HOME
CINEMA NEWS
GALLERY
TV NEWS
REVIEWS
CONTACT US
ಶ್ರೀತಲ್ ಶೆಟ್ಟಿ ಹುಟ್ಟುಹಬ್ಬಕ್ಕೆ ಫಸ್ಟ್ ಲುಕ್ ಉಡುಗೊರೆ
ಆರ್‍ಜೆ ಎಂದು ಗುರುತಿಸಿಕೊಂಡಿದ್ದ ಶೀತಲ್‍ಶೆಟ್ಟಿ ಒಂದು ಚಿತ್ರದಲ್ಲಿ ಅಭಿನಯಿಸಿದ್ದು, ಎರಡನೆ ಚಿತ್ರ ‘ಪತಿಬೇಕು ಡಾಟ್.ಕಾಂ’ ಚಿತ್ರದ ಫಸ್ಟ್ ಲುಕ್‍ನ್ನು ತಂಡವು ಅವರ ಹುಟ್ಟುಹಬ್ಬಕ್ಕೆಂದು ಬಿಡುಗಡೆ ಮಾಡಿದೆ. ದೊಗಲೆ ಚೆಕ್ಸ್ ಟೀಶರ್ಟ್‍ನೊಂದಿಗೆ ಬಾಗಿಲ ಬಳಿ ನಿಂತುಕೊಂಡು ಸಂತಸದಿಂದ ಮೇಲೆ ನೋಡುತ್ತಿರುವ ಶೀತಲ್‍ಶೆಟ್ಟಿ ಲುಕ್ ವೈರಲ್ ಆಗಿ, ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ತರ್ಲೆನನ್ಮಕ್ಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ರಾಕೇಶ್ ಕತೆ ಬರೆದು ನಿರ್ದೇಶನ ಜೊತೆಗೆ ನಿರ್ಮಾಣದಲ್ಲಿ ಪಾಲುದಾರರು. ಸಂಗೀತ ಕೌಶಿಕ್‍ಹರ್ಷ, ಸಂಕಲನ ವಿಜಯ್.ಎಂ.ಕುಮಾರ್, ಛಾಯಗ್ರಹಣ ಯೋಗಿ, ಹಿನ್ನಲೆ ಸಂಗೀತ ಹರ್ಷವರ್ಧನರಾಜು ಅವರದಾಗಿದೆ. ಜೈ ಮಾರುತಿ ಮೂವೀಸ್ ಮೂಲಕ ಶ್ರೀನಿವಾಸ್-ಮಂಜುನಾಥ್ ಸಿನಿಮಾ ಕೃಷಿಗೆ ಹಣ ಹೂಡಿರುವುದು ಹೊಸ ಅನುಭವ.
ಸಿನಿ ಸರ್ಕಲ್.ಇನ್ ನ್ಯೂಸ್
11/06/18


For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore