HOME
CINEMA NEWS
GALLERY
TV NEWS
REVIEWS
CONTACT US
ಬಿಡುಗಡೆಗೊಂಡ ಶೈಬ್ಯ ಹಾಡುಗಳು
ಹೊಸಬರ ‘ಶೈಬ್ಯ’ ಚಿತ್ರವು ಬ್ಲಾಕ್ ಮ್ಯಾಜಿಕ್ ಪಾಯಿಂಟ್ ಕುರಿತ ಸೆಸ್ಪನ್ಸ್, ಥ್ರಿಲ್ಲರ್ ಕತೆಯಾಗಿದೆ. ನಾವುಗಳು ನಮ್ಮ ಬುದ್ದಿಶಕ್ತಿಯಿಂದ ಬೆಳೆದಿರೋದು ಹೂರತು ಮೂಡನಂಬಿಕೆಯಿಂದ ಅಲ್ಲವೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಒಳ್ಳೆಯ ಹೆಂಡತಿ, ಉತ್ತಮ ಗುಣ ಇರುವವಳನ್ನು ಶೀರ್ಷಕೆಗೆ ಹೋಲಿಸುತ್ತಾರೆ. ಅದು ಯಾವ ರೀತಿ ಎಂಬುದನ್ನು ಚಿತ್ರ ನೋಡಬೇಕಂತೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸ್ಕ್ರಾಪ್ ಆಗಿದ್ದ ಹುಡುಗನೊಬ್ಬ ಸಾಧನೆ ಮಾಡುವ ಪಯಣದಲ್ಲಿ ಏನೋ ಒಂದು ಸಿಗುತ್ತದೆ. ಅದರ ಕಾರಣವನ್ನು ಹುಡುಕುವ ಪಾತ್ರದಲ್ಲಿ ಹುಬ್ಬಳ್ಳಿ ಮೂಲದ ಸನ್ಮಿತ್‍ವಿಹಾನ್ ನಾಯಕ. ಮೇಘಶ್ರೀಗೌಡ ಮತ್ತು ಮಿಲನರಮೇಶ್ ನಾಯಕಿಯರು.

ತಾರಗಣದಲ್ಲಿ ಕುರಿಸುನಿಲ್. ಕಾಮಿಡಿ ಕಿಲಾಡಿಗಳು ಸೀಸನ್-2 ಖ್ಯಾತಿ ಮಡೆನೂರುಮನೋಹರ್, ಮಣಿ, ಡಾ.ರಾಘವೇಂದ್ರಮೋಕ್ಷಗೊಂಡಂ ಗುರೂಜಿ, ಗಣೇಶ್, ಕವಿತ, ಸೌಂದರ್ಯ ಮುಂತಾದವರು ಬಣ್ಣ ಹಚ್ಚಿದ್ದಾರೆ. ಟಾಲಿವುಡ್‍ದಲ್ಲಿ ನಿರ್ದೇಶನ ಮಾಡಿರುವ ಎಂ.ಗುರುರಾಜ್ (ಎಂಜಿಆರ್) ಸಂಭಾಷಣೆ, ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್‍ವುಡ್‍ಗೆ ಪಾರ್ದಾಪಣೆ ಮಾಡಿದ್ದಾರೆ. ಸಿದ್ದುವಡೆಯರ್ ಸಾಹಿತ್ಯದ ಮೂರು ಹಾಡುಗಳಿಗೆ ಕಾರ್ತಿಕ್‍ಶರ್ಮಾ ಸಂಗೀತವಿದೆ. ಛಾಯಾಗ್ರಹಣ ನಾಗರಾಜಮೂರ್ತಿ, ಸಂಕಲನ ಶಿವಶಂಕರ್, ಸಾಹಸ ಸ್ಟಂಟ್‍ಸಿದ್ದು ಅವರದಾಗಿದೆ. ಮಗನ ಸಲುವಾಗಿ ಯಶೋಧ.ಎಸ್.ಸನ್ನಪ್ಪನವರು ಬಂಡವಾಳ ಹೂಡಿದ್ದಾರೆ.
ಚಿತ್ರಗಳು: ಕೆ.ಎನ್.ನಾಗೇಶ್‍ಕುಮಾರ್
ಸಿನಿ ಸರ್ಕಲ್.ಇನ್ ನ್ಯೂಸ್
5/08/19



For advertisements contact editor
K N Nagesh Kumar, Photo Journalist
Website Designed by : K.N.Shreyas (chechu)
E-mail :- knnkumar@gmail.com   Mobile : 9844053268
All Rights Reserved © Copyrights 2011-12 CineCircle, Bangalore