HOME
CINEMA NEWS
GALLERY
TV NEWS
REVIEWS
CONTACT US

ಶಿವಣ್ಣ ಜೊತೆದರ್ಶನ್ ನಟಿಸ್ತಿರಾ?
ಚಂದನವನದಲ್ಲಿ ಸ್ಟಾರ್ ನಟರುಒಟ್ಟಿಗೆ ನಟಿಸುತ್ತಾರೆಅಂದರೆಅಲ್ಲೊಂದು ಮಿಂಚು ಹುಟ್ಟುತ್ತದೆ. ಈಗಾಗಲೇ ಡಾ.ರಾಜ್‍ಕುಮಾರ್ ಹಲವು ನಾಯಕರೊಂದಿಗೆತೆರೆಹಂಚಿಕೊಂಡಿದ್ದಾರೆ. ಅದುಇಲ್ಲಿಯವರೆಗೂ ನಡೆದುಕೊಂಡು ಬಂದಿದೆ, ಬರುತ್ತಲೇಇದೆ.ಇದನ್ನು ಹೇಳಲು ಕಾರಣವಿದೆ. ಸದ್ಯದ ಬಿಸಿ ಬಿಸಿ ಸುದ್ದಿ ಎಂದರೆ ಶಿವರಾಜ್‍ಕುಮಾರ್-ದರ್ಶನ್ ಜೊತೆಗೆ ನಟಿಸುತ್ತಾರೆಂದುಎಲ್ಲಾಕಡೆ ಕೇಳಿಬರುತ್ತಿದೆ. ಹೊಸ ಚಿತ್ರದ ಮಹೂರ್ತ ಸಮಾರಂಭದಲ್ಲಿಇಬ್ಬರು ಮುಖಾಮುಖಿಯಾಗಿದ್ದಾರೆ. ನಂತರಮಾದ್ಯಮದಿಂದ ಕೇಳಿ ಬಂದ ಪ್ರಶ್ನೆಗೆಉತ್ತರ ನೀಡಿದ್ದಾರೆ. ನಾವಿಬ್ಬರುಒಟ್ಟಿಗೆ ನಟಿಸುವ ಸಮಯ ಬರುತ್ತೆಅಂತ ಹೇಳಲಿಕ್ಕೆ ಆಗುವುದಿಲ್ಲ. ಒಳ್ಳೆಯ ಕತೆ ಬಂದರೆ ಮಾಡುತ್ತೇನೆ. ಅದರಲ್ಲಿಏನಿದೆ.ನಾವು ಮಾಡುತ್ತೇವೆಂದು ಹೋಗಬಾರದು.ಆದಾಗೆ ಬರಬೇಕು. ಹಾಗೇ ಬಂದಾಗಲೇಚೆನ್ನಾಗಿರುತ್ತೆ. ಯಾವಾಗ ಭೇಟಿಯಾದಾಗಲೂಇದರ ಬಗ್ಗೆ ಚರ್ಚೆ ಮಾಡಿದ್ದುಉಂಟುಎನ್ನುತ್ತಾರೆ ಶಿವರಾಜ್‍ಕುಮಾರ್.

ಶಿವಣ್ಣ ಲಾಂಗ್ ಹಿಡಿಯುವಂತೆಯಾರು ಹಿಡಿಯೋಲ್ಲ. ಅವರುಅದನ್ನು ಹಿಡಿದರೆಅವರ ಹಿಂದೆ ನಾನಿರುತ್ತೆನೆ. ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ನಿರ್ದೇಶಕರು ಸಿಕ್ಕರೆ ಅಭಿನಯಿಸಲುಅಭ್ಯಂತರಇಲ್ಲ. ಒಟ್ಟಿನಲ್ಲಿಟಗರು-ಯಜಮಾನತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುವ ಸಮಯಯಾವಾಗ ಬರುತ್ತದೆಂದುಇವರಿಗೆ ಮಾತ್ರ ತಿಳಿದಿದೆ. ಅಲ್ಲಿಯವರೆಗೂ ಅಭಿಮಾನಿಗಳು ಕಾಯಬೇಕಷ್ಟೇ.
ಸಿನಿ ಸರ್ಕಲ್.ಇನ್ ನ್ಯೂಸ್
24/11/19

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore