HOME
CINEMA NEWS
GALLERY
TV NEWS
REVIEWS
CONTACT US
ಜನ್ಮ ಜನ್ಮಾಂತರದ ಶಿವು ಪಾರು ಕಥನ
ಅಮೇರಿಕಾದಲ್ಲಿ ಒಳ್ಳೆ ಉದ್ಯೋಗ ಮಾಡಿಕೊಂಡು ಅದರಲ್ಲಿ ಗಳಿಸಿದ ಹಣದಿಂದ ಆಧುನಿಕ ಕತೆ ಹೊಂದಿರುವ ‘ಶಿವು ಪಾರು’ ಚಿತ್ರಕ್ಕೆ ಛಾಯಗ್ರಹಣ ಹೊರತುಪಡಿಸಿ ಉಳಿದೆಲ್ಲದರ ಪಾರುಪಥ್ಯವನ್ನು ವಹಿಸಿಕೊಂಡರುವುದು ಅಮೇರಿಕಾ ಸುರೇಶ್. ಭೂಮಿ ಮೇಲೆ ಅಮರ ಪ್ರೇಮಿಗಳ ಇತಿಹಾಸವಿದೆ. ಅದರಂತೆ ಶಿವುಪಾರು ಇಬ್ಬರು ಮಾನವ ಜನ್ಮ ತಾಳಿ ಭೂಲೋಕಕ್ಕೆ ಬರುತ್ತಾರೆ. ಒಂದು ಜನ್ಮದಲ್ಲಿ ಶಿವು ಖಾಸಗಿ ವಾಹಿನಿ ನಡೆಸುವ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಷೋದ ನಿರೂಪಕನಾಗಿದ್ದು, ಕಂತುಗಳನ್ನು ನಿರ್ದೇಶಿಸಿಸಲು ಹಳ್ಳಿಯೊಂದಕ್ಕೆ ಹೋಗುತ್ತಾನೆ. ಅಲ್ಲಿಯ ಹುಡುಗಿಯೊಬ್ಬಳನ್ನು ಕಂಡು ಅವಳ ಸೌಂದರ್ಯಕ್ಕೆ ಮಾರು ಹೋಗುತ್ತಾನೆ. ಆದರೆ ಆಕೆಯ ಚಿಕ್ಕಮ್ಮ ನೀಡಿದ ಸುಪಾರಿ ಗುಂಡು ಆಯತಪ್ಪಿ ಶಿವುಗೆ ತಾಗುತ್ತದೆ. ಮುಂದೆ ಆಸ್ತಿಯನ್ನು ಅವಳಿಗೆ ಬರೆದು ವಿಷ ತೆಗೆದುಕೊಂಡು ಸಾಯಿವಲ್ಲಿಗೆ ಒಂದು ಜನ್ಮ ಮುಗಿಯುತ್ತದೆ.

ಮತ್ತೋಂದು ಜನ್ಮದಲ್ಲೂ ಇಬ್ಬರು ಪ್ರೇಮಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಇದರ ಪ್ರಕರಣದಲ್ಲಿ ತಂದೆಯೇ ಖಳನಾಯಕನಾಗಿರುವುದರಿಂದ ದುರಂತ ಪ್ರೇಮಕತೆಯಾಗುತ್ತದೆ. ಹೀಗೆ ಎರಡು ಜನ್ಮದ ಕತೆಗಳನ್ನು ಹೇಳಿರುವ ನಿರ್ದೇಶಕರು ಎಲ್ಲವನ್ನು ತನ್ನ ಸುಪರ್ಧಿಗೆ ತೆಗೆದುಕೊಂಡ ಕಾರಣ ಕೆಲವೊಂದು ಕಡೆ ತಪ್ಪುಗಳು ಸಹಜವಾಗಿ ಕಂಡು ಬರುತ್ತದೆ. ಜಾನಪದ ಗೀತೆಯನ್ನು ಅಚ್ಚುಕಟ್ಟಾಗಿ ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಮೈಥಾಲಾಜಿಕಲ್, ಸೆಸ್ಪನ್ಸ್, ಥ್ರಿಲ್ಲರ್ ಕತೆಯನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಅವರ ಶ್ರಮ ಪ್ರತಿ ದೃಶ್ಯದಲ್ಲಿ ಕಾಣಬರುತ್ತದೆ. ನಾಯಕ ಸುರೇಶ್ ಅಭಿನಯದಲ್ಲಿ ಇನ್ನು ಕಲಿಯಬೇಕಾಗಿದೆ. ದಿಶಾಪೂವಯ್ಯ ಎರಡು ಜನ್ಮದಲ್ಲಿ ನಟಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ. ರಮೇಶ್‍ಭಟ್, ಹೊನ್ನವಳ್ಳಿಕೃಷ್ಣ, ತರಂಗವಿಶ್ವ, ಕೆಂಪೆಗೌಡ, ಚಿತ್ರಾಶಣೈ ತಮ್ಮ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದಾರೆ. ವಿನೀತ್‍ರಾಜ್‍ಮೆನನ್ ಹಿನ್ನಲೆ ಸಂಗೀತ ಸನ್ನಿವೇಶಗಳಿಗೆ ಪೂರಕವಾಗಿದೆ. ಅಮರ ಪ್ರೇಮಿಗಳ ಕತೆಗಳನ್ನು ಇಷ್ಟಪಟ್ಟಿರುವವರು ಅಮೇರಿಕಾ ಸುರೇಶ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಸಿನಿಮಾವನ್ನು ಮಿಸ್ ಮಾಡದೆ ನೋಡಬಹುದು.
ಸಿನಿ ಸರ್ಕಲ್.ಇನ್ ವಿಮರ್ಶೆ
9/06/18
ಶಿವು ಪಾರು ಭಾಗ-3ಕ್ಕೆ ಸಿದ್ದತೆ
ಅಮೇರಿಕಾ ಸುರೇಶ್ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾಣ ಜೊತೆಗೆ ನಾಯಕನಾಗಿ ನಟಿಸಿರುವ ‘’ಶಿವುಪಾರು’’ ಚಿತ್ರದಲ್ಲಿ ಕಿಟ್ಟಪ್ಪ ಶಿವನನ್ನು ಯಾತಕ್ಕಾಗಿ ಕೊಂದ ಎಂದು ಸರಿ ಉತ್ತರ ನೀಡಿದವರಿಗೆ ಒಂದು ಲಕ್ಷ ಬಹುಮಾನ ನೀಡವುದಾಗಿ ಘೋಷಿಸಿದ್ದರು.ಆದರೆ ಇಲ್ಲಿಯವರೆಗೂ ಸರಿಯಾದ ಉತ್ತರ ಬಂದಿರುವುದಿಲ್ಲ. ದೇವಲೋಕದ ಪ್ರೇಮಲೋಕ, ಯಮನ ಗೆದ್ದ ಶಿವು, ಜನ್ಮದಿಂದ ಪುನರ್ಜನ್ಮಕ್ಕೂ ಮುಂದುವರೆದಿದೆ. ಕಥೆಯೇ ಹೀರೋ ವಿಧಿಯೇ ವಿಲನ್ ಆಗಿದೆ. ಎರಡು ತಲೆಮಾರಿನ ಪ್ರೇಮಕತೆಯಲ್ಲಿ ರಿಯಾಲಿಟಿ ಷೋ ಮತ್ತು ಪೌರಾಣಿಕ ಸೆಸ್ಪೆನ್ಸ್ ಥ್ರಿಲ್ಲರ್‍ನಲ್ಲಿ ದುರಂತದೊಂದಿಗೆ ಕೊನೆಗೊಳ್ಳುತ್ತದೆ, ಪ್ರೀತಿ, ರೋಮಾನ್ಸ್, ಫ್ಯಾಂಟಸಿ, ಮಿಸ್ಟರಿ, ಅಪರಾಧ, ಪಾಪ,ಶೋಷಣೆ, ದೆವ್ವ, ಸಂಬಂದಗಳು ಎಲ್ಲವು ಕತೆಯಲ್ಲಿ ಬಂದು ಹೋಗಲಿದೆ. ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2017ರಲ್ಲಿ ಚಿತ್ರವು ಪ್ರದರ್ಶನಗೊಂಡು ಪ್ರಶಂಸೆಯನ್ನು ಪಡೆದುಕೊಂಡಿರುವುದು ಧನಾತ್ಮಕ ಅಂಶವಾಗಿದೆಯಂತೆ.

ಸುರೇಶ್ ಹೇಳುವಂತೆ ಅಲ್ಲಿ ದುಡಿದ ಹಣವನ್ನು ಚಾರಿಟಬಲ್ ಟ್ರಸ್ಟ್‍ಗೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ದಾರಿತಪ್ಪಿ ಸಿನಿಮಾರಂಗಕ್ಕೆ ಬಂದು ನಿರ್ಮಾಣ ಮಾಡಿದ್ದರೂ, ಗಳಿಕೆಯಾಗುವ ಅಸಲಿ ಹಣದಿಂದ ಶೇಕಡ 15ರಷ್ಟು ಇಂತಹ ಸಂಸ್ಥೆಗೆ ನೀಡಲಾಗುವುದು. ಬಂಡವಾಳ ವಾಪಸ್ಸು ಬಾರದೆ ಇದ್ದರೂ ಭಾಗ-3 ಸಿನಿಮಾ ಮಾಡುವುದು ಖಚಿತ. ಮೂದಲ ಚಿತ್ರದಲ್ಲಿ ಎರಡು ಜನ್ಮಗಳ ಕಥನ ತೋರಿಸಲಾಗಿದೆ. ಮತ್ತೋಂದು ಜನ್ಮದ ಕತೆಗೆ ಭಾಗ-3 ಮಾಡಲಾಗುವುದು. ಕಲಾವಿದರು,. ತಂತ್ರಜ್ಘರು ಮುಂದಿನ ದಿನಗಳಲ್ಲಿ ತಿಳಸಲಾಗುವುದು ಎನ್ನುತ್ತಾರೆ. ಶಿವು ಹೆಸರಿನಲ್ಲಿ ಅಮೇರಿಕಾ ಸುರೇಶ್, ಪಾರು ಆಗಿ ದಿಶಾಪೂವಯ್ಯ ನಟನೆ ಇದೆ. ರಿಯಾಲಿಟಿ ಷೋದಲ್ಲಿ ಬರುವ ಸನ್ನಿವೇಶಕ್ಕೆ ಕಿರುತೆರೆಯ ಪ್ಯಾಟೆ ಹುಡ್ಗೀರ್ ಸೀಸನ್-6 ಕಲಾವಿದರಾದ ರಂಜನ್, ಯಶಿಕಾ, ಸ್ವಾತಿ, ಮೇಘನಾ, ಲಕ್ಕೀಶ್ರೀ, ಸೊನಿಯಾ, ನೇಹಾ, ಆರತಿ, ರಕ್ಷಿತಾ, ಸಿಮ್ರಾನ್, ವಂದನ ನಟಿಸಿದ್ದಾರೆ. ಇವರೊಂದಿಗೆ ನುರಿತವರಾದ ರಮೇಶ್‍ಭಟ್, ತರಂಗವಿಶ್ವ, ಹೊನ್ನವಳ್ಳಿಕೃಷ್ಣ, ಚಿತ್ರಾಶಣೈ, ಕಿಟ್ಟಪ್ಪ ಸೇರಿಕೊಂಡಿರುವುದು ವಿಶೇಷವಾಗಿದೆ. ಸನ್ನಿವೇಶಕ್ಕೆ ಪೂರಕವಾಗಿ ಆರು ಹಾಡುಗಳು ಇರಲಿದೆ. ವಿತರಕ ನವರತ್ನಪ್ರಸಾದ್ ಮುಖಾಂತರ ಸುಮಾರು 50 ಕೇಂದ್ರೆಗಳಲ್ಲಿ ಜೂನ್ 8ರಂದು ರಾಜ್ಯದ್ಯಂತ ತೆರೆಕಾಣಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
6/06/18

ಚಿತ್ರಕೆ ಹರಸಲು ದೇವಲೋಕದಿಂದ ಇಳಿದು ಬಂದ ಶಿವ-ಪಾರ್ವತಿ
ಶಿವ-ಪಾರ್ವತಿ ಮತ್ತೋಂದು ಅವತಾರ, ಎರಡು ಜನುಮದ ಕತೆ ಹೊಂದಿರುವ ‘ಶಿವಪಾರು’ ಚಿತ್ರವು ತೆರೆಗೆ ಬರುವ ಹಿನ್ನಲೆಯಲ್ಲಿ ಬಿಡುಗಡೆಪೂರ್ವ ಸುದ್ದಿಗೋಷ್ಟಿಯನ್ನು ಏರ್ಪಡಿಸಲಾಗಿತ್ತು. ಗೋಷ್ಟಿಯಲ್ಲಿ ಸಾಕ್ಷಾತ್ ಶಿವ ಮತ್ತು ಪಾರ್ವತಿ ಇಬ್ಬರ ದರ್ಶನವಾಗಿ ಮಾಧ್ಯಮದವರು ಪುನೀತರಾದರು. ಸುಮಾರು ಎರಡು ಘಂಟೆಗಳ ಕಾಲ ಮೇಕಪ್ ಹಾಕಲಾಗಿದ್ದ ಕಾರಣ ಕಲಾವಿದರು ಬಳಲಿಬೆಂಡಾಗಿದ್ದರು. ಮೂರು ಟೀಸರ್ ಹಾಗೂ ಹಾಡು ಮತ್ತು ಒಂದು ಟ್ರೈಲರ್ ತೋರಿಸಿದ ನಂತರ ತಂಡದೊಂದಿಗೆ ಗಣ್ಯರು ವೇದಿಕೆಗೆ ಆಸೀನರಾದರು. ಹಳ್ಳಿಯಿಂದ ದಿಲ್ಲಿಗೆ ಬಂದರು ಅಂತಾರೆ. ನಿರ್ಮಾಪಕರು ಅಮೇರಿಕಾದಿಂದ ಬಂದು ಭಾಷೆಯ ಪ್ರೀತಿ ಮೇಲೆ ಕನ್ನಡ ಚಿತ್ರ ಮಾಡಿರುವುದು ಹೆಮ್ಮೆಯ ವಿಷಯವೆಂದು ಹಿರಿಯ ಪತ್ರಕರ್ತ ಗಣೇಶ್‍ಕಾಸರಗೂಡು ಶ್ಲಾಘಸಿದರು.

ನಿರ್ಮಾಪಕರು ಚಿತ್ರಕ್ಕೆ ಬೇಕಾಗುವ ಎಲ್ಲಾ ಸಲಕರಣೆಗಳನ್ನು ಬಾಡಿಗೆಗೆ ಪಡೆಯದೆ ಖರೀದಿ ಮಾಡಿ, ಮುಂದೆ ನಿರ್ಮಾಣ ಮಾಡುವವರಿಗೆ ಕಡಿಮೆ ದರದಲ್ಲಿ ಬಾಡಿಗೆ ನೀಡಲು ತೀರ್ಮಾನಿಸಿರುವುದು ಸಂತಸದ ವಿಷಯವೆಂದು ಶಶಾಂಕ್‍ರಾಜ್ ಹೇಳಿದರು.

ಚಿತ್ರದಲ್ಲಿರುವ ಎಲ್ಲಾ ದೃಶ್ಯಗಳನ್ನು ತೆಗೆದುಕೊಂಡು ಟ್ರೈಲರ್, ಟೀಸರ್ ಸಿದ್ದಪಡಿಸಲಾಗಿದೆ. ಈಗ ನೋಡಿರುವುದು ಕೇವಲ ಸ್ಯಾಂಪಲ್ ಅಷ್ಟೇ. ಇದಕ್ಕಿಂತ 100ರಷ್ಟು ಗುಣಮಟ್ಟ ಇರುವ ಚಿತ್ರವನ್ನು ದೊಡ್ಡ ಪರದೆ ಮೇಲೆ ನೋಡಿದಾಗ ಖುಷಿ ನೀಡುತ್ತದೆ. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು. ಶಿವ-ಪಾರ್ವತಿ ಎರಡನೆ ಅವತಾರ, ಎರಡು ಜನುಮದ ಕತೆಯಲ್ಲಿ ವಿಧಿಯೇ ವಿಲನ್ ಆಗಿದೆ. ಕಿಟ್ಟಪ್ಪ ಶಿವನನ್ನು ಯಾತಕ್ಕೆ ಕೊಂದ. ಇದನ್ನು ತಿಳಿಯಲು ಸಿನಿಮಾ ನೋಡಿ. ಪ್ಯಾಟೆ ಹುಡ್ಗೀರು ಹಳ್ಳಿ ಲೈಫು ಸೀಸನ್-6 ಕಲಾವಿದರು ನಟಿಸಿದ್ದಾರೆ. ಐದು ಹಾಡುಗಳ ಪೈಕಿ ಎರಡು ಜಾದಪದ ಗೀತೆಗಳನ್ನು ಬಳಸಲಾಗಿದೆ. ಚಿತ್ರದ ಕಥನವನ್ನು ಬಿಡುಗಡೆ ನಂತರ ಕಾದಂಬರಿ ಮಾಡುವ ಯೋಜನೆ ಇದೆ. ಜೂನ್ ತಿಂಗಳಲ್ಲಿ ಜನರಿಗೆ ತೋರಿಸಲಾಗುವುದು ಎಂದು ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾಣ ಜೊತೆಗೆ ನಾಯಕನಾಗಿ ನಟಿಸಿರುವ ಅಮೇರಿಕಾ ಸುರೇಶ್ ವಿವರ ನೀಡಿದರು.

ನಾಯಕಿ ದಿಶಾಪೂವಯ್ಯ ಅನುಪಸ್ಥಿತಿ ಇತ್ತು. ಐಟಂ ಹಾಡಿನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಆಲಿಶಾ ಮೊದಲಬಾರಿ ಉಪನಾಯಕಿಯಾಗಿ ಮತ್ತು ಇದು ಅವರ 98ನೇ ಚಿತ್ರವಾಗಿದೆಯಂತೆ. ಉಳಿದಂತೆ ಚಿತ್ರಶಣೈ, ಹೊನ್ನವಳ್ಳಿಕೃಷ್ಣ, ರಮೇಶ್‍ಭಟ್, ರೋಹಿಣಿ, ತರಂಗವಿಶ್ವ, ಭವ್ಯ, ರಂಜನ್ ಮುಂತಾದವರ ನಟನೆ ಇದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
9/05/18

ಜನ್ಮ ಪುರ್ನಜನ್ಮದ ರೋಮಾಂಚಕ ಪ್ರೇಮ ಕಥನ
ದೇವಲೋಕದ ಪ್ರೇಮಲೋಕ, ಯಮನ ಗೆದ್ದ ಶಿವು, ಜನ್ಮದಿಂದ ಪುನರ್ಜನ್ಮಕ್ಕೂ ಮುಂದುವರೆದ ರೋಮಾಂಚಕ ಪ್ರೇಮ ಕಥೆ, ಕರವಸ್ತ್ರವನ್ನು ನೀವೇ ತರಬೇಕಾಗಿ ವಿನಂತಿ, ನಿಮ್ಮ ಕಣ ್ಣೀರಿಗೆ ನಾವು ಜವಬ್ದಾರರಲ್ಲ, ಷರತ್ತುಗಳು ಅನ್ವಯ, ಕಥೆಯೇ ಹೀರೋ ವಿಧಿಯೇ ವಿಲನ್ ಇವೆಲ್ಲವನ್ನು ನಾವು ಹೇಳುತ್ತಿಲ್ಲ. ಹೊಸಬರ ‘ಶಿವುಪಾರು’ ಚಿತ್ರದ ಪೋಸ್ಟರ್‍ನಲ್ಲಿ ಕಾಣ ಸಿಕೊಂಡಿದೆ. ಎರಡು ತಲೆಮಾರಿನ ಪ್ರೇಮಕತೆಯಲ್ಲಿ ರಿಯಾಲಿಟಿ ಷೋ ಮತ್ತು ಪೌರಾಣ ಕ ಸೆಸ್ಪೆನ್ಸ್ ಥ್ರಿಲ್ಲರ್‍ನಲ್ಲಿ ದುರಂತದೊಂದಿಗೆ ಕೊನೆಗೊಳ್ಳುತ್ತದೆ, ಪ್ರೀತಿ, ರೋಮಾನ್ಸ್, ಫ್ಯಾಂಟಸಿ, ಮಿಸ್ಟರಿ, ಅಪರಾಧ, ಪಾಪ,ಶೋಷಣೆ, ದೆವ್ವ, ಸಂಬಂದಗಳು ಎಲ್ಲವು ಕತೆಯಲ್ಲಿ ಬಂದು ಹೋಗಲಿದೆ. ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2017ರಲ್ಲಿ ಚಿತ್ರವು ಪ್ರದರ್ಶನಗೊಂಡು ಪ್ರಶಂಸೆಯನ್ನು ಪಡೆದುಕೊಂಡಿರುವುದು ಧನಾತ್ಮಕ ಅಂಶವಾಗಿದೆಯಂತೆ.

ಅಮೇರಿಕಾದ ಯುನಿವರ್ಸಲ್ ಸ್ಟುಡಿಯೋದಲ್ಲಿ 10 ವರ್ಷಗಳ ಕಾಲ ಸಾಫ್ಟ್‍ವೇರ್ ಆರ್ಕಿಟೆಕ್ಟ್ ಆಗಿರುವ ಕನ್ನಡಿಗ ಅಮೇರಿಕಾಸುರೇಶ್ ಅವರು ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾಣ ಜೊತೆಗೆ ನಾಯಕನಾಗಿ ಶಿವು ಹೆಸರಿನಲ್ಲಿ ಕಾಣ ಸಿಕೊಂಡಿದ್ದಾರೆ. ಪಾರು ಆಗಿ ದಿಶಾಪೂವಯ್ಯ ನಟನೆ ಇದೆ. ರಿಯಾಲಿಟಿ ಷೋದಲ್ಲಿ ಬರುವ ಸನ್ನಿವೇಶಕ್ಕೆ ಕಿರುತೆರೆಯ ಪ್ಯಾಟೆ ಹುಡ್ಗೀರ್ ಸೀಸನ್-6 ಕಲಾವಿದರಾದ ರಂಜನ್, ಯಶಿಕಾ, ಸ್ವಾತಿ, ಮೇಘನಾ, ಲಕ್ಕೀಶ್ರೀ, ಸೊನಿಯಾ, ನೇಹಾ, ಆರತಿ, ರಕ್ಷಿತಾ, ಸಿಮ್ರಾನ್, ವಂದನ ನಟಿಸಿದ್ದಾರೆ. ಇವರೊಂದಿಗೆ ನುರಿತವರಾದ ರಮೇಶ್‍ಭಟ್, ತರಂಗವಿಶ್ವ, ಹೊನ್ನವಳ್ಳಿಕೃಷ್ಣ, ಚಿತ್ರಾಶಣೈ, ಕಿಟ್ಟಪ್ಪ ಸೇರಿಕೊಂಡಿರುವುದು ವಿಶೇಷವಾಗಿದೆ. ಸನ್ನಿವೇಶಕ್ಕೆ ಪೂರಕವಾಗಿ ಆರು ಹಾಡುಗಳು ಇರಲಿದೆ. 135 ನಿಮಿಷದ ಚಿತ್ರಕ್ಕೆ ಯು ಪ್ರಮಾಣಪತ್ರ ಇರುವ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.

-19/12/17


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore