HOME
CINEMA NEWS
GALLERY
TV NEWS
REVIEWS
CONTACT US
ಆಕ್ಷನ್ ಪ್ರಿಯರಿಗೆ ಇಷ್ಟವಾಗುವ ಶಿವಾರ್ಜುನ
ಇಂದು ಬಿಡುಗಡೆಯಾಗಿರುವ‘ಶಿವಾರ್ಜುನ’ಚಿತ್ರವುಪ್ರೀತಿ, ಹೊಡೆದಾಟ, ಸೆಂಟಿಮೆಂಟ್, ಜೊತೆಗೆಕಾಮಿಡಿಅಂಶಗಳು ಇರುವುದರಿಂದಪ್ರೇಕ್ಷಕನಿಗೆಯಾವೊಂದುದೃಶ್ಯವು ಬೋರ್ ಅನಿಸುವುದಿಲ್ಲ. ರಾಯದುರ್ಗದ ಮುಖ್ಯಸ್ಥಪುತ್ರನನ್ನುಕಾಪಾಡುವ ಸಲುವಾಗಿ ರಾಮದುರ್ಗದಗೌಡರ ಮನೆಗೆ ಕಳುಹಿಸುತ್ತಾನೆ. ಆದರೆಅಲ್ಲಿಆತನು ಸತ್ತುಹೋದಾಗಈತನೇಕಾರಣನೆಂದು, ಅವನ ಮಗನನ್ನು ಸಾಯಿಸಲು ಹೋದಾಗಬಾಲಕ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಆ ದಿನದಿಂದಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿರುತ್ತಾನೆ. 20 ವರ್ಷ ನಂತರಅಧಿಕಾರಿಯಾಗಿಅದೇಊರಿಗೆ ಬಂದುಇಬ್ಬರನ್ನು ಸೇರಿಸುತ್ತಾನಾ? ಅಂತ ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.ನಿರ್ದೇಶಕ ಶಿವತೇಜಸ್ ಮೂರನೇಉತ್ತಮ ಪ್ರಯತ್ನ ಮತ್ತೋಮ್ಮೆ ಸಾಬೀತುಆಗಿದೆ.

ಚಿರಂಜೀವಿಸರ್ಜಾನಟನೆಗಿಂತ ಹೊಡೆದಾಟದಲ್ಲಿ ಸೂಪರ್ ಅನಿಸಿದ್ದಾರೆ. ಹೊಸ ಪ್ರತಿಭೆಅಕ್ಷತಾಶ್ರೀನಿವಾಸ್ ಮೈಚಳಿ ಬಿಟ್ಟುಅಭಿನಯಿಸಿ ಪಡ್ಡೆ ಹುಡುಗಿರಿಗೆ ಖುಷಿ ಕೊಡುತ್ತಾರೆ. ಅಮೃತಅಯ್ಯಂಗಾರ್ ಬಜಾರಿ ಹುಡುಗಿಯಾಗಿಚೆಲ್ಲುಚೆಲ್ಲಾದ ನಟನೆಯಿಂದಇಷ್ಟವಾಗುತ್ತಾರೆ.ನಯನ-ಶಿವರಾಜ್.ಕೆ.ಆರ್.ಪೇಟೆ ಜೋಡಿಗಳು,ಕುರಿಪ್ರತಾಪ್, ತರಂಗವಿ±ಕ್ಕಿಂತ ಸಾಧುಕೋಕಿಲ ಹೆಚ್ಚು ನಗಿಸಿದ್ದಾರೆ. ಶಾಸಕನಾಗಿ ಸತೀಶ್‍ಮಂಗಳೂರು, ಡಿಸಿಯಾಗಿ ತಾರಾ, ಗೌಡರುಗಳಾಗಿ ಅವಿನಾಶ್, ರವಿಕಿಶನ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಅತಿಥಿಯಾಗಿ ಬರುವಕಿಶೋರ್ ಮುಗ್ದರಾಗಿ ಕೆಲವು ಹೊತ್ತು ಬಂದು ಹೋಗುತ್ತಾರೆ.ತಾರಾ ಪುತ್ರ ಮಾಸ್ಟರ್ ಕೃಷ್ಣ ಮುದ್ದಾಗಿಕಾಣುತ್ತಾನೆ. ಸುರಾಗ್‍ಕೋಕಿಲ ಸಂಗೀತದಲ್ಲಿಎರಡು ಹಾಡುಗಳು ಕೇಳಬಲ್.
ನಿರ್ಮಾಣ: ಎಂ.ಬಿ.ಮಂಜುಳಶಿವಾರ್ಜುನ್
***
ಸಿನಿ ಸರ್ಕಲ್.ಇನ್ ವಿಮರ್ಶೆ
12/03/20

ಥಿಯೇಟರ್‍ದಲ್ಲಿಶಿವಾರ್ಜುನ
ಆಕ್ಷನ್‍ಚಿತ್ರ‘ಶಿವಾರ್ಜುನ’. ಸಿನಿಮಾದಟ್ರೈಲರ್‍ನ್ನುಇಲ್ಲಿಯವರೆಗೂ ಮೂರು ಲಕ್ಷಜನರು ವೀಕ್ಷಣೆ ಮಾಡಿದ್ದಾರೆ. ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಮೊದಲ ಭಾಗವು ಬೇರೆತರಹಇರಲಿದ್ದು, ವಿರಾಮದ ನಂತರಕತೆಯು ಬೇರೆಯದೆರೂಪ ಪಡೆದುಕೊಳ್ಳುವುದು ವಿಶೇಷ. ನಾಯಕನಾಗಿಚಿರಂಜೀವಿಸರ್ಜಾ.ಸಂಪತ್ತಿಗೆ ಸವಾಲ್ ಮಂಜುಳಾರನ್ನು ನೆನಪಿಸುವ ಅಮೃತಅಯ್ಯಂಗಾರ್‍ನಾಯಕಿ.ಉಪನಾಯಕಿಯರಾಗಿಅಕ್ಷತಾಶ್ರೀನಿವಾಸ್, ಅಕ್ಷಿತಾಭೂಪಯ್ಯಇವರೊಂದಿಗೆತಾರಾ ಹಾಗೂ ಇವರ ಸುಪುತ್ರ ಮಾಸ್ಟರ್ ಕೃಷ್ಣ ಮೊದಲ ಬಾರಿ ಬಣ್ಣ ಹಚ್ಚಿದ್ದಾನೆ. ತಾರಗಣದಲ್ಲಿಕಿಶೋರ್, ನಯನ, ಶಿವರಾಜ್.ಕೆ.ಆರ್.ಪೇಟೆ ಮುಂತಾದವರುಅಭಿನಯಿಸಿದ್ದಾರೆ.

ರೊಮ್ಯಾಂಟಿಕ್‍ಗೀತೆಗೆನಟಿ ಮೇಘನರಾಜ್ ಹಾಡಿದ್ದು, ಸಾಧುಕೋಕಿಲ ಪುತ್ರರಾಗಒದಗಿಸುವ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಬಾಕಿ ಎರಡು ಹಾಡುಗಳಿಗೆ ಇವರತಂದೆಕಾಮಿಡಿ ಪಾತ್ರ ನಿರ್ವಹಿಸುವ ಜೊತೆಗೆ ಕೆಲಸ ಮಾಡಿದ್ದಾರೆ.ಛಾಯಾಗ್ರಹಣ ಹೆಚ್.ಸಿ.ವೇಣು, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ಡಾ.ರವಿವರ್ಮ-ವಿನೋಧ್‍ಅವರದಾಗಿದೆ. ಮೂರುದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿಕಾರ್ಯಕಾರಿ ನಿರ್ಮಾಪಕರಾಗಿಅನುಭವ ಪಡೆದುಕೊಂಡಿರುವ ಶಿವಾರ್ಜುನಅವರುಪುತ್ರಿ ನಿಶ್ಚಿತ ಕಂಬೈನ್ಸ್ ಮೂಲಕ, ಪತ್ನಿ ಎಂ.ಬಿ.ಮಂಜುಳಾಶಿವಾರ್ಜುನ್ ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಸಿನಿಮಾವು ಮಾರ್ಚ್ 12ರಂದು ತೆರೆಗೆ ಬರುತ್ತಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
2/03/20


ಶಿವಾರ್ಜುನ ಗಾನಲಹರಿ
ಆಕ್ಷನ್‍ಚಿತ್ರ‘ಶಿವಾರ್ಜುನ’ ಟ್ರೈಲರ್ ಶಿವರಾತ್ರಿ ಹಬ್ಬದಂದು ಬಿಡುಗಡೆಗೊಂಡಿತು.ತುಣುಕುಗಳಿಗೆ ಚಾಲನೆ ನೀಡಿದ ಸಂಸದ ತೇಜಸ್ವಿಸೂರ್ಯ ಮಾತನಾಡಿ ಮಂಡ್ಯಾರಮೇಶ್‍ಪರದೆ ಮೇಲೆ ಹೇಳಿರುವುದು ಸೂಕ್ತ ಅನಿಸಿದೆ. ನಿರ್ಮಾಪಕರು ನನ್ನಕ್ಷೇತ್ರದ ಮತದಾರರು. ನಮ್ಮ ಪ್ರತಿಭೆಗಳಿಗೆ ವೇದಿಕೆ ಕಲ್ಪಸಿರುವುದು ಸಂತಸತಂದಿದೆ.ಬೇರೆ ಭಾಷೆಯ ಚಿತ್ರಗಳನ್ನು ಬೆಳೆಸುವಂತೆ, ನಾವು ಮನಸ್ಸು ಮಾಡಿದರೆಇಲ್ಲಿರುವ ಕಲಾವಿದರುಗಳನ್ನು ಉನ್ನತ ಮಟ್ಟದಲ್ಲಿತೋರಿಸಬಹುದೆಂದುಅಭಿಪ್ರಾಯಪಟ್ಟುತಂಡಕ್ಕೆ ಶುಭಹಾರೈಸಿದರು.

ಸಂಸದರು ಭವಿಷ್ಯದ ನಾಯಕನಾಗುವ ಲಕ್ಷಣಗಳು ಕಾಣಿಸುತ್ತಿದೆ.ಇಂದುಆತನಿಂದಟ್ರೈಲರ್ ಬಿಡುಗಡೆಗೊಂಡಿದ್ದು ಸುಯೋಗ.ಅಣ್ಣನಿಗಿಂತತಮ್ಮಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾನೆ. ಅವನು ಎರಡು ವರ್ಷಕ್ಕೆಒಂದು ಸಿನಿಮಾಕೊಡುತ್ತಿರುವುದು ನನ್ನಕಡೆಯಿಂದಆಕ್ಷೇಪಣೆಇದೆ. ನಿರ್ಮಾಪಕರುದೂರುಕೊಡದೆಇರುವಾಗ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಹನ್ನರೆಡು ತಿಂಗಳಿಗೆ ಸರಿಯಾಗಿಎರಡುಚಿತ್ರಕೊಟ್ಟರೆಉದ್ಯಮ ಬೆಳೆಯಲು ಸಾದ್ಯವಾಗುತ್ತದೆಂದುಧ್ರುವಸರ್ಜಾರನ್ನು ನೋಡುತ್ತಾತಾರಾ ಹೇಳಿದರು. ಮಾತು ಮುಂದುವರೆಸುತ್ತಾ ಮೂವರು ನಾಯಕಿಯರುಚೆಂದಕಾಣಿಸುತ್ತಾರೆ.ಪತಿ ವೇಣುಕ್ಯಾಮರಮನ್, ಪುತ್ರ ಕೃಷ್ಣ ಮೊದಲಬಾರಿ ನನ್ನ ಮಗನಾಗಿ ಬಣ್ಣಹಚ್ಚಿದ್ದಾನೆ. ಇದರಿಂದ ನಮ್ಮದು ಫ್ಯಾಮಲಿ ಪ್ಯಾಕೇಜುಎಂದು ನಗುತ್ತಾ ಮೈಕ್ ಹಸ್ತಾಂತರಿಸಿದರು.

ಚಿಕ್ಕವಯಸ್ಸಿನಿಂದ ನಿರ್ಮಾಪಕರನ್ನು ನೋಡಿಕೊಂಡು ಬೆಳೆದವನು.ಇದುಅವರಿಗೆಅರ್ಪಿಸಲಾಗಿದೆಅಂತಾರೆ ನಾಯಕಚಿರಂಜೀವಿಸರ್ಜಾ.ನಾಯಕಿಯರಾದಅಮೃತಅಯ್ಯಂಗಾರ್, ಅಕ್ಷತಾಶ್ರೀನಿವಾಸ್, ಅಕ್ಷಿತಾಭೂಪಯ್ಯ, ನಿರ್ದೇಶಕ, ನಿರ್ಮಾಪಕರುಎಲ್ಲರೂ ಮಿತಭಾಷಿಯಾಗಿದ್ದರು.ಧ್ರುವಸರ್ಜಾಅಣ್ಣನಚಿತ್ರಕ್ಕೆ ಒಳ್ಳೆಯದಾಗಲಿ ಎನ್ನುವಲ್ಲಿಗೆಕಾರ್ಯಕ್ರಮಕ್ಕೆ ಮಂಗಳಹಾಡಲಾಯಿತು.
ಸಿನಿ ಸರ್ಕಲ್.ಇನ್ ನ್ಯೂಸ್
21/02/20

For advertisements contact editor
K N Nagesh Kumar, Photo Journalist
Website Desined by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore