್ ‘ಸ್ಮಗ್ಲರ್’ ಚಿತ್ರದಲ್ಲಿ ತೊಡಗಿಕೊಂಡಿದ್ದರು. ನಾಲ್ಕು ವರ್ಷಗಳ ಹಿಂದೆ ಶುರುಗೊಂಡಿದ್ದ ಚಿತ್ರವು ತಾಯಿಯ ಅಕಾಲಿಕ ಮರಣ, ಮದುವೆ ಇತ್ಯಾದಿಗಳಿಂದ ಚಿತ್ರವು ಸ್ಥಗಿತಗೊಂಡಿತ್ತು. ಈಗ ಎಲ್ಲವು ಅಂದುಕೊಂಡಂತೆ ಸಂಪೂರ್ಣ ಕೆಲಸಗಳು ಮುಗಿದಿದೆ. ಶೀರ್ಷಿಕೆ ಕೇಳಿದರೆ ಇದೊಂದು ಭೂಗತ ಲೋಕದ ಕತೆ ಇರಬಹುದು. ಇದರ ಬಗ್ಗೆ ಎಲ್ಲಿಯೂ ಸುಳಿವು ನೀಡದ ನಿರ್ದೇಶಕಿ ಎಲ್ಲವನ್ನು ಚಿತ್ರಮಂದಿರದಲ್ಲಿ ನೋಡಿ ಅಂತ ಜಾರಿಕೊಳ್ಳುತ್ತಾರೆ. ತಾರಬಳಗದಲ್ಲಿ ಸುಮನ್, ಶಾಹುರಾಜ್‍ಶಿಂದೆ, ರವಿಕಾಳೆ, ವಿಜಯಸಾರಥಿ ಮುಂತಾದವರು ನಟಿಸಿದ್ದಾರೆ. ನಾಲ್ಕು ಹಾಡುಗಳಿಗೆ ಚಕ್ರಿ ಸಂಗೀತ ಸಂಯೋಜನೆ ಇದೆ. ಸಂಕಲನ ಕಾರ್ತಿಕ್, ಸಾಹಸ ಕೌರವವೆಂಕಟೇಶ್ ಅವರದಾಗಿದೆ. ಅಮ್ಮನ ಹೆಸರಿನಲ್ಲಿ ನಿರ್ಮಾಣ ಮಾಡಲಾಗಿದ್ದು, ಕಮಲ್‍ಸಿಪಾನಿ ಸಹ ನಿರ್ಮಾಪಕರಾಗಿದ್ದಾರೆ. ವೀರು.ಕೆ ಜೋಡಿಯೊಂದಿಗೆ ನಿರ್ದೇಶನ, ನಾಯಕಿಯಾಗಿ ನಟಿಸಿರುವ ಪ್ರಿಯಾಹಾಸನ್ ಸಿನಿಮಾವು ರೈನ್‍ಬೋ ಗ್ರೂಪ್ಸ್ ಮುಖಾಂತರ ಸಿದ್ದಗೊಂಡಿದೆ. ಚಿತ್ರವು ಇದೇ ತಿಂಗಳು 8ರಂದು ಸುಮಾರು 80 ಕೇಂದ್ರಗಳಲ್ಲಿ ತೆರೆಕಾಣಲಿದೆ.
-28/11/17
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore