HOME
CINEMA NEWS
GALLERY
TV NEWS
REVIEWS
CONTACT US
ಕಲಾವಿದರು ಹೊಸಬರು ತಂತ್ರಜ್ಘರು ಹಳಬರು
ಚಂದನವನದಲ್ಲಿ ಕೆಲವು ಸಿನಿಮಾಗಳು ತಮ್ಮ ಸಬ್ಜೆಕ್ಟ್‍ನಿಂದ ಗಮನ ಸೆಳೆದರೆ, ಇನ್ನು ಕೆಲವು ಚಿತ್ರಗಳು ವಿನೂತನ ಟೈಟಲ್‍ನಲ್ಲೆ ಒಂದಷ್ಟು ಜನರನ್ನು ಆಕರ್ಷಿಸುತ್ತದೆ. ಇಲ್ಲೊಂದು ಅಂಥದ್ದೆ ಚಿತ್ರ ತನ್ನ ಶೀರ್ಷಿಕೆಯಿಂದಲೇ ಕೆಲವರ ತೆಲೆಗೆ ಹುಳ ಬಿಟ್ಟಿದೆ. ಆ ಸಿನಿಮಾದ ಹೆಸರು ‘6’ ಅಡಿಬರಹದಲ್ಲಿ ದಿಕೂಟ ಅಂತ ಹೇಳಿಕೊಂಡಿದೆ. ಇದೇನಪ್ಪಾ ಚಿತ್ರದ ಹೆಸರು ಈ ಥರ ಇದೆಯಲ್ಲಾ ಅಂತ ನಿರ್ದೇಶಕ ಮಂಜುಸ್ವರಾಜ್ ಅವರನ್ನು ಕೇಳಿದರೆ ಹೀಗೆ ವಿವರಣೆ ಕೊಡುತ್ತಾರೆ. ಸೆಸ್ಪನ್ಸ್ , ಹಾರರ್ ಥ್ರಿಲ್ಲರ್ ಕತೆಯಾಗಿದ್ದರಿಂದ ಒಂದು ಸಣ್ಣ ಸುಳಿವು ನೀಡಿದಲ್ಲಿ ಸಿನಿಮಾದ ಸಾರಾಂಶ ತಿಳಿಯುತ್ತದೆ. ಅದರಿಂದ ಎಲ್ಲವನ್ನು ಚಿತ್ರಮಂದಿರದಲ್ಲೆ ನೋಡಬೇಕು. ಆರು ಹುಡುಗರ ಪೈಕಿ ನಾಲ್ವರು ಆಯ್ಕೆಯಾಗಿದ್ದು, ಉಳಿದ ಎರಡು ಮತ್ತು ಒಬ್ಬಳೇ ನಾಯಕಿ ತಲಾಷ್ ನಡೆಸಲಾಗುತ್ತಿದೆ. ಇಲ್ಲಿಯವರೆಗೂ 6 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಲಾಗಿದ್ದು, ಕಾಕತಾಳಿಯ ಎನ್ನುವಂತೆ ಟೈಟಲ್ ಕತೆ ಸೂಕ್ತವಾಗಿದೆ. ಕಾರ್ತಿಕ ಮಾಸದ ಕೊನೆ ದಿವಸ ಆಗಿದ್ದರಿಂದ ಇಂದು ಸಿನಿಮಾದ ಪೂಜೆ ಮಾಡಲಾಗಿದೆ. ಮುಂದಿನ ವರ್ಷ ಮೊದಲ ತಿಂಗಳ 19 ತಾರೀಖಿನಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಚೂಚ್ಚಲ ಚಿತ್ರ ಶಿಶಿರ ನಂತರ ಪ್ರಯೋಗಾತ್ಮಕ ಸಿನಿಮಾವನ್ನು ಕಮರ್ಷಿಯಲ್ ಟಚ್‍ನೊಂದಿಗೆ ಪ್ರೇಕ್ಷಕನಿಗೆ ಮನರಂಜನೆ ರೀತಿಯಲ್ಲಿ ಕೊಡುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ.

ಅನುರಾಗ್ ನಾಯಕ. ಈತನ ಗೆಳಯರುಗಳಾಗಿ ರವಿತೇಜ, ಪ್ರಜ್ವಲ್, ನೌಶಾದ್ ಇವರೆಲ್ಲರೂ ನಾಗತ್ತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಟೆಂಟ್ ಸಿನಿಮಾದ ವಿದ್ಯಾರ್ಥಿಗಳು, ಹಾಗೆಯೇ ನಿರ್ದೇಶಕರು ಕೂಡ ಅಮೃತಧಾರೆ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು ಎನ್ನುವುದು ವಿಶೇಷ. ಇವರೆಲ್ಲರಿಗೂ ಸೂಕ್ತ ತರಭೇತಿಯನ್ನು ಕೊಠಡಿಯಲ್ಲಿ, ಡಮ್ಮಿ ಕ್ಯಾಮಾರ ಮುಂದೆ ನೀಡಲಾಗುತ್ತದಂತೆ. ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿರುವ ಅಭಿಮನ್‍ರಾಯ್, ಸಂಕಲನಕಾರ ಬಸವರಾಜಅರಸ್ ಮತ್ತು ಛಾಯಗ್ರಾಹಕ ಲಿವಿನ್ ಇವರಿಗೆ ನಿರ್ದೇಶಕರು ಕತೆ ಹೇಳದೆ ಇರುವ ಕಾರಣ ಚಿತ್ರದ ಕುರಿತಂತೆ ಮಾಹಿತಿ ತಿಳಿದಿಲ್ಲವಂತೆ. ಮಗ ನಾಯಕನಾಗುತ್ತಿರುವ ಕಾರಣ ಸರ್ಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿರುವ ರಾಜೇಶ್ ಅವರು ಪತ್ನಿ ಸತ್ಯಭಾಮರಾಜೇಶ್ ಹೆಸರಿನಲ್ಲಿ ಗಣಪ ಕ್ರಿಯೆಶನ್ಸ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಶಿಷ್ಯಂದಿರಿಗೆ ಶುಭಹಾರೈಸಲು ಪ್ರಾಂಶುಪಾಲರು ಮತ್ತು ನಿರ್ದೇಶಕ ಶಶಾಂಕ್ ಆಗಮಿಸಿದ್ದರು.
ಸಿನಿ ಸರ್ಕಲ್.ಇನ್ ನ್ಯೂಸ್
6/12/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore