HOME
CINEMA NEWS
GALLERY
TV NEWS
REVIEWS
CONTACT US
ಶಂಖನಾದ ಆಲಿಸಲು ಸಿದ್ದರಾಗಿ
ವಿನೂತನ ಚಿತ್ರ ‘ಶಂಖನಾದ’ ಕತೆಯಲ್ಲಿ ಒಳ್ಳೆಯವರಿಗೆ ಒಳ್ಳೆಯದು ಯಾಕೆ ಆಗುವುದಿಲ್ಲ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದು ಆಗೋದಿಲ್ಲ. ಒಳ್ಳೆದನ್ನು ಬಯಸಬೇಕು ಎನ್ನುವಾದದರೆ ಏನು ಮಾಢಬೇಕು. ಅದಕ್ಕಾಗಿ ಶಂಖ ಊದಿದರೆ ಏನಾಗುತ್ತದೆ ಎಂಬುದು ಸಿನಿಮಾದ ತಿರುಳಾಗಿದೆ. ಶೇಕಡ 80ರಷ್ಟು ಕಥನವು 200 ವರ್ಷ ಹಳೆಯದಾದ ಮನೆಯಲ್ಲಿ ಬೆಳಿಗ್ಗೆಯಿಂದ ಸಾಯಂಕಲದವರೆಗೆ ಥ್ರಿಲ್ಲರ್, ಸೆಸ್ಪನ್ಸ್ ಮೂಲಕ ನಡೆಯುವುದು ವಿಶೇಷವಾಗಿದೆ. ನಾಲ್ಕು ಅಪರಿಚಿತ ಪಾತ್ರಗಳು ಬೇರೆ ರೀತಿಯಲ್ಲಿ ಮೆನಯೊಳಗೆ ಹೋದಾಗ ಅಲ್ಲಿ ನಡೆಯುವ ಪ್ರಸಂಗಗಳು ಹೈಲೈಟ್ ಆಗಿದೆ. ಕಾರ್ಯನಿರ್ವಾಹಕ ನಿರ್ಮಾಪಕರಾಗಿರುವ ಶಹಪುರದ ಶಾಂತರೆಡ್ಡಿನಾಗಣ್ಣಗೌಡ ಪಾಟೀಲ್ ನಾಯಕನಾಗಿ ಹೊಸ ಅನುಭವ. ನಯನಾಚೌಹಾಣ್ ನಾಯಕಿಯಾಗಿ ಮೂರನೆ ಅವಕಾಶ. ಇವರೊಂದಿಗೆ ಶ್ರೀ ಉಪನಾಯಕ ಮತ್ತು ಹಿರಿಯ ರಂಗಭೂಮಿ ಕಲಾವಿದ ನಂಶ್ರೀನಿವಾಸ್ ಉತ್ತರ ಕರ್ನಾಟಕದ ಕಡಕ್ ಭಾಷೆಯ ಡೈಲಾಗ್ ಹೇಳುವುದರೊಂದಿಗೆ ಖಳನಟನಾಗಿ ಪರಿಚಯವಾಗಿದ್ದಾರೆ.

ಬಾಗಲಕೋಟೆ, ಗುಳೇದಗುಡ್ಡ, ಗದಗ, ಚಿಕ್ಕಮಗಳೂರು ತಟಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕತೆ,ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವ ವಿಶ್ವನಾಥಬಸಪ್ಪಕಾಳಗಿ ಇವರಿಗೆ ಮೊದಲ ಚಿತ್ರವಾಗಿದೆ. ಮನ್ವರ್ಷಿ, ವಿಶ್ವನಾಥ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಸಿದ್ದಾರೆ. ಛಾಯಗ್ರಹಣ ನಕುಲ್.ಟಿ.ದಂಡೆಕರ್-ಮಂಜುನಾಥ್ ಜಗದೀಶ್‍ಗೌಡ, ಸಂಕಲನ ಸತೀಶ್‍ಚಂದ್ರಯ್ಯ, ನೃತ್ಯ ಹೈಟ್ ಮಂಜು ಅವರದಾಗಿದೆ. ಅಳಿಯ ನಾಯಕನಾಗುವ ಸಲುವಾಗಿ ಸುಮಾರು ಒಂದೂವರೆ ಕೋಟಿ ಖರ್ಚು ಮಾಡಿರುವುದು ವಿಜಯರೆಡ್ಡಿ.ಎಸ್.ಚೌದ್ರಿ. ಇದೇ ಶುಕ್ರವಾರದಂದು ರಾಜ್ಯದ್ಯಂತ ಶಂಖ ಊದಲಿದೆ.
ಸಿನಿ ಸರ್ಕಲ್.ಇನ್ ನ್ಯೂಸ್
-18/02/18

ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
-13/02/18

ಒಳ್ಳೆ ಕೆಲಸಕ್ಕೆ ಶಂಖನಾದ ಅವಶ್ಯಕ
ದೇವರ ಕೈಂಕರ್ಯ ಮಾಡುವಾಗ ಶಂಖ ಊದುವುದರೊಂದಿಗೆ ಪೂಜೆ ಕೊನೆಗೊಳ್ಳುತ್ತದೆ. ಇದನ್ನು ಹೇಳಲು ಪೀಠಿಕೆ ಇದೆ. ಉತ್ತರ ಕರ್ನಾಟಕದ ಗುಲ್ಬರ್ಗಾ ಕಡೆಯ ಯುವಕರು ಸೇರಿಕೊಂಡು ನಿರ್ಮಾಣ ಮಾಡಿರುವ ಸಿನಿಮಾಕ್ಕೆ ‘ಶಂಖನಾದ’ ಶೀರ್ಷಿಕೆಯನ್ನು ಇಡಲಾಗಿದೆ. ಕತೆಯ ಕುರಿತು ಹೇಳುವುದಾದರೆ ಒಳ್ಳೇದು ಮಾಡೋರಿಗೆ ಒಳ್ಳೆಯದು ಯಾಕೆ ಆಗುವುದಿಲ್ಲ. ಕೆಟ್ಟದ್ದನ್ನು ಮಾಡುವವರಿಗೆ ಕೆಟ್ಟದ್ದು ಆಗೋಲ್ಲ. ಒಳ್ಳೆದು ಮಾಡಲಾಗದೆ ಸುಳ್ಳನ್ನು ಹೇಳುತ್ತಾ ಜೀವನ ಸಾಗಿಸುತ್ತಾರೆ. ಸಾವು ಸಮೀಪ ಬಂದಾಗ ಸತ್ಯ ಹೊರಬರುತ್ತದೆ. ಇಂತಹುದೆ ಬದುಕು-ಸಾವು ಪರಿಸ್ಥಿತಿಗಳ ವಿಷಯಗಳನ್ನು ತೆಗೆದುಕೊಂಡಿದ್ದಾರೆ. ಒಳ್ಳೇದು ಮಾಡಬೇಕಾದರೆ ಏನು ಮಾಡುಬೇಕು ಅಂತ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅದನ್ನು ತಿಳಿದುಕೊಳ್ಳಲು ಚಿತ್ರಮಂದಿರಕ್ಕೆ ಬರಬೇಕಂತೆ. ಎಲ್ಲಾ ಸಿನಿಮಾಗಳಲ್ಲಿ ಖಳನಟ ಕೇಡು ಬಯಸುತ್ತಾನೆ. ಆದರೆ ಇದರಲ್ಲಿ ಆತ ಖಳನಾಗಿದ್ದರೂ ಅವನು ಮಾಡುವ ಕೆಲಸ ಸಮಾಜಕ್ಕೆ ಒಳ್ಳೆ ಸಂದೇಶ ಹೇಳುವುದು ವಿಶೇಷವಾಗಿದೆ. ಹಳೇ ಶಂಖನಾದಕ್ಕೂ ಈಗಿನದಕ್ಕೂ ಸಂಬಂದವಿಲ್ಲವೆಂದು ತಂಡದಿಂದ ಸ್ಪಷ್ಟನೆ ನೀಡಿದ್ದಾರೆ. ಮನ್ವರ್ಷಿ ಮತ್ತು ನಿರ್ದೇಶಕರು ಬರೆದಿರುವ ಎರಡು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜಿಸಿದ್ದಾರೆ.

ಸಣ್ಣ ಕವನಗಳನ್ನು ಬರೆದು, ಸಹ ನಿರ್ದೇಶನ ಮಾಡಿದ ಅನುಭವ ಇರುವ ವಿಶ್ವನಾಥಬಸಪ್ಪ ಕಾಳಗಿ ಕತೆ,ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಶಾಂತರೆಡ್ಡಿನಾಗಣ್ಣಗೌಡ ಪಾಟೀಲ್ ಮತ್ತು ಶ್ರೀಕಿಕ್ ನಾಯಕರುಗಳು. ಇವರಿಗೆ ಜೋಡಿಯಾಗಿ ಬಳ್ಳಾರಿ ದರ್ಬಾರ್‍ದಲ್ಲಿ ನಟಿಸಿದ್ದ ನಯನ ಹಾಗೂ ನವನಟಿ ರಶ್ಮಿತಾ ನಾಯಕಿಯರು. ಖಳನಾಗಿ ನಮ್‍ಶ್ರೀನಿವಾಸ್ ಅಭಿನಯಿಸಿದ್ದಾರೆ. ಒಟ್ಟಾರೆ ಎಂಟು ಪಾತ್ರಗಳು ಇರಲಿದ್ದು, ನುರಿತ ಕಲಾವಿದರನ್ನು ಆಯ್ಕೆ ಮಾಡಿಕೊಂಡಲ್ಲಿ ಪ್ರೇಕ್ಷಕರು ಹೊಸಬರ ಅಭಿನಯವನ್ನು ನೋಡುವುದಿಲ್ಲವೆಂಬ ಅನುಮಾನದಿಂದ ನಿರ್ದೇಶಕರು ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಮ್ಮಿನಗಡ, ಗುಳೇದಗುಡ್ಡ, ಗಜೇಂದ್ರಗಡ, ಚಿಕ್ಕಮಗಳೂರು ಮತ್ತು 200 ವರ್ಷ ಹಳೆಯದಾದ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕಂಟ್ರಾಕ್ಟರ್ ಆಗಿರುವ ವಿಜಯ್‍ರೆಡ್ಡಿ.ಎಸ್.ಚೌದ್ರಿ, ಸೋದರಳಿಯ ಶಾಂತರೆಡ್ಡಿ ಸಲುವಾಗಿ ನಿರ್ಮಾಣ ಮಾಡಿರುವ ಸಿನಿಮಾವು ಸದ್ಯ ಸೆನ್ಸಾರ್ ಅಂಗಳದಲ್ಲಿ ಇದೆ.
-13/10/17

ನೂರು ದಿನವಲ್ಲ, ಜನ ಮೆಚ್ಚಿದರೆ ಸಕ್ಸಸ್ - ಸುದೀಪ್
ಒಂದು ಚಿತ್ರ ನೂರು ದಿನ ಪ್ರದರ್ಶನ ಕಂಡರೆ ಅದನ್ನು ಹಿಟ್ ಅಂತ ಹೇಳಲು ಬರುವುದಿಲ್ಲ. ಜನ ಮೆಚ್ಚಿದರೆ ಸಕ್ಸಸ್ ಅಂತ ಕರೆಯಬಹುದು ಎಂಬುದಾಗಿ ಸುದೀಪ್ ‘ಶಂಖನಾದ’ ಚಿತ್ರದ ಧ್ವನಿಸಾಂದ್ರಿಕೆ ಲೋರ್ಕಾಪಣೆ ಮಾಡಿ ಮಾತನಾಡುತ್ತಿದ್ದರು. ಹೊಸಬರಿಗೆ ಮೊದಲಿನಿಂದಲೂ ಪ್ರೋತ್ಸಾಹ ಕೊಡುತ್ತಾ ಬಂದಿರುವ ಮಾಣ ಕ್ಯ ಎಂದಿನಂತೆ ಚಿತ್ರಕ್ಕೆ ಶುಭ ಹಾರೈಸಲು ಆಗಮಿಸಿದ್ದರು. ಸದ್ಯದಲ್ಲೆ ಬಿಗ್‍ಬಾಸ್ ಶುರುವಾಗಲಿರುವುದರಿಂದ ಅದನ್ನು ತಪ್ಪದೆ ನೋಡಿ ಅಂತ ಮಾತು ಶುರುಮಾಡಿ, ಪ್ರಾರಂಭದಿಂದಲೂ ಮಾಧ್ಯಮದವರೊಂದಿಗೆ ವಿಶೇಷ ಸಂಬಂದವನ್ನು ಇಟ್ಟುಕೊಂಡಿದ್ದೇನೆ. ಇಲ್ಲಿಗೆ ಬಂದ ಮೇಲೆ ಎಲ್ಲರ ಪರಿಚಯವಾಯಿತು. ತಂಡದಲ್ಲಿ ಮುಗ್ದತೆ ಎದ್ದು ಕಾಣುತ್ತದೆ. ಚಿತ್ರಮಂದಿರ ಕಡಿಮೆ ಇದ್ದರೂ ಇದಕ್ಕಾಗಿ ಹೋರಾಟ ಮಾಡಿ ಟಾಕೀಸ್ ಕೊಡಿಸುತ್ತೇವೆಂದು ರಕ್ಷಣಾ ವೇದಿಕೆ ಮಖ್ಯಸ್ಥರು ಮಾತನಾಡಿದ್ದಾರೆ. ಹಾಗಂತ ಮಾಲೀಕರಿಗೆ ದಮ್‍ಕಿ ಹಾಕಬೇಡಿ. ಇದರಲ್ಲಿ ನನ್ನದು ಸ್ವಾರ್ಥವಿದೆ. ನನ್ನ ಕಡೆಯಿಂದ ಒಳ್ಳೇದು ಆಗಲಿ ಅಂತ ಹೇಳಬಹುದಷ್ಟೇ ಎಂದರು. ಇದಕ್ಕೂ ಮುನ್ನ ತಂಡವು ವೇದಿಕೆಗೆ ಬಂದು ಮಾಹಿತಿಗಳನ್ನು ಹಂಚಿಕೊಂಡಿತು.

ಅಪ್ಪ ನಟಿಸಿದ ಚಿತ್ರದ ಹೆಸರಿನ ಮೇಲೆ ಗೀತೆ ಹಾಡಿರುವುದು ಕಾಕತಾಳೀಯ. ಸಂಗೀತ ನಿರ್ದೇಶಕರು ನನಗಂತಲೇ ಒಂದು ಹಾಡನ್ನು ಕಾಯ್ದಿರಿಸಿರುತ್ತಾರೆ ಎಂಬ ಮಾತು ಗಾಯಕಿ ಮಾನಸಹೊಳ್ಳ ಅವರಿಂದ ಕೇಳಿಬಂತು. ಹದಿಮೂರು ವರ್ಷದ ಕನಸು ಇಂದು ನಾಯಕನಾಗಿದ್ದೇನೆ. ಸುದೀಪ್ ಸರ್ ಬಂದಿದ್ದು ಹೊಸ ಚೈತನ್ಯ ಬಂದಂತೆ ಆಗಿದೆ. ಅದು ನಮ್ಮ ಸುಕೃತ. ಥ್ರಿಲ್ಲರ್, ಕುತೂಹಲ ಕತೆಯಲ್ಲಿ ಒಳ್ಳೇದು ಮಾಡೋರಿಗೆ ಒಳ್ಳೆಯದು ಆಗೋಲ್ಲ. ಕೆಟ್ಟದ್ದು ಮಾಡುವವರಿಗೆ ಕೆಟ್ಟದ್ದು ಆಗುವುದಿಲ್ಲ. ಇಂತಹುದೆ ಅಂಶಗಳು ಚಿತ್ರದಲ್ಲಿ ಇದೆ. ಕತೆಯೇ ನಾಯಕ, ಚಿತ್ರಕತೆ ನಾಯಕಿ. ಮಾಮ ನನಗೋಸ್ಕರ ಚಿತ್ರ ಮಾಡಿದ್ದಾರೆ. ಆದರಿಂದಲೇ ಕಾರ್ಯಕಾರಿ ನಿರ್ಮಾಪಕನ ಕೆಲಸ ಮಾಡಲಾಯಿತು ಅಂತ ಮಾಹಿತಿ ಬಿಚ್ಚಿಟ್ಟರು ನಾಯಕ ಶಾಂತರೆಡ್ಡಿ ನಾಗಣ್ಣಗೌಡಪಾಟೀಲ್. ನವರಸಗಳು ತುಂಬಿರುವ ಪಾತ್ರವೆಂದು ಪರಿಚಯ ಮಾಡಿಕೊಂಡರು ನಾಯಕಿ ನಯನ. ಉಪ ನಾಯಕ,ನಾಯಕಿಗೆ ಮೈಕ್ ಸಿಗಲಿಲ್ಲ. ಶಂಖನಾದ ಚಿತ್ರದಲ್ಲಿ ದಾಸಯ್ಯನ ಪಾತ್ರ ನೀಡಿದಾಗ ಬೇಸರವಾಯಿತು. ಅಲ್ಲದೆ ಎ.ಎಸ್.ಮೂರ್ತಿರವರ ಬೈಗುಳದ ಸಂಭಾಷಣೆಗಳನ್ನು ಹೇಳುವಾಗ ಇಂತಹ ಚಿತ್ರ ನೋಡುತ್ತಾರಾ? ಎಂಬುದರ ಗೊಂದಲ್ಲಿ ಇದ್ದೆ. ಮುಂದೆ ಯಶಸ್ವಿಯಾಗಿ, ಪ್ರಶಸ್ತಿ ಬಂದು ಈಗ ಶಂಖನಾದ ಅರವಿಂದ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದೇನೆ ಎಂದರು. ಯುವಕರ ತಂಡಕ್ಕೆ ಸುದೀಪ್ ಪ್ರೋತ್ಸಾಹ ಕೊಡೋದರಲ್ಲಿ ಮೊದಲಿಗರು. ನಾವುಗಳು ಉತ್ತರ ಕರ್ನಾಟಕದವರು. ಸಿನಿಮಾ ಜಾಸ್ತಿ ನೋಡುತ್ತೇವೆ. ಮಾಡುವುದಿಲ್ಲ. ಈ ತಂಡವು ನಮ್ಮ ಭಾಗದಿಂದ ಬಂದವರಾಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದು ಶಾಸಕ ರಾಜುಗೌಡ. ನಿರ್ಮಾಪಕ ವಿಜಯರೆಡ್ಡಿ.ಎಸ್.ಚೌದ್ರಿ ಮಾನಿಯಾಗಿದ್ದು ಎಲ್ಲರ ಮಾತುಗಳನ್ನು ತದೇಕಚಿತ್ತದಿಂದ ಕೇಳಿಕೊಳ್ಳುತ್ತಿದ್ದರು. ಸಂಗೀತ ನಿರ್ದೇಶಕ ವಿನುಮನಸು, ರಕ್ಷಣಾ ವೇದಿಕೆಯ ಬಸವರಾಜು ಚುಟುಕು ಮಾತಿಗೆ ಮೀಸಲಿಟ್ಟರು. ಎಲ್‍ಇಡಿ ಪರದೆ ಮೇಲೆ ಬಿತ್ತರ ಗೊಂಡ ಹಾಡಿನಲ್ಲಿ ಸುಂದರ ತಾಣವನ್ನು ಸೆರೆಹಿಡಿದಿರುವ ನಕುಲ.ಡಿ.ದಂಡಿಕಲ್ ಕೆಲಸವನ್ನು ಸುದೀಪ್ ಶ್ಲಾಘಿಸಿದರು.
-13/10/17

For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore