HOME
CINEMA NEWS
GALLERY
TV NEWS
REVIEWS
CONTACT US
ಯಶಸ್ಸಿನ ಹಾದಿಯಲ್ಲಿ ಶಿವಾಜಿ ಸುರತ್ಕಲ್
ಶುಕ್ರವಾರ ಬಿಡುಗಡೆಗೊಂಡ ‘ಶಿವಾಜಿ ಸುರತ್ಕಲ್’ ಚಿತ್ರವುಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.ಇದರಿಂದಖುಷಿಯಾದ ನಿರ್ಮಾಪಕರು ಸಕ್ಸಸ್ ಮೀಟ್‍ಏರ್ಪಾಟು ಮಾಡಿದ್ದರು. ಈ ಸಂದರ್ಭದಲ್ಲಿರಮೇಶ್‍ಅರವಿಂದ್ ಮಾತನಾಡಿನಾವು ಇಷ್ಟಪಡುವಂಥ ಕೆಲಸವನ್ನು, ನಾವು ಇಷ್ಟಪಡುವಜನರಜೊತೆ, ನಾವು ಇಷ್ಟಪಡುವಜಾಗದಲ್ಲಿ, ನಾವು ಇಷ್ಟಪಡುವ ಹೂತ್ತಿಗೆ, ನಾವು ಇಷ್ಟಪಟ್ಟು ಮಾಡುವುದೇಯಶಸ್ಸು. ಕೊನೆಯದಾಗಿಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆ.ರಾಹುಲ್‍ಡ್ರಾವಿಡ್ ವೀಕ್ಷಿಸಿದ್ದು, ಟಿಕ್‍ಟಾಕ್‍ನಿಂದಒಂದಷ್ಟು ಸಿನಿಮಾಕ್ಕೆ ಪ್ರಚಾರ ಸಿಕ್ಕಿದೆ. ಹೆಸರು ಸುರತ್ಕಲ್, ಮೈಸೂರಿನಕತೆ, ಕೂರ್ಗ್‍ದಲ್ಲಿ ಕೊಲೆ ಇವೆಲ್ಲವುಒಂದಕ್ಕೊಂದು ಲಿಂಕ್‍ಇರುವುದು ಪ್ಲಸ್ ಪಾಯಿಂಟ್‍ಆಗಿದೆಎಂದು ಶಿವಾಜಿ ಉರುಫ್‍ರಮೇಶ್‍ಅರವಿಂದ್ ನಕ್ಕರು.

ಮೊದಲನೇ ದಿನ 80 ಕೇಂದ್ರಗಳಲ್ಲಿ ಇರಲಾಗಿ, ಎರಡನೇ ವಾರದಿಂದ 120 ಸಂಖ್ಯೆಗೆ ಹೋಗುವ ಲಕ್ಷಣಕಾಣುತ್ತಿದೆ.ಪರಭಾಷೆಚಿತ್ರಮಂದಿರವೆಂದು ಹೇಳುತ್ತಿದ್ದ ಊರ್ವಶಿ ಟಾಕೀಸ್‍ದಲ್ಲಿ ಶೇಕಡ 80ರಷ್ಟು ಹೌಸ್‍ಫುಲ್‍ಆಗಿದೆ.ಆಸ್ಟ್ರೇಲಿಯಾ, ಯುಕೆದಲ್ಲಿ 30 ಸೆಂಟರ್‍ಗಳಲ್ಲಿ ಬಿಡುಗಡೆಗೊಂಡಿದೆ.ಬದ್ಮಾಶ್ ನಿರ್ಮಾಪಕರುಯಎಸ್‍ಜನರಿಗೆತೋರಿಸಲು ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.ಬಾಲಿವುಡ್‍ದೊಡ್ಡ ಸಂಸ್ಥೆಯೊಂದುರಿಮೇಕ್ ಮಾಡಲುಉತ್ಸುಕರಾಗಿದ್ದಾರೆ.ಇದರಜೊತೆಗೆತೆಲುಗು, ತಮಿಳಿನಿಂದಲೂ ಕರೆ ಬಂದಿದೆ.ಬಹುಶ: ಅಲ್ಲಿಯೂನಿರ್ದೇಶನ ಮಾಡಬಹದು. ‘ಗ್ರೇಟ್‍ಟೀಮ್ ವರ್ಕ್ ಪೀಪಲ್’ಚಿತ್ರದಡೈಲಾಗ್‍ನ್ನುಎಲ್ಲೇ ಹೋದರೂ ಹೇಳುತ್ತಾರೆ. ಅಲ್ಲದೆ ಸಣ್ಣ ಸಣ್ಣ ಪಾತ್ರಗಳನ್ನು ಗುರುತಿಸಿರುವುದು ಕೆಲಸ ಮಾಡಿದ್ದಕ್ಕೂ ಸಾರ್ಥಕವಾಯಿತುಅಂತಾರೆ ನಿರ್ದೇಶಕ ಆಕಾಶ್‍ಶ್ರೀವತ್ಸ.ಮಾದ್ಯಮದವರು ಪ್ರಾರಂಭದಿಂದಲೂ ಪ್ರೋತ್ಸಾಹ, ಉತ್ತಮ ವಿಮರ್ಶೆ ಬರೆದಿರುವುದರಿಂದಲೇಚಿತ್ರವುಎಲ್ಲರಿಗೂತಲುಪುತ್ತಿದೆ.ರ್ಯಾಡಿಕಲ್ ಸಂಸ್ಥೆಯೊಂದು ಪ್ಯಾನ್‍ಇಂಡಿಯಾ ಮಾದರಿಯಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿದ್ದಾರೆ.ಇದೇರೀತಿ ಮುಂದೆÀಯೂ ಸಹಕಾರ ನೀಡಬೇಕಂದು ನಿರ್ಮಾಪಕಅನೂಪ್‍ಗೌಡಅವಲತ್ತು ಮಾಡಿಕೊಂಡರು.
ಸಿನಿ ಸರ್ಕಲ್.ಇನ್ ನ್ಯೂಸ್
25/02/20


ಥ್ರಿಲ್ಲರ್ ಭಾವನೆಗಳ ನಡುವೆ ಶಿವಾಜಿ ಹುಡುಕಾಟ
ಮಡಕೇರಿಯಅರಣ್ಯದಲ್ಲಿರುವರಣಗರಿಎಸ್ಟೇಟ್‍ದಲ್ಲಿಕೊಲೆಯೊಂದು ನಡೆಯುತ್ತದೆ.ಅದನ್ನುತನಿಖೆ ಮಾಡಲು ಪೋಲೀಸ್‍ಇಲಾಖೆಯಲ್ಲಿ ಶರ್ಲಾಕ್‍ಹೋಮ್ಸ್‍ಎಂದೇಖ್ಯಾತಿ ಪಡೆದಿರುವಅಧಿಕಾರಿ ಬರುತ್ತಾರೆ.ಅವರೇ ಶೀರ್ಷಿಕೆಯ ಹೆಸರಿನ ‘ಶಿವಾಜಿ ಸುರತ್ಕಲ್’.ಹೀಗೆ ಒಂದು ಸಾವಿನ ನಿಗೂಢತೆ ಭೇದಿಸುತ್ರಾ ಶುರುವಾಗುವಕತೆಯೇಚಿತ್ರದ ಜೀವಾಳವಾಗಿದೆ.ಹೀಗೆ ಅಂತ ತಿಳಿದುಕೊಳ್ಳುವಷ್ಟರಲ್ಲೆ ಅದು ಬೇರೆ ಮಗ್ಗಲಿಗೆ ತಿರುಗಿಕೊಂಡು ನೋಡುಗನಿಗೆಕುತೂಹಲ ಮೂಡಿಸುತ್ತದೆ.ಕೆಲವು ಕಡೆ ಹಾರರ್ ಸ್ಫರ್ಶಕೊಡುತ್ತಾಅದಕ್ಕೊಂದು ಹೊಸದಾದ ಸನ್ನಿವೇಶಗಳು ಸೃಷ್ಟಿಯಾಗುತ್ತಾ ಹೋಗುತ್ತದೆ.ಅದೆಲ್ಲಾವನ್ನುಯಾವುದೇಉಸಾಬರಿಇಲ್ಲದೆ ಸಾವಧಾನಚಿತ್ತದಿಂದ ನೋಡಲು ಬಯಸಿದ್ದರೆ, ನಿಮಗೆ ಖುಷಿ ತರಿಸುವಲ್ಲಿ ಶಿವಾಜಿ ಸಪಲರಾಗುತ್ತಾರೆ.

ಗ್ಯಾಪ್ ನಂತರರಮೇಶ್‍ಅರವಿಂದ್‍ಗನ್ ಹಿಡಿಯುತ್ತಾರೆ, ಅಪರಾಧಿಗಳನ್ನು ತನ್ನದೆ ಬುದ್ದಿಶಕ್ತಿಯಿಂದಕಂಡು ಹಿಡಿಯುತ್ತಾರೆ.ಮೊದಲಬಾರಿಗಡ್ಡಸಹಿತ ಕಾಣಿಸಿಕೊಂಡಿರುವುದು ವಿಶೇಷ. ಪತ್ನಿ, ವಕೀಲೆ, ಸತ್ಯ ನ್ಯಾಯಕ್ಕೆ ಕೆಲಸ ಮಾಡುವ ನಾಯಕಿರಾಧಿಕಾನಾರಾಯಣ್.ಸೈಕ್ರಿಯಾಟಿಕ್ ಆಗಿ ಆರೋಹಿನಾರಾಯಣ್,ರೋಹಿತ್‍ಭಾನುಪ್ರಕಾಶ್, ನಮ್ರತಾ, ಪಿ.ಡಿ.ಸತೀಶ್ ಮುಂತಾದವರು ನೀಡಿದ ಕೆಲಸವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಬದ್ಮಾಶ್‍ತರುವಾಯ ನಿರ್ದೇಶನ ಮಾಡಿರುವ ಆಕಾಶ್‍ಶ್ರೀವತ್ಸ ಸುಧಾರಿಸಿದ್ದಾರೆ. ಜ್ಯೂಡೋಸ್ಯಾಂಡಿ ಸಂಗೀತ, ಗುರುಪ್ರಸಾದ್‍ಛಾಯಾಗ್ರಹಣಇದಕ್ಕೆ ಪೂರಕವಾಗಿದೆ. ರಮೇಶ್ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುವ ಸಿನಿಮಾಎನ್ನಬಹುದು.
ನಿರ್ಮಾಣ: ಅನೂಪ್‍ಗೌಡ,ರೇಖಾ.ಕೆ.ಎನ್.
***
ಸಿನಿ ಸರ್ಕಲ್.ಇನ್ ವಿಮರ್ಶೆ
21/02/20

ಕೊಲೆಗಾರನ ಹುಡುಕಾಟದಲ್ಲಿರಮೇಶ್‍ಅರವಿಂದ್
ಥ್ರಿಲ್ಲರ್‍ಚಿತ್ರ‘ಶಿವಾಜಿ ಸುರತ್ಕಲ್’ ಚಿತ್ರದಟ್ರೈಲರ್‍ಬಿಡುಗಡೆಗೊಂಡಿದೆ.ದಿ ಕೇಸ್‍ಆಫ್‍ರಣಗಿರಿರಹಸ್ಯವೆಂದುಅಡಬರಹದಲ್ಲಿ ಹೇಳಲಾಗಿದೆ. ಶಿವಾಜಿ ಮತ್ತೋಂದು ಪದ ಪವರ್, ಸುರತ್ಕಲ್‍ಎಂದರೆ ಮೆದುಳು. ಇವರಡು ಸೇರಿಕೊಂಡು ಹೇಗೆ ಕೊಲೆಯನ್ನು ಭೇದಿಸುತ್ತಾರೆಎಂಬುದುಒಂದು ಏಳೆಯ ಕತೆಯಾಗಿದೆ.ಆಕಾಶ್‍ಶ್ರೀವತ್ಸ ಅವರಿಗೆ ನಿರ್ದೇಶಕನಾಗಿಎರಡನೆಅನುಭವ. ನಾಲ್ಕು ಹಾಡುಗಳಿಗೆ ಜ್ಯುಡೋಸ್ಯಾಂಡಿ ಸಂಗೀತವಿದೆ.

ಖಿನ್ನತೆಯಲ್ಲಿ, ಗಂಭೀರವಾಗಿಕೊಲೆಗಾರನನ್ನುಯಾವರೀತಿಯಲ್ಲಿಕಂಡು ಹಿಡಿಯುತ್ತಾನೆಎಂಬುದರ ಪಾತ್ರದಲ್ಲಿರಮೇಶ್‍ಅರವಿಂದ್ ನಾಯಕನಾಗಿ ನಟಿಸಿದ್ದಾರೆ.ಪತ್ನಿ, ವಕೀಲೆ, ಸತ್ಯ ನ್ಯಾಯಕ್ಕೆ ಕೆಲಸ ಮಾಡುವರಾಧಿಕಾನಾರಾಯಣ್ ನಾಯಕಿ. ಸೈಕ್ರಿಯಾಟಿಕ್ ಆಗಿ ಆರೋಹಿನಾರಾಯಣ್ ಉಳಿದಂತೆ ಪಿ.ಡಿ.ಸತೀಶ್, ರೋಹಿತ್‍ಭಾನುಪ್ರಕಾಶ್, ಅಮಿತಾ, ನಮ್ರತಾ, ಧನುಷ್ ಮುಂತಾದವರುನಟಿಸಿದ್ದಾರೆ. ಕತೆಅಭಿಜಿತ್, ಛಾಯಾಗ್ರಹಣಗುರುಪ್ರಸಾದ್.ಎಂ.ಜಿ, ನಾಯಕನ ಶಿಷ್ಯನಾಗಿದ್ದ ಅನೂಪ್‍ಗೌಡ ಅಕ್ಕನೊಂದಿಗೆ ಸೇರಿಕೊಂಡು ನಿರ್ಮಾಣ ಮಾಡಿರುವಚಿತ್ರವುಇದೇ ತಿಂಗಳು ತೆರೆಗೆ ಬರಲಿದೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
6/02/20

ಕೊಲೆಗಾರನ ಹುಡುಕಾಟದಲ್ಲಿರಮೇಶ್‍ಅರವಿಂದ್
ಥ್ರಿಲ್ಲರ್‍ಚಿತ್ರ‘ಶಿವಾಜಿ ಸುರತ್ಕಲ್’ ಚಿತ್ರದಟ್ರೈಲರ್‍ಬಿಡುಗಡೆಗೊಂಡಿತು. ನಿರ್ದೇಶಕ ಆಕಾಶ್‍ಶ್ರೀವತ್ಸ ಮಾತನಾಡಿ ದಿ ಕೇಸ್‍ಆಫ್‍ರಣಗಿರಿರಹಸ್ಯವೆಂದುಅಡಬರಹದಲ್ಲಿ ಹೇಳಲಾಗಿದೆ. ಶಿವಾಜಿ ಮತ್ತೋಂದು ಪದ ಪವರ್, ಸುರತ್ಕಲ್‍ಎಂದರೆ ಮೆದುಳು. ಇವರಡು ಸೇರಿಕೊಂಡು ಹೇಗೆ ಕೊಲೆಯನ್ನು ಭೇದಿಸುತ್ತಾರೆಎಂಬುದುಒಂದು ಏಳೆಯ ಕತೆಯಾಗಿದೆ.ನಾಲ್ಕು ಹಾಡುಗಳು ಇರಲಿದೆ.ಸಾಕಷ್ಟು ಕಲಾವಿದರು ನಟಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲವನ್ನು ತಿಳಿಸಲಾಗುವುದು ಎಂದರು.

ಹುಟ್ಟು ಹಬ್ಬಕ್ಕೆಕೃತಜ್ಘತೆ ಸಲ್ಲಿಸಿದವರಿಗೆ ಹೊಸ ಪದದಿಂದಥ್ಯಾಂಕ್ಸ್ ಹೇಳಿಋಣವನ್ನು ಹೇಗೆ ತೀರಿಸಬೇಕೆಂದು ತಿಳಿಯುತ್ತಿಲ್ಲ. ಅರ್ಥಪೂರ್ಣ, ಮನರಂಜನೆ, ಟಿವಿ ಷೋ, ಬರವಣಿಗೆ ಮೂಲಕ ಋಣತೀರಿಸಬಹುದು.ಖಿನ್ನತೆಯಲ್ಲಿ, ಗಂಭೀರವಾಗಿಕೊಲೆಗಾರನನ್ನುಯಾವರೀತಿಯಲ್ಲಿಕಂಡು ಹಿಡಿಯುತ್ತಾನೆಎನ್ನುವ ಪಾತ್ರವಾಗಿದೆ.ಒಬ್ಬ ನಟನ ಸ್ಟೇಜ್‍ದಲ್ಲಿಐದುಘಟ್ಟಗಳು ಬರುತ್ತದೆ. ಮೊದಲನಯದಾಗಿರಮೇಶ್‍ಯಾರುಅಂತ ಕೇಳುತ್ತಾರೆ, ಎರಡನೆಯದರಲ್ಲಿ ಈ ಪಾತ್ರರಮೇಶ್ ಮಾಡಿದ್ರೆಸೂಪರ್. ಮೂರನೆಯದುರಮೇಶ್‍ತರಹಯಾರಾದ್ರುಮಾಡಿದ್ರೆಚೆನ್ನಾಗಿರುತ್ತೆ. ನಾಲ್ಕನೆಯದುಚಿತ್ರದಲ್ಲಿಚಿಕ್ಕರಮೇಶ್‍ಇರಬೇಕಿತ್ತು.ಕೊನೆಯದಾಗಿ ಮತ್ತೆರಮೇಶ್‍ಯಾರುಅಂತ ಕೇಳ್ತಾರೆ. ಇಷ್ಟೇ ಕಲಾವಿದನಜೀವನ. ಇದರ ಒಳಗೆ ಎಷ್ಟು ಪ್ರೀತಿ ಗಳಿಸೋಕ್ಕೆ ಆಗುತ್ತೋ, ಎಷ್ಟು ಅಭಿಮಾನ ಸಂಪಾದಿಸ ಬೇಕಾಗುತ್ತೋ , ಎಷ್ಟು ಒಳ್ಳೆ ಕೆಲಸ ಮಾಡೋಕೆಆಗುತ್ತೋಅಂತ 32 ವರ್ಷದಿಂದಜೀವನ ಕಳೆಯುತ್ತಿದ್ದೇನೆ ಎಂದುರಮೇಶ್‍ಅರವಿಂದ್‍ತೂಕದ ಮಾತುಗಳಿಗೆ ವಿರಾಮ ಹಾಕಿದರು. ನಿರ್ಮಾಪಕಅನೂಪ್‍ಗೌಡ, ಪತ್ನಿ, ವಕೀಲೆ, ಸತ್ಯ ನ್ಯಾಯಕ್ಕೆ ಕೆಲಸ ಮಾಡುವ ನಾಯಕಿರಾಧಿಕಾನಾರಾಯಣ್. ಸೈಕ್ರಿಯಾಟಿಕ್ ಆಗಿ ಆರೋಹಿನಾರಾಯಣ್ ಮುಂತಾದವರು ಹಾಜರಿದ್ದರು.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
10/09/19


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore