HOME
CINEMA NEWS
GALLERY
TV NEWS
REVIEWS
CONTACT US
ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರ
ಕೆಲವು ಚಿತ್ರಗಳು ಇಂತಹ ವರ್ಗದವರಿಗೆಂದೆ ಸಿದ್ದಪಡಿಸುತ್ತಾರೆ. ಅಂತಹ ಸಾಲಿಗೆ ‘ಶತಾಯ ಗತಾಯ’ ಸಿನಿಮಾ ಸೇರಿಕೊಳ್ಳುತ್ತದೆ. ಶೀರ್ಷಿಕೆ ಹೇಳುವಂತೆ ಶಿಳ್ಳೆ ಹಾಕುವಂತಹ ಸಾಹಸ, ಮೈ ನಿಮಿರೇಳುವ ಐಟಂ ಸಾಂಗ್, ನಗುಭರಿಸುವ ಹಾಸ್ಯ ದೃಶ್ಯಗಳು, ಎರಡರ್ಥದ ಸಂಭಾಷಣೆಗಳು ಇವೆಲ್ಲದಕ್ಕೂ ಪ್ರಾಮುಖ್ಯತೆ ನೀಡಿರುವ ಚಿತ್ರವಾಗಿದ್ದರಿಂದ ಸಹಜವಾಗಿ ಆ ವರ್ಗದವರು ಇಷ್ಟಪಡುತ್ತಾರೆ. ಕತೆಯಲ್ಲೊಂದು ನಾಯಕನ ತಾತನ ಪಾತ್ರವು ಕತೆಯನ್ನು ಮರೆತು ಬೇರೆ ಏನೆನೋ ಆಗುತ್ತಿದೆಯೆಲ್ಲಾ ಎಂದು ನೆನಪಿಸುತ್ತದೆ. ಹಾಗೇ ನೋಡಿದರೆ ಸಿನಿಮಾವು ಇದರಲ್ಲೆ ಅಡಗಿದೆ. ತನ್ನ ತಾಯಿಗೆ ಅನ್ಯಾಯ ಮಾಡಿದ ಕುಟುಂಬವೊಂದರ ವಿರುದ್ದ ತೊಡೆತಟ್ಟಿ ನಿಲ್ಲುವ ನಾಯಕ ಮತ್ತು ಆತನ ಗುರಿ ಒಂದು ಏಳೆಯ ಲೈನ್ ಆಗಿದೆ. ಇದನ್ನು ಮತ್ತಷ್ಟು ಗಂಭೀರವಾಗಿ ಯೋಚಿಸಿ ಚಿತ್ರಕತೆ ಮಾಡಿದ್ದರೆ ಒಳ್ಳೆಯ ಥ್ರಿಲ್ಲರ್ ಚಿತ್ರವಾಗುವ ಅವಕಾಶವನ್ನು ನಿರ್ದೇಶಕರು ಮಾಡಿಲ್ಲ. ಕ್ಲೈಮಾಕ್ಸ್‍ನಲ್ಲಿ ಬರುವ ತಿರುವು ಚೆನ್ನಾಗಿದ್ದರೂ, ಮಾಸ್ ಜನರಿಗೆ ಇಷ್ಟವಾಗಲೆಂದು ಅದರ ಕಡೆ ಹೆಚ್ಚು ಗಮನ ಕೊಡದೆ ಇರುವುದು ಕಂಡು ಬರುತ್ತದೆ.

ನಾಯಕ ರಘುರಾಮಪ್ಪ ಕಟ್ಟು ಮಸ್ತಾದ ದೇಹವನ್ನು ತೋರಿಸಿ, ಆಕ್ಷನ್ ಸೀನ್‍ದಲ್ಲಿ ಮಿಂಚಿದ್ದರೆ ಭಾವನಾತ್ಮಕವಾಗಿ ಅಭಿನಯಿಸಲು ಸೈಕೆಲ್ ಹೊಡೆದಿದ್ದಾರೆ. ನಾಯಕಿ ಸೋನಿಕಾಗೌಡ ಹೆಚ್ಚು ಸ್ಕೋಪ್ ಸಿಗದೆ ಪಾಲಿಗೆ ಬಂದದ್ದು ಪಂಚಾಮೃತ ಎನ್ನುವಂತೆ ತನ್ನ ಕೆಲಸವನ್ನು ನಿಭಾಯಿಸಿದ್ದಾರೆ. ನಗಿಸಲು ಎಂ.ಎಸ್.ಉಮೇಶ್, ಕುರಿಪ್ರತಾಪ್ ನಟನೆ ಇದೆ. ರವಿನಂದನ್ ಜೈನ್ ಸಂಗೀತದಲ್ಲಿ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ರಚನೆ, ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ಸಂದೀಪ್‍ಗೌಡ ಖಳನಾಯಕನ ಸಹಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಂಚಿತ್ ಫಿಲಿಂಸ್‍ನ ವೆಂಕಟ್‍ಗೌಡ ವಿತರಣೆ ಮಾಡಿರುವ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ.
ಸಿನಿ ಸರ್ಕಲ್.ಇನ್ ವಿಮರ್ಶೆ
9/06/18
ಜೂನ್ 8ರಂದು ಶತಾಯ ಗತಾಯ
ಹೊಸಬರ ‘ಶತಾಯ ಗತಾಯ’ ಚಿತ್ರವು ಸೆಸ್ಪನ್ಸ್, ಥ್ರಿಲ್ಲರ್ ಕತೆಯಾಗಿದೆ. ಎಲ್ಲಾ ಸಿನಿಮಾದಲ್ಲಿ ತಾಯಿ-ಮಗನ ಬಾಂದವ್ಯ, ಅಮ್ಮನ ಸೆಂಟಿಮೆಂಟ್ ಇರಲಿದೆ ಎಂದು ಹೇಳಿಕೊಳ್ಳುವುದುಂಟು. ಆದರೆ ಇದರಲ್ಲಿ ಸೆಂಟಿಮೆಂಟ್ ಇಲ್ಲದೆ ಆಕೆಯ ವಿರುದ್ದ ಮಗ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ವಿಶೇಷ. ಹಳ್ಳಿಯಲ್ಲಿ ನಡೆಯುವ ಕತೆಯಾಗಿದ್ದರಿಂದ ಹಿರಿಸಾವೆ, ಬೆಂಗಳೂರು ತಟಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರೇಕ್ಷಕನಿಗೆ ಒಂದು ಟಿಕೆಟ್ ಕೊಂಡರೆ ಎರಡು ಕತೆಗಳನ್ನು ನೋಡಿದಂತೆ ಭಾಸವಾಗುತ್ತದಂತೆ. ರವಿನಂದನ್ ಜೈನ್ ಸಂಗೀತದಲ್ಲಿ ಎರಡು ಹಾಡುಗಳು ಹಿಟ್ ಆಗಿರುವುದು ಪ್ಲಸ್ ಪಾಯಿಂಟ್.

ಜಸ್ಟ್ ಪಾಸ್ ಚಿತ್ರದಲ್ಲಿ ನಟಿಸಿದ್ದ ರಘುರಾಮಪ್ಪ ಎಂಟು ವರ್ಷಗಳ ನಂತರ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಆಖಾಡಕ್ಕೆ ಇಳಿದಿದ್ದಾರೆ. ಸೋನಿಕಾಗೌಡ ನಾಯಕಿಯಾಗಿ ಹೊಸ ಅನುಭವ. ತಾಯಿ ಪಾತ್ರಕ್ಕೆ ಮಂಜುಳರೆಡ್ಡಿ, ಖಳನಟನಾಗಿ ಶಿವುಪ್ರದೀಪ್ ನಟನೆ ಇದೆ. ಡಿಪ್ಲೋಮ್ ಮುಗಿಸಿ ಟ್ರಾನ್ಸ್‍ರುವ ಸಂದೀಪ್‍ಗೌಡ ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವದಿಂದ ಚಿತ್ರಕ್ಕೆ ಕತೆ,ಸಾಹಿತ್ಯ, ನಿರ್ದೇಶನ, ನಿರ್ಮಾಣ ಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಒಂದು ಕೋಟಿಯಲ್ಲಿ ಸಿದ್ದಗೊಂಡಿರುವ ಚಿತ್ರವನ್ನು ಸಚಿತ್ ಫಿಲಿಂಸ್‍ನ ವೆಂಕಟ್‍ಗೌಡ ಸುಮಾರು 80 ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
3/06/18

ಕಲಾವಿದರಿಗೆ ವಯಸ್ಸು ಆಗೋಲ್ಲ - ಶ್ರೀಮುರಳಿ
ಸಿನಿಮಾಮೋಹಿಗಳು ಕಲಾವಿದರ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಇವರುಗಳನ್ನು ನೋಡುತ್ತಾ ಅವರು ಕನಸು ಕಾಣ್ತಾರೆ. ಅದಕ್ಕೆ ಕಲಾವಿದರಿಗೆ ವಯಸ್ಸು ಆಗುವುದಿಲ್ಲವೆಂದು ಮಫ್ತಿಯ ಯಶಸ್ಸಿನ ಖುಷಿ ಕಾಣುತ್ತಿರುವ ಶ್ರೀಮುರಳಿ ಹೇಳಲು ‘ಶತಾಯ ಗತಾಯ’ ವೇದಿಕೆ ಆಗಿತ್ತು. ಚಿತ್ರದಲ್ಲಿ ಖಳನಟನಾಗಿ ಹಿರಿಯ ನಾಗರೀಕರು ಹೊಸದಾಗಿ ಅಭಿನಯಿಸಿರುವುದರಿಂದ ನಿರೂಪಕಿ ಇವರ ಬಗ್ಗೆ ಹೇಳುತ್ತಾ ಇಂತ ವಯಸ್ಸಿನಲ್ಲಿ ನಟಿಸಿದ್ದಾರೆ ಎಂದು ಹೇಳಿದ್ದಕ್ಕೆ ಮೇಲಿನ ಮಾತುಗಳನ್ನು ಹೇಳಲು ಕಾರಣವಾಗಿತ್ತು. ಮಾತು ಮುಂದು ವರಸಿದ ಮುರಳಿ ಮಾಧ್ಯಮದವರು ಪ್ರೀತಿ ತೋರಿಸಿರುವುದರಿಂದಲೇ ನಾವುಗಳು ಇಲ್ಲಿಯ ತನಕ ಬಂದಿರುವುದು. ತಪ್ಪು ಮಾಡಿದಾಗ ಬುದ್ದಿ ಹೇಳಿದ್ದಾರೆ. ಸಿನಿಮಾ ಕೃಷಿಗೆ ಹಣ ಹೊಡಿರುವ ನಿರ್ಮಾಪಕರಿಗೆ ಹಾಕಿದ ಬಂಡವಾಳ ವಾಪಸ್ಸು ಬರಲೆಂದು ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿ ಶುಭಹಾರೈಸಿದರು. ಇದಕ್ಕೂ ಮುನ್ನ ಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಪಾಲುದಾರರಾಗಿರುವ ಸಂದೀಪ್‍ಗೌಡ ಚಿತ್ರದ ಕುರಿತು ಈ ರೀತಿ ಹೇಳಿದರು:

ಮಾಸ್ ಸಿನಿಮಾವಾಗಿದೆ. ಸೇಡಿನ ಕುರಿತ ಕಥನವು ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯಲ್ಲಿ ಹೋಗುತ್ತದೆ. ಹಾಸನದ ಗಿರಿಸಾವೆಯಲ್ಲಿ ಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ. ಎರಡು ಸಾಹಸ ಇರಲಿದೆ ಎಂದರು. ನಾಯಕ ರಘುರಾಮಪ್ಪ, ನಾಯಕಿ ಸೋನುಗೌಡ ಖಳನಟನಾಗಿ ಅಭಿನಯಿಸಿರುವ ಶಿವಪ್ರದೀಪ್ ಇವರಿಗೆ ನಟನೆ ಹೊಸ ಅನುಭವವಾಗಿದೆ ಎಂಬುದು ಒಕ್ಕರೂಲ ನುಡಿಯಾಗಿತ್ತು. ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ರವಿನಂದನ್‍ಜೈನ್, ಸಾಹಸ ಕೌರವವೆಂಕಟೇಶ್, ಆನಂದ್ ಆಡಿಯೋದ ಆನಂದ್ ಸಿಡಿ ಬಿಡುಗಡೆಗೆ ಸಾಕ್ಷಿಯಾಗಿದ್ದರು. ಕುಂಚ ಕಲಾವಿದ ಜೋಸಫ್‍ರವರು ಮುರಳಿರವರ ಭಾವಚಿತ್ರವನ್ನು ಕಪ್ಪು ಮಣ ್ಣನಲ್ಲಿ ರಚಿಸಿದ್ದು ಚೆಂದ ಕಾಣ ಸಿತು. ಪ್ರಚಾರದ ಮೊದಲ ಹಂತವಾಗಿ ಟ್ರೈಲರ್‍ರನ್ನು ತೋರಿಸಲಾಗಿ, ಮುಂದಿನ ತಿಂಗಳಲ್ಲಿ ತೆರೆಕಾಣುವ ಸಾದ್ಯತೆ ಇದೆ.
-8/01/18
For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore

\