HOME
CINEMA NEWS
GALLERY
TV NEWS
REVIEWS
CONTACT US
ತರುಣ್ ಟಾಕೀಸ್ ಚಿತ್ರಕ್ಕೆ ಶರಣ್ ನಾಯಕ
ತರುಣ್ ಟಾಕೀಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಶ್ರೀಮತಿ ಮಾನಸ ತರುಣ್ ನಿರ್ಮಿಸುತ್ತಿರುವ `ಪೆÇ್ರಡಕ್ಷನ್ ನಂ 3` ಚಿತ್ರಕ್ಕೆ ಅಲೆಮಾರಿ ಸಂತು ಎಂದೆ ಖ್ಯಾತರಾಗಿರುವ ಹರಿಸಂತು ಶರಣ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ತರುಣ್‍ಸುಧೀರ್, ಛಾಯಗ್ರಹಣ ಗುರುಪ್ರಶಾಂತ್‍ರೈ ಸಂಗೀತ ಅರ್ಜುನ್‍ಜನ್ಯ, ಸಂಕಲನ ಕೆ.ಎಂ.ಪ್ರಕಾಶ್, ನೃತ್ಯ ಭೂಷಣ್ ಹಾಗೂ ಮೋಹನ್.ಬಿ.ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಕತೆಗೆ ಪೂರಕವಾಗಿ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಒಂದು ತಿಂಗಳಿನಿಂದ ಬೃಹತ್ ಮನೆ ಸೆಟ್ ಸಿದ್ದಗೊಳ್ಳುತ್ತಿದೆ.

ತಾರಬಳಗದಲ್ಲಿ ರವಿಶಂಕರ್, ಸಾಧುಕೋಕಿಲ, ತಬಲನಾಣ , ಪ್ರಶಾಂತ್‍ಸಿದ್ದಿ, ಅರಸು, ಕಲ್ಯಾಣ , ಅರುಣ ಬಾಲರಾಜ್, ಸುಂದರ್, ನಾಜರ್ ಮುಂತಾದವರ ನಟನೆ ಇದೆ. ಮುಹೂರ್ತ ಸಮಾರಂಭ ಇತ್ತೀಚೆಗೆ ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯಿರುವ ಗಣೇಶನ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಶ್ರೀಮತಿ ಮಾನಸತರುಣ್ ಆರಂಭ ಫಲಕ ತೋರಿದರು. ನಿರ್ದೇಶಕರ ತಾಯಿ ಪ್ರೇಮ ಕ್ಯಾಮೆರಾ ಚಾಲನೆ ಮಾಡಿದರು.
ಸಿನಿ ಸರ್ಕಲ್.ಇನ್ ನ್ಯೂಸ್
10/03/18

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore